ಮಂಟಪದಲ್ಲೇ 'ಮಾಯ' ಯಾರು ಎಂದು ಪ್ರಶ್ನಿಸಿದ ವಧು, ತಬ್ಬಿಬ್ಬಾದ ವರ!
ಭಾರತೀಯ ಮದುವೆ ಮನೆಗಳಲ್ಲಿ ಸಂಭ್ರಮ-ಸಡಗರದ ಜೊತೆಗೆ ಮೋಜು, ಮಸ್ತಿ, ತಮಾಷೆ ಕೀಟಲೆಗಳು ತುಂಬಿರುತ್ತವೆ. ಹಾಗೆಯೇ ಇಲ್ಲೊಂದು ಮದುವೆಯಲ್ಲಿ ಮಂಟಪಲದ್ಲೇ ವಧು ಕೇಳಿದ ಪ್ರಶ್ನೆಗೆ ವರ ತಬ್ಬಿಬ್ಬಾಗಿದ್ದಾನೆ. ಸುತ್ತಲಿದ್ದವರು ಗೊಳ್ಳೆಂದು ನಕ್ಕಿದ್ದಾರೆ.
ನಂಬಿಕೆ ಅನ್ನೋದು ಇವತ್ತಿನ ದಿನಗಳಲ್ಲಿ ಅತೀ ಹೆಚ್ಚು ದುಬಾರಿಯಾಗುತ್ತಿದೆ. ಒಬ್ಬರು ಇನ್ನೊಬ್ಬರನ್ನು ನಂಬಲು ಸಂಪೂರ್ಣವಾಗಿ ಭಯಪಡುತ್ತಾರೆ. ಸಂಬಂಧಗಳ ವಿಚಾರಕ್ಕೆ ಬಂದಾಗ ಈ ಆತಂಕ ತುಸು ಹೆಚ್ಚಾಗಿಯೇ ಇದೆ. ಹುಡುಗ-ಹುಡುಗಿಯರು ಎರಡು ಮೂರು ಸಂಬಂಧಗಳನ್ನು ಇಟ್ಟುಕೊಳ್ಳುವ ಕಾರಣ, ಮದುವೆಯ ನಂತರವೂ ಮೋಸ ಮಾಡುವ ಕಾರಣ ಈ ಭಯ ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದು ಮದುವೆ ಮನೆಯಲ್ಲಿ ವಧು, ಮಂಟಪದಲ್ಲಿ ಇರುವಾಗಲೇ ವರನಿಗೆ ಮಾಯಾ ಯಾರೆಂದು ಪ್ರಶ್ನಿಸಿ ತಬ್ಬಿಬ್ಬಾಗುವಂತೆ ಮಾಡಿದ್ದಾಳೆ.ಸುತ್ತಲಿದ್ದವರು ಗೊಳ್ಳೆಂದು ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಜೋಡಿ (Couples) ಮದುವೆ ಮಂಟಪದ ಮೇಲೆ ಕುಳಿತಿರುವುದನ್ನು ಕಾಣಬಹುದು. ವಧು-ವರರ (Bride-groom) ಸಂಬಂಧಿಕರು ಮಂಟಪದ ಸುತ್ತಲೂ ನಿಂತಿರುವುದನ್ನು ಕಾಣಬಹುದು. ಪಂಡಿತರು ಮಂತ್ರವನ್ನು ಹೇಳುತ್ತಿರುತ್ತಾರೆ. ನವವಿವಾಹಿತರಿಗೆ ಸಂತೋಷದ (Happy) ಮತ್ತು ಸಮತೋಲಿತ ಜೀವನವನ್ನು ನಡೆಸುವ ನಿಯಮಗಳ ಬಗ್ಗೆ ಸಲಹೆ ನೀಡುತ್ತಾರೆ. ದಾಂಪತ್ಯ ಜೀವನ (Married life) ಮತ್ತು ಸಂತೋಷದ ಜೀವನವನ್ನು ನಡೆಸಲು 'ಮಾಯೆ' ಅಂದರೆ ಹಣದ ಮಹತ್ವವನ್ನು (Importance of money) ವಿವರಿಸುತ್ತಾರೆ.
ಶಿವಲಿಂಗವನ್ನೇ ವರಿಸಿದ ಯುವತಿ, ಶಾಸ್ತ್ರಬದ್ಧವಾಗಿ ನಡೀತು ಅದ್ಧೂರಿ ವಿವಾಹ
'ದಾಂಪತ್ಯ ಜೀವನದಲ್ಲಿ ಮಾಯೆ ಬಹಳ ಮುಖ್ಯ. ಮಾಯೆಯಿಲ್ಲದೆ ಏನೂ ಮಾಡಲಾಗದು' ಎನ್ನುತ್ತಾರೆ ಪಂಡಿತರು. ವರ ಇದು ನಿಜವೆಂದು ತಲೆ ಅಲ್ಲಾಡಿಸುತ್ತಾನೆ. ಆದರೆ ಮಾಯ ಎಂಬ ಹೆಸರಿನ ಬಳಕೆಯಿಂದ ಗಾಬರಿಗೊಂಡ ವದು ಮಾಯಾ ಕೌನ್ ಹೈ? (ಮಾಯ ಯಾರು) ಎಂದು ಸಂಶಯದಿಂದ ಪ್ರಶ್ನಿಸುತ್ತಾಳೆ. ತಕ್ಷಣವೇ, ವರನು ಪ್ರತಿಕ್ರಿಯಿಸುತ್ತಾನೆ ಮತ್ತು 'ಹಣ' ಎಂದು ಹೇಳುತ್ತಾನೆ. ತಕ್ಷಣ ಅಲ್ಲಿದ್ದವರು ಜೋರಾಗಿ ನಗುತ್ತಾರೆ. ವಧುವಿಗೂ ನಗು ತಡೆಯಲಾಗುವುದಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ವೆಡ್ಡಿಂಗ್ಜ್.ಇನ್ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾವಿರಾರು ಲೈಕ್ಸ್ ಪಡೆದುಕೊಂಡಿದೆ.
ಮಂಟಪದಲ್ಲಿ ವರಮಾಲೆ ಹಾಕಲು ವಧು-ವರರ ಡಿಶುಂ ಡಿಶುಂ; ವಿಡಿಯೋ ವೈರಲ್
ಮದುವೆಯ ದಿನ ವಧು-ವರರು ಕಿತ್ತಾಡಿಕೊಳ್ಳುವ ತಮಾಷೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿವೆ. ಇತ್ತೀಚೆಗೆ ಅಂತಹ ಒಂದು ವಿಡಿಯೋ ವೈರಲ್ ಆಗಿದ್ದು, ವಧು-ವರರು ತಮ್ಮ ಮದುವೆಯ ದಿನದಂದು ವರಮಾಲೆ ಹಾಕಿಕೊಳ್ಳಲು ಕಿತ್ತಾಡುವುದನ್ನು ನೋಡಬಹುದು. ವಿಡಿಯೋದಲ್ಲಿ ವಧು-ವರರು (Bride-groom) ತಮ್ಮ ಕೈಯಲ್ಲಿ ವರಮಾಲ ಹಿಡಿದುಕೊಂಡು ಮದುವೆಯ (Marriage) ವೇದಿಕೆಯಲ್ಲಿ ನಿಂತಿದ್ದಾರೆ. ಹಿರಿಯರು ಸೂಚಿಸಿದ ಬಳಿಕ ವಧು-ವರರು ಪರಸ್ಪರ ಹಾರ (Varmala) ಹಾಕಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಒಬ್ಬ ವ್ಯಕ್ತಿ ವರನನ್ನು ಮೇಲಕ್ಕೆತ್ತುತ್ತಾರೆ. ವಧು, ವರನಿಗೆ ಮಾಲೆ ಹಾಕಲು ಸಾಧ್ಯವಾಗುವುದಿಲ್ಲ. ವಧು, ವರನ ಕೊರಳಿಗೆ ಹಾಕಲು ಕಷ್ಟಪಡುತ್ತಿರುವುದನ್ನು ಕಾಣಬಹುದು. ವೀಡಿಯೊ ಮುಂದುವರಿದಾಗ ಎಲ್ಲಾ ಜಗಳದ ನಂತರ ವರನು ಅಂತಿಮವಾಗಿ ಆಕೆಗೆ ಹಾರವನ್ನು ಹಾಕಲು ಸಾಧ್ಯವಾಗುತ್ತದೆ. ನಂತರ, ವರನು ವಧುವಿಗೆ ಅವಳು ಹಿಡಿದಿದ್ದ ವರಮಾಲವನ್ನು ಬಿಡಿಸಲು ಸಹಾಯ ಮಾಡುವುದನ್ನು ಕಾಣಬಹುದು.
ಪ್ರೀತಿಸಿದವಳನ್ನೇ ಮದ್ವೆಯಾಗೋಕೆ ಬಿಡ್ತೀರಾ, ಇಲ್ವಾ; ಟವರ್ ಹತ್ತಿ ಬೆದರಿಕೆ ಹಾಕಿದ ಭೂಪ!