Next Generation ಮದ್ವೆ ಆಹ್ವಾನ: ನೀವೆಲ್ಲ ಬಂದು reels ಮಾಡ್ಕೊಂಡು ಹೋಗ್ಬೇಕು
ಜನರೇಷನ್ ಬದಲಾದಂತೆ ಮದುವೆ ಸ್ಟೈಲ್ ಕೂಡ ಬದಲಾಗ್ತಿದೆ. ಇದು ಡಿಜಿಟಲ್ ಯುಗ. ಜನರು ತಮ್ಮ ಮದುವೆಯನ್ನು ಭಿನ್ನವಾಗಿ ಮಾಡುವ ಪ್ರಯತ್ನದಲ್ಲಿದ್ದಾರೆ. ಮುಂದಿನ ಜನರೇಷನ್ ಮದುವೆಯಲ್ಲಿ ಯಾವುದು ಇಂಪಾರ್ಟೆಂಟ್ ಆಗುತ್ತೆ? ಇಲ್ಲಿ ಹೇಳಿದ್ದಾರೆ.
ಅನೇಕರ ದಾರಿಯನ್ನು ಸಾಮಾಜಿಕ ಜಾಲತಾಣ ಬದಲಿಸಿದೆ. ಇನ್ಸ್ಟಾಗ್ರಾಮ್, ಯುಟ್ಯೂಬ್, ಶಾರ್ಟ್ಸ್, ಟ್ವಿಟರ್, ಫೇಸ್ಬುಕ್ ಅಂತಾ ಎಲ್ಲದರಲ್ಲೂ ಖಾತ ಹೊಂದಿರುವ ಈಗಿನ ಯುವ ಜನತೆ, ವಿಡಿಯೋ, ಟಾಪಿಕ್ ಗಳನ್ನು ಹರಿಬಿಟ್ಟು ಹಣ ಮಾಡ್ತಿದ್ದಾರೆ. ರೀಲ್ಸ್, ಯುಟ್ಯೂಬ್ ಚಾನೆಲ್ ಮೂಲಕವೇ ಲಕ್ಷಾಂತರ ರೂಪಾಯಿ ಸಂಪಾದಿಸೋರನ್ನು ನೀವು ನೋಡಿರ್ತೀರಿ.
ಮದುವೆ (Marriage) ಮಾಡೋವಾಗ, ವರನ ಸಂಬಳ ಎಷ್ಟು, ಯಾವ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾನೆ, ಕುಟುಂಬಸ್ಥರು ಹೇಗಿದ್ದಾರೆ, ಜಾತಕ ಹೊಂದಾಣಿಕೆಯಾಗುತ್ತಾ ಎಂಬುದನ್ನೆಲ್ಲ ನೋಡಿ ಮದುವೆ ಮಾಡುವ ಕಾಲ ಹಿಂದಿತ್ತು. ಈಗ ಲವ್ ಮ್ಯಾರೇಜ್ ಹೆಚ್ಚಾಗಿರೋದು ಒಂದು ಕಡೆಯಾದ್ರೆ ಅರೇಂಜ್ ಮ್ಯಾರೇಜ್ ಮಾಡ್ಕೊಳ್ಳೋಣ ಅಂದುಕೊಂಡೋರಿಗೆ ಹೆಣ್ಣು ಸಿಗೋದೇ ಕಷ್ಟವಾಗಿದೆ. ಹೆಣ್ಣಿನ ಹುಡುಕಾಟದಲ್ಲಿ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಅದೇನೇ ಇರಲಿ, ನಿಮ್ಮ ಮಗ 20- 25 ರ ವಯಸ್ಸಿನಲ್ಲಿದ್ದಾನೆ, ಇನ್ನು ಸ್ವಲ್ಪ ವರ್ಷದಲ್ಲಿ ಮದುವೆ ಮಾಡ್ಬೇಕು ಎನ್ನುವ ಪಾಲಕರು ಸ್ವಲ್ಪ ಗಮನ ನೀಡಿ. ನಿಮ್ಮ ಮಕ್ಕಳಿಗೆ ವಿದ್ಯೆ ಜೊತೆ ಇನ್ಸ್ಟಾಗ್ರಾಮ್ (Instagram), ಫೇಸ್ಬುಕ್ ನಲ್ಲಿ ಹಣ ಗಳಿಸೋದು ಹೇಗೆ, ಫಾಲೋವರ್ಸ್ (Followers) ಪಡೆಯೋದು ಹೇಗೆ ಎಂಬುದನ್ನೆಲ್ಲ ಕಲಿಸಿಕೊಡೋದು ಒಳ್ಳೆಯದು.
ಅಮ್ಮ- ಅಪ್ಪನೇ ಮಕ್ಕಳ ಸರಿ ಮಾಡಲ್ಲ ಅಂದ್ರೆ, ಹಾಸ್ಟೆಲ್‌ಗೆ ಆಗುತ್ತಾ? ಭಾಗ್ಯ ಹೇಳಿದ ಕಿವಿಮಾತು!
ಇನ್ಸ್ಟಾಗ್ರಾಮ್ ರೀಲ್ಸ್, ಫಾಲೋವರ್ಸ್ ಸಂಖ್ಯೆ ಸದ್ಯ ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾ ನಟ – ನಟಿಯ ಆಯ್ಕೆಗೆ ಸೀಮಿತವಾಗಿತ್ತು. ನಟನೆ ಹೇಗೆ ಇರಲಿ, ಫಾಲೋವರ್ಸ್ ನೋಡಿ ಅವರನ್ನು ಆಯ್ಕೆ ಮಾಡುವ ಮಾಧ್ಯಮಗಳ ಸಂಖ್ಯೆ ಈಗ ಹೆಚ್ಚಿದೆ. ಈ ಗೀಳು ಸದ್ಯದಲ್ಲೇ ಮದುವೆಗೂ ಒಕ್ಕರಿಸಿಕೊಳ್ಳಲಿದೆ. ಮೊದಲ ಭೇಟಿಯಲ್ಲಿ ಆರಾಮಾ, ಫೋನ್ ನಂಬರ್ ನೀಡಿ ಎನ್ನುವ ಬದಲು ನಿಮ್ಮ ಇನ್ಸ್ಟಾ ಐಡಿ ನೀಡಿ ಎನ್ನುವ ಕಾಲ ಈಗಾಗಲೇ ಬಂದಿದೆ. ಇನ್ನು ಮುಂದಿನ ದಿನಗಳಲ್ಲಿ ಅರೇಂಜ್ ಮ್ಯಾರೇಜ್ ಗೆ ಇನ್ಸ್ಟಾ, ಸಾಮಾಜಿಕ ಜಾಲತಾಣ ಮುಖ್ಯ ಪಾತ್ರವಹಿಸೋದ್ರಲ್ಲಿ ಸಂಶಯವಿಲ್ಲ.
ಇನ್ಸ್ಟಾಗ್ರಾಮ್ ನ akshara.raghu ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. ನೆಕ್ಸ್ಟ್ ಜನರೇಷನ್ ಅರೇಂಜ್ಡ್ ಮ್ಯಾರೇಜ್ ಡಿಸ್ಕಷನ್ಸ್ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ. ಫೋನ್ ಒಂದರಲ್ಲಿ ಮಗಳ ಮದುವೆ ಫಿಕ್ಸ್ ಆದ ಬಗ್ಗೆ ಅವರು ಚರ್ಚೆ ಮಾಡೋದನ್ನು ನೀವು ಈ ವಿಡಿಯೋದಲ್ಲಿ ನೋಡ್ಬಹುದು.
ಪ್ರೀತಿ ಅಂದ್ರೆ ಕಟ್ಟಿ ಹಾಕೋದಲ್ಲ, ಫ್ರೀಯಾಗಿ ಬಿಡೋದು, ಬಾಂಡಿಂಗ್ ಪಾಠ ಹೇಳಿದ ಅಮೃತಧಾರೆ
ಮಗಳಿಗೆ ಎರಡು ಪ್ರಪೋಸ್ ಬಂದಿತ್ತು. ಅದ್ರಲ್ಲಿ ಮೊದಲ ಹುಡುಗನನ್ನು ಆಯ್ಕೆ ಮಾಡಿಕೊಂಡ್ವಿ ಎನ್ನುವ ಅವರು, ಯಾಕೆ ಮೊದಲ ಹುಡುಗ ಎಂಬುದನ್ನು ಇದ್ರಲ್ಲಿ ವಿವರಿಸ್ತಾರೆ. ಆತನ ಇನ್ಸ್ಟಾಗ್ರಾಮ್ ಖಾತೆ, ಫಾಲೋವರ್ಸ್, ಆತ ಆಯ್ಕೆ ಮಾಡಿಕೊಳ್ಳುವ ಸಬ್ಜೆಕ್ಟ್ ಎಲ್ಲವನ್ನೂ ಇವರಿಗೆ ಇಷ್ಟವಾಯ್ತಂತೆ. ಥ್ರೆಡ್ಸ್, ಟ್ವಿಟರ್ ಎಲ್ಲರದಲ್ಲಿಯೂ ಇರುವ ಹುಡುಗ ಸ್ವಂತ ಕಂಟೆಂಟ್ ಮಾಡ್ತಾನೆ ಅನ್ನೋದು ಇಲ್ಲಿ ವಿಶೇಷವಾಗಿ ಹೇಳಲಾಗಿದೆ. ವಿಚಿತ್ರ ಅಂದ್ರೆ 50 ಲಕ್ಷ ಪ್ಯಾಕೇಜ್ ಹೊಂದಿರುವ ಹುಡುಗನಿಗೆ ಇನ್ಸ್ಟಾಗ್ರಾಮ್ ಫಾಲೋವರ್ಸ್ ಇಲ್ವಂತೆ. ಹಳೆ ಸ್ಟೈಲ್ ನಲ್ಲಿ ಇನ್ಸ್ಟಾಗ್ರಾಮ್ ಲಾಕ್ ಮಾಡಿರುವ ಹುಡುಗ ಬರೀ 100 ಫಾಲೋವರ್ಸ್ ಹೊಂದಿದ್ದಾನೆ. ಇನ್ನು ಟ್ವಿಟರ್ ನಲ್ಲಿದ್ರೂ ಸ್ವಂತದ ಬದಲು ವಿಷ್ಯವನ್ನು ಕದ್ದು ಪೋಸ್ಟ್ ಮಾಡ್ತಾನೆ ಎನ್ನುವ ಕಾರಣಕ್ಕೆ ಆತನನ್ನು ರಿಜೆಕ್ಟ್ ಮಾಡಿದ್ದಾರೆ ಈ ಫ್ಯಾಮಿಲಿಯವರು.
ಅಷ್ಟೇ ಅಲ್ಲ ಐಐಎಂನಲ್ಲಿ ಎಂಬಿಎ ಮಾಡಿರೋ ಮಗ ಎಲ್ಲಿ ದಾರಿ ತಪ್ಪುತ್ತಾನೋ ಎನ್ನುವ ಭಯ ತಂದೆಗಿತ್ತಂತೆ. ಬೈದು ಬುದ್ದಿ ಹೇಳಿ ರೀಲ್ಸ್ ಮಾಡೋದನ್ನು ಕಲಿಸಿದ್ದಾರಂತೆ ಅಪ್ಪ. ಎಲ್ಲ ಕಥೆಯನ್ನು ಹೇಳುವ ತಂದೆ ಮಗಳ ಮದುವೆಗೆ ಆಹ್ವಾನ ನೀಡಿ, ರೀಲ್ಸ್ ಮಾಡಿಕೊಂಡು ಹೋಗಿ ಎನ್ನುತ್ತಾರೆ. ಹಿಂದೆ ಆಶೀರ್ವಾದವೇ ಉಡುಗೊರೆ ಎನ್ನುವ ಜಾಗದಲ್ಲಿ ಇನ್ಮುಂದೆ ರೀಲ್ಸೇ ಉಡುಗೊರೆ ಎಂಬ ಪದ ಬಂದ್ರೆ ಅಚ್ಚರಿಯೇನಿಲ್ಲ.