ಸಿಹಿ ಕಹಿ ಚಂದ್ರು ಮತ್ತು ಗೀತಾ ಅವರ ಜೋಡಿ ಕನ್ನಡದ ಕಿರುತೆರೆಯಲ್ಲಿ ಹಲವು ಯಶಸ್ವೀ ಧಾರಾವಾಹಿಗಳನ್ನು ನಿರ್ಮಿಸಿ ದಾಖಲೆ ಬರೆದಿದ್ದಾರೆ. ಅವರ ನಿರ್ಮಾಣ ಸಂಸ್ಥೆ ಕಿರುತೆರೆ ರಂಗದಲ್ಲಿ ಅಚ್ಚಳಿಯದ ಹೆಸರು ಮಾಡಿರೋ ಸಂಸ್ಥೆ ಎಂಬುದನ್ನು ಯಾರೂ ಎಂದೂ ಮರೆಯಲಾಗದು. ಹೆಚ್ಚಿನ ಮಾಹಿತಿಗೆ ಈ ಸ್ಟೋರಿ ನೋಡಿ..

ಸಿಹಿ ಕಹಿ ಚಂದ್ರು-ಗೀತಾ ದಂಪತಿಗೆ 35 ವಸಂತಗಳ ಸಂಭ್ರಮ: ಪ್ರೀತಿಗೆ 35 ವರ್ಷ!

ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ಜೋಡಿ, ಸಿಹಿ ಕಹಿ ಚಂದ್ರು (Sihi Kahi Chandru) ಮತ್ತು ಸಿಹಿ ಗೀತಾ (Sihi Kahi Geetha) ಅವರ ದಾಂಪತ್ಯಕ್ಕೆ ಇದೀಗ 35 ವರ್ಷಗಳು (35 Years Marriage Anniversary) ತುಂಬಿವೆ. ಈ ಸಿಹಿ ಸಂಗತಿಯನ್ನು ಚಂದ್ರು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪತ್ನಿ ಗೀತಾ ಅವರಿಗೆ ವಿಶೇಷ ವಿಡಿಯೋ ಮೂಲಕ ಶುಭಾಶಯ ತಿಳಿಸಿದ್ದಾರೆ. ಅವರ ಈ ಸುದೀರ್ಘ ಪಯಣವು ಅನೇಕರಿಗೆ ಮಾದರಿಯಾಗಿದೆ.

ಚಂದ್ರು ಅವರು ತಮ್ಮ ಪತ್ನಿ ಗೀತಾ ಅವರೊಂದಿಗೆ ಇರುವ ಸುಂದರ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡು, ಹೃದಯಸ್ಪರ್ಶಿ ಅಡಿಬರಹ ಬರೆದಿದ್ದಾರೆ. "ನೀನು ನನ್ನ ಬೆಸ್ಟ್ ಫ್ರೆಂಡ್, ನನ್ನ ಶಕ್ತಿ ಮತ್ತು ನನ್ನ ಸದಾಕಾಲದ ನೆಚ್ಚಿನ ವ್ಯಕ್ತಿ" ಎಂದು ಚಂದ್ರು ಬರೆದಿದ್ದಾರೆ. ಈ ಮಾತುಗಳು ಅವರ ಪ್ರೀತಿ ಮತ್ತು ಬಾಂಧವ್ಯದ ಆಳವನ್ನು ಬಿಂಬಿಸುತ್ತವೆ. ಇಂತಹ ಪ್ರೀತಿ ಇಂದಿನ ದಿನಗಳಲ್ಲಿ ಅಪರೂಪ ಎನ್ನಬಹುದು.

ಸಿಹಿ ಕಹಿ ಚಂದ್ರು ಮತ್ತು ಗೀತಾ ಅವರ ಜೋಡಿ ಕನ್ನಡದ ಕಿರುತೆರೆಯಲ್ಲಿ ಹಲವು ಯಶಸ್ವೀ ಧಾರಾವಾಹಿಗಳನ್ನು ನಿರ್ಮಿಸಿ ದಾಖಲೆ ಬರೆದಿದ್ದಾರೆ. ಅವರ ನಿರ್ಮಾಣ ಸಂಸ್ಥೆ ಕಿರುತೆರೆ ರಂಗದಲ್ಲಿ ಅಚ್ಚಳಿಯದ ಹೆಸರು ಮಾಡಿರೋ ಸಂಸ್ಥೆ ಎಂಬುದನ್ನು ಯಾರೂ ಎಂದೂ ಮರೆಯಲಾಗದು. ಕನ್ನಡ ಚಿತ್ರರಂಗದಲ್ಲಿಯೂ ಕೂಡ ಈ ಜೋಡಿ ಸದಾ ಗಮನ ಸೆಳೆದಿದೆ. ‘ಪಾರ್ವತಿ ಪರಮೇಶ್ವರ’ ಹಾಗೂ ‘ಪಾಂಡುರಂಗ ವಿಠಲ’ ಹೆಸರಿನ ಕಾಮಿಡಿ ಬೇಸ್ಡ್ ಸೀರಿಯಲ್‌ಗಳು ಸಿಹಿಕಹಿ ಪ್ರೊಡಕ್ಷನ್ ಹೌಸ್‌ಮೂಲಕ ನಿರ್ಮಾಣವಾಗಿ 2000ಕ್ಕೂ ಸಂಚಿಕೆಗಳಲ್ಲಿ ಪ್ರಸಾರ ಕಂಡಿವೆ.

ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕಂಡಿದ್ದಾರೆ ಮತ್ತು ವೈಯಕ್ತಿಕ ಜೀವನದಲ್ಲಿಯೂ ಅಷ್ಟೇ ಸಾಮರಸ್ಯದಿಂದ ಬದುಕುತ್ತಿದ್ದಾರೆ. 35 ವರ್ಷಗಳ ದಾಂಪತ್ಯ ಜೀವನ ಎಂಬುದು ನಿಜಕ್ಕೂ ಒಂದು ದೊಡ್ಡ ಸಾಧನೆ. ಅವರ ಈ ಪ್ರೀತಿಯ ಪಯಣ ಹೀಗೇ ಮುಂದುವರೆಯಲಿ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.

View post on Instagram