Asianet Suvarna News Asianet Suvarna News

ಅಯ್ಯೋ ಬೇಡಮ್ಮ ಬೇಡ... ತಾಯಿಯ ನೋವಿಗೆ ಮಗುವಿನ ಒದ್ದಾಟ Video viral

ಮಗುವೊಂದು ತಾಯಿ ನೋವಿಗೆ ಸ್ಪಂದಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Little boy feels mother pain, cute video defines mother and baby relationship akb
Author
First Published Sep 15, 2022, 11:17 AM IST

ಮಕ್ಕಳು ದೇವರ ಸಮಾನರು ಅವರಿಗೆ ಕಪಟ ಕಲ್ಮಶ ಯಾವುದು ಅವರ ಮನಸ್ಸಿನಲ್ಲಿರುವುದಿಲ್ಲ. ಏನು ಮುಚ್ಚಿಡದೇ ಇದ್ದಿದ್ದನ್ನು ಇದ್ದಂತೆ ಹೇಳುವ ಮಕ್ಕಳ ಒಡನಾಟವನ್ನು ಬಹುತೇಕರು ಇಷ್ಟಪಡುತ್ತಾರೆ. ನಿನ್ನೆಯಷ್ಟೇ  ಶಾಲೆಯಲ್ಲಿ ತನ್ನ ತುಂಟಾಟದಿಂದ ಸಿಟ್ಟುಗೊಂಡ ಟೀಚರ್ ಅನ್ನು ಪುಟ್ಟ ಬಾಲಕ ಸಂತೈಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ ಈಗ ತಾಯಿ ಮಗುವಿನ ಆತ್ಮೀಯ ಒಡನಾಟದ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಾಯಿಗೆ ತನ್ನ ಕರುಳ ಬಳ್ಳಿಯೊಂದಿಗಿನ ಸಂಬಂಧ ಅವಿನಾಭಾವವಾದು. ಮಗುವಿಗೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ತಾಯಿ ತುಂಬಾನೆ ಚಡಪಡಿಸುತ್ತಾಳೆ. ಮಗುವನ್ನು ಚೆನ್ನಾಗಿಡಲು ತಾಯಿ ಸಾಕಷ್ಟು ತ್ಯಾಗ ಮಾಡುತ್ತಾಳೆ.

ಇನ್ನು ಹಾಲು ಕುಡಿಯುವ ಕಂದನಿದ್ದರಂತು ತಾಯಿ ಎಷ್ಟು ಕಾಳಜಿ ವಹಿಸಿದರೂ ಸಾಲದು. ತಾಯಿ ತಾನು ತಿನ್ನುವ ಆಹಾರದ (Food) ವಿಚಾರದಲ್ಲೂ ನಿಗಾ ವಹಿಸಬೇಕಾಗುತ್ತದೆ. ತಾಯಿ ತಿನ್ನುವ ಆಹಾರ ಹಾಲಿನ ಮೂಲಕ ಮಗುವಿನ ದೇಹ ಸೇರುವುದರಿಂದ ತಾಯಿ ತಂಪು ಪದಾರ್ಥ ತಿಂದರೆ ಮಗುವಿಗೆ ಶೀತ ನೆಗಡಿ ಆಗುತ್ತದೆ. ತಾಯಿ ಉಷ್ಣ ಪದಾರ್ಥ ತಿಂದರೆ ಮಗುವಿಗೆ ಉಷ್ಣವಾಗುತ್ತದೆ. ಹೀಗೆ ಹಾಲುಣಿಸುವ ತಾಯಿ ತಾನು ಒಂದು ತುತ್ತು ಬಾಯಿಗಿಡುವ ಮುನ್ನ ತನ್ನ ಕಂದನ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಆದರೆ ತಾಯಿಯಂತೆಯೇ ಮಕ್ಕಳು ತನ್ನ ತನ್ನ ತಾಯಿ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿಲ್ಲ. ಆದಾಗ್ಯೂ ಇಲ್ಲೊಂದು ಮಗು ತನ್ನ ತಾಯಿಗೆ ಕಾಳಜಿ ತೋರುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

 

ತಾಯಿಯೊಬ್ಬಳು ತನ್ನ ಕಣ್ಣಿಗೆ ಕೃತಕ ಕಣ್ಣು ರೆಪ್ಪೆಗಳನ್ನು (Fake Eye Lash) ಇಟ್ಟುಕೊಂಡಿದ್ದು, ಅವುಗಳನ್ನು ಮಗುವಿನ ಮುಂದೆ ಕೀಳುತ್ತಾಳೆ. ಆದರೆ ಪುಟ್ಟ ಮಗುವಿಗೆ ಇದು ಕೃತಕವಾದುದು ಎಂಬುದರ ಅರಿವಿಲ್ಲ. ಹೀಗಾಗಿ ಮಗು ಅಮ್ಮ ಆ ಕೃತಕ ಕಣ್ಣು ರೆಪ್ಪೆಗಳನ್ನು ಕೀಳಲು ಪ್ರಯತ್ನಿಸುವಾಗ ಬೇಡ ಬೇಡಮ್ಮ ಎಂದು ಅಮ್ಮನ ಕೈಯನ್ನು ಹಿಡಿದು ಜೋರಾಗಿ ಅಳಲು ಆರಂಭಿಸುತ್ತದೆ. ನಿಜವಾದ ಕಣ್ಣು ರೆಪ್ಪೆಗಳಾದರೆ ಅವುಗಳನ್ನು ಕಿತ್ತರೆ ನೋವಾಗುವುದು ಎಂಬುದು ಮಗುವಿಗೆ ಗೊತ್ತು. ಇದೇ ಕಾರಣಕ್ಕೆ ಮಗು (Kid) ಅಮ್ಮನಿಗೆ (Mother) ನೋವಾಗುವುದು ಎಂಬ ಕಾರಣಕ್ಕೆ ಜೋರಾಗಿ ಅಳುವ ಜೊತೆ ಆ ಕೃತಕ ರೆಪ್ಪೆಗಳನ್ನು ತೆಗೆಯಲು ಅಡ್ಡಿಪಡಿಸುತ್ತದೆ ಆದರೂ ತಾಯಿ ಆ ಕೃತಕ ರೆಪ್ಪೆಗಳನ್ನು ಮಗುವಿನ ಮುಂದೆಯೇ ಕೀಳುತ್ತದೆ. 


ಈ ವಿಡಿಯೋವನ್ನು 2 ಮಿಲಿಯನ್ ಜನ ವೀಕ್ಷಿಸಿದ್ದಾರೆ. ನೇಹಾ ಕಲ್ರಾ (Neha kalra) ಎಂಬುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದು, ನಿಮ್ಮ ಮಗು ನಿಮ್ಮ ನೋವಿಗೆ ಚಡಪಡಿಸುತ್ತಿರುವಾಗ ಎಂದು ಬರೆದು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದೊಂದು ಅತ್ಯುತ್ತಮವಾದ ಭಾವನೆ, ನಿಜವಾದ ಪ್ರೀತಿ ಎಂದು ಅವರು ಹೇಳಿಕೊಂಡಿದ್ದಾರೆ. 

ಏಲ್ಲೋ ಹೊರಗಡೆ ಹೋಗಿ ಮನೆಗೆ ಬಂದ ತಾಯಿ ನೇಹಾ ಅವರು ತಮ್ಮ ಮೇಕಪ್ (Makeup) ಅನ್ನು ತೆಗೆಯಲು ಶುರು ಮಾಡಿದ್ದಾರೆ. ಈ ವೇಳೆ ಕೃತಕ ಕಣ್ರೆಪ್ಪೆಗಳನ್ನು ತೆಗೆಯುವ ವೇಳೆ ಮಗು ಅದು ನಿಜವಾದ ಕಣ್ರೆಪ್ಪೆಗಳು ಎಂದು ತಿಳಿದು ಜೋರಾಗಿ ಆಳಲು ಶುರು ಮಾಡಿದೆ. ಈ ವಿಡಿಯೋಗೆ ನೆಟ್ಟಿಗರು ಕೂಡ ಸಂತಸ ವ್ಯಕ್ತಪಡಿಸಿದ್ದು, ಮಗುವಿನ ಮುಗ್ಧತೆಗೆ ಹಾಗೂ ತಾಯಿಯ ಮೇಲೆ ಮಗುವಿನ ಈ ಅಗಾಧ ಪ್ರೀತಿಗೆ ಬೆರಗಾಗಿದ್ದಾರೆ. 
 

Follow Us:
Download App:
  • android
  • ios