Asianet Suvarna News Asianet Suvarna News

Viral Video: ಗಂಡನಾದವ ಈ ವಿಷಯ ತಿಳಿದುಕೊಂಡ್ರೆ ಸಂಸಾರದಲ್ಲಿ ಸುಖವೋ ಸುಖ...

ದಾಂಪತ್ಯ ಜೀವನ ಸುಖವಾಗಿ ಇರಬೇಕೆಂದರೆ ಗಂಡಂದಿರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಏನಿದು ಟಿಪ್ಸ್​? 
 

Husbands should keep this in mind for a happy married life suc
Author
First Published Sep 2, 2023, 3:04 PM IST

ಸುಖ ಸಂಸಾರಕ್ಕೆ 12 ಸೂತ್ರಗಳು ಎಂದು ಬಹಳ ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಸೂತ್ರಗಳು ಎಷ್ಟೇ ಇದ್ದರೂ ಇಂದು ಬಹುತೇಕ ಸಂಸಾರಗಳು ಛಿದ್ರ ಆಗುತ್ತಿರುವುದೇ ಹೆಚ್ಚು. ಚಿಕ್ಕ ಪುಟ್ಟ ವಿಷಯಗಳಿಗೂ ಜಗಳವಾಗಿ ಅದು ವಿಚ್ಛೇದನ ತಲುಪುತ್ತಿರುವುದು ಇತ್ತೀಚಿಗೆ ಮಾಮೂಲಾಗಿ ಬಿಟ್ಟಿದೆ. ಗಂಡ-ಹೆಂಡತಿ (Husband and Wife) ಜಗಳ ಉಂಡು ಮಲಗುವವರೆಗೆ... ಬದಲು ಗಂಡ-ಹೆಂಡತಿ ಜಗಳ ಕೋರ್ಟ್​ ಕೇಸ್​ ಹಾಕುವವರೆಗೆ, ವಿಚ್ಛೇದನ ಪಡೆಯುವವರೆಗೆ ಎನ್ನುವ ಮಾತು ಈಗ ಸರ್ವಸತ್ಯವಾಗಿಬಿಟ್ಟಿದೆ. ತಪ್ಪು ಗಂಡಂದೋ, ಹೆಂಡತಿಯದ್ದೋ ಒಟ್ಟಿನಲ್ಲಿ ಸಂಸಾರ, ದಾಂಪತ್ಯಕ್ಕೆ ಇರುವ ಮಹತ್ವದ ಅರ್ಥವೇ ಇಂದು ಬದಲಾಗಿರುವುದಂತೂ ದಿಟ. ಕೋರ್ಟ್​ಗಳಲ್ಲಿ ದಾಖಲಾಗುವ ಒಂದೊಂದು ಡಿವೋರ್ಸ್​  ಕೇಸ್​ಗಳನ್ನು ಪರಿಶೀಲಿಸಿದರೆ ತೀರಾ ಕ್ಷುಲ್ಲಕ ಕಾರಣಕ್ಕೆ ಕೇಸ್​ ಹಾಕಿರುವುದನ್ನು ನೋಡಬಹುದು. ಒಂದು ಕಡೆ ಕೆಲವು ವರ್ಗಗಳಲ್ಲಿ ಮದುವೆಯಾಗಲು ಹೆಣ್ಣುಮಕ್ಕಳೇ ಸಿಗದ ಸ್ಥಿತಿ ಇರುವಾಗ, ಅದೇ ಇನ್ನೊಂದೆಡೆ ದಾಂಪತ್ಯದಲ್ಲಿ ಬಿರುಕುಗಳು ಹೆಚ್ಚುತ್ತಿವೆ. 

ಇದೀಗ ಇನ್​ಸ್ಟಾಗ್ರಾಮ್​ನಲ್ಲಿ (Instragram) ವಿಡಿಯೋ ಒಂದು ಸಕತ್​ ವೈರಲ್​ ಆಗಿದ್ದು, ಇದರಲ್ಲಿ ಪತಿಯಂದಿರು ಮಾಡಬಾರದ ಕೆಲವೊಂದು ಟಿಪ್ಸ್​ಗಳನ್ನು ನೀಡಲಾಗಿದೆ. ಸಾಮಾನ್ಯವಾಗಿ ದಾಂಪತ್ಯದಲ್ಲಿ ಕಲಹ ಬಂದಾಗ ಅದರಲ್ಲಿ ಗಂಡು-ಹೆಣ್ಣು ಎಂಬ ಭೇದ ಇರುವುದಿಲ್ಲ. ಇಬ್ಬರದ್ದೂ ಸಮಾನವಾದ ತಪ್ಪು ಇರುವುದು ಸಹಜವೇ. ಆದರೆ ಹೆಚ್ಚಿನ ಘಟನೆಗಳಲ್ಲಿ ಹೆಣ್ಣುಮಕ್ಕಳ ಇಗೋಗೆ ಧಕ್ಕೆ ಬಂದಾಗ ಅವರು ಸಂಸಾರವೇ ಸಾಕು ಎನ್ನುವ ಸ್ಥಿತಿಗೆ ಬರುವುದು ಉಂಟು. ಸಂಸಾರ ಸರಿಯಾಗಿ ತೂಗಿಕೊಂಡು ಹೋಗಬೇಕಾದರೆ ಗಂಡ-ಹೆಂಡತಿ ಪರಸ್ಪರ ಗೌರವಿಸುವುದನ್ನು ಕಲಿಯಬೇಕು ಎನ್ನುವುದೂ ನಿಜವೇ. ಆದರೆ ಮಿಸ್ಟರ್​ ಯೂನೀಕ್​ ಹೆಸರಿನಲ್ಲಿ ಈ ಇನ್​ಸ್ಟಾಗ್ರಾಮ್​ನಲ್ಲಿ ಅಮರ್​ ಅಜಿತ್​ ತಂಗೊಳ್ಳಿ ಎನ್ನುವವರು ಪತಿಯಂದಿರಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ.

ಪುಟ್ಟಕ್ಕನ ಮಗಳು ಸ್ನೇಹಾಳ ಮದುವೆ ಶೂಟಿಂಗ್​ ಹೀಗಿತ್ತು ನೋಡಿ: ಪ್ಲೀಸ್​ ಇಬ್ರೂ ಒಂದಾಗಿ ಅಂತಿದ್ದಾರೆ ಫ್ಯಾನ್ಸ್​

ಪ್ರತಿ ಮನೆಯಲ್ಲಿಯೂ ಸಾಮಾನ್ಯವಾಗಿ ಪತಿಯಂದಿರು ಮಾಡುವ ತಪ್ಪುಗಳು ಇವು ಎಂದು ಗುರುತಿಸಲಾಗಿದ್ದು, ಅವರಿಗೆ ಕೆಲವೊಂದು ಕಿವಿಮಾತುಗಳನ್ನು ಹೇಳಲಾಗಿದೆ. ಅಮರ್​ ಹೇಳಿರುವ ಮಾತುಗಳೆಂದರೆ, ಪತಿಯಾದವರು ಕೆಲವೊಂದು ವಿಷಯಗಳನ್ನು ಪತ್ನಿಯೊಂದಿಗೆ ಹೇಳಬಾರದು, ಅದನ್ನು ಚರ್ಚಿಸಬಾರದು ಎನ್ನುವುದು. ಅವುಗಳೆಂದರೆ: 

- ನೀನು ಬಹಳ ದಪ್ಪ ಇದ್ದಿ ಎಂದೂ, ತುಂಬಾ ಸಣ್ಣಕೆ ಇದ್ದೀ ಎಂದೂ  ದೇಹದ ಬಗ್ಗೆ ಮಾತನಾಡಬೇಡಿ
- ನಿಮ್ಮ ಪತ್ನಿ ಮಾಡುವ ಅಡುಗೆಗಳನ್ನು ಅಕ್ಕಪಕ್ಕದ ಅಥವಾ ಇನ್ಯಾರದ್ದೋ ಮನೆಯವರ ಜೊತೆ ಹೋಲಿಕೆ ಮಾಡಿ ಹೀಯಾಳಿಸಬೇಡಿ
 - ಯಾವುದೋ ಕಾರಣಕ್ಕೆ ಜಗಳವಾಗಾದ ನಿನ್ನದ್ಯಾಕೋ  ಅತಿರೇಕ ಆಯ್ತು ಅನ್ನೋ ಪದ ಬಳಸಬೇಡಿ
 - ಪದೇ ಪದೇ ನಮ್ಮ ಕುಟುಂಬಕ್ಕೆ ಹೊಂದ್ಕೊ ಹೊಂದ್ಕೋ ಎಂದು ಪತ್ನಿ ಮೇಲೆ ಒತ್ತಡ ಹಾಕಬೇಡಿ
- ಪತ್ನಿಯ ತವರು ಮನೆಯವರನ್ನು ಹೀಯಾಳಿಸುವುದಾದರೆ, ಕೆಟ್ಟದ್ದಾಗಿ ಮಾತನಾಡಬೇಡಿ
 - ನೀವು ಹೇಳಿದ ಯಾವುದೋ ಒಂದು ಚಿಕ್ಕ ಕೆಲ್ಸ ಪತ್ನಿ ಮಾಡದೇ ಇದ್ದಾಗ  ಬೆಳಿಗ್ಗೆಯಿಂದ ಮನೆಯಲ್ಲಿ ಇದ್ದು ಏನ್​ ಮಾಡ್ತಿದ್ದೆ ಅನ್ನೋದನ್ನು ಮಾಡಬೇಡಿ
 - ಪತ್ನಿಯನ್ನು ಬೇರೆಯವರ ಮುಂದೆ ಬೈಬೇಡಿ
ಇಷ್ಟು ಮಾಡಿದರೆ ದಾಂಪತ್ಯ ಚೆನ್ನಾಗಿರುತ್ತದೆ ಎಂದು ಅವರು ಹೇಳಿದ್ದಾರೆ. 

Seetharama: ಲೈಫಲ್ಲಿ ಏನೂ ಇಲ್ಲದಿದ್ದಾಗ ಬದುಕೋದನ್ನ ಕಲೀಬೇಕು! : ಬದುಕಿದ ಪಾಠ ಕಲಿಸಿದ ಸೀತಾ
 

Follow Us:
Download App:
  • android
  • ios