ಬಿಹಾರದಲ್ಲಿ ಪತಿಯ ಸಾಲ ವಸೂಲಿಗೆ ಬರುತ್ತಿದ್ದ ಏಜೆಂಟ್ ಜೊತೆ 21 ವರ್ಷದ ವಿವಾಹಿತೆ ಪ್ರೇಮಾಂಕುರವಾಗಿ, ಆತನೊಂದಿಗೆ ಓಡಿಹೋಗಿ ಮದುವೆಯಾಗಿದ್ದಾಳೆ. ಪತಿ ಮದ್ಯವ್ಯಸನಿ ಹಾಗೂ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ಈ ವಿಚಿತ್ರ ಪ್ರೇಮಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಹಾರ: ಪ್ರೀತಿ ಹೇಗೆ, ಯಾವಾಗ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಇದೇ ಕಾರಣಕ್ಕೆ ಪ್ರೀತಿಗೆ ಕಣ್ಣಿಲ್ಲ, ಕಿವಿಯಿಲ್ಲ, ಕೈ-ಕಾಲು ಏನೂ ಇಲ್ಲ ಎಂದೆಲ್ಲಾ ತಮಾಷೆ ಮಾಡುವುದು ಇದೆ. ಲವ್ ಶುರುವಾಗಲು ಇಂಥದ್ದೇ ವಯಸ್ಸು ಎಂದೇನಿಲ್ಲ. ಮಗನ ವಯಸ್ಸಿನವನ ಜೊತೆ ಆಂಟಿಗೆ ಲವ್ ಆಗ್ಬೋದು, ಮಗಳ, ಮೊಮ್ಮಗಳ ವಯಸ್ಸಿನವಳ ಜೊತೆ ಅಜ್ಜನಿಗೆ ಲವ್ ಆಗ್ಬೋದು, ಮದ್ವೆ ಆಗಿದ್ರೂ ಲವ್ ಆಗ್ಬೋದು, ಮಕ್ಕಳಾಗಿದ್ರೂ ಲವ್ ಆಗ್ಬೋದು. ಒಟ್ಟಿನಲ್ಲಿ ಈ ಪ್ರೀತಿ, ಪ್ರೇಮ ಎನ್ನೋದು ಯಾವಾಗ, ಹೇಗೆ, ಯಾವ ಕಾರಣದಿಂದ ಶುರುವಾಗುತ್ತದೆ ಎಂದು ತಿಳಿಯೋದೆ ಕಷ್ಟ ಎನ್ನುವಂಥ ಹಲವಾರು ಘಟನೆಗಳು ದಿನನಿತ್ಯ ವರದಿಯಾಗುತ್ತಲೇ ಇರುತ್ತವೆ.
ಈಗ ಅಂಥದ್ದೇ ಒಂದು ಘಟನೆ ಬಿಹಾರದಲ್ಲಿ ನಡೆದಿದೆ. ಅವ ಸಾಲ ಕೊಟ್ಟ, ಇವನು ಸಾಲ ಪಡೆದ. ಸಾಲ ವಸೂಲು ಮಾಡಲು ಮೇಲಿಂದ ಮೇಲೆ ಮನೆಗೆ ಬರ್ತಿದ್ದವನಿಗೆ, ಸಾಲ ಪಡೆದವನ ಪತ್ನಿ ಜೊತೆ ಲವ್ ಆಗಿದೆ. ಪತಿಯ ಸಾಲದ ಕಾಟಕ್ಕೆ ಬೇಸತ್ತೋ ಏನೋ, ಸಾಲ ಕೊಟ್ಟವನೇ ಗ್ರೇಟ್ ಎನ್ನಿಸಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಲವ್ಗೆ ಈ ವಿವಾಹಿತೆ ಕೂಡ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿದ್ದಾಳೆ. ಇನ್ನೇನು ತಡ. ಎರಡೂ ಕಡೆಯವರ ಮನಸ್ಸು ಒಪ್ಪಾಯ್ತು. ಇಬ್ಬರೂ ಎಸ್ಕೇಪ್ ಆಗಿದೆ ಜೋಡಿ.
ಏನಿದು ಘಟನೆ?
ಈ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ. 21 ವರ್ಷದ ಮಹಿಳೆ ಇಂದ್ರ ಕುಮಾರಿ ತನ್ನ ಪತಿ ನಕುಲ್ ಶರ್ಮಾ ಅವರನ್ನು ತೊರೆದು ಬಾಕಿ ಸಾಲದ ಕಂತುಗಳನ್ನು ವಸೂಲಿ ಮಾಡಲು ಆಗಾಗ್ಗೆ ತನ್ನ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಸಾಲ ವಸೂಲಾತಿ ಏಜೆಂಟ್ ಪವನ್ ಕುಮಾರ್ ಯಾದವ್ ಅವರನ್ನು ವಿವಾಹವಾದರು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪವನ್ ಪದೇಪದೇ ನೀಡುತ್ತಿದ್ದ ಭೇಟಿಯಿಂದ ಲವ್ ಶುರುವಾಯಿತು. ಕೊನೆಗೆ, ನಿಯಮಿತ ಸಂವಹನ ಮತ್ತು ಫೋನ್ ಕರೆಗಳ ಮೂಲಕ ಅವರ ಸಂಬಂಧವು ಸುಮಾರು ಐದು ತಿಂಗಳುಗಳಲ್ಲಿ ಬೆಳೆಯಿತು ಎಂದು ವರದಿಯಾಗಿದೆ.
ಪತಿಯಿಂದ ಕಂಪ್ಲೇಂಟ್
ಇಂದ್ರಾ ಅವರು ತಮ್ಮ ಮದುವೆಯಲ್ಲಿ ದೈಹಿಕ ಮತ್ತು ಭಾವನಾತ್ಮಕ ಕಿರುಕುಳವನ್ನು ಎದುರಿಸಿದ್ದಾರೆ ಮತ್ತು ತಮ್ಮ ಪತಿ ಮದ್ಯವ್ಯಸನಿ ಎಂದು ಹೇಳಿಕೊಂಡಿದ್ದಾರೆ. ಅವರು 2022 ರ ಸುಮಾರಿಗೆ ನಕುಲ್ ಅವರನ್ನು ವಿವಾಹವಾದರು ಎಂದು ವರದಿಯಾಗಿದೆ. ದಂಪತಿ ಫೆಬ್ರವರಿ 11, 2025 ರಂದು ತ್ರಿಪುರಾರಿ ಘಾಟ್ ಬಳಿಯ ಭೂತನಾಥ ದೇವಸ್ಥಾನದಲ್ಲಿ ಮದುವೆಯಾಗುವ ಮೊದಲು ಅಸನ್ಸೋಲ್ಗೆ ರಹಸ್ಯವಾಗಿ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಪವನ್ ಅವರ ಕುಟುಂಬವು ಅವರ ಮದುವೆಯನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದ್ದರೂ, ಇಂದ್ರ ಅವರ ಕುಟುಂಬವು ಈ ಸಂಬಂಧವನ್ನು ವಿರೋಧಿಸಿ ಅವನ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ನಂತರ ಅವರ ವಿವಾಹದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ದಂಪತಿ ಪೊಲೀಸ್ ರಕ್ಷಣೆ ಕೋರಿದರು. ಈ ಘಟನೆಯು ಆನ್ಲೈನ್ನಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ, ಸಾಲ ವಸೂಲಾತಿ ಏಜೆಂಟ್ ಒಬ್ಬ ಸಾಲಗಾರನ ಹೆಂಡತಿಯನ್ನು ಪ್ರೀತಿಸುವ ಅಸಾಮಾನ್ಯ ಕಥೆಯು ವ್ಯಾಪಕ ಗಮನ ಸೆಳೆಯುತ್ತಿದೆ.


