ಯಾವುದೇ ಸಮಸ್ಯೆಯಿಲ್ಲದೆ ಸುಖಕರ ದಾಂಪತ್ಯ ಜೀವನ ಅಸಾಧ್ಯ. ಸಂಗಾತಿ ಸ್ವಭಾವಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ. ಕೆಲವೊಮ್ಮೆ ಸಂಗಾತಿಯ ಅತಿರೇಕದ ಸ್ವಭಾವ ಪ್ರೀತಿ ಮರೆಯುವಂತೆ ಮಾಡುತ್ತದೆ. ಪತಿಯ ಕೋಪಕ್ಕೆ ಇಲ್ಲೊಬ್ಬ ಮಹಿಳೆ ಬೇಸತ್ತಿದ್ದಾಳೆ

ದಾಂಪತ್ಯ ಸಂಬಂಧ ಅತ್ಯಂತ ಸೂಕ್ಷ್ಮವಾದದ್ದು. ಅದನ್ನು ಎಚ್ಚರಿಕೆಯಿಂದ ಸಂಭಾಳಿಸಬೇಕು. ಸ್ವಲ್ಪ ಹೆಚ್ಚುಕಮ್ಮಿ ಆದ್ರೂ ಸೂಕ್ಷ್ಮ ದಾರ ಹರಿಯುತ್ತದೆ. ಇಲ್ಲವೆ ಎಲ್ಲ ಎಳೆಗಳು ಸೇರಿ ಗಂಟು ಬೀಳುತ್ತದೆ. ಪತಿ – ಪತ್ನಿ ಮಧ್ಯೆ ಬರೀ ಪ್ರೀತಿ ಸಾಲೋದಿಲ್ಲ. ಪ್ರೀತಿಗೆ ಮೀರಿದ ಸಂಬಂಧ ಇರಬೇಕಾಗುತ್ತದೆ. ಪರಸ್ಪರ ಗೌರವ, ಸ್ನೇಹ, ಮಮತೆ, ಕರುಣೆ ಎಲ್ಲವೂ ಅಗತ್ಯವಾಗುತ್ತದೆ. ಎಲ್ಲರ ಸ್ವಭಾವ ಒಂದೇ ಆಗಿರಲು ಸಾಧ್ಯವೇ ಇಲ್ಲ. ಪತಿ – ಪತ್ನಿ ಸ್ವಭಾವ ಭಿನ್ನವಾಗಿರುವುದು ಸಹಜ. ಪರಸ್ಪರ ಸ್ವಭಾವಕ್ಕೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಆದ್ರೆ ಕೆಲವೊಂದು ಸ್ವಭಾವವನ್ನು ಸ್ವೀಕರಿಸುವುದು ಕಷ್ಟದ ಕೆಲಸ. ಪತಿ ಅಥವಾ ಪತ್ನಿ ಮೇಲೆ ದಬ್ಬಾಳಿಕೆ ನಡೆಸುವುದು ಕೂಡ ಇದ್ರಲ್ಲಿ ಒಂದು. ಅತಿಯಾದ ಕೋಪವೂ ಸಂಬಂಧ ಹಾಳು ಮಾಡುತ್ತದೆ. ಕೋಪಿಷ್ಟ ವ್ಯಕ್ತಿಯನ್ನು ಪತಿಯಾಗಿ ಪಡೆದ ಮಹಿಳೆಯೊಬ್ಬಳಿಗೆ ಈಗ ಏನು ಮಾಡ್ಬೇಕು ಎಂಬುದು ತಿಳಿಯುತ್ತಿಲ್ಲ. ಸದಾ ಕೋಪಗೊಳ್ಳುವ ಪತಿಯ ಜೊತೆ ಜೀವನ ಹೇಗೆ ಎಂದು ಆಕೆ ಪ್ರಶ್ನೆ ಮಾಡ್ತಿದ್ದಾಳೆ. 

ಆಕೆಗೆ ಮದುವೆ (Marriage) ಯಾಗಿ 10 ವರ್ಷ ಕಳೆದಿದೆ. ಪತಿಯ ಒಂದು ಸ್ವಭಾವ ಬಿಟ್ರೆ ಮತ್ತೆಲ್ಲ ವಿಷ್ಯದಲ್ಲೂ ಆತ ಒಳ್ಳೆಯವನಂತೆ. ಆತನ ಕೋಪ (Angry) ಮಾತ್ರ ಪತ್ನಿಗೆ ಉಸಿರುಗಟ್ಟಿಸುತ್ತಿದೆಯಂತೆ. ಒಂದಲ್ಲ ಒಂದು ಕಾರಣಕ್ಕೆ ಬಹುಬೇಗ ಕೋಪಗೊಳ್ಳುವ ವ್ಯಕ್ತಿ ಪತ್ನಿಗೆ ಅಪಶಬ್ಧಗಳನ್ನು ಬಳಸಿ ಬೈಯ್ಯುತ್ತಾನಂತೆ. ಆತನ ಬೈಗಳು ನನಗೆ ಹಿಂಸೆ ನೀಡ್ತಿದೆ. ಆತನನ್ನು ನಾನು ತುಂಬಾ ಪ್ರೀತಿ ಮಾಡ್ತಿದ್ದೆ. ಆದ್ರೆ ಆತನ ಕಿರುಚಾಟ ಭಯ (Fear ) ಹುಟ್ಟಿಸುತ್ತದೆ. ನನಗೆ ಕೋಪದಲ್ಲಿ ಹೊಡೆದ್ರೆ ಎಂಬ ಆತಂಕ ಕಾಡುತ್ತದೆ. ಇದೇ ಕಾರಣಕ್ಕೆ ಆತನ ಬಳಿ ಹೋಗಲು ಹೆದರುತ್ತಿದ್ದೇನೆ. ನಮ್ಮಿಬ್ಬರ ಸಂಬಂಧ ನಿಧಾನವಾಗಿ ಖುಷಿ ಕಳೆದುಕೊಳ್ತಿದೆ ಎನ್ನುತ್ತಾಳೆ ಮಹಿಳೆ. ವಿಚ್ಛೇದನ ಪಡೆಯಲು ನನಗೆ ಇಷ್ಟವಿಲ್ಲ. ಸಣ್ಣ ವಿಷ್ಯಕ್ಕೆ ಆತನಿಂದ ದೂರವಾಗುವುದು ಅಸಾಧ್ಯ. ಆದ್ರೆ ಆತನ ಕೋಪ ಹೇಗೆ ಕಡಿಮೆ ಮಾಡೋದು ತಿಳಿತಿಲ್ಲ ಎನ್ನುತ್ತಾಳೆ ಆಕೆ. ಕೌನ್ಸಿಲರ್ ಬಳಿ ಹೋಗುವ ಪ್ರಯತ್ನ ನಡೆಸಿ ವಿಫಲವಾಗಿದ್ದೇನೆ ಎನ್ನುತ್ತಾಳೆ ಮಹಿಳೆ.

ತಜ್ಞರ ಸಲಹೆ : ಮೊದಲನೆಯದಾಗಿ ನಿಮ್ಮ ಪತಿಗೆ ಹೆಚ್ಚು ಕೋಪ ಬರಕು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಎಂದಿದ್ದಾರೆ ತಜ್ಞರು. ಏಕೆಂದರೆ ಪ್ರತಿಯೊಂದು ಸಂಬಂಧದಲ್ಲೂ ಕೆಲವು ಭಾವನೆಗಳಿರುತ್ತವೆ. ಅದು ಕೋಪಕ್ಕೆ ಕಾರಣವಾಗಿರುತ್ತದೆ. ನೀವು ಹಿಂದೆ ಮಾಡಿದ ಯಾವುದೋ ತಪ್ಪನ್ನು ಅವರು ಮರೆತಿಲ್ಲದಿರಬಹುದು, ಇಲ್ಲವೆ ಅವರ ಸುತ್ತಮುತ್ತಲಿರುವ ವ್ಯಕ್ತಿಗಳು ಕೋಪಗೊಳ್ಳಲು ಅವರನ್ನು ಪ್ರೇರೇಪಿಸುತ್ತಿರಬಹುದು ಇಲ್ಲವೆ ಕೋಪದಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯವೆಂದು ಸಂಗಾತಿ ಭಾವಿಸಿರಬಹುದು. ಹಾಗಾಗಿ ಮೊದಲು ಕೋಪಕ್ಕೆ ಕಾರಣವೇನು ಎಂದು ತಿಳಿಯಿರಿ ಎಂದಿದ್ದಾರೆ ತಜ್ಞರು. 

ನಿಮ್ಮ ಮೇಲೆ ಸವಾರಿ ಮಾಡೋರನ್ನ ಸಹಿಸಿಕೊಳ್ಳಬೇಡಿ, ವಿಶ್ವಾಸ ಕುಂದದಿರಲಿ

ಹಾಗೆಯೇ ಪತಿ ಕೋಪಗೊಂಡಾಗ, ನಿಂದನೆ ಶುರು ಮಾಡಿದಾಗ ಮೌನವಾಗಿರುವುದು ಒಳ್ಳೆಯದು. ಅವರ ಕೋಪ ತಣ್ಣಗಾದ್ಮೇಲೆ ಅವರ ಜೊತೆ ನೀವು ಮಾತನಾಡಿ. ಕೋಪದಲ್ಲಿದ್ದಾಗ್ಲೇ ಮಾತನಾಡಿದ್ರೆ ಗಲಾಟೆ ದೊಡ್ಡದಾಗಬಹುದು. ಕೋಪ ತಣ್ಣಗಾದ್ಮೇಲೆ ಯಾಕೆ ಚಿಕ್ಕ ವಿಷ್ಯಕ್ಕೆ ಕೋಪಗೊಳ್ತೀರಿ ಎಂಬುದನ್ನು ಪ್ರಶ್ನೆ ಮಾಡಿ ಎಂದಿದ್ದಾರೆ ತಜ್ಞರು. 

ಮೆಚ್ಚುಗೆ ಸೂಚಿಸುವುದು ಒಂದು ಕಲೆ! ದಾಂಪತ್ಯ ಸುಖಕ್ಕೆ ಇದು ಸೋಪಾನ

ನೀವು ಹೇಳಿದ ತಕ್ಷಣ ಅವರು ಪ್ರತಿಕ್ರಿಯೆ ನೀಡದೆ ಇರಬಹುದು. ಆದ್ರೆ ಅವರ ಕೋಪದಿಂದ ನಿಮ್ಮ ಸಂಬಂಧ ಹಾಳಾಗ್ತಿದೆ ಅಥವಾ ನಿಮಗೆ ನಿರಾಸೆಯಾಗ್ತಿದೆ ಎಂಬುದು ಗೊತ್ತಾದ್ರೆ ಅವರು ಕೋಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಆದ್ರೆ ಇದಕ್ಕೆ ನಿಮ್ಮ ಒತ್ತಾಯ ಬೇಡ. ನೀವು ಒತ್ತಡ ಹಾಕಿ ಕೋಪ ಕಡಿಮೆ ಮಾಡಲು ಪ್ರಯತ್ನಿಸಿದ್ರೆ ಕೋಪ ಕಡಿಮೆಯಾಗುವ ಬದಲು ಹೆಚ್ಚಾಗಬಹುದು. ಸದಾ ನಾನು ನಿನ್ನ ಜೊತೆಗಿದ್ದೇನೆಂದು ಅವರಿಗೆ ತಿಳಿಸುವ ಮೂಲಕ ಅವರ ಕೋಪ ಕಡಿಮೆಯಾಗಲು ನೀವು ನೆರವಾಗಿ.