ಭಾವಿ ಸೊಸೆಯನ್ನೇ ಮದುವೆ ಆದ ಮಾವ, ಸನ್ಯಾಸಿಯಾದ ಮಗ!

ಮಹಾರಾಷ್ಟ್ರದಲ್ಲಿ ಅಚ್ಚರಿ ಘಟನೆ ನಡೆದಿದೆ. ಮಗನಿಗೆ ಹುಡುಕಿದ್ದ ಹುಡುಗಿ ಮೇಲೆ ಮಾವನಿಗೆ ಮನಸ್ಸಾಗಿದೆ. ಇಬ್ಬರ ಮಧ್ಯೆ ಪ್ರೀತಿ ಚಿಗುರಿದ್ದೂ ಆಯ್ತು. ಆಮೇಲೆ ಏನಾಯ್ತು ಗೊತ್ತಾ? 
 

Maharashtra man marries would be daughter in law son became a monk roo

ಸೊಸೆ- ಮಾವ, ಅತ್ತೆ- ಅಳಿಯನ ಸಂಬಂಧ (Relationship)ವನ್ನು ಪವಿತ್ರ ಎಂದು ನಂಬಲಾಗುತ್ತೆ. ಮಾವ, ಅಪ್ಪನಿಗೆ ಸಮಾನ. ಆದೆ ಈಗ ಕಾಲ ಬದಲಾಗಿದೆ. ಸಂಬಂಧಕ್ಕೆ ಬೆಲೆ ಇಲ್ಲ. ವಯಸ್ಸಿನ ಅಂತರವಿಲ್ಲದೆ ಜನರು ಪ್ರೀತಿ (love) ಮಾಡ್ತಾರೆ, ಮದುವೆ ಆಗ್ತಾರೆ. ಯಾರನ್ನೋ ಮದುವೆಯಾಗಲು ಬಂದ ಹುಡುಗಿ ಇನ್ನಾರನ್ನೋ ಮದುವೆಯಾದ ಅನೇಕ ಘಟನೆಗಳು ನಮ್ಮ ಕಣ್ಮುಂದೆ ಇವೆ. ಈಗ  (Maharashtra) ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಭಾವಿ ಸೊಸೆ (Daughter in law) ಯನ್ನೇ ಮದುವೆ ಆಗಿದ್ದಾನೆ. ಈ ವಿಷ್ಯ ತಿಳಿದ ಮಗ, ಸನ್ಯಾಸಿಯಾಗುವ ನಿರ್ಧಾರ ತೆಗೆದುಕೊಂಡಿದ್ದಾನೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಜನರು ದಂಗಾಗಿದ್ದಾರೆ. ಅಷ್ಟಕ್ಕೂ ತಂದೆ ಸ್ಥಾನದಲ್ಲಿರುವ ಭಾವಿ ಮಾವ ಹೇಗೆ ತನ್ನ ಭಾವಿ ಸೊಸೆಯನ್ನು ಮದುವೆಯಾಗಲು ಸಾಧ್ಯ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. 

ಮಹಾರಾಷ್ಟ್ರದ ನಾಸಿಕದಲ್ಲಿ ಘಟನೆ ನಡೆದಿದೆ. ಮಗನ ಮದುವೆಗೆ ತಂದೆ ಎಲ್ಲ ತಯಾರಿ ನಡೆಸಿದ್ದ. ಮಗನಿಗಾಗಿ ಹುಡುಗಿಯನ್ನು ಹುಡುಕಿದ್ದ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದವು. ಮದುವೆಗೆ ದಿನಾಂಕ ಕೂಡ ಫಿಕ್ಸ್ ಆಗಿತ್ತು. ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿಯೇ ನಡೆದಿತ್ತು. ಮಗ ತನ್ನ ಹೊಸ ಜೀವನದ ಬಗ್ಗೆ ಕನಸು ಕಾಣ್ತಿದ್ದ. ಆದ್ರೆ ಆಗಿದ್ದೇ ಬೇರೆ. ನಂಬಿದ್ದ ಅಪ್ಪನೇ ಕೈಕೊಟ್ಟಿದ್ದಾನೆ. ಅದ್ಯಾವಾಗ ಭಾವಿ ಸೊಸೆ ಮೇಲೆ ಆತನಿಗೆ ಪ್ರೀತಿಯಾಯ್ತೋ ತಿಳಿಯದು. ಇಬ್ಬರು ಮುಹೂರ್ತ ನೋಡದೆ, ಮನೆಯವರಿಗೆ ವಿಷ್ಯ ತಿಳಿಸದೆ ಮದುವೆ ಆಗಿದ್ದಾರೆ. ಇದನ್ನು ಕೇಳಿದ ಮಗ ದಿಗ್ಭ್ರಮೆಗೊಂಡಿದ್ದಾನೆ. 

ದುಬೈನಲ್ಲಿ ಸಾನಿಯಾ ಮಿರ್ಜಾ ಕಾಫಿ ಡೇಟ್, ಜೊತೆಗಿರೋರು ಯಾರು?

ನಿಶ್ಚಿತಾರ್ಥವಾಗಿದ್ದ ಹುಡುಗಿ ಕೈಕೊಟ್ಟ ಮೇಲೆ ಮಗ ಸಂಸಾರದ ಮೇಲೆ ಜಿಗುಪ್ಸೆ ಹೊಂದಿದ್ದಾನೆ. ಅಪ್ಪನ ಮೋಸದಿಂದ ಬೇಸತ್ತಿರುವ ಮಗ, ಜೀವನದಲ್ಲಿ ಮದುವೆಯಾಗದೆ, ಒಂಟಿಯಾಗಿರುವ ನಿರ್ಧಾರಕ್ಕೆ ಬಂದಿದ್ದಾನೆ. ತಂದೆ, ಮಗನಿಗೆ ಇನ್ನೊಂದು ಹುಡುಕಿ ಹುಡುಕುವುದಾಗಿ ಭರವಸೆ ನೀಡಿದ್ದ. ಮನೆಯವರೆಲ್ಲ ಆತನ ಮನವೊಲಿಸುವ ಪ್ರಯತ್ನ ನಡೆಸಿದ್ದರು. ತಂದೆಯಿಂದ ಬೇರೆಯಾಗಿ ವಾಸವಾಗುವಂತೆ ಸಲಹೆ ನೀಡಿದ್ದರು. ಮದುವೆ ಆಗಲು ಬೇರೆ ಹುಡುಗಿ ಹುಡುಕುವುದಾಗಿ ಅವರೆಲ್ಲ ಭರವಸೆ ನೀಡಿದ್ದರು. ಆದ್ರೆ ಮಗ ಮಾತ್ರ ಮನಸ್ಸು ಬದಲಿಸಲಿಲ್ಲ. ತನ್ನನ್ನು ಮದುವೆ ಆಗ್ಬೇಕಿದ್ದ ಹುಡುಗಿ ತನ್ನ ಅಪ್ಪನ ಕೈ ಹಿಡಿದು ಸಂಸಾರ ನಡೆಸಲು ಮುಂದಾಗಿದ್ದು ಆತನಿಗೆ ಆಘಾತವನ್ನುಂಟು ಮಾಡಿದೆ. ಪ್ರೀತಿ, ಮದುವೆ ಮೇಲಿನ ನಂಬಿಕೆಯನ್ನು ಆತ ಕಳೆದುಕೊಂಡಿದ್ದಾನೆ ಎಂದು ಸಂಬಂಧಿಕರು ಹೇಳಿದ್ದಾರೆ.

ಮಗ ಈಗ ತನ್ನ ತಂದೆ ಹಾಗೂ ಪತ್ನಿಯಾಗಬೇಕಾಗಿದ್ದ ಅಮ್ಮನ ಜೊತೆಗಿಲ್ಲ. ಆತ ಮನೆಯಿಂದ ಹೊರಗೆ ಬೀದಿಯಲ್ಲಿ ವಾಸ ಶುರು ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ. ಇಂಥ ಘಟನೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ಇಂಥ ಪ್ರಕರಣ ಬೆಳಕಿಗೆ ಬಂದಿದೆ. ಮಗಳನ್ನು ಮದುವೆಯಾಗಲು ಬಂದ ಹುಡುಗನನ್ನು ಹುಡುಗಿ ತಾಯಿ ಮದುವೆಯಾದ ಘಟನೆ ಈ ಹಿಂದೆ ನಡೆದಿತ್ತು. 

ಅರಿಶಿಣ ಶಾಸ್ತ್ರವೋ, ಮೊದಲ ರಾತ್ರಿಯೊ? ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದ ನಟ

ಕೆಲ ದಿನಗಳ ಹಿಂದೆ ಚೀನಾದಲ್ಲೂ ಇಂಥ ಪ್ರಕರಣ ಬೆಳಕಿಗೆ ಬಂದಿದೆ. ಒಬ್ಬ ಹುಡುಗ ತನ್ನ ಗೆಳತಿಯನ್ನು ತನ್ನ ತಂದೆಗೆ ಪರಿಚಯಿಸಿದ್ದ. ಆಕೆಯನ್ನು ನೋಡ್ತಿದ್ದಂತೆ ತಂದೆ ಪ್ರೀತಿಯಲ್ಲಿ ಬಿದ್ದಿದ್ದ. ಮಗನ ಗೆಳತಿಗೆ ದುಬಾರಿ ಉಡುಗೊರೆಗಳನ್ನು ಕಳುಹಿಸುವ ಮೂಲಕ ಅವಳ ಹೃದಯವನ್ನು ಗೆದ್ದಿದ್ದಲ್ಲದೆ ಮದುವೆ ಆಗಿದ್ದ.
 

Latest Videos
Follow Us:
Download App:
  • android
  • ios