Asianet Suvarna News Asianet Suvarna News

Viral Tweet: ಕಚೇರಿಯ ಆನ್ಲೈನ್ ಮೀಟಿಂಗ್ ವೇಳೆ ಪಾಪಪ್ ಆಯ್ತು ಅಂಡರ್‌ವೇರ್ ಸೈಟ್

ಮನೆಯಿಂದಲೇ ಕೆಲಸ ಮಾಡುವ ಸಮಯದಲ್ಲಿ ಅನೇಕ ಎಡವಟ್ಟುಗಳಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಕಚೇರಿಯ ಆನ್ ಲೈನ್ ಮೀಟಿಂಗ್ ಸಮಯದಲ್ಲಿ ವಿಡಿಯೋ ಕೂಡ ಚಾಲ್ತಿಯಲ್ಲಿರುವಾಗ ಮನೆಯ ಸನ್ನಿವೇಶ ಎಲ್ಲರಿಗೂ ಗೋಚರಿಸಬಹುದು. ಇದೀಗ, ಅಮನ್ ಎಂಬುವವರ ಸೈಟ್ ಬದಲಾಗಿ ಆನ್ ಲೈನ್ ಅಂಡರ್ ವೇರ್ ಕಾರ್ಟ್ ಓಪನ್ ಆಗಿ ವೈರಲ್ ಆಗಿದೆ. 
 

Man shares underwear shopping site at office online meeting
Author
First Published Jun 3, 2023, 5:08 PM IST

ವರ್ಕ್ ಫ್ರಂ ಹೋಮ್ ಇಂದು ಹೆಚ್ಚು ಜನಜನಿತವಾಗಿದೆ. ಕೊರೋನಾ ಸಾಂಕ್ರಾಮಿಕದ ಬಳಿಕ ಅನೇಕ ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಪರ್ಮನೆಂಟಾಗಿ ನೀಡಿವೆ. ಅನೇಕ ಕಂಪೆನಿಗಳು ವಾರಕ್ಕೆರಡು ದಿನ ಮಾತ್ರ ಕಚೇರಿಯಲ್ಲಿ ಹಾಜರಾಗುವ ವ್ಯವಸ್ಥೆ ಮಾಡಿವೆ. ಒಟ್ಟಿನಲ್ಲಿ ಮನೆಯನ್ನೇ ಕಚೇರಿ ಮಾಡಿಕೊಂಡಿರುವವರ ಸಂಖ್ಯೆ ದೊಡ್ಡದಿದೆ. ಮನೆಯಿಂದಲೇ ಕೆಲಸ ಮಾಡುವ ಸಮಯದಲ್ಲಿ ಆನ್ ಲೈನ್ ಮೂಲಕ ಮೀಟಿಂಗ್, ಪರಸ್ಪರ ಚರ್ಚೆ, ಮಾತುಕತೆಗಳು ನಡೆಯುವುದು ಸಹಜ. ಬಹಳಷ್ಟು ಮೀಟಿಂಗ್ ಗಳು ಆನ್ ಲೈನ್ ನಲ್ಲೇ ಜರುಗುತ್ತವೆ. ಇಂತಹ ಸಮಯದಲ್ಲಿ ಸಾಕಷ್ಟು ಎಡವಟ್ಟುಗಳಾಗಿರುವುದನ್ನು ತಿಳಿದಿದ್ದೇವೆ. ಪತಿಯ ಆನ್ ಲೈನ್ ಮೀಟಿಂಗ್ ಅರಿವಿಲ್ಲದೆ ಪತ್ನಿ ಯಾವ್ಯಾವುದೋ ಡ್ರೆಸ್ ನಲ್ಲಿ ಓಡಾಡುವುದು, ಆನ್ ಲೈನ್ ಮೀಟಿಂಗ್ ನಡೆಯುತ್ತಿರುವುದನ್ನು ಮರೆತು ಮಧ್ಯೆ ಎದ್ದು ಡ್ರೆಸ್ ಚೇಂಜ್ ಮಾಡಿರುವುದು, ಮಕ್ಕಳ ಗಲಾಟೆ, ಸಾಕುಪ್ರಾಣಿಗಳ ಕಾಟ ಇಂಥವೆಲ್ಲದರ ಬಗ್ಗೆ ವಿಡಿಯೋಗಳನ್ನು ನೋಡಿದ್ದೇವೆ. ಇದೀಗ, ಅಂಥದ್ದೇ ವಿಚಿತ್ರ ಘಟನೆಯೊಂದು ಆನ್ ಲೈನ್ ಮೀಟಿಂಗ್ ಸಮಯದಲ್ಲಿ ನಡೆದುಹೋಗಿದೆ. 

ಅಮನ್ (Aman) ಎಂಬುವರು ಮೀಟಿಂಗ್ (Office Meeting) ನಲ್ಲಿ ಇರುವಾಗ ಆತನ ಸೈಟ್ ನಿಂದ ಆನ್ ಲೈನ್ ಶಾಪಿಂಗ್ ಕಾರ್ಟ್ (Online Shopping Cart) ಓಪನ್ ಆಗಿದೆ, ಅದು ವಿವಿಧ ರೀತಿಯ ಅಂಡರ್ ವೇರ್ ಗೆ ಸಂಬಂಧಿಸಿದ ಶಾಪಿಂಗ್ ಸೈಟ್ (Shopping Site) ಎನ್ನುವುದು ಈಗ ವಿನೋದಕ್ಕೆ ಆಸ್ಪದವಾಗಿದೆ. ಈ ಬಗ್ಗೆ ಅಮನ್ ಅವರೇ ಸ್ವತಃ ತಮ್ಮ ಟ್ವಿಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Viral Video: ಲಕ್ಸುರಿ ಆಡಿ ಕಾರಲ್ಲಿ ಚಹಾ ಮಾರೋ ಯುವಕರು, ವೈರಲ್‌ ಆಯ್ತು ಆನ್‌ ಡ್ರೈವ್‌ ಟೀ

ಒಳಚಡ್ಡಿಯ ಸೈಟ್ ಓಪನ್
ಅಮನ್ ಕಚೇರಿಯ ಆನ್ ಲೈನ್ ಮೀಟಿಂಗ್ ನಲ್ಲಿರುವ ಸಮಯದಲ್ಲಿ ಅವರ ಟ್ಯಾಬ್ ಬದಲಾಗಿ ಶಾಪಿಂಗ್ ಕಾರ್ಟ್ ಗೆ ಗೋಚರವಾಗಿದೆ. ಅದು ವಿವಿಧ ರೀತಿಯ ಒಳಚಡ್ಡಿಗಳನ್ನು ಹೊಂದಿರುವ ಸೈಟ್. ಇದನ್ನು ಗುರುತಿಸಿದ ಅವರ ಸ್ನೇಹಿತರೊಬ್ಬರು ಅವರನ್ನು ಎಚ್ಚರಿಸಿದ್ದಾರೆ. ಟ್ಯಾಬ್ (Tab) ಬದಲಾಯಿಸುವಂತೆ ಸೂಚನೆ ನೀಡಿದ್ದಾರೆ. ಆದರೂ ತಕ್ಷಣಕ್ಕೆ ಬದಲಾಯಿಸಲು ಸಾಧ್ಯವಾಗಿಲ್ಲ ಏಕೆಂದರೆ, ಅದು ಸ್ಥಗಿತವಾಗಿಬಿಟ್ಟಿದೆ. ಈ ಕುರಿತ ಚಿತ್ರಣವನ್ನು ಪೋಸ್ಟ್ ಮಾಡಿರುವ ಅಮನ್, “ನನಗಾಗಿ ಪ್ರಾರ್ಥನೆ ಮಾಡಿ’ ಎಂದೂ ಹೇಳಿಕೊಂಡಿದ್ದಾರೆ. 

ಸಖತ್ ಕಾಮೆಂಟ್ಸ್ (Comments)
ಈ ಪೋಸ್ಟ್ ಈಗ ಸಖತ್ತಾಗಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಕಾಮೆಂಟ್ ಗಳು ಬಂದಿವೆ. ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಹಲವು ವಿನೋದಮಯ ಟ್ವೀಟ್ ಮಾಡಿದ್ದಾರೆ. ಅಮನ್ ಅವರ ಆಕಸ್ಮಿಕ ತಪ್ಪು ನಗೆಬುಗ್ಗೆ ಹಬ್ಬಿಸುವಲ್ಲಿ ಯಶಸ್ವಿಯಾಗಿದೆ. ಹಲವರು ಇಂತಹ ಸನ್ನಿವೇಶದ ಅನುಭವ ತಮಗೂ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಹಲವರು ಇಂತಹ ಮೀಟಿಂಗ್ ನಲ್ಲಿರುವಾಗ ಇನ್ನಷ್ಟು ಎಚ್ಚರಿಕೆಯಲ್ಲಿ (Carefull) ಇರಬೇಕು ಎಂದು ಹೇಳಿದ್ದಾರೆ. ಅಮನ್ ಅವರ ಒಬ್ಬ ಕಲೀಗ್, “ಇಟ್ಸ್ ಫೈನ್. ಮೀಟಿಂಗ್ ಬಳಿಕ ಖುಷಿಯಾಗಿ (Happy) ಮಾತನಾಡಲು ಒಂದು ವಿಷಯ ಸಿಕ್ಕಂತಾಯಿತು, ಬಿಡಿ’ ಎಂದು ತಮಾಷೆ ಮಾಡಿದ್ದಾರೆ. 

ಮೈಕ್ರೋವೇವ್​ನಲ್ಲಿ ಮೊಟ್ಟೆ ಬೇಯಿಸೋಕೆ ಹೋಗಿ ಮುಖಾನೇ ಸುಟ್ಟೋಯ್ತು!

ಮತ್ತೊಬ್ಬ ಅಮನ್ ಕುಮಾರ್ ಎಂಬಾತ ತಮಗಾದ ಅನುಭವ (Experience) ಹಂಚಿಕೊಂಡಿದ್ದಾರೆ. ಕ್ಲಾಸ್ ನಡೆಯುತ್ತಿದ್ದ ಸಮಯದಲ್ಲಿ ಬೆಂಡೆಕಾಯಿ ಮತ್ತು ಬೆಳಗಿನ ತಿಂಡಿಯ ಕುರಿತಾಗಿ ಅಮ್ಮನೊಂದಿಗೆ ಜಗಳವಾಡಿದ್ದುದು ಬಹಿರಂಗವಾಗಿತ್ತು. ನನ್ನ ಪ್ರೊಫೆಸರ್ ಮತ್ತು ಕ್ಲಾಸ್ ಮೇಟ್ ಗಳು ಇದನ್ನು ಕೇಳಿಸಿಕೊಂಡಿದ್ದರು. ಅಮನ್ ಎನ್ನುವ ಹೆಸರಿನವರ ಅದೃಷ್ಟ ಸರಿಯಾಗಿಲ್ಲ’ ಎಂದು ಹೇಳಿದ್ದಾರೆ. “ಹೀಗಾಗಿಯೇ, ಆನ್ ಲೈನ್ ಮೀಟಿಂಗ್ ಆರಂಭಕ್ಕೂ ಮುನ್ನ ಎಲ್ಲ ಸೈಟ್ ಗಳನ್ನೂ ಆಫ್ ಮಾಡಬೇಕೆಂದು ಹೇಳುವುದು’ ಎಂದು ಒಬ್ಬರು ತಿಳಿಸಿದ್ದಾರೆ. 
ಮತ್ತೊಬ್ಬ “ಆನ್ ಲೈನ್ ಚಡ್ಡಿಗಳನ್ನು (Underwear) ನೋಡುವುದರಲ್ಲಿ ತಪ್ಪೇನಿಲ್ಲ. ಬೇರೆಯವರೂ ಅದನ್ನು ನೋಡಿ, ಇಷ್ಟಪಟ್ಟು ಖರೀದಿ (Buy) ಮಾಡಿದರೂ ಮಾಡಬಹುದು’ ತಮಾಷೆ ಮಾಡಿದ್ದಾರೆ. 

Follow Us:
Download App:
  • android
  • ios