ಮಕ್ಕಳ ಉಗ್ಗು ಮನೆಯಲ್ಲೇ ಸರಿಪಡಿಸೋದು ಹೇಗೆ?
ಕಲರ್ಸ್ ಕನ್ನಡದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಪ್ರತಿಭಾವಂತ ಹಾಡುಗಾರ ಸೂರ್ಯಕಾಂತ್ ಅವರು ಮಾತನಾಡುವಾಗ ಉಗ್ಗುವುದನ್ನು ನೀವು ನೋಡಿರಬಹುದು. ಉಗ್ಗು ಅನೇಕ ಮಕ್ಕಳಿಗೆ ಬಾಲ್ಯದಲ್ಲೇ ಅಂಟಿಕೊಳ್ಳುತ್ತದೆ. ಇದಕ್ಕೆ ತಪ್ಪು ಪೇರೆಂಟಿಂಗ್ ಕಾರಣ. ನಿಮ್ಮ ಪೇರೆಂಟಿಂಗ್‌ನಲ್ಲಿ ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳುವ ಮೂಲಕ ನೀವು ಮಕ್ಕಳ ಉಗ್ಗು ಅನ್ನು ಸರಿಪಡಿಸಬಹುದು.
ಸಾಮಾನ್ಯವಾಗಿ ತೊದಲುವಿಕೆ ಎಂದು ಕರೆಯಲಾಗುವ ಮಾತಿನ ಉಗ್ಗು, ಬಾಲ್ಯದಲ್ಲಿಯೇ ಅಂಟಿಕೊಳ್ಳುವ ಒಂದು ಅಸ್ವಸ್ಥತೆ. ಇದು ಮಕ್ಕಳ ಭಾವನೆಗಳ ಸರಾಗ ಹರಿವಿಗೆ ಸಮಸ್ಯೆ ಉಂಟುಮಾಡುತ್ತದೆ.
ತೊದಲುವಿಕೆಯಲ್ಲಿ ಮೂರು ವಿಧಗಳಿವೆ- ಬೆಳವಣಿಗೆಯ ತೊದಲುವಿಕೆ, ನರಜನಕ ತೊದಲುವಿಕೆ ಮತ್ತು ಸೈಕೋಜೆನಿಕ್ ತೊದಲುವಿಕೆ. ಅಧ್ಯಯನದ ಪ್ರಕಾರ, ಎಲ್ಲಾ ಮಕ್ಕಳು ಆರಂಭದಲ್ಲಿ ಮಾತು ಆರಂಭಿಸಿದಾಗ, ಶೇಕಡಾ 5ರಷ್ಟು ತೊದಲುವಿಕೆ ಅನುಭವಿಸುತ್ತಾರೆ. ಈ 5 ಪ್ರತಿಶತದಲ್ಲಿ, 75 ಪ್ರತಿಶತದಷ್ಟು ಜನರು ಬಾಲ್ಯದ ಅಂತ್ಯದ ವೇಳೆಗೆ ಚೇತರಿಸಿಕೊಳ್ಳುತ್ತಾರೆ. ಉಳಿದವರು ಹದಿಹರೆಯದವರಲ್ಲಿ ಚೇತರಿಸಿಕೊಳ್ಳುತ್ತಾರೆ, ಆದರೆ ಒಂದು ಶೇಕಡಾ ಮಕ್ಕಳಲ್ಲಿ ಈ ಸಮಸ್ಯೆ ಪ್ರೌಢಾವಸ್ಥೆಯನ್ನು ತಲುಪಿದ ನಂತರವೂ ಮುಂದುವರಿಯುತ್ತದೆ.
ಪೋಷಕರು ತಮ್ಮ ಮಕ್ಕಳಿಗೆ ಅತ್ಯಂತ ಹತ್ತಿರದವರು. ಹೀಗಾಗಿ, ಅವರು ಮಗುವಿಗೆ ಮಾತು-ಸಂಬಂಧಿತ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇದು ಸವಾಲಿನ ಕೆಲಸ. ಮಗುವಿನ ಮನವೊಪ್ಪಿಸುವ ಫಲಿತಾಂಶಗಳನ್ನು ಪಡೆಯಲು ನಿರಂತರ ಪ್ರಯತ್ನಗಳು ಬೇಕಾಗುತ್ತವೆ. ಪೋಷಕರಾಗಿ ನಿಮ್ಮ ಮಗುವಿನ ಮಾತಿನ ನಿರರ್ಗಳತೆಯನ್ನು ಅಭಿವೃದ್ಧಿಪಡಿಸಲು ನೀವು ಬೆಂಬಲಿಸಬೇಕು. ಪೋಷಕರು ತಮ್ಮ ಮಗುವಿನ ತೊದಲುವಿಕೆಯನ್ನು ಜಯಿಸಲು ಸಹಾಯ ಮಾಡುವ ಕೆಲವು ಸರಳ ಸಲಹೆಗಳು ಇಲ್ಲಿವೆ.
ಹೆಣ್ಣು ಮಕ್ಕಳಿಗೆ ಎಂಥ ಅಪ್ಪ ಸಿಗಬೇಕು ಗೊತ್ತೇ?
ಮಗುವಿನ ಮಾತನ್ನು ಯಾವಾಗಲೂ ಆಲಿಸಿ
ಹೆತ್ತವರು ಮಗುವಿನ ಮಾತುಗಳನ್ನು ಕೇಳಬೇಕು. ಮಗುವಿನ ತೊದಲುವ ಸಮಸ್ಯೆಯ ಮೇಲೆ ಕೇಂದ್ರೀಕರಿಸುವ ಬದಲು ಅದು ತಿಳಿಸಲು ಪ್ರಯತ್ನಿಸುತ್ತಿರುವ ಸಂದೇಶವನ್ನು ಕೇಳಬೇಕು. ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸುವ ಬದಲು, ಪೋಷಕರು ಮಕ್ಕಳಿಗೆ ಸುಲಭವಾದ ಪದಗಳನ್ನು ನೀಡಲು ಪ್ರಯತ್ನಿಸಬೇಕು ಮತ್ತು ಇದರಿಂದ ಅವರು ವಾಕ್ಯವನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಇದು, ನನ್ನ ಸಂದೇಶವನ್ನು ತಂದೆ ತಾಯಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಮಗುವಿಗೆ ತಿಳಿಸುತ್ತದೆ. ಹೀಗಾಗಿ ಮಗುವಿಗೆ ಹೆಚ್ಚು ನಿರಾಳ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ನಿಮ್ಮ ಮಗು ಅತಿಥಿಗಳ ಮುಂದೆ ಮಾತನಾಡಲು ಹಿಂಜರಿಯುತ್ತಿದ್ದರೆ, ಪದ್ಯ ಹೇಳಲು ಅಥವಾ ಜೋಕ್ ಹೇಳಲು ಅಥವಾ ಡ್ಯಾನ್ಸ್ ಮಾಡಲು ಅವಳನ್ನು ಒತ್ತಾಯಿಸಬೇಡಿ. ಇದು ಮಗುವಿನಲ್ಲಿ ಆತಂಕ ಸೃಷ್ಟಿಸುತ್ತದೆ.
ನಿಮ್ಮ ಮಗುವಿಗೆ ಅಭಿಮಾನಿಯಂತೆ ಪ್ರತಿಕ್ರಿಯಿಸಿ
ಎಲ್ಲಾ ಮಕ್ಕಳು ಕೆಲವು ಉಚ್ಚಾರಾಂಶಗಳು ಅಥವಾ ಪದಗಳನ್ನು ಉಚ್ಚರಿಸುವಲ್ಲಿ ಸಮಸ್ಯೆಯನ್ನು ಒಂದು ಹಂತದಲ್ಲಿ ಎದುರಿಸುತ್ತಾರೆ. ಆ ಹಂತ ದಾಟಿ ಮುಂದೆ ಹೋಗುತ್ತಾರೆ. ಇದು ಸಾಮಾನ್ಯವಾಗಿ ಎರಡರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಸಂಭವಿಸುತ್ತದೆ. ಅವರು ರೇಖೆಯನ್ನು ದಾಟಲು ತಮ್ಮದೇ ಸಮಯ ತೆಗೆದುಕೊಳ್ಳುತ್ತಾರೆ. ಆಕೃತಿಯೊಳಗೆ ಬಣ್ಣ ಹಚ್ಚುವುದನ್ನು ಕಲಿಯುವಂತೆಯೇ ಇದು ಕೂಡ. ನೀವು ತೊದಲು ಉಚ್ಚರಿಸುತ್ತಿರುವುದಕ್ಕಾಗಿ ಮಗುವನ್ನು ಟೀಕಿಸಬೇಡಿ. ಕಲಿಕೆಯ ಪ್ರಯತ್ನವನ್ನು ಮಾಡಿದ್ದಕ್ಕಾಗಿ ನಿಮ್ಮ ಮಗುವನ್ನು ಪ್ರಶಂಸಿಸಿ.
ಮಕ್ಕಳಲ್ಲಿ ಕೀಳರಿಮೆ ಮೂಡಲು ಹೆತ್ತವರೇ ಕಾರಣ: ಈ ತಪ್ಪು ಮಾಡದಿರಿ
ಸುಲಭವಾದ ಸಂವಹನ ಶೈಲಿ ಆಯ್ಕೆ ಮಾಡಲು ಸಹಾಯ ಮಾಡಿ
ಮಗುವಿಗೆ ಆತ್ಮವಿಶ್ವಾಸವನ್ನು ಉಂಟುಮಾಡಲು ಮತ್ತು ಆಲೋಚನೆಗಳನ್ನು ಆರಾಮವಾಗಿ ವ್ಯಕ್ತಪಡಿಸಲು ಅವನಿಗೆ/ಅವಳನ್ನು ಶಕ್ತಗೊಳಿಸಲು, ಪೋಷಕರು ತಮ್ಮದೇ ಆದ ಸಂವಹನ ಮಾದರಿಯನ್ನು ಜಾರಿಗೊಳಿಸಬಾರದು. ಅವರು ಮಗುವಿಗೆ ತನ್ನದೇ ಆದ ಶೈಲಿಯನ್ನು ಅನುಸರಿಸಲು ಅವಕಾಶ ನೀಡಬೇಕು. ಮಗುವು ವೇಗವಾಗಿ ಮಾತನಾಡಲು ಇಷ್ಟಪಟ್ಟರೆ, ಪೋಷಕರು ನಿಧಾನವಾಗಿ ಮಾತಾಡುವಂತೆ ಹೇಳಬಾರದು. ಈ ಸ್ವಾತಂತ್ರ್ಯವು ಮಕ್ಕಳ ತೊದಲುವಿಕೆಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆತ್ಮವಿಶ್ವಾಸ ಕಾಪಾಡಿ
ಮುಖ್ಯವಾಗಿ ಮಗುವಿನ ಮಾತುಗಾರಿಕೆಗೆ ನೆರವಾಗುವುದು ಆತ್ಮವಿಶ್ವಾಸ. ಆತ್ಮವಿಶ್ವಾಸವನ್ನು ಕುಂದಿಸುವ ಗೇಲಿ, ಟೀಕೆ, ಜೋರು ಮಾಡುವಿಕೆ-ಗಳನ್ನು ಮಾಡಬೇಡಿ. ಪದಗಳ ತಪ್ಪಿದ್ದರೆ ನವಿರಾಗಿ ತಿದ್ದಿ. ಆದರೆ ಪದೇ ಪದೇ ಅದನ್ನು ಹೇಳಿ ತಮಾಷೆ ಮಾಡಬೇಡಿ. ಇದರಿಂದ ಮಗುವಿನ ತೊದಲು ಹಾಗೇ ಉಳಿಯುತ್ತದೆ.
ನಿಮ್ಮ ಮೊಬೈಲ್ ಫೋನೇ ನಿಮ್ಮ ಮಗುವಿನ ನೆನಪಿಗೆ ಶತ್ರು!