83ರ ವಯಸ್ಸಿಗೆ ಅಪ್ಪನಾದ ಅಜ್ಜ, ಪತ್ನಿ ವಯಸ್ಸು ಬರೀ 35!

ಅರ್ಜೆಂಟೀನಾದ ನಿವಾಸಿ ಆಲ್ಬರ್ಟೊ ಕಾರ್ಮಿಲಿಯೆಟ್ ಅವರು 2012 ರಲ್ಲಿ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು, ಅವರ ಮೊದಲ ಪತ್ನಿ 2017 ರಲ್ಲಿ ನಿಧರಾಗಿದ್ದರೆ, ಆ ಬಳಿಕ 2ನೇ ಮದುವೆಯಾಗಿದ್ದು ಒಟ್ಟಾರೆ ಮೂರನೇ ಬಾರಿಗೆ ತಂದೆಯಾಗಿದ್ದಾರೆ.

Man became father at the age of 83 wife of 35 years gave birth to a son san

ಬ್ಯೂನಸ್ ಐರೀಸ್ (ಜೂನ್ 23): ಭಾರತೀಯ ಉಪಖಂಡದಲ್ಲಿ ಬಹುತೇಕವಾಗಿ 50 ದಾಟಿದ ಕೂಡಲೇ ಅಜ್ಜನ (Grand Father) ಸ್ಥಾನಕ್ಕೇರುವರಿದ್ದಾರೆ. ಅಂಥ ವಯಸ್ಸಿನಲ್ಲಿ ಅವರಿಗೆ ಏಳೋಕು ಕಷ್ಟ, ನಿಲ್ಲೋಕು ಕಷ್ಟ. ತಮ್ಮ ಪಾಡಿಗೆ ತಮ್ಮನ್ನು ಬಿಟ್ರೆ ಸಾಕು ಅಂತಿರ್ತಾರೆ. ಅಂಥದ್ದರ ನಡುವೆ ಅರ್ಜೆಂಟೀನಾದಲ್ಲಿ(Argentina, )  83ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ತಂದೆಯಾಗಿದ್ದಾರೆ. 

ತಾವು 83ನೇ ವಯಸ್ಸಿನಲ್ಲಿ ತಂದೆಯಾಗಿರುವ ಬಗ್ಗೆ ಸ್ವತಃ ಆ ವ್ಯಕ್ತಿಯೇ ಬಹಿರಂಗಪಡಿಸಿದ್ದಾರೆ. ಅವರ ಹೆಸರು ಆಲ್ಬರ್ಟೊ ಕಾರ್ಮಿಲಿಯಟ್ (Alberto Cormiliet). ವೃತ್ತಿಯಲ್ಲಿ ಅವರು ಪೌಷ್ಠಿಕಾಂಶ ತಜ್ಞರು. ಹಾಗಂತ ಅವರ ಹೆಂಡತಿಯ ವಯಸ್ಸು 60 ಅಥವಾ 70 ಅಲ್ಲ.  35 ವರ್ಷದ ಹುಡುಗಿಯನ್ನು 2ನೇ ಮದುವೆಯಾಗಿದ್ದ ಆಲ್ಬರ್ಟೊ ಕಾರ್ಮಿಲಿಯಟ್ 83ನೇ ವಯಸ್ಸಿಗೆ ತಂದೆಯಾಗಿದ್ದಾರೆ. 35 ವರ್ಷದ ಪತ್ನಿಯ ಹೆಸರು ಎಸ್ಟೆಫಾನಿಯಾ ಪಾಸ್ಕಿನಿ (Estefania Pasquini). ಫರ್ಟಿಲಿಟಿ ಚಿಕಿತ್ಸೆಯ  (fertility treatment)ಬಳಿಕ ಎಸ್ಟೇಫಾನಿಯಾ ಗರ್ಭಿಣಿಯಾದಳು ಎಂದು ಹೇಳಿದ್ದಾರೆ.

ತಮಗೆ ತೀರಾ ವಯಸ್ಸಾಗಿದೆ ಎನ್ನುವ ವಿಚಾರ ಆಲ್ಬರ್ಟೋ ಅವರಿಗೂ ಗೊತ್ತಿದೆ. ಹಾಗಿದ್ದರೂ, ಬದುಕಿದ್ದಷ್ಟು ದಿನ ಮಗ ಎಮಿಲಿಯೋನನ್ನು ಚೆನ್ನಾಗಿ ಸುಖವಾಗಿ ಬೆಳೆಸುತ್ತೇನೆ. ಆ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದ್ದಾರೆ. "ಜೀವನ ಎನ್ನುವುದು ಯಾರಿಗೂ ಅನಂತವಲ್ಲ. ನಾನೇನು ವಿಶೇಷ ವ್ಯಕ್ತಿಯೂ ಅಲ್ಲ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ಇದು ಪುಟ್ಟ ಮಗು. ನಾನು ಇರುವವರೆಗೂ ಆತನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ' ಎಂದು ಸಂತಸದಿಂದಲೇ ಹೇಳುತ್ತಾರೆ. ಇವನ ಕಾರಣದಿಂದಾಗಿ ನಾನು ಈ ವಯಸ್ಸಿನಲ್ಲಿಯೂ ಪ್ರತಿದಿನವನ್ನೂ ಪೂರ್ಣವಾಗಿ ಆನಂದಿಸುತ್ತಿದ್ದೇನೆ. ಜೀವನದ ಅಲ್ಪಾವಧಿಯ ಯೋಜನೆಗಳನ್ನೂ ಮಾಡುತ್ತಿದ್ದೇನೆ ಎನ್ನುತ್ತಾರೆ.

Man became father at the age of 83 wife of 35 years gave birth to a son san
ಮಗನಿಗಾಗಿ ವಿಶೇಷ ಕ್ಷಣಗಳ ವಿಡಿಯೋ, ಆಡಿಯೋ ರೆಕಾರ್ಡ್: ಈಗಾಗಲೇ ನಾನು ಭವಿಷ್ಯದ ಬಗ್ಗೆ ಯೋಚಿಸಿದ್ದೇನೆ. ಮುಂದೆ ಇವರಿಬ್ಬರೇ ಜೀವನದ ಹೆಚ್ಚಿನ ಸಮಯ ಕಳೆಯಬೇಕು ಎನ್ನುವುದು ನನಗೆ ಗೊತ್ತು. ಆದರೆ ಎಮಿಲಿಯೋಗೆ ತನ್ನ ತಂದೆ ಯಾರು ಅವರ ಧ್ವನಿ ಹೇಗಿತ್ತು ಎನ್ನುವುದು ಗೊತ್ತಾಗಬೇಕಲ್ಲ. ಅದಕ್ಕಾಗಿ ಜೀವನದ ವಿಶೇಷ ಕ್ಷಣಗಳ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ ಮಾಡುತ್ತೇವೆ ಎಂದು ಆಲ್ಬರ್ಟೋ ಹೇಳುತ್ತಾರೆ. ನಾನು ಈ ಭೂಮಿಯ ಮೇಲೆ ಇಲ್ಲದೇ ಇದ್ದಾಗ ಅವನು ಇವುಗಳನ್ನು ಕೇಳಬಹುದು. ಅವನಿಗಿನ್ನೂ ಒಂದು ವರ್ಷ, ಹಾಗಿದ್ದರೂ ಆತನಿಗೆ ಒಂದು ಫೋನ್ ಇದೆ. ಅದರಲ್ಲಿ ವ್ಯಾಟ್ಸ್ ಆಪ್ ಇದೆ. ಅದರಲ್ಲಿ ಅವನೂ ಕೂಡ ಆಡಿಯೋ ಸಂದೇಶಗಳನ್ನು ರೆಕಾರ್ಡ್ ಮಾಡುತ್ತಾನೆ. ವಿಡಿಯೋ ಸಂದೇಶಗಳನ್ನು ಕಳಿಹಿಸುತ್ತಾನೆ. ಇದೆಲ್ಲವನ್ನು ನಾನು ಸ್ಟೋರ್ ಮಾಡಿ ಇಡುತ್ತಿದ್ದೇನೆ. ಅದರೊಂದಿಗೆ ನಾನು ಮಾಡಿರುವ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್‌ಗಳೂ ಇರುತ್ತವೆ. ಭವಿಷ್ಯದಲ್ಲಿ ಆತನಿಗೆ ಇವುಗಳ ಮೂಲಕವೇ ನಾನು ಜೊತೆಯಾಗಿರುತ್ತೇನೆ ಎನ್ನುತ್ತಾರೆ.

ಇದರ ನಡುವೆ ಚಿಕ್ಕ ಮಗುವಿಗೆ ಚೈನೀಸ್ ಭಾಷೆಯನ್ನು ಕಲಿಸಲು ಶಿಕ್ಷಕರನ್ನೂ ನೇಮಕ ಮಾಡಿಕೊಂಡಿದ್ದಾರೆ. ಚೈನೀಸ್ ಎನ್ನುವುದು ಭವಿಷ್ಯದ ಭಾಷೆ. ಅದರಲ್ಲಿ ಆತ ಇಂದುಳಿಯಬಾರದು ಎನ್ನುವ ಕಾರಣಕ್ಕೆ ಚೈನೀಸ್ ಕಲಿಸುತ್ತಿದ್ದೇನೆ ಎನ್ನುತ್ತಾರೆ. ಅದರೊಂದಿಗೆ ಮಗನಿಗೆ ಆರ್ಗನ್ ನುಡಿಸುವುದನ್ನೂ ಹೇಳಿಕೊಡುತ್ತಿದ್ದಾರೆ.

ವಯಸ್ಸಾದ ಪುರುಷರಿಗೆ ಹೆಣ್ಮಕ್ಕಳು ಅಟ್ರಾಕ್ಟ್ ಆಗೋದೇಕೆ? ಇದು ಸಮಸ್ಯೆಯೇ?

ಇಬ್ಬರು ಪುತ್ರರು ಮತ್ತು ಮೂವರು ಮೊಮ್ಮಕ್ಕಳು: ಇನ್ನು ಆಲ್ಬರ್ಟೋಗೆ  ರೆನೀ ಮತ್ತು ಆಡ್ರಿಯನ್ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರ ಮೂಲಕ ಮೂರು ಮೊಮ್ಮಕ್ಕಳನ್ನೂ ಆಲ್ಬರ್ಟೋ ಹೊಂದಿದ್ದಾರೆ. ಇವರ ಮೊದಲ ಪತ್ನಿ ಮೋನಿಕಾ ಅರ್ಬೋರ್ಗಾಸ್ಟ್ 2017 ರಲ್ಲಿ ನಿಧನರಾದರು.

ಪೋರ್ನ್‌ ವೀಡಿಯೋ ನೋಡುವ ಅಭ್ಯಾಸ ಸೆಕ್ಸ್ ಲೈಫ್‌ ಚೆನ್ನಾಗಿಡುತ್ತಂತೆ !

ಕ್ಯಾನ್ಸರ್‌ಗೆ ತುತ್ತಾಗಿದ್ದ ಆಲ್ಬರ್ಟೋ: ಆಲ್ಬರ್ಟೊ ಅರ್ಜೆಂಟೀನಾದ ನಿವಾಸಿ. 2012 ರಲ್ಲಿ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ ಶಸ್ತ್ರಚಿಕಿತ್ಸೆಯ ನಂತರ ಅವರ ಗೆಡ್ಡೆಯನ್ನು ತೆಗೆದುಹಾಕಲಾಯಿತು.

Latest Videos
Follow Us:
Download App:
  • android
  • ios