Live In Relationship ಹೊಸತೇನಲ್ಲ, ಬುಡಕಟ್ಟು ಜನಾಂಗದಲ್ಲೂ ಇದೆ ಈ ಪದ್ಧತಿ!
ಲಿವ್ ಇನ್ ರಿಲೇಷನ್ಶಿಪ್ ಎಂದಾಗ ಅನೇಕರು ಮೂಗು ಮುರಿಯುತ್ತಾರೆ. ಇದು ವಿದೇಶದಿಂದ ಬಂದ ಪದ್ಧತಿ ಎಂದು ನಂಬುತ್ತಾರೆ. ಆದ್ರೆ ಇದು ತಪ್ಪು ಕಲ್ಪನೆ. ಭಾರತದಲ್ಲೂ ಅನೇಕಾನೇಕ ವರ್ಷಗಳಿಂದ ಲಿವ್ ಇನ್ ಪದ್ಧತಿ ಆಚರಿಸಿಕೊಂಡು ಬಂದ ಜನಾಂಗವಿದೆ.
ಇಂದಿಗೂ ನಮ್ಮ ಸಮಾಜದಲ್ಲಿ ಲಿವ್-ಇನ್ ಸಂಬಂಧವನ್ನು ಒಪ್ಪಿಕೊಳ್ಳುವವರ ಸಂಖ್ಯೆ ಕಡಿಮೆಯಿದೆ. ಮದುವೆಯಾಗದೆ ಒಂದೇ ಸೂರಿನಡಿ ವಾಸಿಸುವ ಜೋಡಿಯನ್ನು ಜನರು ವಿಚಿತ್ರವಾಗಿ ನೋಡ್ತಾರೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಲಿವ್ ಇನ್ ರಿಲೇಷನ್ಶಿಪ್ ಸಾಮಾನ್ಯ ಎನ್ನುವಂತಾಗಿದೆ. ಈ ಲಿವ್ ಇನ್ ರಿಲೇಷನ್ಶಿಪ್ ಈಗ ಬಂದಿದ್ದಲ್ಲ. ಭಾರತದ ಅನೇಕ ಬುಡಕಟ್ಟು ಜನಾಂಗದಲ್ಲಿ ಲಿವ್ ಇನ್ ಸಂಬಂಧ ಹಿಂದಿನಿಂದಲೂ ಜಾರಿಯಲ್ಲಿದೆ. ಹಾಗಾಗಿಯೇ ನಾವು ಲಿವ್ ಇನ್ ಸಂಬಂಧ ಬಹಳ ಹಳೆಯದು ಎನ್ನಬಹುದು.
ನಿಮಗೆ ಅಚ್ಚರಿ ಎನ್ನಿಸಬಹುದು, ಆದ್ರೆ ಇದು ಸತ್ಯ. ಭಾರತ (India) ದ ಅನೇಕ ರಾಜ್ಯಗಳಲ್ಲಿ ಲಿವ್ ಇನ್ (Live In) ನಲ್ಲಿ ವಾಸಿಸುವ ಅನೇಕ ಬುಡಕಟ್ಟು (Tribe) ಜನಾಂಗದವರಿದ್ದಾರೆ. ಇಂದು ನಾವು ಯಾವ ರಾಜ್ಯದ ಯಾವ ಬುಡಕಟ್ಟು ಸಮಾಜದಲ್ಲಿ ಲಿವ್ ಇನ್ ಸಂಬಂಧ ಜಾರಿಯಲ್ಲಿದೆ ಎಂಬುದನ್ನು ನಿಮಗೆ ಹೇಳ್ತೆವೆ.
ಮುರಿಯಾ (Muria) ಬುಡಕಟ್ಟು ಜನಾಂಗದಲ್ಲಿದೆ ಲಿವ್ ಇನ್ ರಿಲೇಷನ್ಶಿಪ್ : ಮುರಿಯಾ ಬುಡಕಟ್ಟು ಜನಾಂಗದವರು ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಬಳಿ ವಾಸಿಸುತ್ತಾರೆ. ಈ ಬುಡಕಟ್ಟಿ ಜನಾಂಗದಲ್ಲಿ ಆಸಕ್ತಿದಾಯಕ ಪದ್ಧತಿಗಳು ಜಾರಿಯಲ್ಲಿವೆ. ಇಲ್ಲಿನ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಅವರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅವರು ಸಂಗಾತಿ ಆಯ್ಕೆ ಮಾಡಿಕೊಂಡು ಅವರ ಜೊತೆ ಲೈವ್ ಇನ್ ನಲ್ಲಿ ಉಳಿದುಕೊಳ್ತಾರೆ. ಈಗಿನ ಸಮಾಜ, ಲಿಂಗ ತಾರತಮ್ಯವನ್ನು ವಿರೋಧಿಸುತ್ತಿದೆ. ಆದ್ರೆ ಮುರಿಯಾ ಸಮುದಾಯದಲ್ಲಿ ಮೊದಲಿನಿಂದಲೂ ಲಿಂಗ ತಾರತಮ್ಯವಿಲ್ಲ. ಅಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಭೌತಿಕ ಗಡಿಯಿಲ್ಲ. ಇಲ್ಲಿನ ಮಹಿಳೆಯರು ಮಾತನಾಡಲು ಮತ್ತು ತಮ್ಮಿಚ್ಛೆಯಂತೆ ಬದುಕಲು ಸ್ವತಂತ್ರರು.
ಫ್ರಾನ್ಸ್‌ನಲ್ಲಿ 18ರಿಂದ 25 ವರ್ಷದ ಮಕ್ಕಳಿಗೆ ಕಾಂಡೋಮ್ ಫ್ರೀ
ಘೋಟುಲ್ ಎಂಬುದು ಮುರಿಯಾ ಜನರ ಸಂಪ್ರದಾಯವಾಗಿದೆ. ಸಮುದಾಯದ ಜನರು ಬಿದಿರು ಅಥವಾ ಮಣ್ಣಿನ ಗುಡಿಸಲನ್ನು ಮಾಡುತ್ತಾರೆ. ಅಲ್ಲಿ ಹುಡುಗಿಯರು ಮತ್ತು ಹುಡುಗರು ರಾತ್ರಿ ನೃತ್ಯ ಮಾಡ್ತಾರೆ. ಹಾಡು ಹೇಳುವ ಮೂಲಕ ಮನರಂಜನೆ ಪಡೆಯುತ್ತಾರೆ. ಇದನ್ನು ನಾವು ನೈಟ್‌ಕ್ಲಬ್ ಎಂದೂ ಕರೆಯಬಹುದು. ಇಲ್ಲಿ ಹುಡುಗ ಮತ್ತು ಹುಡುಗಿಗೆ ಸಂಗಾತಿ ಹುಡುಕುವ ಅವಕಾಶ ನೀಡಲಾಗುತ್ತದೆ. ಅವರ ಆಯ್ಕೆ ವಿಧಾನ ತುಂಬಾ ವಿಭಿನ್ನವಾಗಿದೆ. ಇವರ ಪ್ರಕಾರ, ಘೋಟುಲ್ ಗೆ ಹುಡುಗ ಬಂದ ಅಂದ್ರೆ ಅವನು ಪ್ರಬುದ್ಧನಾಗಿದ್ದಾನೆ ಎಂದರ್ಥ. ಆತ ಅಲ್ಲಿಗೆ ಬಂದು ಬಿದಿರಿನಿಂದ ಬಾಚಣಿಗೆ ಮಾಡಬೇಕು. ಆತನನ್ನು ಹುಡುಗಿ ಇಷ್ಟಪಟ್ಟರೆ ಬಾಚಣಿಗೆಯನ್ನು ಕದಿಯಬೇಕು. ಕೂದಲಿಗೆ ಬಾಚಣಿಕೆ ಹಾಕಿಕೊಂಡು ಹುಡುಗಿ ಹೊರಗೆ ಬಂದ್ರೆ ಆಕೆ ಯಾವುದೋ ಹುಡುಗನನ್ನು ಇಷ್ಟಪಡ್ತಿದ್ದಾಳೆ ಎಂದರ್ಥ. ಇದಾದ ನಂತ್ರ ಹುಡುಗ ಮತ್ತು ಹುಡುಗಿ ಜೋಡಿಯಾಗಿ ಘೋಟುಲ್ ಅಲಂಕರಿಸುತ್ತಾರೆ. ಕೊನೆಯಲ್ಲಿ ಇಬ್ಬರೂ ಒಂದೇ ಗುಡಿಸಲಿನಲ್ಲಿ ಒಟ್ಟಿಗೆ ವಾಸಿಸಲು ಶುರು ಮಾಡ್ತಾರೆ. ಅವರು ಗಂಡ ಮತ್ತು ಹೆಂಡತಿಯಂತೆ ಬದುಕುತ್ತಾರೆ. ಪರಸ್ಪರರ ಭಾವನಾತ್ಮಕ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ. ಇದರ ನಂತರ ಹುಡುಗ ಮತ್ತು ಹುಡುಗಿ ಇಬ್ಬರ ಕುಟುಂಬಗಳು ಅವರ ಮದುವೆಗೆ ಮುಂದಾಗುತ್ತವೆ. ಈ ಗುಡಿಸಲಿಗೆ ಹೋಗುವ ಹುಡುಗ ಹಾಗೂ ಹುಡುಗಿ ಇಬ್ಬರೂ ಪ್ರೀತಿ ಮಾಡ್ತಿದ್ದಾರೆ ಎಂಬುದು ಇಡೀ ಸಮುದಾಯದ ಜನರಿಗೆ ತಿಳಿದಿರುತ್ತದೆ.
ಗರಾಸಿಯಾ ಬುಡಕಟ್ಟಿನಲ್ಲೂ ಇದೆ ಈ ಪದ್ಧತಿ : ಗರಾಸಿಯಾ ಬುಡಕಟ್ಟು ಜನಾಂಗದ ಜನರು ರಾಜಸ್ಥಾನದ ವಾಯುವ್ಯ ಪ್ರದೇಶದಲ್ಲಿ ವಾಸಿಸುತ್ತಾರೆ. ಈ ಬುಡಕಟ್ಟು ಜನಾಂಗದವರು ಲಿವ್ ಇನ್ ರಿಲೇಷನ್ಶಿಪ್ ನಲ್ಲಿರುತ್ತಾರೆ. ಈ ಸಂಪ್ರದಾಯ ಸಾವಿರ ವರ್ಷಗಳಷ್ಟು ಹಳೆಯದು. ಇಲ್ಲಿ ಮದುವೆಯಾಗಲು ಯಾವುದೇ ಒತ್ತಡವಿಲ್ಲ. ಸಂಗಾತಿಯೊಂದಿಗೆ ಜೀವನ ಪರ್ಯಂತ ಒಟ್ಟಿಗೆ ಬದುಕಬಹುದು. ಲಿವ ಇನ್ ಸಮಯದಲ್ಲಿ ಮಕ್ಕಳು ಜನಿಸಿದರೆ ಇಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಜಾತ್ರೆಯ ಮೂಲಕ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಂತ್ರ ಹುಡುಗಿ ಮನೆಯವರಿಗೆ ಹುಡುಗನ ಮನೆಯವರು ಹಣ ನೀಡ್ತಾರೆ. ನಂತ್ರ ಲಿವ್ ಇನ್ ನಲ್ಲಿ ಇವರು ವಾಸಿಸ
ಗೊತ್ತಿರಲಿ ಮೊದಲ ರಾತ್ರಿಯ ರಹಸ್ಯ, ಸುಖಾ ಸುಮ್ಮನೆ ಅಪ್‌ಸೆಟ್ ಆಗೋದು ಬೇಡ!
ಮುಂಡಾ ಮತ್ತು ಕೊರ್ವಾ ಬುಡಕಟ್ಟು : ಜಾರ್ಖಂಡ್‌ನ ಮುಂಡಾ ಮತ್ತು ಕೊರ್ವಾ ಬುಡಕಟ್ಟು ಜನಾಂಗದಲ್ಲಿ ಕೂಡ ಲಿವ್ ಇನ್ ಪದ್ಧತಿಯಿದೆ. ಈ ಬುಡಕಟ್ಟಿನ ದಂಪತಿ 30 ರಿಂದ 40 ವರ್ಷಗಳವರೆಗೆ ಲಿವ್-ಇನ್‌ನಲ್ಲಿ ವಾಸಿಸುತ್ತಾರೆ. ಮದುವೆಯಿಲ್ಲದೆ ಒಟ್ಟಿಗೆ ವಾಸಿಸುವ ದಂಪತಿಯನ್ನು ಧುಕುಣಿ ಎಂದು ಕರೆಯಲಾಗುತ್ತದೆ. ಮದುವೆ ಮಾಡಿ ಹಬ್ಬದೂಟ ಹಾಕಲು ಸಾಧ್ಯವಾಗದ ಸಂದರ್ಭದಲ್ಲಿ ಈ ಬುಡಕಟ್ಟು ಜನಾಂಗದಲ್ಲಿ ಲಿವ್ ಇನ್ ಶುರುವಾಯ್ತಂತೆ.