Asianet Suvarna News Asianet Suvarna News

Creativity in children: ಮಕ್ಕಳನ್ನು ಬ್ಯುಸಿಯಾಗಿಡಲು ಸರಳ ಉಪಾಯಗಳು

ತಂದೆ ಹಾಗೂ ತಾಯಿ ಇಬ್ಬರು ಕಂಪ್ಯೂಟರ್ ಹಿಡಿದು ತಮ್ಮದೇ ಕೆಲಸದಲ್ಲಿ ಮುಳುಗಿರುವಾಗ ಮಕ್ಕಳನ್ನು ನೋಡಿಕೊಳ್ಳುವುದು ಒಂದು ಸವಾಲಾಗಿ ಬಿಡುತ್ತದೆ. ಮಕ್ಕಳ ಕಡೆ ಹೆಚ್ಚು ಗಮನ ಕೊಡದೆ ಇದ್ದಾಗ ಮಕ್ಕಳು ತಮಗರಿವಿಲ್ಲದೆ ಬಿದ್ದು ಗಾಯ ಮಾಡಿಕೊಳ್ಳಬಹುದು ಅಥವಾ ಏನಾದರೂ ತಪ್ಪು ಕೆಲಸ ಮಾಡಿ ಬಿಡಬಹುದು. ಇದನ್ನು ತಡೆಯಲು ಮಕ್ಕಳು ಇಷ್ಟಪಡುವ ದಾರಿಯಲ್ಲಿ ಅವರನ್ನು ಹತೋಟಿಗೆ ತರಲು ಇಲ್ಲಿದೆ ಸರಳ ಉಪಾಯ. 

How to make your child busy in healthy activities
Author
Bangalore, First Published Jan 19, 2022, 10:27 AM IST

ಈಗ ಹೆಚ್ಚು ಜನ ವರ್ಕ್ ಫ್ರಂ ಹೋಮ್ (Work from home) ಆಯ್ಕೆಯನ್ನೇ ಮಾಡಿರುತ್ತೀರಿ. ಎಲ್ಲಾ ಕಡೆಗಳಲ್ಲಿಯೂ ಹೆಚ್ಚುತ್ತಿರುವ ಕೊರೊನಾದಿಂದ ಸದ್ಯಕ್ಕೆ ನಮಗೆ ಉಳಿದಿರುವ ಮಾರ್ಗ ಇದೊಂದೇ. ಆದರೆ ಈ ಕಾರಣದಿಂದ ಮಕ್ಕಳ ಬಗ್ಗೆ ಕಡಿಮೆ ಗಮನ ನೀಡಲು ಸಾಧ್ಯವಿಲ್ಲ. ಪುಟ್ಟ ಮಕ್ಕಳಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿರುವುದಿಲ್ಲ. ಅವು ಯಾವ ದಾರಿಯಲ್ಲಿ ನಡೆಯಬೇಕು, ಯಾವುದು ಒಳ್ಳೆಯದು ಎಂಬುದು ಕಲಿಯಬೇಕಾದ ವಯಸ್ಸು ಇದಾಗಿರುತ್ತದೆ. ಇಂಥ ಸಮಯದಲ್ಲಿ ಅವುಗಳ ಗಮನ ಬೇರೆಡೆಗೆ  ಹೋಗದೆ ಕ್ರಿಯಾಶೀಲ ಕೆಲಸದಲ್ಲಿ ತೊಡಗುವಂತೆ ಮಾಡುವ ಜವಾಬ್ದಾರಿ ಪೋಷಕರದ್ದು. ತಂದೆ-ತಾಯಿ ಹೇಗೆ ವರ್ತಿಸುತ್ತಾರೆ ಅದನ್ನೇ ನೋಡಿ ಮಕ್ಕಳು ಕಲಿಯುತ್ತಾರೆ. ಹೀಗಿರುವಾಗ ನೀವು ನಿಮ್ಮ ವರ್ತನೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು. 

ಟಿವಿ, ಟ್ಯಾಬ್ ಹಾಗೂ ಮೊಬೈಲ್
ನೀವು ನಿಮ್ಮ ಆಫೀಸಿನ ಕೆಲಸದಲ್ಲಿ ಮಗ್ನರಾಗಿದ್ದರೆ  ಮಕ್ಕಳು ಅವರ ಪಾಡಿಗೆ ಟಿವಿ ಅಥವಾ ಮೊಬೈಲ್ ಇಲ್ಲದೆ ಟ್ಯಾಬ್  ಹಿಡಿದು ಕುಳಿತು ಬಿಡಬಹುದು.  ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಮೊಬೈಲ್ಗೆ(Mobile) ಅವಲಂಬಿತವಾಗುವುದು ಒಳ್ಳೆಯ ಅಭ್ಯಾಸವಲ್ಲ. ಒಮ್ಮೆ ಅವರು ಟಿವಿ, ಟ್ಯಾಬ್ ಹಾಗೂ ಮೊಬೈಲ್ನ ಮೇಲೆ ಅವಲಂಬಿತರಾದರೆ ಅದರಿಂದ ಹೊರತರುವುದು ಸ್ವಲ್ಪ ಕಷ್ಟವೇ. ಇವುಗಳಿಂದ ಮಕ್ಕಳ ಕಣ್ಣಿಗೆ ಪೆಟ್ಟಷ್ಟೇ ಅಲ್ಲ, ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾದರೆ ನಿಮ್ಮ ಮಕ್ಕಳನ್ನು ಈ ಅಭ್ಯಾಸದಿಂದ ಹೊರತರುವದಕ್ಕೆ ಹೀಗೆ ಮಾಡಿ. 

Children Food : ನಿಮ್ಮ ಮಕ್ಕಳು ಏನ್ ತಿಂತಾರೆ? ಆಹಾರ ಕ್ರಮ ಹೀಗಿರಬೇಕು!

ಆಟದ ಮೂಲಕ ಅವರ ಯೋಚನೆಗಳಿಗೆ (Imagination) ಶಕ್ತಿ ತುಂಬಿ
ಮುಂದೆ ನಿಮ್ಮ ಮಕ್ಕಳು ಯಾವ ದಾರಿ ಹಿಡಿಯಬಹುದು ಎಂಬುದರ ಪರಿಚಯ ಮಾಡಿಕೊಳ್ಳಲು ಇದು ಸರಿಯಾದ ಅವಕಾಶ. ನಿಮ್ಮ ಮಕ್ಕಳು ಕಥೆ ಹೇಳುವುದು ಇಲ್ಲವೇ ಹೊಸ  ಆವಿಷ್ಕಾರ (Invent) ಮಾಡುವ ಕಲೆಯನ್ನು ಹೊಂದಿರಬಹುದು. ಇದಕ್ಕಾಗಿ ನಿಮ್ಮ ಮಕ್ಕಳು ಯಾವುದೋ ಒಂದು ಘಟನೆಯನ್ನು (Situation) ತಮ್ಮ ಆಲೋಚನೆಯ ಪ್ರಕಾರ ನಟಿಸಲು ಹೇಳಬಹುದು. ಅಥವಾ ತಮ್ಮ ಗೊಂಬೆಗಳೊಂದಿಗೆ ಯಾವ ರೀತಿಯ ಕಥೆಯನ್ನು ಹೆಣೆದು ಆಟವಾಡುತ್ತಿದ್ದಾರೆ ಎಂಬುದನ್ನು ಗಮನಿಸಿಕೊಳ್ಳುವುದು ಇದೂ ಅಲ್ಲದೆ ಅವರು ನೋಡಿದ ಯಾವುದೇ ಸಿನಿಮಾವನ್ನು ಅಭಿನಯಿಸುವಂತೆ ಪ್ರೋತ್ಸಾಹ ನೀಡುವುದು- ಹೀಗೆ ಅವರಲ್ಲಿರುವ ಕಲೆಯನ್ನು ಹೊರ ಹಾಕುವುದಕ್ಕೆ ನೀವು ಬೆಂಬಲಿಸಬೇಕು. 

ಪಜಲ್ಗಳನ್ನು (Puzzle) ಬಿಡಿಸಲು ತಿಳಿಸುವುದು
ನೀವು ಸಣ್ಣವರಿದ್ದಾಗ ನಿಮ್ಮ ಹಿರಿಯರು ಕೇಳುತ್ತಿದ್ದ ಒಗಟುಗಳನ್ನು ನಿಮ್ಮ ಪುಟ್ಟ ಮಕ್ಕಳಿಗೆ ಕೇಳಿ ಅದನ್ನು ಬಿಡಿಸಲು ಹೇಳಬಹುದು. ಇದಕ್ಕೆ ಸಮಯವಿಲ್ಲವೆಂದರೆ ದೊಡ್ಡ ಪಜಲ್ಗಳನ್ನು ಅವರಿಗೆ ನೀಡಿ ಹೆಚ್ಚು ಸಮಯದ ತನಕ ಮಕ್ಕಳು ಅದೇ ಕೆಲಸದಲ್ಲಿ ಮಗ್ನರಾಗಿರುವ ಹಾಗೆ ನೋಡಿಕೊಳ್ಳಬಹುದು.  ಹೀಗೆ ಮಾಡುವುದರಿಂದ ನಿಮ್ಮ ಮಗುವಿಗೆ ಆಟವಾಡಿದ ಖುಷಿಯೂ ಸಿಗುತ್ತದೆ ಜೊತೆಗೆ ಅವರ ಕ್ರಿಯಾಶೀಲತೆ ಹಾಗೂ ಬುದ್ಧಿವಂತಿಕೆ ಕೂಡ ಹೆಚ್ಚುತ್ತದೆ. 

Youngest Father : ಆಟವಾಡೋ ವಯಸ್ಸಿಗೆ ತಂದೆಯಾಗಿದ್ದಾರೆ ಈ ಮಕ್ಕಳು!

ಮಣ್ಣಿನಲ್ಲಿ (Clay) ಆಟವಾಡಲು ಬಿಡಿ
ಜೇಡಿಮಣ್ಣು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯೋಗವನ್ನು ಹೊಂದಿದೆ.  ಮಣ್ಣಿನಲ್ಲಿ ಆಟವಾಡಿದರೆ ಬಟ್ಟೆ ಕೊಳೆ ಆಗುತ್ತದೆ ಎಂದು ಯೋಚಿಸುವುದನ್ನು ಬಿಟ್ಟು ನಿಮ್ಮ ಮಕ್ಕಳ ಪುಟ್ಟ ಮೆದುಳಿನಲ್ಲಿ ಆಲೋಚನೆಗಳು ಹಾಗೂ ಕ್ರಿಯಾಶೀಲತೆ ಹೆಚ್ಚಿಸುವ ಕಡೆ ಗಮನ ಕೊಡಿ. ಮಕ್ಕಳು ತಾವು ನೋಡಿದ ಪ್ರಾಣಿಯನ್ನು, ಚಿತ್ರಗಳನ್ನು ಅಥವಾ ಹಕ್ಕಿಗಳು ಹೀಗೆ  ತಮ್ಮ ಯೋಚನೆಗಳ ಅನುಸಾರವಾಗಿ ಮಣ್ಣಿನಲ್ಲಿ ಗೊಂಬೆಗಳನ್ನು ಮಾಡಲು ಹೇಳಿ ಕೊಡಿ.  ಪುಟ್ಟ ಮಕ್ಕಳು ತಾವು ನೋಡಿದ್ದೆಲ್ಲ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ.  ಮಣ್ಣಿನಲ್ಲಿ ಆಟವಾಡುವಾಗ ಕೂಡ ಮಣ್ಣನ್ನು ಬಾಯಿಗೆ ಹಾಕಿಕೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಚಿಂತಿಸುವ  ಅಗತ್ಯವಿಲ್ಲ. ಮಣ್ಣು ದೇಹಕ್ಕೂ ಕೂಡ ಒಳ್ಳೆಯದು. 

ಇನ್ನೊಂದು ಉಪಾಯವೆಂದರೆ ಆಹಾರ ತಯಾರಿಸಲು ಬಳಸುವ ಬಣ್ಣವನ್ನು ಗೋಧಿ ಹಿಟ್ಟಿನೊಂದಿಗೆ ಕಲಸಿ ಆಟವಾಡಲು ನೀಡಬಹುದು. ಇದರಿಂದ ಮಕ್ಕಳು ಹಿಟ್ಟನ್ನು ಬಾಯಿಗೆ ಹಾಕಿಕೊಂಡಾಗಲು ಯಾವುದೇ ತೊಂದರೆ ಇರುವುದಿಲ್ಲ. ನಿಮ್ಮ ಸುತ್ತಮುತ್ತ ಮಣ್ಣು ಸಿಗದೇ ಇದ್ದರೆ ಈ ರೀತಿ ಮಾಡಬಹುದು

Follow Us:
Download App:
  • android
  • ios