Love Story : ಪ್ರೀತಿಸಿದ ಹುಡುಗ, ಬೇರೆ ಹುಡ್ಗೀರನ್ನು ಗುರಾಯಿಸ್ತಿದ್ರೆ ಏನ್ ಮಾಡೋದು ಸ್ವಾಮಿ?
ಪ್ರೀತಿಸಿದವರು ಸದಾ ತಮ್ಮ ಜೊತೆಗಿರಬೇಕು, ತಮ್ಮನ್ನು ಮಾತ್ರ ನೋಡ್ಬೇಕು, ತಮ್ಮನ್ನು ಮಾತ್ರ ಹೊಗಳಬೇಕೆಂಬ ಬಯಕೆ ಹುಡುಗಿಯರಲ್ಲಿ ಸಹಜ. ಕಣ್ಮುಂದೆಯೇ ಲವ್ವರ್ ಬೇರೆ ಹುಡುಗಿರನ್ನು ನೋಡಿದ್ರೆ ಮನಸ್ಸಿಗೆ ಏನಗ್ಬೇಡ?
ಪ್ರತಿಯೊಬ್ಬರ ಸ್ವಭಾವ (Nature) ಭಿನ್ನವಾಗಿರುತ್ತದೆ. ಎಲ್ಲರದಲ್ಲೂ ಫರ್ಪೆಕ್ಟ್ (Perfect) ಹುಡುಕುವುದು ಮೂರ್ಖತನ. ಆದ್ರೆ ದಾಂಪತ್ಯ (Marriage) ದ ವಿಷ್ಯ ಬಂದಾಗ ಇಬ್ಬರೂ ಗಡಿ ಹಾಕಿಕೊಳ್ಳಬೇಕು. ಸಂಗಾತಿಗೆ ನೀವಾಗದಂತೆ ನಡೆದುಕೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ. ಸೌಂದರ್ಯ (Beauty) ಸವಿಯುವುದು ತಪ್ಪಲ್ಲ. ಆದ್ರೆ ಅದಕ್ಕೂ ಒಂದು ಮಿತಿಯಿದೆ ಎಂದು ದೊಡ್ಡವರು ಹೇಳ್ತಾರೆ. ಮದುವೆಗಿಂತ ಮೊದಲು ಅಥವಾ ಪ್ರೀತಿಸುವ ಮೊದಲು ಹುಡುಗರು ಸ್ವಾತಂತ್ರ್ಯರು. ಆದ್ರೆ ಒಂದು ಬಾರಿ ಕಮಿಟ್ ಆದ್ಮೇಲೆ ಸಂಗಾತಿಯ ಭಾವನೆಗೆ ಆದ್ಯತೆ ನೀಡ್ಬೇಕು. ಯಾವುದೇ ಹುಡುಗಿ, ತನ್ನ ಪ್ರೇಮಿ, ಬೇರೊಂದು ಹುಡುಗಿಯನ್ನು ನೋಡಿದ್ರೆ ಅಥವಾ ಆಕೆ ಜೊತೆ ಅತಿ ಸಲಿಗೆಯಿಂದ ಮಾತನಾಡಿದ್ರೆ ಖುಷಿಯಾಗುವುದಿಲ್ಲ. ಹಾಗೆಯೇ ಈ ಹುಡುಗಿ ಕೂಡ ಪ್ರೇಮಿಯ ಒಂದು ನಡವಳಿಕೆಗೆ ಬೇಸತ್ತಿದ್ದಾಳೆ. ಮುಂದೇನು ಮಾಡ್ಬೇಕು ಎಂಬ ಗೊಂದಲದಲ್ಲಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಸಮಸ್ಯೆ ಏನೆಂದು ಹೇಳಿಕೊಂಡಿದ್ದಾಳೆ. ಆಕೆ ವಯಸ್ಸು 18 ವರ್ಷ. ಕಾಲೇಜಿಗೆ ಹೋಗ್ತಿರುವ ಹುಡುಗಿ. ಸಹಪಾಠಿಯನ್ನೇ ಆಕೆ ಪ್ರೀತಿ ಮಾಡ್ತಿದ್ದಾಳೆ. ಹಿಂದೆ ಹಿಂದೆ ಬರ್ತಿದ್ದ ಹುಡುಗನ ಸ್ವಭಾವ ಹಾಗೂ ಆತ ನೀಡುವ ಕೇರ್ ಹುಡುಗಿಗೆ ಇಷ್ಟವಾಗಿದೆಯಂತೆ. ಆತನ ಫೀಲಿಂಗ್ಸ್ ಸತ್ಯ ಎಂದು ಹುಡುಗಿ ನಂಬಿದ್ದಾಳಂತೆ. ಆತನನ್ನು ಅತಿಯಾಗಿ ಪ್ರೀತಿಸುವ ಹುಡುಗಿಗೆ, ಬಾಯ್ ಫ್ರೆಂಡ್ ವರ್ತನೆಯೊಂದು ನಿದ್ದೆಗೆಡಿಸಿದೆಯಂತೆ.
ಕದ್ದು ನೋಡುವ ಬಾಯ್ ಫ್ರೆಂಡ್ : ಬಾಯ್ ಫ್ರೆಂಡ್ ಕದ್ದು ನೋಡೋದು ಈಕೆಯನ್ನಲ್ಲ. ಬದಲಾಗಿ ಬೇರೆ ಹುಡುಗಿಯರನ್ನು. ಗರ್ಲ್ ಫ್ರೆಂಡ್ ಜೊತೆಗಿರುವಾಗ್ಲೇ ಬೇರೆ ಹುಡುಗಿಯರನ್ನು ಕಣ್ಣು ಮಿಟುಕಿಸದಂತೆ ನೋಡ್ತಾನಂತೆ ಬಾಯ್ ಫ್ರೆಂಡ್. ಕಫೆಯೊಂದಕ್ಕೆ ಹೋದಾಗ, ಆತನ ಹುಡುಗಿ ಮುಂದೆಯೇ ಸರ್ವ್ ಮಾಡ್ತಿದ್ದ ಹುಡುಗಿ ಹಿಂಬದಿಯನ್ನು ನೋಡಿದ್ದನಂತೆ. ಇದನ್ನು ನೋಡಿ ಹುಡುಗಿ ಕಣ್ಣು ಕೆಂಪು ಮಾಡಿದ್ದಳಂತೆ. ಅದು ಹೇಳೆ ಅಭ್ಯಾಸ. ಹೋಗೋದು ಕಷ್ಟ. ಎಲ್ಲ ಹುಡುಗರು ಇದನ್ನೇ ಮಾಡೋದು ಎಂದಿದ್ದನಂತೆ ಆತ. ನನ್ನ ಮುಂದೆಯೇ ಹೀಗೆ ವರ್ತಿಸುವ ಹುಡುಗ, ನಾನಿಲ್ಲದ ವೇಳೆ ಇನ್ನೇನು ಮಾಡ್ತಾನೋ ತಿಳಿದಿಲ್ಲ. ಆತನ ಈ ಅಭ್ಯಾಸ ಹೇಗೆ ಬಿಡಿಸಬೇಕೆಂದು ತಿಳಿತಿಲ್ಲ ಎಂದಿದ್ದಾಳೆ ಹುಡುಗಿ.
ಮದುವೆಯ ಮೊದ್ಲು ಗಂಡಸರು ಹೀಗೆಲ್ಲಾ ಮಾಡಿರ್ತಾರೆ, ಆದ್ರೆ ಹೆಂಡ್ತಿಗೆ ಹೇಳಲ್ಲ ಅಷ್ಟೆ !
ತಜ್ಞರ ಸಲಹೆ : ಹುಡುಗಿಯ ಈ ಸಮಸ್ಯೆ ಬಗ್ಗೆ ತಜ್ಞರು ಪರಿಹಾರ ಹೇಳಿದ್ದಾರೆ. ಸಂಬಂಧದಲ್ಲಿ ಪ್ರತಿಯೊಬ್ಬರೂ ವಿಭಿನ್ನ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಹಾಗೆ ಸಂಗಾತಿ ಕೆಲ ನಡವಳಿಕೆ ಅಥವಾ ಅಭ್ಯಾಸವನ್ನು ಸಹಿಸಲಾಗುವುದಿಲ್ಲ. ಆದ್ರೆ ಅದೊಂದೇ ಅಭ್ಯಾಸವನ್ನು ಮುಂದಿಟ್ಟುಕೊಂಡು ಅವರಿಂದ ದೂರ ಹೋಗಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ಯಾವುದೇ ಸಮಸ್ಯೆ ಬಂದಾಗ ಮೊದಲು ಸಂಗಾತಿ ಜೊತೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಈ ವಿಷ್ಯದಲ್ಲೂ ಅಷ್ಟೆ. ಸಂಗಾತಿ ಜೊತೆ ಮಾತನಾಡುವ ಅಗತ್ಯವಿದೆ. ನಿನ್ನ ಈ ಅಭ್ಯಾಸ ನನಗೆ ಇಷ್ಟವಿಲ್ಲ. ಅದು ನಮ್ಮಿಬ್ಬರ ಸಂಬಂಧಕ್ಕೆ ಅಡ್ಡಿ ಮಾಡ್ತಿದೆ ಎಂದು ಆತನಿಗೆ ಸ್ಪಷ್ಟವಾಗಿ ಹೇಳಿ ಎನ್ನುತ್ತಾರೆ ತಜ್ಞರು.
ಹೆಚ್ಚು ಮುತ್ತು ಕೊಡಬೇಡಿ, ಚುಂಬನ ದಂತ ಕುಳಿಗೂ ಕಾರಣವಾಗುತ್ತೆ ಹುಷಾರ್ !
ಪರಿಣಾಮದ ಬಗ್ಗೆ ಎಚ್ಚರಿಕೆ : ಕೆಲವೊಂದು ಅಭ್ಯಾಸವನ್ನು ಬೇಗ ಬಿಡುವುದು ಕಷ್ಟ. ಆದ್ರೆ ನಿಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದರೆ ಅಭ್ಯಾಸ ಬಿಡುವ ಪ್ರಯತ್ನವನ್ನು ಆತ ಮಾಡ್ತಾನೆ. ಒಂದು ವೇಳೆ ನೀವು ಎಷ್ಟೇ ಹೇಳಿದ್ರೂ ಈ ಅಭ್ಯಾಸವನ್ನು ಆತ ಬಿಟ್ಟಿಲ್ಲವೆಂದಾದ್ರೆ ನಿನ್ನಿಂದ ದೂರವಾಗ್ತೇನೆ. ಪ್ರೀತಿ ಸಂಬಂಧ ಮುಂದುವರೆಯುವುದು ಬೇಡವೆಂದು ಎಚ್ಚರಿಕೆ ನೀಡಿ. ನಿಜವಾದ ಪ್ರೀತಿಯಾಗಿದ್ದರೆ ಬಾಯ್ ಫ್ರೆಂಡ್ ಈ ಚಟದಿಂದ ಹೊರ ಬರ್ತಾನೆ. ಅದು ಮುಂದುವರೆದಿದೆ ಎಂದಾದ್ರೆ ಆತ ನಿಮ್ಮನ್ನು ಆಳವಾಗಿ ಪ್ರೀತಿಸ್ತಿಲ್ಲವೆಂದು ಅರ್ಥೈಸಿಕೊಳ್ಳಿ. ಶಾಂತಿಯಿಂದ ಚರ್ಚೆ ನಡೆಸಿದ್ರೆ ಯಾವುದೇ ಸಂಬಂಧವಾದ್ರೂ ಮತ್ತಷ್ಟು ಬಲ ಪಡೆಯುತ್ತದೆ.