ಮಗಳ ಇಷ್ಟದಡುಗೆ ಮಾಡದ ಪತ್ನಿಗೆ ಡಿವೋರ್ಸ್ ಕೊಡೋದಾ ಪತಿ ಮಹಾಶಯ? ಇದೆಂಥ ಅನ್ಯಾಯ?
ಸಂಬಂಧಗಳು ಮುರಿಯಲು ಸಣ್ಣಪುಟ್ಟ ಕಾರಣಗಳು ಸಾಕಾಗ್ತಿವೆ. ಹೊಂದಾಣಿಕೆ ಹೇಗೆ ಎಂದು ಆಲೋಚಿಸುವ ಬದಲು ಜನರು ಏಕಾಏಕಿ ನಿರ್ಧಾರ ತೆಗೆದುಕೊಳ್ತಾರೆ. ಪತ್ನಿ – ಮಗಳ ಅಡುಗೆ ಗಲಾಟೆ ವಿಚ್ಛೇದನದಲ್ಲಿ ಅಂತ್ಯಗೊಂಡಿದೆ.
ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಸೇವನೆ ಮಾಡ್ಬೇಕು ಎನ್ನುವವರು ಕೆಲವರಾದ್ರೆ ಮತ್ತೆ ಕೆಲವರು ಆಹಾರದ ವಿಷ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳೋದಿಲ್ಲ. ಅವರಿಗೆ ಇಷ್ಟವಾದ ಆಹಾರ ಸಿಕ್ಕಿದ್ರೆ ತಿನ್ನುತ್ತಾರೆ, ಇಲ್ಲವೆಂದ್ರೆ ಉಪವಾಸ ಇರಲೂ ಅವರು ಸಿದ್ಧವಿರ್ತಾರೆ. ಕುಟುಂಬಸ್ಥರು ಕೂಡ ಅವರ ಸ್ವಭಾವವನ್ನು ಅರ್ಥಮಾಡಿಕೊಂಡು ಅದಕ್ಕೆ ಹೊಂದಿಕೊಂಡು ಹೋಗ್ತಾರೆ. ಅವರಿಗೆ ಇಷ್ಟವಾಗುವ ಯಾವುದೇ ಒಂದು ಆಹಾರವನ್ನು ಪ್ರತಿ ದಿನ ತಯಾರಿಸ್ತಾರೆ. ಕೆಲ ಮನೆಯಲ್ಲಿ ತಂದೆಗೆ ಇಷ್ಟವಾಗುವ ಆಹಾರ ಮಗನಿಗೆ ಇಷ್ಟವಾಗಿರೋದಿಲ್ಲ. ಮಗ ತಿನ್ನುವ ಆಹಾರವನ್ನು ಮಗಳು ತಿನ್ನೋದಿಲ್ಲ. ಮನೆಯಲ್ಲಿರುವ ನಾಲ್ಕು ಮಂದಿಗೆ ಮೂರು ವೆರೈಟಿ ಮಾಡಿ ಬಡಿಸ್ತಾಳೆ ತಾಯಿ.
ಮಕ್ಕಳ ಈ ಸ್ವಭಾವವನ್ನು ಕೆಲವರು ತಿದ್ದುವ ಪ್ರಯತ್ನ ಮಾಡಿದ್ರೆ ಮತ್ತೆ ಕೆಲವರು ಅವರ ಸ್ವಭಾವಕ್ಕೆ ತಾವು ಬದಲಾಗ್ತಾರೆ. ಇದೇ ವಿಷ್ಯಕ್ಕೆ ಕೆಲ ಮನೆ (home) ಯಲ್ಲಿ ಗಲಾಟೆ- ಜಗಳ ನಡೆಯುತ್ತದೆ. ಇಲ್ಲೊಬ್ಬ ವ್ಯಕ್ತಿಯ ಮದುವೆ (Marriage) ಮುರಿದು ಬೀಳಲು ಇದೇ ಕಾರಣವಾಗಿದೆ. ಮಗಳಿಗೆ ಇಷ್ಟವಾದ ಅಡುಗೆಯನ್ನು ಪತ್ನಿ ತಯಾರಿಸಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ವಿಚ್ಛೇದನ (Divorce) ನೀಡಿದ್ದಾನೆ ಈ ವ್ಯಕ್ತಿ.
ಪ್ರಣಯಕ್ಕೆ ತೊಂದರೆಯಾಗುತ್ತೆ ಅನ್ನೋ ಕಾರಣಕ್ಕೆ ಮಕ್ಕಳು ಬೇಡ ಅಂತಾರಂತೆ ಈ ಜನರೇಷನ್ ಜೋಡಿ!
ವಿಚ್ಛೇದನಕ್ಕೆ ಕಾರಣವಾಯ್ತು ಮಗಳ ಆಹಾರ : ಈ ವ್ಯಕ್ತಿಗೆ ಇದು ಎರಡನೇ ಮದುವೆ. ಮೊದಲ ಪತ್ನಿ ಮಗಳಿಗೆ ಈಗ 16 ವರ್ಷ. ಆಕೆ 10 ವರ್ಷದಲ್ಲಿದ್ದಾಗ ಈತ ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿ ಮಗಳು ಆಹಾರದಲ್ಲಿ ಬಹಳ ಚ್ಯೂಸಿ. ವೋಟ್ಮಿಲ್, ಟೊಮಾಟೊ, ಬೆಳ್ಳುಳ್ಳಿ, ಅಣಬೆಯಂತಹ ಆಹಾರ ಆಕೆಗೆ ಆಗೋದಿಲ್ಲ. ಈ ಪದಾರ್ಥ ಆಹಾರದಲ್ಲಿದ್ರೆ ಆಕೆ ಪತ್ತೆ ಮಾಡ್ತಾಳೆ.
ಈ ಹಿಂದೆ ಚೀಸ್ ಜೊತೆ ಬೆಳ್ಳುಳ್ಳಿ ಹಾಕಿ ತಿನ್ನಿಸುವ ಪ್ರಯತ್ನವನ್ನು ವ್ಯಕ್ತಿ ಮಾಡಿದ್ದ. ಆದ್ರೆ ಅದನ್ನು ಪತ್ತೆ ಮಾಡಿದ್ದ ಮಗಳು, ಒಂದು ವಾರ ತಂದೆ ಜೊತೆ ಮಾತಾಡಿರಲಿಲ್ಲ. ಅಷ್ಟೇ ಅಲ್ಲ ತಂದೆ ಮಾಡಿದ ಆಹಾರವನ್ನೇ ಸೇವನೆ ಮಾಡ್ತಿರಲಿಲ್ಲ.
ಮಕ್ಕಳ ಪಾಲನೆ ಅಂತ ಪೋಷಕರು ಎಲ್ಲವನ್ನೂ ತ್ಯಾಗ ಮಾಡಿದ್ರೆ ಏನು ಚೆಂದ?
ಹಸಿವಾದ್ರೆ ತಿನ್ನುತ್ತಾಳೆ ಎಂದ ಪತ್ನಿ : ಒಂದು ದಿನ ಈತ ಮನೆಗೆ ಬಂದಾಗ ತಟ್ಟೆ ಖಾಲಿಯಿತ್ತು. ಈತನ ಪ್ಲೇಟ್ ನಲ್ಲಿ ಮಾತ್ರ ಆಹಾರವಿತ್ತು. ಪ್ಲೇಟ್ ನಲ್ಲಿದ್ದ ಆಹಾರ ಮಗಳ ಇಷ್ಟದ ವಿರುದ್ಧವಾಗಿತ್ತು. ಎರಡನೇ ಪತ್ನಿಗೆ ವ್ಯಕ್ತಿ ಪ್ರಶ್ನೆ ಮಾಡಿದ್ದಾನೆ, ಮಗಳು ಮಧ್ಯಾಹ್ನದಿಂದ ಆಹಾರ ಸೇವನೆ ಮಾಡಿಲ್ಲ ಎಂಬ ಉತ್ತರ ಸಿಕ್ಕಿದ್ದಲ್ಲದೆ, ಹಸಿವಾದ್ರೆ ಬಂದು ತಿನ್ನುತ್ತಾಳೆ ಎಂದು ಪತ್ನಿ ಹೇಳಿದ್ದಾಳೆ.
ಅಮ್ಮನ ಬಗ್ಗೆ ದೂರು ನೀಡಿರಲಿಲ್ಲ ಮಗಳು : ಇದ್ರಿಂದ ನೊಂದ ವ್ಯಕ್ತಿ ಮಗಳನ್ನು ಹೊಟೇಲ್ ಗೆ ಕರೆದೊಯ್ದಿದ್ದಾನೆ. ಈ ವೇಳೆ, ಪತ್ನಿ, ಮಗಳಿಗೆ ವಿರುದ್ಧವಾದ ಆಹಾರವನ್ನೇ ಒಂದು ವಾರದಿಂದ ಮಾಡ್ತಿದ್ದಾಳೆ ಎಂಬುದು ಗೊತ್ತಾಗಿದೆ. ಆದ್ರೆ ಈ ಬಗ್ಗೆ ದೂರು ನೀಡದ ಮಗಳು, ಹೊರಗೆ ಆಹಾರ ಸೇವನೆ ಮಾಡ್ತಿದ್ದಾಳೆ ಎಂಬುದು ಗೊತ್ತಾಗಿದೆ.
ಮಗಳಿಗಾಗಿ ವಿಚ್ಛೇದನ ಕೇಳಿದ ತಂದೆ : ಮನೆಗೆ ಬಂದ ಪತಿ ಹಾಗೂ ಪತ್ನಿ ಮಧ್ಯೆ ಗಲಾಟೆ ನಡೆದಿದೆ. ನಿನಗೆ ವಿಚ್ಛೇದನ ನೀಡ್ತಿದ್ದೇನೆ, ವಕೀಲರನ್ನು ಹುಡುಕು ಎಂದು ಪತಿ ಹೇಳಿದ್ದಾನೆ. ಇಬ್ಬರು ಈಗ ದೂರವಾಗಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು? : ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿ ತನ್ನ ವಿಷ್ಯ ಹೇಳ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ಕೆಲವರು ನೀನು ಮಾಡಿದ್ದು ಸರಿ ಇದೆ ಎಂದಿದ್ದಾರೆ, ಇನ್ನು ಕೆಲವರು ಮಗಳ ಹಠಮಾರಿತನವನ್ನು ಖಂಡಿಸಿದ್ದಾರೆ. ಇಷ್ಟೊಂದು ನಾಟಕ ಮಾಡುವ ಬದಲು ಮಗಳೇ ಅಡುಗೆ ಮಾಡಿಕೊಳ್ಳೋದನ್ನು ಕಲಿಯಬೇಕು ಎಂದಿದ್ದಾರೆ.