Asianet Suvarna News Asianet Suvarna News

ಸೆಕ್ಸ್ ವೇಳೆ ಲಾಲಾರಸ ಬಳಕೆ ಎಷ್ಟು ಸೂಕ್ತ?

ಸೆಕ್ಸ್ ವೇಳೆ ಯೋನಿ ಶುಷ್ಕತೆಯಿಂದಾಗಿ ದಂಪತಿ ಸಮಸ್ಯೆ ಎದುರಿಸುತ್ತಾರೆ. ಸಂಭೋಗ ಸರಾಗವಾಗಿ ನಡೆಯಲು ಲೂಬ್ರಿಕಂಟ್ ಬಳಕೆ ಮಾಡುವವರಿದ್ದಾರೆ. ಆದ್ರೆ ಲಾಲಾರಸವನ್ನೇ ಲೂಬ್ರಿಕಂಟ್ ಆಗಿ ನೀವು ಬಳಕೆ ಮಾಡ್ತಿದ್ದರೆ ಅದ್ರ ಪರಿಣಾಮ ಏನು ಎಂಬುದನ್ನು ತಿಳಿದಿಟ್ಕೊಳ್ಳಿ.
 

Know Disadvantages Of Using Saliva As Lubricant During Sex roo
Author
First Published Nov 3, 2023, 11:54 AM IST

ಸಂಭೋಗದ ವೇಳೆ ಅನೇಕ ದಂಪತಿ ಲೂಬ್ರಿಕಂಟ್ ಬಳಕೆ ಮಾಡ್ತಾರೆ. ಯೋನಿ ಶುಷ್ಕವಾಗಿದ್ದಾಗ ಲೂಬ್ರಿಕಂಟ್ ಬಳಕೆ ಮಾಡುವಂತೆ ವೈದ್ಯರ ಕೂಡ ಸಲಹೆ ನೀಡ್ತಾರೆ. ಮಾರುಕಟ್ಟೆಯಲ್ಲಿ ಅನೇಕ ಲೂಬ್ರಿಕಂಟ್ ಲಭ್ಯವಿದೆ. ಕೆಲ ದಂಪತಿ ನಾಚಿಕೆ ಅಥವಾ ಲೂಬ್ರಿಕಂಟ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅದನ್ನು ಬಳಸುವ ಬದಲು ಲಾಲಾರಸವನ್ನು ಬಳಸುತ್ತಾರೆ.  ಸಂಭೋಗದ ವೇಳೆ ಲೂಬ್ರಿಕಂಟ್ ಆಗಿ ಲಾಲಾರಸ ಬಳಕೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ನಾವು ನಿಮಗೆ ಮಾಹಿತಿ ನೀಡ್ತೇವೆ.

ನಮ್ಮ ಬಾಯಿಯಲ್ಲಿ ಉತ್ಪತ್ತಿಯಾಗುವ ಇದನ್ನು ಲಾಲಾರಸ (Saliva) ಅಥವಾ ಜೊಲ್ಲು ಎಂದು ಕರೆಯಲಾಗುತ್ತದೆ. ಇದು ಬಾಯಿಯಲ್ಲೇ ರೂಪಗೊಳ್ಳುವ ನೀರಿನಂತಹ ಪದಾರ್ಥ. ಆಹಾರ (Food) ಜೀರ್ಣಗೊಳ್ಳಲು ಕಾರಣವಾಗುವುದಲ್ಲದೆ ಬಾಯನ್ನು ತೇವವಾಗಿ ಇಡುತ್ತದೆ. ಆದ್ರೆ ಇದನ್ನು ಸಂಭೋಗ (Intercourse) ದ ವೇಳೆ ಬಳಸಿದಾಗ ಏನೆಲ್ಲ ಅಪಾಯವಿದೆ ಗೊತ್ತಾ?.

ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರನ್ನೇ ಹೆಚ್ಚು ಇಷ್ಟಪಡೋದು ಯಾಕೆ?

ಲಾಲಾರಸವನ್ನು ನೀವು ಲೂಬ್ರಿಕಂಟ್ (Lubricant) ಆಗಿ ಬಳಕೆ ಮಾಡ್ತಿದ್ದರೆ ಇಂದೇ ಅದನ್ನು ಬಿಡಿ. ಯಾಕೆಂದ್ರೆ ಇದು ಅಪಾಯಕಾರಿ ಕೆಲಸವಾಗಿದೆ. ಲಾಲಾರಸವು ಲೈಂಗಿಕವಾಗಿ ಹರಡುವ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ಗಂಟಲು ಮತ್ತು ಬಾಯಿಯಲ್ಲಿನ ಸೋಂಕು ನೇರವಾಗಿ ನಿಮ್ಮ ನಿಕಟ ಭಾಗಗಳನ್ನು ತಲುಪುತ್ತದೆ. ಇದು ಯೋನಿ ಪ್ರದೇಶಕ್ಕೆ ಅಪಾಯವನ್ನುಂಟು ಮಾಡುತ್ತದೆ. ಲಾಲಾರಸದಲ್ಲಿರುವ ಬ್ಯಾಕ್ಟೀರಿಯಾಗಳು ಯೋನಿ ಬ್ಯಾಕ್ಟೀರಿಯಾಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಜೀರ್ಣಕಾರಿ ಕಿಣ್ವಗಳು ಲಾಲಾರಸದಲ್ಲಿ ಕಂಡುಬರುತ್ತವೆ. ಇದನ್ನು ಆಹಾರ ಪದಾರ್ಥಗಳನ್ನು ಒಡೆಯಲು ಬಳಸಲಾಗುತ್ತದೆ. ಲಾಲಾರಸದ ಬ್ಯಾಕ್ಟೀರಿಯಾ ಮತ್ತು ಕಿಣ್ವಗಳು ಯೋನಿಯ ಸಂಪರ್ಕಕ್ಕೆ ಬಂದಾಗ, ಯೋನಿ ಸೂಕ್ಷ್ಮಜೀವಿಯ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಸ್ಥಿತಿಯಲ್ಲಿ ಯೀಸ್ಟ್ ಸೋಂಕು ಮತ್ತು ಬ್ಯಾಕ್ಟೀರಿಯಾದ ಯೋನಿನೋಸಿಸ್ ಅಪಾಯವು ಹೆಚ್ಚಾಗುತ್ತದೆ. ಮೂತ್ರಕೋಶ, ಮೂತ್ರಪಿಂಡಗಳು ಮತ್ತು ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಬ್ಯಾಕ್ಟೀರಿಯಾ ಸೋಂಕು ಹಾಗೂ ಯೀಸ್ಟ್ ಸೋಂಕಿಗೆ ಚಿಕಿತ್ಸೆ ಇದೆ. ಆದ್ರೆ ಇದ್ರಿಂದಾಗುವ ಕಿರಿಕಿರಿ ಸಹಿಸೋದು ಕಷ್ಟ. ಕೆಲವೊಮ್ಮೆ ಯೋನಿ ಉರಿ, ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಮತ್ತೊಬ್ಬರಿಗೆ ಹರಡುವ ಸಾಧ್ಯತೆಯೂ ಇರುತ್ತದೆ. 

ಹಣ ಕೊಡ್ಬೇಕು.. ಹಾಡು ಹೇಳ್ಬೇಕು.. ಹುಡುಗ್ರಿಗೆ ಭಯ ಹುಟ್ಟಿಸಿದ ಚೀನಾದ ಮದುವೆ ಸಂಪ್ರದಾಯ

ಲೈಂಗಿಕತೆಗೆ ಒಳ್ಳೆಯದಲ್ಲ ಲಾಲಾರಸ : ಲಾಲಾರಸ ಬಳಕೆಯಿಂದ ಸೋಂಕು ಹರಡೋದು ಒಂದು ಕಡೆಯಾದ್ರೆ ಇದನ್ನು ಸೆಕ್ಸ್ ಗೆ ಸೂಕ್ತ ಲೂಬ್ರಿಕಂಟ್ ಎನ್ನಲು ಸಾಧ್ಯವಿಲ್ಲ. ಇದು ಯೋನಿಯನ್ನು ನಯಗೊಳಿಸೋದಿಲ್ಲ. ಹಾಗೆಯೇ ಸುಲಭವಾಗಿ ಆವಿಯಾಗುವ, ಒಣಗುವ ಗುಣಲಕ್ಷಣವನ್ನು ಇದು ಹೊಂದಿದೆ. ಲಾಲಾರಸ ಬೇಗ ಆವಿಯಾಗುವ ಕಾರಣ ಸಂಭೋಗದ ವೇಳೆ ಉರಿ, ಘರ್ಷಣೆಯಾಗುವ ಸಾಧ್ಯತೆ ಇದೆ. ನೋವು ಸಂಭವಿಸಬಹುದು. ಇದ್ರಿಂದ ಸಂಭೋಗ ಸರಾಗವಾಗಿ ನಡೆಯುವ ಬದಲು ಕಷ್ಟದಿಂದ ಮುಕ್ತಾಯಗೊಳ್ಳುತ್ತದೆ.

ಲೂಬ್ರಿಕಂಟ್ ಲೈಂಗಿಕ ಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹಾಗಂತ ಅದ್ರ ಬದಲು ಲಾಲಾರಸ ಬಳಸಿದ್ರೆ  ಲೈಂಗಿಕವಾಗಿ ಹರಡುವ ಸೋಂಕುಗಳು ಪಾಲುದಾರರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. 

ಸಂಭೋಗದ ವೇಳೆ ಅನೇಕ ವಿಷ್ಯಗಳ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಇದು ಸೂಕ್ಷ್ಮ ಪ್ರದೇಶವಾದ ಕಾರಣ ಎಲ್ಲ ವಸ್ತುಗಳನ್ನು ಬಳಸುವಂತಿಲ್ಲ. ಕಾಂಡೋಮ್ ನಿಂದ ಹಿಡಿದು ಲೂಬ್ರಿಕಂಟ್ ವರೆಗೆ ಎಲ್ಲ ವಸ್ತುಗಳ ಖರೀದಿ ಹಾಗೂ ಬಳಕೆ ವೇಳೆ ಎಚ್ಚರವಿರಬೇಕು. ಲೂಬ್ರಿಕಂಟ್ ಅನಿವಾರ್ಯ ಎನ್ನುವವರು ವೈದ್ಯರನ್ನು ಭೇಟಿಯಾಗಿ ಅದನ್ನು ಪಡೆಯೋದು ಸೂಕ್ತ. ಎಲ್ಲ ಲೂಬ್ರಿಕಂಟ್ ಎಲ್ಲರಿಗೂ ಒಳ್ಳೆಯದಲ್ಲ. ಅದನ್ನು ಬಳಸಿದಾಗ ನಿಮಗೆ ಕಿರಿಕಿರಿ ಎನ್ನಿಸಿದ್ರೆ ತಕ್ಷಣ ಅದರ ಬಳಕೆ ನಿಲ್ಲಿಸಿ. ನೀವು ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್ನಂತಹ ಹೋಮ್ ಲೂಬ್ರಿಕಂಟ್ ಗಳನ್ನು ಸಹ ಬಳಸಬಹುದು. ಆದ್ರೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. 
 

Follow Us:
Download App:
  • android
  • ios