Relationship Tips in Kannada: ಸೆಕ್ಸ್, ಇಬ್ಬರನ್ನು ಭಾವನಾತ್ಮಕವಾಗಿ ಜೋಡಿಸುತ್ತದೆ. ಅನೇಕ ಬಾರಿ ಯಾವುದೇ ಆಲೋಚನೆ ಮಾಡದೆ, ಆಕರ್ಷಕವಾಗಿ ಕಾಣುವ ವ್ಯಕ್ತಿ ಹಿಂದೆ ಹೋಗಿರ್ತೇವೆ. ಒಮ್ಮೆ ತಪ್ಪು ಮಾಡಿದ್ಮೇಲೆ ಚೇತರಿಕೆ ಬಹಳ ಕಷ್ಟ, ಹಾಗಾಗಿ ಶಾರೀರಿಕ ಸಂಬಂಧಕ್ಕೂ ಮುನ್ನ ಕೆಲವೊಂದನ್ನು ತಿಳಿದಿರಬೇಕು. 

ಸೆಕ್ಸ್ ಬಗ್ಗೆ ಜನರ ಕಲ್ಪನೆಯೇ ಬೇರೆ ಇರುತ್ತೆ, ವಾಸ್ತವವೇ ಬೇರೆ ಇರುತ್ತದೆ. ಸಿನಿಮಾ (Cinema) ಗಳಲ್ಲಿ ತೋರಿಸಿದಂತೆ ಸೆಕ್ಸ್ ಲೈಫ್ ಇರಲು ಸಾಧ್ಯವಿಲ್ಲ. ಅಲ್ಲಿ ಇಂಟರ್ಕೋರ್ಸ್ ಗೆ ಮಹತ್ವ ನೀಡಿದ್ರೆ ನಿಜ ಜೀವನದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಒಂದಾಗ್ತಾರೆ. ಮೊದಲ ಬಾರಿ ಇಂಟಿಮೇಟ್ ಆಗುವುದು ಜೀವನದಲ್ಲಿ ದೊಡ್ಡ ವಿಚಾರ. ಕೆಲವೊಮ್ಮೆ ಪೂರ್ವಾಪರ ಆಲೋಚನೆ ಮಾಡದೆ ಇಂಟಿಮೇಟ್ ಆಗಿರ್ತಾರೆ. ನಂತ್ರ ಆ ಕ್ಷಣವನ್ನು ನೆನೆದು ಜೀವನ ಪರ್ಯಂತ ಮರಗುತ್ತಾರೆ. ಯಾರ್ಯಾರ ಜೊತೆ ಬೇಕಾದ್ರೂ ನೀವು ಸಂಭೋಗ ಬೆಳೆಸಿ, ಆದ್ರೆ ಸೆಕ್ಸ್ ಗೂ ಮುನ್ನ ನಿಮಗೆ ಹಾಗೂ ಸಂಗಾತಿಗೆ ಕೆಲ ಪ್ರಶ್ನೆಗಳನ್ನು ಕೇಳಿ. ಇಂದು ನಾವು, ಸಂಭೋಗಕ್ಕೂ ಮುನ್ನ ಯಾವ ಪ್ರಶ್ನೆಗಳನ್ನು ಕೇಳಬೇಕೆಂದು ನಿಮಗೆ ಹೇಳ್ತೇವೆ.

ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ :

ಇಂಟರ್ಕೋರ್ಸ್ ಗೆ ಇದು ಸರಿಯಾದ ಸಮಯವೇ ? :  ಇಂಟರ್ಕೋರ್ಸ್ ಗೆ ಮುನ್ನ ಮುಂದಿರುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇಂಟಿಮೆಟ್ ಆಗುವಾಗ ಇಬ್ಬರು ಭಾವನಾತ್ಮಕವಾಗಿ ಒಂದಾಗಿರಬೇಕು. ಒಂದ್ವೇಲೆ ಅವರನ್ನು ಸದಾ ನಿಮ್ಮ ಜೀವನದಿಂದ ದೂರವಿಡಲು ಬಯಸುತ್ತಿದ್ದೀರಿ ಎಂದಾದರೆ ಅವರ ಜೊತೆ ಎಂದಿಗೂ ಲೈಂಗಿಕ ಸಂಬಂಧ ಬೆಳೆಸಬೇಡಿ. ಅನೇಕರು ಮುಂದಿರುವ ವ್ಯಕ್ತಿ ಬಗ್ಗೆ ಸರಿಯಾಗಿ ತಿಳಿಯದೆ ಶಾರೀರಿಕ ಸಂಬಂಧ ಬೆಳೆಸಿರುತ್ತಾರೆ. ಅವರು ಮುಂದಿನ ದಿನಗಳಲ್ಲಿ ಹೆಚ್ಚು ಹತ್ತಿರಕ್ಕೆ ಬರಲು ಶುರು ಮಾಡ್ತಾರೆ. ಇದು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. 

ಈ ವ್ಯಕ್ತಿ ನನ್ನ ಸರಿಯಾದ ಆಯ್ಕೆಯೇ? : ಯಾರೇ ಆಗಿರಲಿ, ಸಂಭೋಗ ಬೆಳೆಸುವ ಮೊದಲು ನನ್ನ ಆಯ್ಕೆ ಸರಿಯಾಗಿದೆಯೇ ಎಂದು ಪ್ರಶ್ನೆ ಕೇಳಿಕೊಳ್ಳಿ. ಯಾಕೆಂದ್ರೆ ಮುಂದೆ ಸಮಸ್ಯೆಯಾಗುತ್ತದೆ. ಅನೇಕ ಮಹಿಳೆಯರು ಸುಂದರ ಹುಡುಗನ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಆಸಕ್ತರಾಗಿರ್ತಾರೆ. ಆತನ ಬಗ್ಗೆ ಸರಿಯಾಗಿ ತಿಳಿಯದೆ ಸಂಭೋಗ ಬೆಳೆಸ್ತಾರೆ. ಸುಂದರವಾದ ಹುಡುಗ್ರೆಲ್ಲ ಒಳ್ಳೆಯವರಾಗಿರ್ತಾರೆ ಎನ್ನಲು ಸಾಧ್ಯವಿಲ್ಲ. ಕೆಲ ಹುಡುಗರು ಆಕರ್ಷಕವಾಗಿರಬಹುದು ಆದ್ರೆ ನಿಮ್ಮ ಜೊತೆ ಮುಂದೆ ಕೆಟ್ಟದಾಗಿ ನಡೆದುಕೊಳ್ಳಬಹುದು. ಮದ್ಯಪಾನದ ಚಟ ಇರಬಹುದು, ಅತಿ ಹೆಚ್ಚು ಕೋಪ ಮಾಡಿಕೊಳ್ಳಬಹುದು. ಆರಂಭದಲ್ಲಿ ಅವರ ಜೊತೆ ಸಂಭೋಗ ಬೆಳೆಸುವುದು ಖುಷಿ ನೀಡಬಹುದು. ಆದ್ರೆ ಕೊನೆಗೆ ಇದೇ ಸಂಕಷ್ಟ ತರಬಹುದು. ಹಾಗಾಗಿ ಸೌಂದರ್ಯ ನೋಡಿ ಸಂಭೋಗ ಬೆಳೆಸುವ ಮೊದಲು ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. 

ಗಂಡ, ಹೆಂಡ್ತಿಗೆ ಇಂಥಾ ವಿಷಯಗಳನ್ನು ತಪ್ಪಿಯೂ ಹೇಳಬಾರದು

ಲೈಂಗಿಕತೆ ನನ್ನ ಮುಖ್ಯ ಮೌಲ್ಯಗಳಿಗೆ ಸರಿಹೊಂದುತ್ತದೆಯೇ? : ಸಂಭೋಗ ನಡೆಸುವ ಮೊದಲು ಇದು ಇದು ನೈತಿಕತೆ ಮತ್ತು ಮೌಲ್ಯಗಳಿಗೆ ಹೊಂದಿಕೆಯಾಗುತ್ತದೆಯೇ ಎಂದು ಪ್ರಶ್ನೆ ಕೇಳಿಕೊಳ್ಳಿ. ಹಾಗೆ ನಿಮ್ಮ ಸಂಗಾತಿ ಬೇರೆಯವರ ಜೊತೆ ಸಂಬಂಧ ಹೊಂದಿದ್ದಾರೆಯೇ ಎಂಬುದನ್ನು ಪತ್ತೆ ಮಾಡಿ. ಒಂದ್ವೇಲೆ ಸಂಬಂಧ ಬೆಳೆಸಿದ್ದರೆ, ಯಾವುದೇ ಕಾರಣಕ್ಕೂ ಅವರ ಜೊತೆ ಸಂಬಂಧ ಬೆಳೆಸಬೇಡಿ. ಇಂಟರ್ಕೋರ್ಸ್ ನಡೆಸುವುದು ಅಂದ್ರೆ ಮೌಲ್ಯಗಳನ್ನು ನಿರ್ಲಕ್ಷಿಸಬೇಕು ಎಂದಲ್ಲ. ನಿಮ್ಮ ಮೌಲ್ಯಗಳ ಜೊತೆ ನೀವು ಎಂದೂ ರಾಜಿ ಮಾಡಿಕೊಳ್ಳಬೇಡಿ.

ಸಂಗಾತಿ ಜೊತೆ ಈ ಪ್ರಶ್ನೆ ಕೇಳಿ : 

ಒಬ್ಬರಿಗೊಬ್ಬರು ಏನಾಗ್ಬೇಕು? : ಇಂಟರ್ಕೋರ್ಸ್ ನಡೆಸುವ ಮೊದಲು ಇಬ್ಬರ ಆಲೋಚನೆ ಒಂದೇ ರೀತಿ ಇದ್ಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹಾಗೆ ಅವರು ಒಂಟಿಯಾಗಿದ್ದಾರಾ ಅಥವಾ ಸಂಗಾತಿ ಇದ್ದಾರೆಯೇ ಎಂದು ತಿಳಿದುಕೊಳ್ಳಿ. 

ಎಸ್ ಟಿಡಿ ಮತ್ತು ಎಚ್ ಐವಿ : ಅಪರಿಚಿತರ ಜೊತೆ ಸಂಭೋಗ ಬೆಳೆಸುವ ಮೊದಲು ಎಸ್ ಟಿಡಿ ಮತ್ತು ಎಚ್ ಐವಿ ಪರೀಕ್ಷೆಯನ್ನು ಯಾವಾಗ ಮಾಡಿಕೊಂಡಿದ್ದಾರೆ ಎಂಬುದನ್ನು ಅವಶ್ಯಕವಾಗಿ ಕೇಳಬೇಕು. ಮುಂದಿರುವ ವ್ಯಕ್ತಿ ಯಾವಾಗ ಪರೀಕ್ಷೆ ನಡೆಸಿಕೊಂಡಿದ್ದಾರೆಂಬ ಬಗ್ಗೆ ಮಾಹಿತಿ ಪಡೆದ ನಂತ್ರ ನೀವು ಮುಂದಿನ ಹೆಜ್ಜೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. 

Love Story : ಪ್ರೀತಿಸಿದ ಹುಡುಗ, ಬೇರೆ ಹುಡ್ಗೀರನ್ನು ಗುರಾಯಿಸ್ತಿದ್ರೆ ಏನ್ ಮಾಡೋದು ಸ್ವಾಮಿ?

ಗರ್ಭ ನಿರೋಧಕವಾಗಿ ಏನು ಬಳಕೆ? : ಸಂಭೋಗ ಬೆಳೆಸುವ ಮೊದಲು ಗರ್ಭ ನಿರೋಧಕವಾಗಿ ಏನು ಬಳಸ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೆಲ ಪುರುಷರು ಕಾಂಡೋಮ್ ಬಳಕೆ ಮಾಡಲು ಇಷ್ಟಪಡುವುದಿಲ್ಲ. ಆದ್ರೆ ಅಸುರಕ್ಷಿತ ಸಂಭೋಗ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.