ಮಕ್ಕಳ ಭವಿಷ್ಯ ಹಾಳ್ಮಾಡ್ಬಹುದು ತಂದೆಯ ಈ ವರ್ತನೆ!
ಮಕ್ಕಳ ಹೊಟ್ಟೆ - ಬಟ್ಟೆ ನೋಡಿಕೊಂಡ್ರೆ ತಂದೆಯಾದವನ ಜವಾಬ್ದಾರಿ ಮುಗಿಯಲಿಲ್ಲ. ತಾಯಿಯಂತೆ ತಂದೆ ಕೂಡ ಮಕ್ಕಳ ಪ್ರತಿಯೊಂದು ಜವಾಬ್ದಾರಿ ಹೊರಬೇಕು. ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಆದ್ರೆ ತಂದೆಯ ಕೆಲ ನಡವಳಿಕೆ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ.
ಮಕ್ಕಳ (Children) ಲಾಲನೆ – ಪಾಲನೆ ವಿಷ್ಯ ಬಂದಾಗ ಎಲ್ಲರೂ ಬೊಟ್ಟು ಮಾಡುವುದು ತಾಯಿ (Mother) ಯನ್ನು. ಮಕ್ಕಳನ್ನು ಬೆಳೆಸುವ ಹೊಣೆ ತಾಯಿ ಮೇಲಿದೆ ಎಂದು ಎಲ್ಲರೂ ನಂಬುತ್ತಾರೆ. ತಾಯಿ ನಂತ್ರದ ಸ್ಥಾನವನ್ನು ತಂದೆ (Father) ಗೆ ನೀಡಲಾಗುತ್ತದೆ. ಆದ್ರೆ ಮಕ್ಕಳು ನಮ್ಮಂತೆ ಆಲೋಚನೆ ಮಾಡುವುದಿಲ್ಲ. ಮಕ್ಕಳಿಗೆ ತಂದೆ – ತಾಯಿ ಇಬ್ಬರ ಅವಶ್ಯಕತೆ ಇರುತ್ತದೆ. ಅವರ ಜೀವನ (Life) ದಲ್ಲಿ ಇಬ್ಬರಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಕ್ಕಳನ್ನು ಬೆಳೆಸುವಲ್ಲಿ ತಾಯಿ ಮಾತ್ರವಲ್ಲ, ತಂದೆಯೂ ತುಂಬಾ ಜಾಗರೂಕರಾಗಿರಬೇಕು. ಸಾಮಾನ್ಯವಾಗಿ ಮಕ್ಕಳನ್ನು ಬೆಳೆಸುವ ವಿಷ್ಯದಲ್ಲಿ ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ತನ್ನಂತೆ ಮಕ್ಕಳನ್ನು ಯಾರೂ ಬೆಳೆಸುತ್ತಿಲ್ಲ, ನಾನು ಪರ್ಫೆಕ್ಟ್ ಫಾದರ್ ಎಂದು ಅನೇಕರು ಭಾವಿಸ್ತಾರೆ. ನೀವು ಮಕ್ಕಳ ಜವಾಬ್ದಾರಿ ಹೊತ್ತಿರಬಹುದು, ಆದ್ರೆ ನೀವು ನಡೆಯುತ್ತಿರುವ ದಾರಿ ಸರಿ ಎಂದು ಹೇಳಲು ಸಾಧ್ಯವಿಲ್ಲ. ತಂದೆಯಾದವನು ತನ್ನ ಅನೇಕ ನಡವಳಿಕೆಗಳನ್ನು ಮಕ್ಕಳಿಗಾಗಿ ಬದಲಿಸಿಕೊಳ್ಳಬೇಕು. ತಂದೆಯ ಕೆಲ ವರ್ತನೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇಂದು ತಂದೆಯ ಯಾವ ವರ್ತನೆ ಅಥವಾ ನಡವಳಿಕೆ ಮಕ್ಕಳಿಗೆ ಅಪಾಯಕಾರಿ ಎಂಬುದನ್ನು ನಾವು ಹೇಳ್ತೇವೆ.
ತಂದೆಯ ಗೈರು ಹಾಜರಿ : ಕೆಲಸದ ಕಾರಣಕ್ಕೆ ತಂದೆ ಮನೆಯಿಂದ ಹೊರಗಿರುತ್ತಾರೆ ನಿಜ. ಆದ್ರೆ ಕೆಲ ಸಂದರ್ಭದಲ್ಲಿ ತಂದೆ ಮಕ್ಕಳ ಜೊತೆ ಇರಬೇಕು. ಬಹುತೇಕ ಮಕ್ಕಳಿಗೆ ತಂದೆಯ ಬೆಂಬಲ ಹಾಗೂ ಸಲಹೆಯ ಅಗತ್ಯವಿರುತ್ತದೆ. ಆ ಸಂದರ್ಭದಲ್ಲಿ ತಂದೆ ಗೈರಾಗಿರುತ್ತಾರೆ. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ತಂದೆಯಿಂದ ಮಕ್ಕಳು ಕಲಿಯುವುದು ಸಾಕಷ್ಟಿರುತ್ತದೆ. ತಂದೆ ಕಲಿಸಬೇಕಾದ ವಿಷ್ಯವನ್ನು ತಾಯಿ ಕಲಿಸುವುದು ಕಷ್ಟ. ತಂದೆ – ತಾಯಿ ಇಬ್ಬರೂ ಮಕ್ಕಳಿಗೆ ಸಮಯ ನೀಡಿದಾಗ ಮಾತ್ರ ಮಗು ಸರಿಯಾಗಿ ಬೆಳೆಯಲು ಸಾಧ್ಯ. ಇಲ್ಲಿ ಇಬ್ಬರ ಕೊಡುಗೆಯೂ ಸಮಾನವಾಗಿರಬೇಕು.
ದೌರ್ಜನ್ಯ : ಮಕ್ಕಳಿಗೆ ಪಾಲಕರ ಭಯವಿರಬೇಕು ನಿಜ. ಆದ್ರೆ ಇದು ಅತಿಯಾದ್ರೆ ಮಕ್ಕಳ ಭಾವನೆ ಮೇಲೆ ಅಡ್ಡ ಪರಿಣಾಮವಾಗುತ್ತದೆ. ಅನೇಕ ಮನೆಯಲ್ಲಿ ತಂದೆ ವಿಲನ್ ಆಗಿರ್ತಾರೆ. ಮಕ್ಕಳು ಯಾವುದೇ ತಪ್ಪು ಮಾಡಿದಾಗ ತಂದೆ ಹೆಸರು ಹೇಳಿ ಬೆದರಿಸಲಾಗುತ್ತದೆ. ತಂದೆ ಕೂಡ ಮಾತು ಮಾತಿಗೆ ಮಕ್ಕಳಿಗೆ ಬೈಯ್ಯುವುದು, ಹೊಡೆಯುವುದು ಮಾಡಿದ್ರೆ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ತಂದೆಯನ್ನು ಪ್ರೀತಿಸುವ ಬದಲು ಮಗು ದ್ವೇಷಿಸಲು ಶುರು ಮಾಡುತ್ತದೆ. ಹಾಗೆ ತಂದೆ ಮುಂದೆ ತನ್ನ ಯಾವುದೇ ಸಮಸ್ಯೆಯನ್ನು ಹೇಳಿಕೊಳ್ಳುವುದಿಲ್ಲ.
Transgender ಎಂದರೆ ಯಾರು ಎಂಬುದನ್ನು ಮಕ್ಕಳಿಗೆ ಹೇಳಿಕೊಡುವುದು ಹೇಗೆ ?
ಡಿಮ್ಯಾಂಡಿಂಗ್ ತಂದೆ : ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಗುಂಗಿನಲ್ಲಿ ಹಾಗೂ ಮಕ್ಕಳನ್ನು ತಮಗಿಂತ ಉತ್ತಮರನ್ನಾಗಿ ಮಾಡಬೇಕೆಂಬ ಆಸೆಯಲ್ಲಿ ಸದಾ ಮಕ್ಕಳ ಮೇಲೆ ಒತ್ತಡ ಹೇರುವ ತಂದೆಯಂದಿರಿದ್ದಾರೆ. ಮಕ್ಕಳು 100ಕ್ಕೆ 100 ಅಂಕ ತಂದ್ರೂ ತಂದೆಗೆ ಸಮಾಧಾನವಿರುವುದಿಲ್ಲ. ಮತ್ತಷ್ಟು ಉತ್ತಮವಾಗಿ ಮಾಡಲು ಒತ್ತಾಯಿಸುತ್ತಾರೆ. ಅಂತಹ ತಂದೆಗೆ ತಮ್ಮ ಮಕ್ಕಳ ಬಗ್ಗೆ ಸಹಾನುಭೂತಿ ಇರುವುದಿಲ್ಲ.
ಕಪಟಿ ತಂದೆ : ತಂದೆಯು ಮಕ್ಕಳಿಗೆ ಆದರ್ಶ. ಆದ್ರೆ ತಂದೆಯ ಬೂಟಾಟಿಕೆ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಅಪ್ಪಂದಿರು ತಾನು ಮಾಡಲು ಬಯಸದ ಕೆಲಸವನ್ನು ಮಕ್ಕಳು ಮಾಡುವಂತೆ ಒತ್ತಾಯಿಸುತ್ತಾರೆ. ಈ ತಂದೆಗೆ ತನ್ನ ಮಕ್ಕಳ ಅಗತ್ಯಕ್ಕಿಂತ ತನ್ನ ಅಗತ್ಯ ಮುಖ್ಯವಾಗಿರುತ್ತದೆ.
ಫ್ರೆಂಡ್ಸ್ ಜೊತೆ ಟ್ರಿಪ್ ಹೋದ ಹೆಂಡ್ತಿ, ಏನೇನೋ ಮಾಡ್ಕೊಂಡಳಂತೆ!
ನಿಷ್ಕ್ರಿಯ ತಂದೆ : ಇದ್ದೂ ಇಲ್ಲದಂತೆ ಇರುವವರನ್ನು ನಿಷ್ಕ್ರಿಯ ತಂದೆ ಎನ್ನಬಹುದು. ಮಕ್ಕಳು ತಪ್ಪು ಮಾಡ್ತಿರುವುದು ಕಾಣ್ತಿದ್ದರೂ ಅವರು ಅದನ್ನು ಸುಧಾರಿಸುವ ಕೆಲಸಕ್ಕೆ ಹೋಗುವುದಿಲ್ಲ. ಈ ಜವಾಬ್ದಾರಿ ತಾಯಿ ಮೇಲಿರುತ್ತದೆ. ಈ ತಂದೆ ಜೊತೆ ಬೆಳೆಯುವ ಮಕ್ಕಳು ಶಿಸ್ತು, ನಿಯಮಗಳನ್ನು ಪಾಲಿಸುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ತಂದೆಯಂತೆ ಸಮಸ್ಯೆಗಳನ್ನು ಬೇರೆಯವರ ಹೆಗಲಿಗೆ ಹಾಕಿ ಆರಾಮಾಗಿರಲು ಪ್ರಯತ್ನಿಸುತ್ತಾರೆ.