Asianet Suvarna News Asianet Suvarna News

ಮಗುವಿಗೆ ಈ ಹೆಸರು ಇಟ್ಟರೆ ನೀವು ಜೈಲಿಗೆ ಹೋಗಬೇಕಾದೀತು!

ಕೆಲವು ದೇಶಗಳಲ್ಲಿ ನೀವು ಕೆಲವು ಹೆಸರನ್ನು ಬೇಬಿಗೆ ಇಟ್ಟರೆ ನೀವು ಜೈಲಿಗೆ ಹೋಗಬೇಕಾಗುತ್ತೆ. ಅಲ್ಲಿ ಈ ಹೆಸರುಗಳನ್ನು ಸಾರ್ವಜನಿಕವಾಗಿ ಉಚ್ಚರಿಸಲೂ ಆತಂಕಪಡುತ್ತಾರೆ. ಆ ಹೆಸರುಗಳು ಯಾವುದು, ತಿಳಿಯೋಣ.

If you name your baby with these names you may go to jail
Author
Bengaluru, First Published Mar 10, 2021, 4:52 PM IST

ಫ್ರಾನ್ಸ್: ಫ್ರಾನ್ಸ್​ನಲ್ಲಿ ಮಕ್ಕಳ ಹೆಸರುಗಳು ಹಾಸ್ಯಕ್ಕೀಡಾಗಬಾರದೆಂಬ ಕಾನೂನಿದೆ. ಈ ಕಾರಣದಿಂದ ಜನನ ಪ್ರಮಾಣ ಪತ್ರವನ್ನು ರಿಜಿಸ್ಟರ್​ ಮಾಡುವಾಗ ಸ್ಥಳೀಯ ನ್ಯಾಯಾಲಯ ಮಗುವಿನ ಹೆಸರಿನಲ್ಲಿ ಅಪಹಾಸ್ಯವಿದೆಯೇ ಎಂಬುದನ್ನ ಪರೀಕ್ಷಿಸುತ್ತದೆ. ಬ್ಯಾನ್​ ಮಾಡಿರುವ  ಹೆಸರುಗಳು: ನ್ಯೂಟೆಲ್ಲಾ, ಸ್ಟ್ರಾಬೆರಿ, ಡಿಮೊನ್, ಪ್ರಿನ್ಸ್ ವಿಲಿಯಂ ಮತ್ತು ಮಿನಿ ಕೂಪರ್.
ಜರ್ಮನಿ: ಈ ದೇಶದಲ್ಲೂ ನಾಮಕರಣ ಮಾಡಲು ವಿಶೇಷ ನಿಯಮಗಳಿವೆ. ಇದರ ಅನುಸಾರ ಗಂಡು ಮತ್ತು ಹೆಣ್ಣು ಮಕ್ಕಳು ಬೇರೆ ಬೇರೆ ಹೆಸರುಗಳನ್ನು ಹೊಂದಿರಬೇಕು. ಹಾಗೆಯೇ ಯಾವುದೇ ವಸ್ತುಗಳ ಹೆಸರುಗಳನ್ನು ಮಕ್ಕಳಿಗೆ ಇಡುವಂತಿಲ್ಲ. ಜರ್ಮನಿಯಲ್ಲಿ ನಿಷೇಧಿಸಲ್ಪಟ್ಟ ಹೆಸರುಗಳು: ಮಟ್ಟಿ, ಒಸಾಮಾ ಬಿನ್ ಲಾಡೆನ್, ಅಡಾಲ್ಫ್ ಹಿಟ್ಲರ್, ಕೋಲ್, ಸ್ಟೊಂಪಿ.

ಸೌದಿ ಅರೇಬಿಯಾ : ಈ ದೇಶದಲ್ಲಿ 50ಕ್ಕೂ ಹೆಚ್ಚು ಹೆಸರುಗಳನ್ನು ನಿಷೇಧಿಸಲಾಗಿದೆ. ಇಲ್ಲಿ ಕೆಲ ಹೆಸರುಗಳು ಅಧರ್ಮ, ದೇಶ ವಿರೋಧಿ, ವಿದೇಶೀಯತೆಯನ್ನು ಸೂಚಿಸುತ್ತದೆ ಎಂಬ ಕಾರಣಕ್ಕೆ ಬ್ಯಾನ್​ ಮಾಡಲಾಗಿದೆ. ನಿಷೇಧಿಸಲ್ಪಟ್ಟ ಪ್ರಮುಖ ಹೆಸರುಗಳು: ಬಿನ್ಯಾಮಿನ್​, ಮಲ್ಲಿಕಾ, ಮಲಕ್, ಲಿಂಡಾ ಮತ್ತು ಮಾಯಾ.

ಮಹಿಳಾ ದಿನಾಚರಣೆ: ಭಾರತದ 10 ಹೆಮ್ಮೆಯ ನಾರಿಯರು ...
ಸ್ವಿಜರ್ಲೆಂಡ್​: ಜರ್ಮನಿಯಂತೆಯೇ ಸ್ವಿಜರ್ಲೆಂಡ್​ನಲ್ಲೂ ನಾಮಕರಣದ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ಮಕ್ಕಳಿಗೆ ಹೆಸರಿಡಲು ಸಿವಿಲ್ ರಿಜಿಸ್ಟರ್​ನಿಂದ ಅನುಮತಿ ಪಡೆಯಬೇಕು. ಇಲ್ಲಿ ಮಗುವಿಗೆ ನೋವುಂಟಾಗುವ ಯಾವುದೇ ರೀತಿಯ ಹೆಸರುಗಳನ್ನು ಇಡಲು ಅವಕಾಶವಿರುವುದಿಲ್ಲ. ಅದೇ ರೀತಿ ಹುಡುಗನ ಹೆಸರನ್ನು ಹುಡುಗಿಗೆ ಹಾಗೂ ಹುಡುಗಿಯ ಹೆಸರನ್ನು ಹುಡುಗನಿಗೆ ಇಡಬಾರದು. ಹಾಗೆಯೇ ಬೈಬಲ್​ನಲ್ಲಿ ಸೂಚಿಸಿರುವ ದುಷ್ಟ ವ್ಯಕ್ತಿಗಳ ಹೆಸರನ್ನು ಇಡಬಾರದು. ಸ್ವಿಜರ್ಲೆಂಡ್​ನಲ್ಲಿ ಬ್ಯಾನ್ ಆಗಿರುವ ಹೆಸರುಗಳು: ಜುದಾಸ್, ಚಾನೆಲ್, ಪ್ಯಾರಿಸ್, ಶಿಮ್ಡ್, ಮರ್ಸಿಡಿಸ್.
 

If you name your baby with these names you may go to jail


ಐಸ್​ಲ್ಯಾಂಡ್​: ಈ ದೇಶದಲ್ಲಿ ಮಕ್ಕಳಿಗೆ ಹೆಸರಿಡುವುದೇ ದೊಡ್ಡ ಸಾಧನೆ ಎನ್ನಲಾಗುತ್ತದೆ. ಏಕೆಂದರೆ ಇಲ್ಲಿ ಮಕ್ಕಳಿಗೆ ನಾಮಕರಣ ಮಾಡಿದ 6 ತಿಂಗಳೊಳಗೆ ರಾಷ್ಟ್ರೀಯ ನೋಂದಣಿ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಹೆಸರುಗಳು ತಿರಸ್ಕೃತಗೊಳ್ಳುತ್ತದೆ. ಇಲ್ಲಿ ಪ್ರತಿವರ್ಷ ಅರ್ಧದಷ್ಟು ಹೆಸರುಗಳು ತಿರಸ್ಕರಿಸಲ್ಪಡುತ್ತದೆ ಎನ್ನಲಾಗಿದೆ. ಈ ದೇಶದ ವರ್ಣಮಾಲೆಯಲ್ಲಿ ಸಿ, ಕ್ಯೂ ಮತ್ತು ಡಬ್ಲ್ಯೂ ಇಲ್ಲ. ಈ ಕಾರಣದಿಂದ ಈ ಅಕ್ಷರಗಳಿಂದ ಪ್ರಾರಂಭವಾಗುವ ಯಾವುದೇ ಹೆಸರುಗಳನ್ನು ಇಡಬಾರದು. ಐಸ್​ಲ್ಯಾಂಡ್​ನಲ್ಲಿ ನಿಷೇಧಿಸಲ್ಪಟ್ಟಿರುವ ಹೆಸರುಗಳು:  ಝೊ, ಹ್ಯಾರಿಯೆಟ್, ಡಂಕನ್, ಎನ್ರಿಕ್, ಲುಡ್ವಿಗ್.

ಪುಸ್ತಕ, ಯೂ ಟ್ಯೂಬ್‌ ನೋಡಿ ಕೃಷಿ ಕಲಿತು ಲಕ್ಷ ಲಕ್ಷ ಸಂಪಾದಿಸುತ್ತಿರುವ ಮಹಿಳೆ! ...

ಡೆನ್ಮಾರ್ಕ್: ಈ ದೇಶದಲ್ಲಿ ಸರ್ಕಾರವೇ 7 ಸಾವಿರ ಹೆಸರುಗಳನ್ನು ಸೂಚಿಸಿದೆ. ಇದರ ಹೊರತಾಗಿ ಯಾರಾದರೂ ಬೇರೊಂದು ಹೆಸರು ಇಡಬೇಕೆಂದು ಇಚ್ಛಿಸಿದರೆ ಅನುಮತಿ ಪಡೆಯಬೇಕಾಗುತ್ತದೆ. ಇಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಹೆಸರನ್ನು ನವೀಕರಿಸಲಾಗುತ್ತದೆ. ಡೆನ್ಮಾರ್ಕ್​ನಲ್ಲಿ ಬ್ಯಾನ್ ಆದ ಹೆಸರುಗಳು: ಜಾಕೋಬ್, ಆಶ್ಲೇ, ಅನುಸ್, ಮಂಕಿ, ಪ್ಲುಟೊ.

ನಾರ್ವೆ: ಭಾರತೀಯರಂತೆ ನಾರ್ವೆ ದೇಶದವರು ಕೂಡ ಉಪನಾಮವನ್ನು ಇರಿಸಿಕೊಳ್ಳುತ್ತಾರೆ. ಈ ಕಾರಣದಿಂದ ಈ ದೇಶದಲ್ಲಿ ಉಪನಾಮವನ್ನು ಮೊದಲ ಹೆಸರಾಗಿ ಬಳಸುವುದರ ಮೇಲೆ ನಿಷೇಧ ಹೇರಲಾಗಿದೆ. ಇಲ್ಲಿ ಹ್ಯಾನ್ಸೆನ್​ ಅಥವಾ ಹ್ಯುಗೆನ್​ನಂತಹ ಪ್ರಸಿದ್ಧ ಉಪನಾಮಗಳನ್ನು ಹೆಸರಾಗಿ ಬಳಸಲು ಅವಕಾಶವಿರುವುದಿಲ್ಲ. ನಾರ್ವೆಯಲ್ಲಿ ಬ್ಯಾನ್ ಮಾಡಿರುವ ಹೆಸರುಗಳು: ಹ್ಯಾನ್ಸೆನ್, ಯುಹನ್ಸೆನ್, ಓಲ್ಸೆನ್, ಹ್ಯುಗೆನ್, ಲಾರ್ಸೆನ್.

ಸ್ವೀಡನ್​: ಈ ದೇಶದಲ್ಲಿ ನಿಂದನೆಗೆ ಒಳಗಾಗುವಂತಹ ಯಾವುದೇ ಹೆಸರುಗಳನ್ನು ಇಡಲು ಅವಕಾಶವಿಲ್ಲ. ಮಗು ಜನಿಸಿದ ಮೂರು ತಿಂಗಳೊಳಗೆ ಹೆಸರಿಟ್ಟು, ಆ ನಾಮವನ್ನು ಟ್ಯಾಕ್ಸ್​ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳುವುದು ಇಲ್ಲಿ ಅನಿವಾರ್ಯ. ಸ್ವೀಡನ್​ನಲ್ಲಿ ನಿಷೇಧಿಸಿ ಹೆಸರುಗಳು: ಮೆಟಾಲಿಕಾ, ಸೂಪರ್​ಮ್ಯಾನ್, ಇಕಿಯಾ, ಎಲ್ವಿಸ್.

ಮಲೇಷ್ಯಾ: ಈ ದೇಶದಲ್ಲಿ ಪ್ರಾಣಿಗಳ ಮತ್ತು ಆಹಾರಗಳ ಹೆಸರುಗಳನ್ನು ಮಕ್ಕಳಿಗೆ ನಾಮಕರಣ ಮಾಡುವಂತಿಲ್ಲ. ಮುಖ್ಯವಾಗಿ ರಾಜಮನೆತನದ ಹೆಸರು, ಸಂಖ್ಯೆಗಳು, ಪ್ರಾಣಿಗಳ ಹೆಸರುಗಳನ್ನು ಇಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂತಹ ಹೆಸರುಗಳನ್ನು ಮಕ್ಕಳಿಗಿಟ್ಟರೆ ಅದನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ. ಮಲೇಶಿಯಾದಲ್ಲಿ ಬ್ಯಾನ್ ಆಗಿರುವ ಹೆಸರುಗಳು: ಚೀನೀ ಅಹ್ ಚ್ವಾರ್​ (ಹಾವು), ವೋಟಿ (ಸೆಕ್ಸ್​), ಖಿಯೊ ಖೂ, ಚೌ ಟಾವ್ (ವಾಸನೆ)

ಬೇಸಿಗೆಯಲ್ಲಿ ಪುರುಷರು ಈ ಹಣ್ಣನ್ನು ಮಿಸ್ ಮಾಡದೆ ತಿನ್ನಿ ...
ಪೋರ್ಚುಗಲ್​: ಈ ದೇಶದ ಸರ್ಕಾರ 82 ಪುಟಗಳಷ್ಟು ಹೆಸರುಗಳನ್ನು ಸೂಚಿಸಿದ್ದು, ಇಲ್ಲಿ ನೀಡಲಾಗಿರುವ ಹೆಸರುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ಹುಡುಗ ಮತ್ತು ಹುಡುಗಿ ಹೆಸರುಗಳು ಕೂಡ ಭಿನ್ನವಾಗಿರುತ್ತದೆ. ಹಾಗೆಯೇ ಯಾವುದೇ ರೀತಿಯ ನಿಕ್‌ನೇಮ್​ಗಳನ್ನು ಬಳಸಲು ಅವಕಾಶವಿರುವುದಿಲ್ಲ. ಪೋರ್ಚುಗಲ್​ನಲ್ಲಿ​ ನಿಷೇಧಿಸಲ್ಪಟ್ಟಿರುವ ಹೆಸರುಗಳು: ನಿರ್ವಾಣ, ರಿಹಾನಾ, ಜಿಮಿ, ವೈಕಿಂಗ್, ಸಾಯೊನಾರ

Follow Us:
Download App:
  • android
  • ios