ರಕ್ಷಾ ಬಂಧನಕ್ಕೆ ತಮ್ಮನಿಗೆ ಚಮಕ್ ನೀಡಿದ ಸೋದರಿ: ವೈರಲ್ ವೀಡಿಯೋ
ಮದರಂಗಿಯಲ್ಲಿ ಸಹೋದರಿಯೊಬ್ಬಳು ಕ್ಯೂಆರ್ ಕೋಡ್ ಸೃಷ್ಟಿಸಿ ಸೋದರನಿಗೆ ಪೇಮೆಂಟ್ ಮಾಡುವಂತೆ ಕೇಳಿದ್ದು ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದೆಲ್ಲೆಡೆ ಇಂದು ಸೋದರ ಸೋದರಿಯರ ಹಬ್ಬ ರಕ್ಷಾ ಬಂಧನವನ್ನು ಅಣ್ಣ ತಂಗಿ ಅಕ್ಕ ತಮ್ಮಂದಿರು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಆರತಿ ಮಾಡಿ ಸಿಹಿ ತಿನ್ನಿಸಿ ರಾಕಿ ಕಟ್ಟುವ ಸೋದರಿಯರಿಗೆ ಸೋದರ ಹಣವನ್ನು ನೀಡುವುದು ಎಂದಿನ ವಾಡಿಕೆ. ಅಕ್ಕತಂಗಿಯರಿಗೆ ಇದು ಖುಷಿ ನೀಡಿದರೆ ಅಣ್ಣ ತಮ್ಮಂದಿರಿಗೆ ಇದೇ ದಿನ ಪಾಕೆಟ್‌ಗೆ ಕತ್ತರಿ ಬೀಳುತ್ತದೆ. ರಾಕಿ ಕಟ್ಟಿ ಆರತಿ ಮಾಡುವ ಸೋದರಿಯರು ಅದೇ ವೇಳೆ ಅಣ್ಣ ತಮ್ಮಂದಿರ ಬಳಿ ವಸೂಲಿಗಿಳಿಯುತ್ತಾರೆ. ಆದರೆ ಈಗ ದೇಶ ಡಿಜಿಟಲ್ ಕಾಲಘಟ್ಟದಲ್ಲಿದ್ದು ಕೈಗೆ ಹಣ ನೀಡುವ ಬದಲು ಎಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಮೂಲಕ ಹಣ ಪಾವತಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮದರಂಗಿಯಲ್ಲಿ ಸಹೋದರಿಯೊಬ್ಬಳು ಕ್ಯೂಆರ್ ಕೋಡ್ ಸೃಷ್ಟಿಸಿದ್ದು ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲೇನಿದೆ.?
ವೀಡಿಯೋದಲ್ಲಿ ಸೋದರಿಯೊಬ್ಬಳು ಕೈ ಮೇಲ್ಭಾಗದಲ್ಲಿ ಮೆಹಂದಿ ಮೂಲಕ ಬ್ಯಾಂಕ್ ಕ್ಯೂ ಆರ್ ಕೋಡ್ ಚಿತ್ರಿಸಿದ್ದು, ಅದನ್ನು ಸೋದರನಿಗೆ ತೋರಿಸಿ ಸ್ಕ್ಯಾನ್ ಮಾಡಿ ನೋಡು ಸ್ಕ್ಯಾನ್ ಆಗಿಲ್ಲ ಅಂದರೆ ನಿನಗೆ 5000 ಸಾವಿರ ರೂಪಾಯಿ ನೀಡುತ್ತೇನೆ ಎಂದು ಹೇಳುತ್ತಾಳೆ. ಈ ವೇಳೆ ಸೋದರ ಸೋದರಿಯ ಬಂಡಲ್ ಇದು, ಹಾಗೆಲ್ಲಾ ಸ್ಕ್ಯಾನ್ ಆಗಲ್ಲ ಎಂದುಕೊಂಡು ಮೊಬೈಲ್ ಹಿಡಿದು ಸೋದರಿ ಕೈಲಿದ್ದ ಈ ಟಿಜಿಟಲ್ ಮೆಹಂದಿ ಸ್ಕ್ಯಾನ್ ಮಾಡುತ್ತಾನೆ. ಕೂಡಲೇ ಅದು ಸ್ಕ್ಯಾನ್ ತೆಗೆದುಕೊಂಡಿದ್ದು, ಪೇಮೆಂಟ್ ಮಾಡುವಂತೆ ತೋರಿಸುತ್ತದೆ. ಇದನ್ನು ನೋಡಿ ಸೋದರ ಒಂದು ಕ್ಷಣ ಶಾಕ್ ಆಗಿದ್ದು, ಓಹೋಹೋ ಎಂದು ನಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ರಕ್ಷಾ ಬಂಧನದಂದು ಒಡ ಹುಟ್ಟಿದವನಿಗೆ ಕಿಡ್ನಿ ಕೊಟ್ಟು ಜೀವದಾನ ಮಾಡಿದ ಸಹೋದರಿ
ಅಣ್ಣ ತಂಗಿಯರ ಸಂಬಂಧವೇ ಹೀಗೆ ಸದಾ ಪರಸ್ಪರ ಕಾಲೆಳೆದುಕೊಂಡು ಹೊಡೆದಾಡಿಕೊಂಡು, ರಿಮೋಟ್‌ಗಾಗಿ ಕಿತ್ತಾಡುತ್ತಾ ಮನೆಗೆ ಮೂರು ಸುತ್ತು ಓಡಲಿಲ್ಲವೆಂದರೆ ಅವರು ಅಣ್ಣ ತಂಗಿ ಅಣ್ಣ ತಮ್ಮಂದಿರೇ ಅಲ್ಲ ಅನ್ನುವಷ್ಟು ಅಣ್ಣತಂಗಿರ ಕಿತ್ತಾಟಗಳು ಫೇಮಸ್, ಜುಟ್ಟು ಜುಟ್ಟು ಹಿಡಿದು ಕಿತ್ತಾಡುತ್ತಾ ಅಪ್ಪ ಬಂದಾಗ ದೂರು ಹೇಳಿ ಬೈಗುಳ ಏಟು ತಿನ್ನುವ ಒಡಹುಟ್ಟಿದವರು ಮತ್ತೆ ಸ್ವಲ್ಪ ಹೊತ್ತಿನಲ್ಲಿ ಸರಿಯಾಗಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿರುತ್ತಾರೆ. ಹಾಗೆಯೇ ಇಲ್ಲಿ ಸೋದರಿ ಸೋದರನಿಗೆ ಚಮಕ್ ನೀಡಿದ್ದಾಳೆ.
yash_mehndi ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದೆ. ಈ ಬಾರಿಯ ರಾಕಿಗೆ ಆನ್‌ಲೈನ್‌ನಲ್ಲಿ ಪೇಮೆಂಟ್ ಮಾಡಿ ಎಂದು ಮೇಲೆ ಶೀರ್ಪಿಕೆ ನೀಡಿದ್ದು, ನಂತರ ಈ ವೀಡಿಯೋದಲ್ಲಿರುವಂತೆ ಇದು ಡಿಜಿಟಲ್ ಮೆಹಂದಿ ಅಲ್ಲ, ಇದು ಕೇವಲ ನಾನು ಎಡಿಟ್ ಮಾಡಿದ ಕಂಟೆಂಟ್ ಅಷ್ಟೇ, ನಾನು ಪೇಮೆಂಟ್ ವಹಿವಾಟಿನ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಮೆಹಂದಿ ವೀಡಿಯೋ ಜೊತೆ ಎಡಿಟ್ ಮಾಡಿದ್ದಾನೆ. ಇಲ್ಲಿ ಕಾಣುವಂತೆ ಮೆಹಂದಿಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಆಗುವುದಿಲ್ಲ, ಇದು ಕೇವಲ ತಮಾಷೆಗಾಗಿ ಮಾತ್ರ ಎಂದು ಅವರು ಬರೆದುಕೊಂಡಿದ್ದಾರೆ.
Raksha Bandhan 2023: ನಮ್ಮನ್ನು ರಕ್ಷಿಸುವ ಸ್ತ್ರೀಶಕ್ತಿಯ ಉತ್ಸವ, ಶ್ರೀ ಶ್ರೀ ರವಿಶಂಕರ್
ವೀಡಿಯೋ ನೋಡಿದ ಅನೇಕರು ಈ ಮೆಹಂದಿ ಆರ್ಟಿಸ್ಟ್‌ನ್ನು ಶ್ಲಾಘಿಸಿದ್ದಾರೆ.