ನಿಮ್ಮ ಮಕ್ಕಳನ್ನು ಆನ್‌ಲೈನ್ ಕ್ಯಾಟ್ ಫಿಶಿಂಗ್‌ನಿಂದ ರಕ್ಷಿಸಿಕೊಳ್ಳುವುದು ಹೇಗೆ?
ಕ್ಯಾಟ್‌ಫಿಶಿಂಗ್ ಎಂದರೆ ಆನ್‌ಲೈನ್‌ನಲ್ಲಿ ಮಾಡುವ ವಂಚನೆ. ಈಗ ಸದಾ ಆನ್‌ಲೈನ್ ಕ್ಲಾಸ್ ಇತ್ಯಾದಿಗಳಿಂದಾಗಿ ಸ್ಕ್ರೀನ್ ಟೈಮ್ ಹೆಚ್ಚಾಗಿ ಪಡೆಯುವ ಮಕ್ಕಳು ಕ್ಯಾಟ್‌ಫಿಶಿಂಗ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಅದರ ಪರಿಣಾಮವೂ ಭೀಕರ. ಇದರಿಂದ ಪಾರಾಗುವ ಟಿಪ್ಸ್ ಇಲ್ಲಿವೆ.
ಕ್ಯಾಟ್‌ಫಿಶಿಂಗ್ ಇತ್ತೀಚೆಗೆ ಇಂಟರ್ನೆಟ್‌ನಿಂದ ಉಂಟಾಗಿರುವ ಸುರಕ್ಷತೆಯ ಅಪಾಯ. ಕ್ಯಾಟ್‌ಫಿಶಿಂಗ್‌ನಲ್ಲಿ ಅಜ್ಞಾತ ವ್ಯಕ್ತಿಗಳು ನಿಮ್ಮ ಜೊತೆ ಸಲಿಗೆ ಬೆಳೆಸಿಕೊಂಡು ನಿಮ್ಮ ಆನ್‌ಲೈನ್ ಬ್ಯಾಂಕಿಂಗ್ ವಿವರ ಪಡೆದು ನಿಮ್ಮ ಹಣವನ್ನೆಲ್ಲ ಲಪಟಾಯಿಸಬಹುದು; ಅಥವಾ ನಿಮ್ಮ ಫೇಸ್‌ಬುಕ್ ಮೊದಲಾದ ಕಡೆ ಇರುವ ಪ್ರೊಫೈಲ್ ಫೋಟೋ ಇತ್ಯಾದಿ ಬಳಸಿಕೊಂಡು ಫೇಕ್ ಐಡಿ ಸೃಷ್ಟಿಮಾಡಿ ನಿಮ್ಮ ಗೆಳೆಯರಿಂದ ಹಣ ಪೀಕಬಹುದು. ಅಥವಾ ನಿಮ್ಮ ಮುಖದ ಫೋಟೋಗೆ ಬೆತ್ತಲೆ ದೇಹ ಜೋಡಿಸಿ ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು. ಹೆದರುವ ಹೆಣ್ಣುಮಕ್ಕಳು ಸಿಕ್ಕರಂತೂ, ಅವರ ಬೆತ್ತಲೆ ದೇಹದ ಫೋಟೋ ಸೃಷ್ಟಿಸಿ, ಅವರನ್ನು ತಾವು ಕರೆದಲ್ಲಿಗೆ ಬರುವಂತೆ ಮಾಡಿ ಇನ್ನೇನೋ ಅಪರಾಧ ಎಸಗಬಹುದು. ಇದೆಲ್ಲವೂ ಈಗಾಗಲೇ ಸಾಕಷ್ಟು ನಡೆದಿದೆ. ಇದರಿಂದ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಮಕ್ಕಳನ್ನೂ ಹೇಗೆ ರಕ್ಷಿಸುವುದು ಎಂದು ನೀವು ತಿಳಿಯುವುದು ಮುಖ್ಯವಾಗಿದೆ. ನೀವು ತಿಳಿದಿರಬೇಬೇಕಾದ ಇತರ ಆನ್‌ಲೈನ್ ಸುರಕ್ಷತಾ ವಿಚಾರಗಳ ಜೊತೆಗೆ, ಈ ಕ್ಯಾಟ್‌ಫಿಶಿಂಗ್ ಬಗ್ಗೆಯೂ ತಿಳಿದಿರಲಿ.
ಆನ್‌ಲೈನ್ ಸ್ನೇಹ ಬೇಡ
ಆನ್‌ಲೈನ್‌ನಲ್ಲಿ ನೇರವಾಗಿ ಯಾರನ್ನೂ ಪರಿಚಯ ಮಾಡಿಕೊಂಡು ಫ್ರೆಂಡ್‌ಶಿಪ್ ಬೆಳೆಸಿಕೊಳ್ಳಬಾರದು ಎಂಬುದನ್ನು ನಿಮ್ಮ ಮಕ್ಕಳಿಗೆ ಕಟ್ಟುನಿಟ್ಟಾಗಿ ಹೇಳಿ. ಯಾಕೆಂದರೆ ನಾವು ಯಾರ ಜೊತೆ ಬೆರೆಯುತ್ತೇವೆ ಎಂಬ ನಿಜ ಆನ್‌ಲೈನ್‌ನಲ್ಲಿ ನಮಗೆ ಗೊತ್ತಾಗುವುದೇ ಇಲ್ಲ. ನಿಮಗೆ ನಿಜಜೀವನದಲ್ಲಿ ತಿಳಿದಿರುವ ಜನರ ಜೊತೆಗೆ ಮಾತ್ರವೇ ಆನ್‌ಲೈನ್‌ನಲ್ಲೂ ಫ್ರೆಂಡ್‌ಶಿಪ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ. ನಿಜ ಜೀವನದಲ್ಲಿ ಯಾರೊಂದಿಗೂ ಬೆರೆಯದ ಯಾವುದೇ ವ್ಯಕ್ತಿ ಇದ್ದಾನೆ ಎಂದು ನಂಬುವುದೇ ಸಲ್ಲದು. ಅಂಥ 'ಸ್ನೇಹಿತರ' ವಿನಂತಿಯನ್ನು ಸ್ವೀಕರಿಸಬೇಡಿ.
ಗೌಪ್ಯತೆಯ ಸೆಟ್ಟಿಂಗ್
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಕಟ್ಟುನಿಟ್ಟಾದ ಗೌಪ್ಯತೆ ನಿಯಂತ್ರಣ ಸೆಟ್ಟಿಂಗ್‌ಗಳನ್ನು ಹೊಂದಿಸಿ. ಯಾವಾಗಲೂ ನಿಮ್ಮ ಮಗುವಿನ ಫೋಟೋಗಳನ್ನು ಸ್ನೇಹಿತರು ಮಾತ್ರ ನೋಡುವ ಆಯ್ಕೆಯನ್ನು ಆರಿಸಿ. ನಿಮ್ಮ ಮಗುವಿನ ಪ್ರೊಫೈಲ್ ಚಿತ್ರ ಅಥವಾ ಆನ್‌ಲೈನ್‌ನಲ್ಲಿರುವ ಇತರ ಫೋಟೋಗಳನ್ನು ಕ್ಯಾಟ್‌ಫಿಶಿಂಗ್ ಮಾಡುವವರು ತೆಗೆದುಕೊಂಡು ಬಳಸುವ ಸಾಧ್ಯತೆ ಇದೆ.
ನಿಷ್ಕ್ರಿಯ ಖಾತೆ ಮುಚ್ಚಿ
ನೀವು ಹಿಂದೆ ಬಳಸುತ್ತಿದ್ದ, ಈಗ ನಿಷ್ಕ್ರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮುಚ್ಚಿಬಿಡಿ. ನಿಮ್ಮ ಮಗು ಮೈಸ್ಪೇಸ್‌ನಲ್ಲಿದ್ದರೆ ಅಥವಾ ಅವರು ಬಳಸದ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದರೆ, ಅದನ್ನು ಮುಚ್ಚಿ. ನಿಷ್ಕ್ರಿಯ ಖಾತೆಗಳು ಕ್ಯಾಟ್‌ಫಿಶಿಂಗ್ ಮಾಡುವವರಿಗೆ ಚಿತ್ರಗಳ ಅಥವಾ ಹೆಸರುಗಳ ಮೂಲವಾಗಿರಬಹುದು.
ಟ್ವಿಟರ್‌ನಲ್ಲಿ ಫೋಟೊ ಬೇಡ
ನಿಮ್ಮ ಮಗುವಿಗೆ ತನ್ನ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಾಕಬೇಡಿ ಎಂದು ಹೇಳಿ. ಪ್ರೊಫೈಲ್ ಚಿತ್ರ ಅಥವಾ ಟ್ವೀಟ್‌ನಲ್ಲಿ) ಫೋಟೊ ಬೇಡ. ಎಲ್ಲಾ ಟ್ವೀಟ್‌ಗಳು ಮತ್ತಷ್ಟು ರಿಟ್ವೀಟ್ ಆಗುವ ಅವಕಾಶವಿದೆ. ನಿಮ್ಮ ಮಗುವಿನ ಟ್ವೀಟ್‌ಪಿಕ್ಸ್ ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ನಿಯಂತ್ರಿಸುವುದು ತುಂಬಾ ಕಷ್ಟ.
ಹೆಣ್ಣು ಮಕ್ಕಳಿಗೆ ಎಂಥ ಅಪ್ಪ ಸಿಗಬೇಕು ಗೊತ್ತೇ?
ಸರ್ಚ್ ಮಾಡಿ
ನಿಮ್ಮ ಮಗುವಿನ ಚಿತ್ರ ದುರ್ಬಳಕೆಯಾಗಿರಬಹುದು ಎಂಬ ಶಂಕೆ ನಿಮಗಿದ್ದರೆ ಅದನ್ನೂ ನೀವು ಸರ್ಚ್ ಮಾಡಬಹುದು. ನಿಮ್ಮ ಮಗುವಿನ ಮುಖ ಮತ್ತು ಹೆಸರನ್ನು ಗೂಗಲ್ ಚಿತ್ರಗಳಲ್ಲಿ ಹುಡುಕಿ. ನೀವು ಫೋಟೋ ಹಾಕಿ ಗೂಗಲ್ ಸರ್ಚ್ ಮಾಡಬಹುದು. ಆಕೆಯ ಚಿತ್ರವು ಕಾಣಿಸಿಕೊಂಡರೆ ಮತ್ತು ನೀವು ಅದರ ಕುರಿತು ಕಸಿವಿಸಿ ಆಗುವಂತಿದ್ದರೆ, ಅದನ್ನು ಮೂಲದಲ್ಲಿ ಅಳಿಸಲು ಸಾದ್ಯವಾಗುತ್ತದೆಯೇ ನೋಡಿ. ಆ ವೆಬ್‌ಸೈಟ್ ಸೋರ್ಸ್‌ಗೆ ಕಂಪ್ಲೇಂಟ್ ಮಾಡಿ ಅದನ್ನು ಅಳಿಸಿಹಾಕಬಹುದು.
ಆಫ್‌ಲೈನ್ ಇರಲಿ
ನಿಮ್ಮ ಮಗುವಿನ ಜೀವನವನ್ನು ಆಫ್‌ಲೈನ್‌ನಲ್ಲಿ ಹೆಚ್ಚಾಗಿ ದುಡಿಸಿಕೊಳ್ಳಿ. ಫೇಸ್‌ಬುಕ್‌ನಲ್ಲಿ ನಿಮ್ಮ ಮಗುವಿನೊಂದಿಗೆ ಫ್ರೆಂಡ್‌ಶಿಪ್ ಮಾಡಿ ಮತ್ತು ಆಫ್‌ಲೈನ್‌ನಲ್ಲಿ ಅಂದರೆ ನಿಜ ಜೀವನ ದಲ್ಲಿ ಪ್ರತಿದಿನ ಆಕೆಯೊಂದಿಗೆ ಮಾತನಾಡಿ. ಅವಳ ಜೀವನದಲ್ಲಿ ಹೊಸ ಜನರು ಪ್ರವೇಶಿಸಿದ್ದಾರೆಯೇ, ಆಕೆ ಅಥವಾ ಆತ ಯಾರೊಂದಿಗೆ ಸಮಯ ಕಳೆಯುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಕೊಡಿ (ಯಾರಿಗೆ ಸಂದೇಶ ಕಳುಹಿಸುತ್ತಿದ್ದಾಳೆ, ಫೇಸ್‌ಬುಕ್ ಚಾಟ್ ಇತ್ಯಾದಿ).
ಮಕ್ಕಳ ಉಗ್ಗು ಮನೆಯಲ್ಲೇ ಸರಿಪಡಿಸೋದು ಹೇಗೆ?
ಗೆಳೆಯ ಗೆಳತಿಯರು ಗೊತ್ತಿರಲಿ
ನಿಮ್ಮ ಮಗ/ಮಗಳ ಗೆಳೆಯ/ಗೆಳತಿಯರ ಬಗ್ಗೆ ನಿಮಗೆ ಪೂರ್ತಿ ಗೊತ್ತಿರಲಿ. ಅವರ ಪೋಷಕರನ್ನು ಭೇಟಿಯಾಗುವಂತೆ ಮಾಡಿ. ಹದಿಹರೆಯದ ಮಕ್ಕಳ ಸಂಬಂಧಗಳು ಆನ್‌ಲೈನ್‌ನಲ್ಲಿ ಆರಂಭವಾಗುವುದು ಈಗ ತುಂಬಾ ಸಾಮಾನ್ಯವಾಗಿದೆ. ನಿಮ್ಮ ಮಗುವಿದೆ ಡೇಟಿಂಗ್ ವಯಸ್ಸು ಆಗಿದ್ದರೆ ಮತ್ತು ಅವಳು ನಿರ್ದಿಷ್ಟ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಳೆ ಎಂದು ನಿಮಗೆ ತಿಳಿದಿದ್ದರೆ, ಆತನನ್ನು ಪರಿಚಯಿಸಲು ಕೇಳಿ. ಈ ಹೊಸ ಮೀಡಿಯಾ ಯುಗದಲ್ಲಿಯೂ ಸಹ, ಕೆಲವು ವಿಷಯಗಳು ಹಳೆಯ ಶೈಲಿಯಲ್ಲಿಯೇ ಆಗಬೇಕು!
ಮಗನನ್ನೂ ನೋಡಿಕೊಳ್ಳಿ
ಹೆಣ್ಣುಮಕ್ಕಳ ಮೇಲೆ ಮಾತ್ರವೇ ಅಲ್ಲ, ಗಂಡು ಮಕ್ಕಳ ಬಗ್ಗೆಯೂ ಎಚ್ಚರವಿರಲಿ. ಇವರೂ ಕ್ಯಾಟ್‌ಫಿಶಿಂಗ್‌ಗೆ ತುತ್ತಾಗಬಹುದು. ಅಥವಾ ಇವರೇ ಇತರ ಫ್ರೆಂಡ್ಸ್ ಜೊತೆಗೆ ಸೇರಿ ಹೆಣ್ಣುಮಕ್ಕಳಿಗೆ ಪೀಡನೆ ಕೊಡುವ ಸಾಧ್ಯತೆಯೂ ಇದೆ. ಏನಿದ್ದರೂ ಎಚ್ಚರ ಬೇಕು.
ಮಕ್ಕಳಲ್ಲಿ ಕೀಳರಿಮೆ ಮೂಡಲು ಹೆತ್ತವರೇ ಕಾರಣ: ಈ ತಪ್ಪು ಮಾಡದಿರಿ