Chopsticks: ಹೇಗೆ ಬಳಸುವುದು ಎಂದು ಹೆಂಡತಿಗೆ ಹೇಳಿಕೊಟ್ಟ ಗಂಡ
- ಚಾಪ್‌ಸ್ಟಿಕ್ ಹಿಡಿದು ನೂಡಲ್ಸ್ ತಿನ್ನುವುದು ಹೇಗೆ
- ಪತ್ನಿ ಮುದ್ದಾಗಿ ಹೇಳಿಕೊಟ್ಟ ಗಂಡ
- ನವ ವಿವಾಹಿತ ಜೋಡಿಯ ವಿಡಿಯೋ ಫುಲ್ ವೈರಲ್
ನವದೆಹಲಿ(ಡಿ. 23): ನೂಡಲ್ಸ್ ತಿನ್ನುವಾಗ ಚಾಪ್‌ಸ್ಟಿಕ್ ಬೇಕೆ ಬೇಕು. ಆದರೆ ಇದನ್ನು ಬಳಸುವುದು ಹೇಗೆ? ಚಾಪ್‌ಸ್ಟಿಕ್ (chopsticks) ಗಳ ಬಗ್ಗೆ ಪೇಟೆಯಲ್ಲಿ ಬೆಳೆದ ಜನರಿಗೆ, ಹೋಟೇಲ್‌ನಲ್ಲಿ ತಿಂದವರಿಗೆ ಗೊತ್ತಿರಬಹುದು. ಆದರೆ ಎಲ್ಲರಿಗೂ ಇದರ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ. ನವ ವಿವಾಹಿತ ಜೋಡಿಯೊಂದು ಹೋಟೆಲ್‌ವೊಂದಕ್ಕೆ ತೆರಳಿದ್ದು, ಅಲ್ಲಿ ನೂಡಲ್ಸ್ ಆರ್ಡರ್ ಮಾಡಿದ್ದಾರೆ. ನೂಡಲ್ಸ್ ಬಂದಿದ್ದು, ಇದರ ಜೊತೆ ಎರಡೆರಡು ಉದ್ದದ ಕಡ್ಡಿ (ಚಾಪ್‌ಸ್ಟಿಕ್) ಗಳನ್ನು ನೂಡಲ್ಸ್ ತಿನ್ನುವ ಸಲುವಾಗಿ ಕೊಟ್ಟಿದ್ದಾರೆ. ಆದರೆ ಪತ್ನಿಗೆ ಇದರಲ್ಲಿ ಹೇಗೆ ನೂಡಲ್ಸ್ ತಿನ್ನುವುದು ಎಂಬುದು ಗೊತ್ತಾಗಿಲ್ಲ. ಆದರೆ ಜೊತೆಯಲ್ಲಿದ್ದ ಗಂಡ ತುಂಬಾ ಮುದ್ದಾಗಿ ಈ ಎರಡು ಚಾಪ್‌ಸ್ಟಿಕ್ ಗಳನ್ನು ಹೇಗೆ ಹಿಡಿಕೊಳ್ಳುವುದು ಮತ್ತೂ ಹೇಗೆ ತಿನ್ನುವುದು ಎಂಬುದನ್ನು ಹೇಳಿ ಕೊಟ್ಟಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಈ ಜೋಡಿಗೆ ಜನ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಈ ವಿಡಿಯೋವನ್ನು ಹೊಟೇಲ್ ಸಿಬ್ಬಂದಿ ಇನ್ಸ್ಟಾಗ್ರಾಮ್‌ನಲ್ಲಿ ಹೊಟೇಲ್‌ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿರುವ ಜೋಡಿಯನ್ನು ಗಂಡ ಸಾಯಿ ಗೌರಂಗ್ ( Sai Gurung) ಹಾಗೂ ಹೆಂಡತಿ ಅಕ್ಷಿತಾ ಗೌರಂಗ್ (Akshita Gurung) ಎಂದು ಗುರುತಿಸಲಾಗಿದ್ದು, ಈ ವಿಡಿಯೋವನ್ನು 1 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಈ ಜೋಡಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮದುವೆಯ ನಂತರ ಗಂಡು ಹೆಣ್ಣಿನ ಸಂಬಂಧ ತುಂಬಾ ಅಮೋಘವಾದುದು. ಒಬ್ಬರ ತಪ್ಪನ್ನು ಇನ್ನೊಬ್ಬರು ತಿದ್ದಿ, ಸರಿ ದಾರಿಯಲ್ಲಿ ನಡೆಯುವಂತೆ ಒಬ್ಬರಿಗೊಬ್ಬರು ಮಾರ್ಗದರ್ಶನ ಮಾಡುತ್ತಾ ಸಾಗುವುದೇ ಸಮ ದಾಂಪತ್ಯ. ಗಂಡ-ಹೆಂಡ್ತಿ (Husband-wife) ಮಧ್ಯೆ ಯಾವಾಗ್ಲೂ ಆಗಿ ಬರಲ್ಲ. ಜಗಳ, ಗಲಾಟೆ ಅಂತೂ ಯಾವಾಗ್ಲೂ ಇದ್ದಿದ್ದೇ. ಹೆಂಡ್ತಿ ಕಿರಿಕಿರಿ ಅಂತೂ ಕೇಳಿ ಕೇಳಿ ಕಿವಿ ತೂತಾಗಿದೆ. ಹೀಗೆ ಹಲವರು ಹೇಳಿರೋದನ್ನು ಕೇಳಿರಬಹುದು ಅದರ ಮಧ್ಯೆ ಇಂತಹ ವಿಡಿಯೋವೊಂದು ಹೀಗೂ ಇರುತ್ತೆ ಸಂಬಂಧ ಎಂದರೆ ಎಂಬುದನ್ನು ತೋರಿಸುತ್ತದೆ.
ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ. ಮದುವೆಯಾದ ಸಂಗಾತಿ ವಿಷಯದಲ್ಲಿಯೂ ಹಾಗೆಯೇ. ಪತಿ, ಪತ್ನಿ (Husband-wife)ಯಲ್ಲಿಯೂ ಒಳ್ಳೆಯ ಗುಣಗಳು ಹಾಗೂ ಕೆಟ್ಟ ಗುಣಗಳು ಇರಬಹುದು. ಇದನ್ನು ತಿದ್ದಿಕೊಂಡು, ಅನುಸರಿಸಿಕೊಂಡು ಹೋಗಬೇಕಾದುದು ಅತೀ ಮುಖ್ಯ. ಗಂಡ-ಹೆಂಡತಿ ಪರಸ್ಪರ ಅರಿತು ಜೀವನ ನಡೆಸಬೇಕು. ಹಾಗಿದ್ದಾಗ ಮಾತ್ರ ದಾಂಪತ್ಯದಲ್ಲಿ ಖುಷಿಯಾಗಿರಬಹುದು. ಇಲ್ಲದಿದ್ದರೆ ಪ್ರತಿನಿತ್ಯ ಮನೆಯಲ್ಲಿ ಗಂಡ-ಹೆಂಡತಿಯ ಜಗಳ ತಪ್ಪದು. ಅದರಲ್ಲೂ ಗಂಡನ ಸಿಡುಕು, ಜವಾಬ್ದಾರಿಯಿಲ್ಲದ ಸ್ವಭಾವ ಹೆಂಡತಿಯಲ್ಲಿ ಸಿಟ್ಟಿಗೆ ಕಾರಣವಾಗುವುದು ಖಂಡಿತ.
Long Distance Relationship: ಲವರ್‌ಗೆ ಕೊಡುವ ಒಲವಿನ ಉಡುಗೊರೆ ಹೀಗಿರಲಿ
ನಿಮ್ ಹೆಂಡ್ತಿ ನಿಮ್ಮ ಮೇಲೆ ಸಿಕ್ಕಾಪಟ್ಟೆ ಕಿರುಚಾಡ್ತಾ ಇದ್ದಾರೆ ಅಂದ್ರೆ ನಿಮ್ಮ ಈ ವರ್ತನೆಗಳು ಅವ್ರಿಗೆ ಇಷ್ಟವಾಗುತ್ತಿಲ್ಲ ಎಂದರ್ಥ. ಹಾಗಿದ್ರೆ ನಿಮ್ಮ ಪತ್ನಿಗೆ ಅತಿಯಾಗಿ ಕಿರಿಕಿರಿಯುಂಟು ಮಾಡುವ ಸ್ವಭಾವ ಯಾವುದೆಲ್ಲಾ..? ನಿಮ್ ಹೆಂಡ್ತಿ ನಿಮ್ಮ ಮೇಲೆ ಸಿಕ್ಕಾಪಟ್ಟೆ ಕಿರುಚಾಡ್ತಾ ಇದ್ದಾರೆ ಅಂದ್ರೆ ನಿಮ್ಮ ಈ ವರ್ತನೆಗಳು ಅವ್ರಿಗೆ ಇಷ್ಟವಾಗುತ್ತಿಲ್ಲ ಎಂದರ್ಥ. ಹಾಗಿದ್ರೆ ನಿಮ್ಮ ಪತ್ನಿಗೆ ಅತಿಯಾಗಿ ಕಿರಿಕಿರಿಯುಂಟು ಮಾಡುವ ಸ್ವಭಾವ ಯಾವುದೆಲ್ಲಾ..? ಅಲ್ಲಲ್ಲಿ ಬಟ್ಟೆ ಎಸೆಯುವುದು. ಇದು ಎಲ್ಲಾ ಪತ್ನಿಯರು ಅತಿ ಹೆಚ್ಚು ದ್ವೇಷಿಸುವ ಗಂಡನ ಸ್ವಭಾವ.
Mom Weds New Dad : ಒಂಟಿಯಾಗಿದ್ದ ಅಮ್ಮಂಗೆ ಮದುವೆ ಮಾಡಿಸಿದ ಮಗಳು... ನೆಟ್ಟಿಗರ ಹೃದಯ ಗೆದ್ದ ನಡೆ
ಆಫೀಸಿನಿಂದ ಬಂದು ಬಟ್ಟೆಯನ್ನು ಎಲ್ಲೆಲ್ಲಿ ಎಸೆಯುವುದು, ಒಗೆದ, ಒಗೆಯದ ಬಟ್ಟೆಗಳನ್ನು ಮಿಕ್ಸ್ ಮಾಡಿಟ್ಟಿರುವುದು. ವಾರ್ಡ್‌ರೋಬ್‌ನಲ್ಲಿಯೂ ಬಟ್ಟೆಗಳನ್ನು ನೀಟಾಗಿ ಇಡದೆ ಎಲ್ಲೆಂದರಲ್ಲಿ ಎಸೆಯುವುದು. ಒಂದೆರಡು ಬಾರಿ ಆಕೆ ನಿಮ್ಮ ಬಟ್ಟೆಯನ್ನು ಜೋಡಿಸಿಡುವುದು ಸರಿ. ಆದರೆ ನೀವು ಪದೇ ಪದೇ ಅದೇ ತಪ್ಪು ಮಾಡುತ್ತಾ ಆಕೆಯ ಬಟ್ಟೆಯನ್ನು ಜೋಡಿಸಿಡಬೇಕು ಎಂದು ಎಕ್ಸ್‌ಪೆಕ್ಟ್ ಮಾಡುವುದು ತಪ್ಪು. ನಿಮ್ಮ ಬಟ್ಟೆಯನ್ನು ನೀಟಾಗಿ ಇಡುವುದು ನಿಮ್ಮ ಕೆಲಸವೂ ಹೌದು. ಅದನ್ನು ಆಕೆ ಮಾತ್ರ ಮಾಡಬೇಕಿಲ್ಲ. ದಾಂಪತ್ಯ ಜೀವನ ಉತ್ತಮವಾಗಿ ಸಾಗಲು ಪತಿ-ಪತ್ನಿ ಇಬ್ಬರೂ ಈ ರೀತಿ ತಮ್ಮ ಕೆಟ್ಟ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ಪರಸ್ಪರ ಅನುಸರಿಸಿಕೊಂಡು ಜೀವನ ನಡೆಸಬೇಕು.