Viral social media news: ಈ ದೃಶ್ಯ ನೋಡಿದ ಪ್ರತಿಯೊಬ್ಬರು ಒಂದು ಕ್ಷಣ ಗಾಬರಿಗೊಂಡರು. ಏಕೆಂದರೆ ಆ ವ್ಯಕ್ತಿ ಸ್ವಲ್ಪ ಮಿಸ್ ಆಗಿದ್ರೂ ಸಾವನ್ನಪ್ಪುತ್ತಿದ್ದ. ಕೊನೆಗೆ ಈ ಘಟನೆಗೆ ಕಾರಣ ಬಹಿರಂಗವಾದಾಗ ಜನರಿಗೆ ನಗು ತಡೆಯಲು ಸಾಧ್ಯವಾಗಲಿಲ್ಲ.

ಒಂದು ಪ್ರಸಿದ್ಧ ಮಾತಿದೆ.. "ಪ್ರೀತಿ ಮತ್ತು ಕಸ್ತೂರಿಯನ್ನು ಮರೆಮಾಡಲು ಸಾಧ್ಯವಿಲ್ಲ." ಈಗ್ಯಾಕೆ ಆ ವಿಷಯ ಅನ್ನೋದನ್ನ ಮುಂದೆ ಹೇಳ್ತೇವೆ. ಚೀನಾದಲ್ಲಿ ವಾಸಿಸುತ್ತಿರುವ ಒರ್ವ ಪುರುಷನು ಒಬ್ಬ ಮಹಿಳೆಯನ್ನು ಪ್ರೀತಿಸಿದನು. ಅವರ ನಡುವೆ ಆತ್ಮೀಯತೆ ಬೆಳೆಯಿತು, ಆತ್ಮೀಯತೆಯ ಗಡಿ ದಾಟಿದ್ದಾಯ್ತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಈ ಮಧ್ಯೆ ಕಥೆಗೆ ಒಂದು ಟ್ವಿಸ್ಟ್ ಬಂತು. ಮುಂದೆ ಏನಾಯಿತು ಎಂಬುದೇ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ.

ಅಂದಹಾಗೆ ಈ ಘಟನೆ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಮಿರರ್ ಯುಕೆ ವರದಿಯ ಪ್ರಕಾರ, ಒರ್ವ ವ್ಯಕ್ತಿ ತನ್ನ ಗೆಳತಿಯೊಂದಿಗೆ ಹೋಟೆಲ್ ಕೋಣೆಯಲ್ಲಿದ್ದಾಗ ಅಲ್ಲಿಗೆ ಹೆಂಡತಿ ಬಂದಿದ್ದಾಳೆ. ಹೆಂಡತಿಯಿಂದ ತಪ್ಪಿಸಿಕೊಳ್ಳಲು ಅವನು ಕಿಟಕಿಯಿಂದ ಹಾರಿ ಹೋಟೆಲ್ ಕಟ್ಟಡ ಹಿಡಿದುಕೊಂಡು ನೇತಾಡುತ್ತಿದ್ದನು. ಈ ದೃಶ್ಯ ನೋಡಿದ ಪ್ರತಿಯೊಬ್ಬರು ಒಂದು ಕ್ಷಣ ಗಾಬರಿಗೊಂಡರು. ಏಕೆಂದರೆ ಆ ವ್ಯಕ್ತಿ ಸ್ವಲ್ಪ ಮಿಸ್ ಆಗಿದ್ರೂ ಸಾವನ್ನಪ್ಪುತ್ತಿದ್ದ. ಕೊನೆಗೆ ಈ ಘಟನೆಗೆ ಕಾರಣ ಬಹಿರಂಗವಾದಾಗ ಜನರಿಗೆ ನಗು ತಡೆಯಲು ಸಾಧ್ಯವಾಗಲಿಲ್ಲ.

ಏನೋ ಮಾಡಲು ಹೋಗಿ ಏನೋ ಆಯ್ತು

ವರದಿಗಳ ಪ್ರಕಾರ, ವಿವಾಹಿತ ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ ಝೆಜಿಯಾಂಗ್ ಪ್ರಾಂತ್ಯದ ಬೋಯು ಹೋಟೆಲ್‌ಗೆ ಬಂದನು. ಸ್ವಲ್ಪ ಸಮಯದ ನಂತರ, ಅವನ ಹೆಂಡತಿಯೂ ಬಂದಳು. ತನ್ನ ಹೆಂಡತಿಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೆ, ಆ ವ್ಯಕ್ತಿ ಹೋಟೆಲ್ ಕೋಣೆಯ ಕಿಟಕಿಯಿಂದ ಎದ್ದು ಅದೇ ಹೋಟೆಲ್ ಫಲಕ ಹಿಡಿದು ನೇತಾಡುತ್ತಿದ್ದನು. ಅವನು ಬಾಕ್ಸರ್‌ ಮಾತ್ರ ಧರಿಸಿದ್ದನು. ಹೋಟೆಲ್‌ನ ಇತರ ಅತಿಥಿಗಳು ತಮ್ಮ ಕಿಟಕಿಗಳಿಂದ ಇದನ್ನೆಲ್ಲಾ ವೀಕ್ಷಿಸಿದರು. ಏತನ್ಮಧ್ಯೆ ಯಾರೋ ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ನಾಲ್ಕು ಕೋಣೆಯ ಮಧ್ಯೆ ಇರಬೇಕಾದ ವಿಷಯ ಈಗ ಇಡೀ ಜಗತ್ತೇ ನೋಡುವಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಜೋಕ್ಸ್

ಈ ವ್ಯಕ್ತಿಯನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ಓರ್ವ ಬಳಕೆದಾರರು "ಇದು ಅಕ್ರಮ ಸಂಬಂಧಗಳ ಪರಿಣಾಮ. ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರೆಲ್ಲರೂ ಎತ್ತರಕ್ಕೆ ಏರಲು ಕಲಿಯಬೇಕು" ಎಂದು ವ್ಯಂಗ್ಯ ಮಾಡಿದರೆ ಮತ್ತೋರ್ವ ಬಳಕೆದಾರರು "ನಿಮ್ಮ ಹೆಂಡತಿಗೆ ಮೋಸ ಮಾಡಿದ್ದಕ್ಕಾಗಿ ನೀವು ಬೆಲೆ ತೆರಬೇಕು." ಎಂದು ಕಾಮೆಂಟ್ ಮಾಡಿದ್ದಾರೆ.

ಹೋಟೆಲ್ ಕಟ್ಟಡ ಹಿಡಿದು ಹೀಗೆ ನೇತಾಡುತ್ತಿರುವ ವ್ಯಕ್ತಿ ಯಾರೆಂದೂ ಇನ್ನು ಗುರುತು ಬಹಿರಂಗಗೊಂಡಿಲ್ಲ, ಆದರೆ ಅವನ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದೇ ಮೊದಲ ಪ್ರಕರಣವಲ್ಲ.., ಈ ಹಿಂದೆಯೂ ಇಂತಹ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಅಕ್ರಮ ಸಂಬಂಧಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಭಯದಿಂದ ಪ್ರೇಮಿಗಳು ಪಲಾಯನ ಮಾಡಬೇಕಾದ ಸಂದರ್ಭಗಳು ನೀವು ನೋಡಿರಹುದು.

ಯಾರೋ ಸ್ಟಂಟ್ ಮಾಡುತ್ತಿದ್ದಾರೆ ಅಂತ ಭಾವನೆ
ಆರಂಭದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಿಂದ ನೇತಾಡುತ್ತಿರುವ ವ್ಯಕ್ತಿಯನ್ನು ಜನರು ನೋಡಿದಾಗ, "ಅವರು ಸಾಹಸ ಮಾಡುತ್ತಿದ್ದಾರೆ" ಎಂದು ಭಾವಿಸಿದರಂತೆ. ಆದರೆ ಸ್ವಲ್ಪ ಸಮಯದ ನಂತರ ಚಿತ್ರಣ ಸ್ಪಷ್ಟವಾಗಿದೆ. ಆ ವ್ಯಕ್ತಿ ತನ್ನ ಕೋಣೆಯ ಕಿಟಕಿಯಿಂದ ಹೊರಬಂದು ಸ್ವಲ್ಪ ದೂರದಲ್ಲಿರುವ ಹೋಟೆಲ್ ಸೈನ್‌ಬೋರ್ಡ್ ಅನ್ನು ತಲುಪುವಲ್ಲಿಯೇನೋ ಯಶಸ್ವಿಯಾದನು. ಅಲ್ಲಿಅವನು ದೀರ್ಘಕಾಲ ನೇತಾಡುತ್ತಿದ್ದರು. ಕಿಟಕಿ ಮತ್ತು ಸೈನ್‌ಬೋರ್ಡ್ ನಡುವಿನ ಅಂತರವನ್ನು ನಿರ್ಣಯಿಸುವುದು ತುಂಬಾ ಕಷ್ಟಕರವಾಗಿತ್ತು. ಜಾರಿಬಿದ್ದಿದ್ದರೆ ನೇರ ಸಾವೇ ಗತಿ. ಆದರೆ ಆ ಸಮಯದಲ್ಲಿ ಆ ವ್ಯಕ್ತಿ ಇದಾವುದನ್ನೂ ಗಮನಿಸಲಿಲ್ಲ. ಅವನ ಗುರಿ ತನ್ನ ಹೆಂಡತಿಯ ಕಣ್ಣಿನಿಂದ ತಪ್ಪಿಸಿಕೊಳ್ಳುವುದಾಗಿತ್ತು.