Asianet Suvarna News Asianet Suvarna News

Relationship Tips: ಬಾಸ್‌ ಕ್ಷಮೆ ಕೇಳೋದು ಹೇಗೆ? ತಪ್ಪನ್ನ ಒಪ್ಕೊಳೋದು ಕ್ಷೇಮಾನಾ?

ಕಚೇರಿಯಲ್ಲಿ ತಪ್ಪುಗಳಾಗುವುದು ಸಹಜ. ನಿಗದಿತ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರೈಸದಿರುವಂತೆಯೂ ಆಗಬಹುದು. ಅಂತಹ ಸನ್ನಿವೇಶದಲ್ಲಿ ಬಾಸ್‌ ಕ್ಷಮೆ ಕೇಳಿ, ವೃತ್ತಿಯ ಬಗ್ಗೆ ಬದ್ಧತೆ ವ್ಯಕ್ತಪಡಿಸುವುದು ಅಗತ್ಯ. ಆದರೆ, ಏನೇನೋ ಮಾತನಾಡುವುದರಿಂದ ಪ್ರಯೋಜನವಾಗುವುದಿಲ್ಲ. 

How to say sorry to boss it is important for work growth
Author
First Published Jun 2, 2023, 5:09 PM IST

ಕಚೇರಿಯಲ್ಲಿ ಎಷ್ಟೋ ಬಾರಿ ಪ್ರಮಾದಗಳಾಗುತ್ತವೆ. ಒಂದು ತಪ್ಪಿನಿಂದ ಇಡೀ ಟೀಮಿನ ಕೆಲಸ ಹಾಳಾಗುವಂತೆ ಆಗಬಹುದು, ಡೆಡ್‌ ಲೈನ್‌ ಮಿಸ್‌ ಆಗಬಹುದು. ಹೇಳಿದಂತೆ ಕೆಲಸ ಮಾಡಿಕೊಡಲು ಸಾಧ್ಯವಾಗದೆ ಪರಿಸ್ಥಿತಿ ಕೈ ಮೀರಬಹುದು. ಅಥವಾ ಯಾವುದಾದರೂ ಸಿಲ್ಲಿ ಮಿಸ್ಟೇಕ್‌ ನಿಂದ ನಿಮ್ಮ ಮೇಲೆ ತಪ್ಪು ಅರ್ಥ ಬರುವಂತಾಗಬಹುದು. ಅಥವಾ ಮಾತನಾಡುವ ಭರದಲ್ಲಿ ಬಾಸ್‌ ಅನ್ನು ಟೀಕಿಸಿ ಅದು ಮುಂದೆ ಭಾರೀ ಪರಿಣಾಮಗಳಿಗೆ ಕಾರಣವಾಗಿರಬಹುದು. ಅಂತಹ ಸಮಯಗಳಲ್ಲಿ ನಿಮ್ಮ ಬಾಸ್‌ ಕ್ಷಮೆ ಕೇಳುವುದು ಉತ್ತಮ. ಸೂಕ್ತವಾದ ರೀತಿಯಲ್ಲಿ ಅವರ ಕ್ಷಮೆ ಕೇಳುವ ಮೂಲಕ ನಂಬಿಕೆಯನ್ನು ಗಟ್ಟಿಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಎಷ್ಟೋ ಬಾರಿ ಬೇರೆಯವರ ಮೂಲಕ ನೀವು ಮಾಡಿರುವ ತಪ್ಪುಗಳ ಬಗ್ಗೆ ತಿಳಿದಾಗ ಪರಿಣಾಮ ಹೆಚ್ಚು ತೀವ್ರವಾಗಿರುತ್ತದೆ. ಅದರ ಬದಲು ನಿಮ್ಮ ತಪ್ಪುಗಳ ಬಗ್ಗೆ ನೀವೇ ಹೇಳಿಕೊಂಡು ಕ್ಷಮೆ ಕೇಳಿಬಿಟ್ಟರೆ ಪರಿಸ್ಥಿತಿ ತಿಳಿಯಾಗುತ್ತದೆ. ಹೆಚ್ಚಿನ ಹಾನಿಯಾಗುವುದು ತಪ್ಪುತ್ತದೆ. ನಿಮ್ಮ ಮೇಲೆ ಹೆಚ್ಚಿನ ಅಸಮಾಧಾನ ಉಂಟಾಗುವುದು ತಪ್ಪುತ್ತದೆ. ಹೀಗಾಗಿ, ಸೂಕ್ತ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಬಾಸ್‌ ಕ್ಷಮೆ ಕೇಳಿಬಿಡುವುದು ಅಗತ್ಯ. 

ವೃತ್ತಿಯಲ್ಲಿ (Profession) ಯಶಸ್ಸು (Success) ಗಳಿಸಲು ಬಾಸ್‌ (Boss) ಜತೆಗೆ ಉತ್ತಮ ಸಂಬಂಧ (Relation) ಹೊಂದಿರುವುದು ಅಗತ್ಯ. ಅವರು ಎಂಥವರೇ ಆಗಿರಲಿ, ನಿಮ್ಮ ಅವರ ಸಂಬಂಧ ಹಾರ್ದಿಕವಾಗಿರಬೇಕು. ಅವರನ್ನು ಪ್ಲೀಸ್‌ ಮಾಡುತ್ತಿರಬೇಕು ಎಂದರ್ಥವಲ್ಲ. ಆದರೆ, ಅವರೊಂದಿಗೆ ನೇರವಾದ, ಶುದ್ಧವಾದ ವೃತ್ತಿಬಾಂಧವ್ಯ ಇರುವುದು ಅಗತ್ಯ. ಕೆಲವೊಮ್ಮೆ ಮಾತಿಗೆ ಮಾತು ಬೆಳೆದಿರಬಹುದು, ಮೀಟಿಂಗ್‌ ನಲ್ಲಿ ತಪ್ಪು ಅರ್ಥ ಬರುವಂತಹ ಮಾತುಗಳು ಮೂಡಿರಬಹುದು. ಅವುಗಳ ಬಗ್ಗೆ ಕ್ಷಮೆ (Sorry) ಕೇಳುವುದು ಉತ್ತಮ ವೃತ್ತಿಪರರ ಲಕ್ಷಣ.

Vastu Tips For Office: ಔದ್ಯೋಗಿಕ ಪ್ರಗತಿ, ಯಶಸ್ಸಿಗಾಗಿ ಕಚೇರಿಯ ಡೆಸ್ಕ್ ಹೀಗಿರಲಿ

•    ಸರಿಯಾದ ಸಮಯದಲ್ಲಿ (Correct Time) ಕ್ಷಮೆ ಕೇಳಿ
ಬಾಸ್‌ ನಲ್ಲಿ ಕ್ಷಮೆ ಕೇಳಲು ಯಾವಾಗೆಂದರೆ ಆಗ ನುಗ್ಗಬಾರದು. ಸರಿಯಾದ ಸಮಯಕ್ಕೆ ಕಾಯಬೇಕು. ಅವರು ಏನೋ ಅಸಮಾಧಾನದಲ್ಲಿರುವಾಗ, ಕೋಪಿಸಿಕೊಂಡಿರುವಾಗ (Angry), ಮಾತನಾಡಲು ಮುಂದಾಗಬೇಡಿ. ಅವರ ಸಮಯ ಕೇಳಿಕೊಳ್ಳಿ. ಈ ಗುಣ ವೃತ್ತಿಗೆ ನಿಮ್ಮ ಬದ್ಧತೆಯನ್ನು (Commitment) ತೋರಿಸುತ್ತದೆ ಹಾಗೂ ಸಮಸ್ಯೆಗಳನ್ನು (Problems) ಹ್ಯಾಂಡಲ್‌ ಮಾಡಲು ನೀವು ಸಿದ್ಧವಿರುವುದನ್ನು ವ್ಯಕ್ತಪಡಿಸುತ್ತದೆ.

•    ಜವಾಬ್ದಾರಿ (Responsibility) ತೆಗೆದುಕೊಳ್ಳಿ
ಬಾಸ್‌ ಜತೆಗಿನ ಮಾತುಕತೆಯಲ್ಲಿ ನೀವು ನಿಭಾಯಿಸುವ ಪಾತ್ರ, ನಿಮ್ಮ ಕೆಲಸದ ಬಗ್ಗೆ ಸ್ಪಷ್ಟತೆಯಿಂದ (Clarity) ಕೂಡಿರಬೇಕು. ತಪ್ಪುಗಳ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರಿಂದ ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ರಚನಾತ್ಮಕ ಚರ್ಚೆಯಲ್ಲಿ, ನಿಮ್ಮ ಪ್ರಾಜೆಕ್ಟ್‌ ನಲ್ಲಿ ಆಗಿರುವ ಕೊರತೆಯ ಬಗ್ಗೆ ಪರಿಹಾರ ದೊರೆಯಬಹುದು. ಒಂದೊಮ್ಮೆ ನೀವು ಚಿಕ್ಕದೊಂದು ತಂಡವನ್ನು ಮುನ್ನಡೆಸುತ್ತಿದ್ದರೆ ತಂಡದ (Team) ಯಾವುದೇ ಸದಸ್ಯರು ಮಾಡಿರುವ ತಪ್ಪಿಗೂ ನೀವೇ ಹೊಣೆಗಾರರಾಗಬೇಕಾಗುತ್ತದೆ. ಅದಕ್ಕೆ ಹಿಂಜರಿಯಬೇಡಿ.

•    ಪ್ರಾಮಾಣಿಕತೆ (Honesty) ಇರಲಿ
ಆಗಿ ಹೋದ ತಪ್ಪಿನ (Mistake) ಬಗ್ಗೆ ಪ್ರಾಮಾಣಿಕತೆಯಿಂದ ಹೇಳಿಕೊಳ್ಳುವುದು ಹಾಗೂ ಪ್ರಾಮಾಣಿಕವಾಗಿ ಅದರ ಬಗ್ಗೆ ವಿಷಾದಿಸುವುದು ನಿಮ್ಮ ಕಾಳಜಿಯನ್ನು (Care) ತೋರುತ್ತದೆ. ಇಂತಹ ಸನ್ನಿವೇಶಗಳು ನಿಮ್ಮ ಹಾಗೂ ಮೇಲಧಿಕಾರಿ (Boss) ನಡುವೆ ಉತ್ತಮ ಸಂಬಂಧಕ್ಕೂ (Relation) ನಾಂದಿ ಹಾಡುತ್ತವೆ. 

ರಸ್ತೆಯಲ್ಲಿ ನಿಂತು ಸೆಲ್ಫಿ ಕೇಳಿದ್ದ ಅಭಿಮಾನಿಯನ್ನೇ ವಿವಾಹವಾಗಲಿರುವ ಟೆನಿಸ್‌ ತಾರೆ ಗಾರ್ಬಿನ್‌ ಮುಗುರುಜಾ!

•    ಸವಾಲು (Challenge) ಎದುರಿಸುವಲ್ಲಿ ಆಸಕ್ತಿ ವ್ಯಕ್ತಪಡಿಸಿ
ಸವಾಲುಗಳನ್ನು ಎದುರಿಸಲು ನಿಮಗಿರುವ ಆಸಕ್ತಿಯನ್ನು (Interest) ವ್ಯಕ್ತಪಡಿಸಿ. ಸಮಸ್ಯೆಗಳನ್ನು ನಿವಾರಿಸುವ ಬದ್ಧತೆ ತೋರಿಸಿ. ಅಡೆತಡೆಗಳನ್ನು ನಿವಾರಿಸಿ ಮುಂದೆ ಸಾಗುವ ಹಂಬಲ ವ್ಯಕ್ತಪಡಿಸಿ. ಪ್ರಾಮಾಣಿಕವಾಗಿ ನಿಮ್ಮ ಪರಿಸ್ಥಿತಿಯನ್ನು (Situation) ಅವರಿಗೆ ಮನದಟ್ಟು ಮಾಡಿಸಿ. ಪಾರದರ್ಶಕತೆ (Transparency) ಇಲ್ಲಿ ಮುಖ್ಯವಾಗುತ್ತದೆ. ಸಮಸ್ಯೆ ಬಗೆಹರಿಸಲು ನಿಮ್ಮ ವಿಚಾರಗಳನ್ನು ತಿಳಿಸಿ. ಆದರೆ, ಅನಗತ್ಯವಾಗಿ ವೀರಾವೇಶದಿಂದ ಮಾತನಾಡಬೇಡಿ. ನಿಮ್ಮ ಬಗ್ಗೆ ಕೊಚ್ಚಿಕೊಳ್ಳಬೇಡಿ.

Follow Us:
Download App:
  • android
  • ios