ಸಲಿಂಗ ಕಾಮ ಅಪರಾಧವಲ್ಲ/ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಸರಿಸುಮಾರು ಎರಡು ವರ್ಷ/ ಎದೆಯುಬ್ಬಿಸಿ ನಾವು ಸಲಿಂಗಿಗಳು ಎಂದು ಹೇಳಿದ ಸಿನಿಮಾ ಬರಹಗಾರ

ಮುಂಬೈ(ಮೇ 30) ಎರಡು ವರ್ಷದ ಹಿಂದೆಯೇ ಸಲಿಂಗ ಅಪರಾಧ ಅಲ್ಲ ಎಂದು ಸುಪ್ರೀಂ ತೀರ್ಪು ನೀಡಿದೆ. ಆದರೆ ಭಾರತದಲ್ಲಿ ಈ ವಿಚಾರವನ್ನು ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಆದರೆ ಕೆಲವೊಂದು ಸಂಗತಿಗಳನ್ನು ಜೀರ್ಣ ಮಾಡಿಕೊಳ್ಳಲೇಬೇಕಾಗಿದೆ.

ಸ್ಕ್ರೀನ್ ರೈಟರ್, ಎಡಿಟರ್ ಅಷ್ಟೆ ಅಲ್ಲದೆ ರಾಷ್ಟ್ರೀಯ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿರುವ ಅಪೂರ್ವ ಅಸ್ರಾನಿ ಮನೆ ಖರೀದಿಗೆ ಸಂಬಂಧಿಸಿ ಮಾಡಿದ ಟ್ವೀಟೊಂದು ದೊಡ್ಡ ಸುದ್ದಿ ಮಾಡುತ್ತಿದೆ. ಎಲ್ ಜಿಬಿಟಿಯ ವಿಚಾರ ಇಲ್ಲಿ ತೆರೆದುಕೊಳ್ಳುತ್ತದೆ.

ಸಲಿಂಗಿ ಆಗಿರುವ ಕರಣ್‌ ಮಕ್ಕಳಿಗೆ ಅಪ್ಪ-ಅಮ್ಮ ಇಬ್ಬರೂ ಇದ್ದಾರಾ?

ನಾನು ಮತ್ತು ನನ್ನ ಎಲ್ ಜಿಬಿಟಿ ಸಂಗಾತಿ ಹದಿಮೂರು ವರ್ಷಗಳಿಂದ ಕಸಿನ್ ಗಳು ಎಂದು ಮುಖವಾಡ ಹಾಕಿಕೊಂಡೇ ಬದುಕುತ್ತಿದ್ದೇವು. ಈಗ ಮನೆಯೊಂದನ್ನು ಖರೀದಿ ಮಾಡಿದ್ದು ನಮ್ಮ ನೆರೆಹೊರೆಯವರಿಗೆ ನಾವು ಸಂಗಾತಿಗಳು ಎಂದು ಹೇಳಿಕೊಳ್ಳಬಹುದಾಗಿದೆ ಎಂದು ಬರೆದಿದ್ದಾರೆ.

ಅಪೂರ್ವ ಅಸ್ರಾನಿಗೆ ಎಲ್ಲ ರೀತಿಯಲ್ಲೂ ಬರಹಗಾರ ಸಿದ್ಧಾಂತ್ ಸಂಗಾತಿ. ನಾವು ಸದಾ ನಮ್ಮ ಹೃದಯದ ಮಾತು ಕೇಳಿಯೇ ಬದುಕುತ್ತಿದ್ದೇವೆ ಎಂದು ಬರೆದಿದ್ದಾರೆ. ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅನೇಕರು ಜೋಡಿಗೆ ಶುಭಾಶಯ ತಿಳಿಸಿದ್ದಾರೆ. 

Scroll to load tweet…
Scroll to load tweet…