Asianet Suvarna News Asianet Suvarna News

Relationship Tips: ಸಂಗಾತಿಯ ದೈಹಿಕ ಸ್ವರೂಪದ ಬಗ್ಗೆ ಲೇವಡಿ ಮಾಡ್ತೀರಾ? ಬಿಟ್ಬಿಡಿ

ನಿಮ್ಮ ಸಂಗಾತಿ ತಮ್ಮ ದೈಹಿಕ ಸ್ವರೂಪದ ಬಗ್ಗೆ ಹೆಚ್ಚು ಸೂಕ್ಷ್ಮರಾಗಿದ್ದಾರೆಯೇ? ತಮ್ಮ ದೇಹವನ್ನು ನಿರ್ಲಕ್ಷಿಸುತ್ತಾರೆಯೇ? ಎಲ್ಲರೆದುರು ಆರಾಮಾಗಿ ತಿನ್ನಲು ಹಿಂಜರಿಯುತ್ತಾರೆಯೇ? ಹಾಗಿದ್ದರೆ ಅವರಿಗೆ ನಿಮ್ಮ ಬೆಂಬಲ ಅಗತ್ಯವಾಗಿ ಬೇಕಿದೆ. ಈ ಮಾರ್ಗಗಳ ಮೂಲಕ ಪ್ರಯತ್ನಿಸಿ.
 

If your partner have body image issue support them
Author
Bangalore, First Published Apr 12, 2022, 4:32 PM IST

ಬಾಂಧವ್ಯ (Relation) ಚೆನ್ನಾಗಿದ್ದರೂ ಸಂಗಾತಿಯ (Partner) ದೈಹಿಕ (Body) ರೂಪದಿಂದಾಗಿ ಕೆಲವೊಮ್ಮೆ ಸಮಸ್ಯೆಗಳು ತಲೆದೋರಬಹುದು. ಬೊಜ್ಜು (Over Weight) ದೇಹಿಗಳಾಗಿದ್ದರೆ, ತೀರ ಸಣ್ಣಗಿದ್ದರೆ (Under Weight) ಅಥವಾ ಇನ್ಯಾವುದೋ ರೂಪದಲ್ಲಿದ್ದರೆ ನೀವೂ ಕೆಲವೊಮ್ಮೆ ಅವರನ್ನು ರೇಗಿಸಬಹುದು. ಒಂದೊಮ್ಮೆ ನೀವು ರೇಗಿಸದಿದ್ದರೂ ಅವರ ದೈಹಿಕ ಸ್ವರೂಪ ಬಹಳಷ್ಟು ಬಾರಿ ಅವರಿಗೇ ಮುಜುಗರ ಒಡ್ಡುತ್ತಿರುತ್ತದೆ. ಇನ್ನು ಸುತ್ತಲಿನ ವಾತಾವರಣವೂ ಅದಕ್ಕೆ ಪೂರಕವಾಗಿದ್ದರೆ ಕೀಳರಿಮೆ(Inferior)ಯಿಂದ ನರಳುವಂತಾಗುತ್ತದೆ. 
ನಿಮ್ಮ ಸಂಗಾತಿಗೆ ದೇಹದ ರೂಪದ ವಿಚಾರದಲ್ಲಿ ಸಹಾಯ ಮಾಡಬೇಕು ಎನ್ನುವುದು ನಿಮ್ಮ ಇಚ್ಛೆಯಾಗಿದ್ದರೆ ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. 

•    ವ್ಯಾಯಾಮ (Exersice) ಮಾಡಿಲ್ಲವಾದರೆ ಕಿರಿಕಿರಿ ಮಾಡಬೇಡಿ
ನಿಮ್ಮ ಉದ್ದೇಶ ಎಷ್ಟೇ ಒಳ್ಳೆಯದಾಗಿದ್ದರೂ ಸರಿ, ಅವರಿಗೆ ತೀರ ಇಷ್ಟವೇ ಇಲ್ಲ ಎಂದಾದರೆ ವ್ಯಾಯಾಮ ಮಾಡುವಂತೆ ಅವರ ತಲೆ ತಿನ್ನಬೇಡಿ. ನಿಮಗೇನು ಇಷ್ಟವೋ ಅಥವಾ ನೀವು ಯಾವುದನ್ನು ಮಾಡಬಲ್ಲಿರೋ ಅದನ್ನು ಅವರು ಮಾಡಲೇಬೇಕು ಎಂದಿಲ್ಲ. ವ್ಯಕ್ತಿಗತ ವಿಚಾರಕ್ಕೆ ಬೆಲೆ ನೀಡಿ. ಇಷ್ಟವಿಲ್ಲದೆ ಒತ್ತಾಯಪೂರ್ವಕವಾಗಿ ಅವರನ್ನು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ತಲೆದೋರಬಹುದು. ಅಲ್ಲದೆ, ನಿಮ್ಮ ನಡುವೆ ಇದೇ ಕಾರಣಕ್ಕೆ ದೊಡ್ಡ ಕಂದಕ ನಿರ್ಮಾಣವಾಗಬಹುದು. ಅವರು ನಿರಾಕರಿಸಿದರೂ ನೀವು ಕಿರಿಕಿರಿ ಮಾಡಿದರೆ ಸಂಗಾತಿಯಾಗಿ ನೀವು ಅವರೊಂದಿಗೆ ಸಂತಸದಿಂದಿಲ್ಲ ಎಂದು ಭಾವಿಸುವ ಸಾಧ್ಯತೆ ಹೆಚ್ಚು.

•    ಸಂಗಾತಿಯ ಊಟದ ((Meal) ಸಮಯದಲ್ಲಿ ಬೆಂಬಲವಾಗಿರಿ (Supportive) 
ತಮ್ಮ ತೂಕದ ಬಗ್ಗೆ ಜಾಗೃತರಾಗಿರುವವರು ಸಾಮಾನ್ಯವಾಗಿ ಇಷ್ಟವಾದುದನ್ನು ಖುಷಿಯಾಗಿ ತಿನ್ನಲು (Eat) ಹಿಂದೇಟು ಹಾಕುತ್ತಾರೆ. ಅದರಲ್ಲೂ ಜನರ ನಡುವೆ ಈ ಮುಜುಗರ ಹೆಚ್ಚು. ಸಂಗಾತಿಯೂ ತಪ್ಪು ಭಾವಿಸಬಹುದು ಎನ್ನುವ ಸಂಕಟದಲ್ಲಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಅವರೊಂದಿಗಿದ್ದು ಅವರು ಊಟದ ಸಮಯದಲ್ಲಿ ಕಂಫರ್ಟ್ (Comfort) ಆಗಿರುವಂತೆ ಮಾಡುವುದು ನಿಮ್ಮ ಜವಾಬ್ದಾರಿ. ಖುಷಿಯಾಗಿ ಜೋಕ್ (Joke) ಮಾಡುತ್ತ, ಯಾರಾದರೂ ಏನಾದರೂ ಕಮೆಂಟ್ ಮಾಡಿದರೂ ಅವರಿಗೆ ಬೇಸರವಾಗದಂತೆ ತಮಾಷೆಯಾಗಿದ್ದುಕೊಂಡು ಆ ಸನ್ನಿವೇಶದಲ್ಲಿ ಬೆಂಬಲ ನೀಡುವುದು ಉತ್ತಮ.

ಇದನ್ನೂ ಓದಿ: Relationship Tips : ಭಾವನೆಗಳಿಲ್ಲದ ಪತಿ…ಮೈದುನನಿಗೆ ಮುತ್ತಿಟ್ಟ ಅತ್ತಿಗೆ

•    ಅವರ ಸ್ಥಿತಿಯ ಬಗ್ಗೆ ದೂರುವುದು ಸಲ್ಲದು (Avoid Blaming)
ಸಂಗಾತಿ ತಮ್ಮ ದೈಹಿಕ ಸ್ವರೂಪದ ಬಗ್ಗೆ ಚಿಂತಿತರಾಗಿದ್ದಾರೆ ಎಂದರೆ ನೀವೂ ಸ್ವಲ್ಪ ಸೂಕ್ಷ್ಮವಾಗಿ ವರ್ತಿಸಬೇಕು. ಅವರ ದೈಹಿಕ ಸ್ಥಿತಿಯ ಬಗ್ಗೆ ಯಾವುದೇ ಕಾರಣಕ್ಕೂ ಲೇವಡಿ ಮಾಡಬೇಡಿ, ದೂರಬೇಡಿ. ಒಂದೊಮ್ಮೆ ಅವರು ಧಡೂತಿಯಾಗಿದ್ದರೆ ಅದಕ್ಕೆ ಕಾರಣವೇನೇ ಇದ್ದರೂ ಅದನ್ನು ಅತಿಯಾಗಿ ತಮಾಷೆ ಮಾಡಬೇಡಿ. ಅವರು ಆಂತರಿಕವಾದ ಸಂಘರ್ಷದಲ್ಲಿದ್ದಾಗ ಬೆಂಬಲವಾಗಿರುವುದು ನಿಮ್ಮ ಜವಾಬ್ದಾರಿ. ನೀವೂ ಅವರನ್ನು ಲೇವಡಿ ಮಾಡಿದರೆ ಅವರಿಗೆ ತಮ್ಮ ಸ್ಥಿತಿಯ ಬಗ್ಗೆ ಕೀಳರಿಮೆ ಮೂಡುತ್ತದೆ. ಇದು ವ್ಯಕ್ತಿತ್ವಕ್ಕೆ ಹಾನಿ ತರುತ್ತದೆ. 

ಇದನ್ನೂ ಓದಿ: ಸುಮ್ನೆ ಪೋರ್ನ್‌ ವೀಡಿಯೋ ನೋಡ್ತಾ ಕೂತ್ರೆ ಸಾಕು, ಗಂಟೆಗೆ 1500 ರೂ. ಕೊಡ್ತಾರೆ..!

•    ಸಂಗಾತಿಯ ಮಿತಿಯನ್ನು ಅರ್ಥೈಸಿಕೊಳ್ಳಿ (Understand)
ಪ್ರತಿಯೊಬ್ಬರೂ ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಪತಿ-ಪತ್ನಿಯರು ಒಂದೇ ರೀತಿಯ ಮನೋಭಿಲಾಷೆ ಹೊಂದಿರುವುದು ಖಂಡಿತ ಸಾಧ್ಯವಿಲ್ಲ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಒಂದೊಮ್ಮೆ ಅವರು ತಮ್ಮ ದೈಹಿಕ ಸ್ವರೂಪದ ಬಗ್ಗೆ ಹೆಚ್ಚು ಸೂಕ್ಷ್ಮವಾಗಿದ್ದರೆ ಅದರ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ತಮ್ಮ ದೇಹವನ್ನು ನಿರ್ಲಕ್ಷಿಸಲು ಅವರಿಗೆ ಅವಕಾಶ ನೀಡಬೇಡಿ. ಹಾಗೆ ಮಾಡುತ್ತ ಮಾಡುತ್ತ ಅವರು ಖಂಡಿತವಾಗಿ ಒಂದು ದಿನ ಮಾನಸಿಕ ಸಮಸ್ಯೆ ತಂದೊಡ್ಡಿಕೊಳ್ಳುತ್ತಾರೆ. ತಮ್ಮ ದೇಹ ಮಾಗೂ ರೂಪವನ್ನು ಪ್ರತಿಯೊಬ್ಬರೂ ಒಪ್ಪಿಕೊಂಡು ಸ್ವೀಕಾರ ಮಾಡಬೇಕು, ಇಲ್ಲವಾದರೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ಅವರ ದೇಹದ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿ. 

Follow Us:
Download App:
  • android
  • ios