Asianet Suvarna News Asianet Suvarna News

Parenting Tips: ನಿಮ್ಮ ಮಗು ಯಾವ ಕ್ಷೇತ್ರದಲ್ಲಿ ಹೆಸರು ಮಾಡಬಲ್ಲದು? ಕಂಡು ಹಿಡಿಯುವುದು ಹೀಗೆ

ದೊಡ್ಡವನಾದ್ಮೇಲೆ ಏನಾಗ್ತೀಯಾ ಎಂದು ಮಕ್ಕಳಿಗೆ ಕೇಳ್ತಿರುತ್ತೇವೆ. ಆದ್ರೆ ಮಕ್ಕಳು ಹೇಳುವ ಉತ್ತರಕ್ಕೆ ಬೆಲೆ ನೀಡೋದಿಲ್ಲ. ನಮ್ಮ ಮಕ್ಕಳು ಈ ಕ್ಷೇತ್ರದಲ್ಲಿ ಮುಂದೆ ಹೋಗ್ಬೇಕೆಂಬ ಕಸನು ಕಾಣುವ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರ್ತಾರೆ. ಇದು ಮಕ್ಕಳ ಭವಿಷ್ಯ ಹಾಳು ಮಾಡುತ್ತೆ.
 

How To Identify Talent In A Child and groom them
Author
Bangalore, First Published Jun 29, 2022, 4:24 PM IST

ಪ್ರತಿ ಮಗು (Child) ವಿನಲ್ಲೂ ಒಂದಲ್ಲ ಒಂದು ಪ್ರತಿಭೆ (Talent ) ಇರುತ್ತೆ. ಅವರ ಪ್ರತಿಭೆಗೆ ಗೊಬ್ಬರ ಹಾಕಿದಾಗ ಫಲ ಸಿಗಲು ಸಾಧ್ಯ. ಮಕ್ಕಳ ಪ್ರತಿಭೆಗೆ ತಕ್ಕಂತೆ ಪಾಲಕರು ಪ್ರೋತ್ಸಾಹ ನೀಡದಾಗ ಮಕ್ಕಳು ಜೀವನದಲ್ಲಿ ಯಶಸ್ಸು (Success) ಕಾಣ್ತಾರೆ. ಆದ್ರೆ ಬಹುತೇಕ ಮಕ್ಕಳು ತಮ್ಮಿಷ್ಟದ ಬದಲಾಗಿ ಪಾಲಕರ ಇಷ್ಟದಂತೆ ನಡೆದುಕೊಳ್ಳಬೇಕಾಗುತ್ತದೆ. ಇಂಜಿನಿಯರ್, ಡಾಕ್ಟರ್ ಹೀಗೆ ದೊಡ್ಡ ಹುದ್ದೆಯಲ್ಲಿ ಮಕ್ಕಳನ್ನು ನೋಡಲು ಪಾಲಕರು ಬಯಸ್ತಾರೆ. ಅದೇ ಕಾರಣ ಅವರ ಪ್ರತಿಭೆ ಏನಿದೆ ಎಂಬುದನ್ನು ಗುರುತಿಸದೆ ಅವರಿಗೆ ಓದುವ ಒತ್ತಡ ಹೇರ್ತಾರೆ. ಮಗು ಜೀವನದಲ್ಲಿ ಯಶಸ್ವಿಯಾಗ್ಬೇಕು ಹಾಗೂ ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಹೊಂದಿರಬೇಕೆಂದ್ರೆ ನೀವು ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ಅತ್ಯಗತ್ಯ. ಹಾಗೆ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗುತ್ತದೆ. 

ದೊಡ್ಡ ವ್ಯಕ್ತಿಗಳ ಯಶಸ್ಸಿನ ಹಿಂದೆ ಅವರ ಪ್ರತಿಭೆ ಮತ್ತು ಆಯಾ ಕ್ಷೇತ್ರಗಳ ಮೇಲಿನ ಉತ್ಸಾಹವಿದೆ. ಅನೇಕ ಪಾಲಕರು ತಮಗೆಲ್ಲ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾದಲ್ಲಿರುತ್ತಾರೆ. ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಹೊಣೆ ನಮಗೆ ಗೊತ್ತಿದೆ. ನಾವು ಹಾಕಿದ ದಾರಿಯಲ್ಲಿ ಮಗು ನಡೆದ್ರೆ ಯಶಸ್ವಿ ವ್ಯಕ್ತಿಯಾಗುತ್ತಾರೆ ಹಾಗೆ ಜೀವನದಲ್ಲಿ ಸುಖ ಕಾಣ್ತಾರೆಂದು ಪಾಲಕರು ನಂಬಿರ್ತಾರೆ. ಆದ್ರೆ ಇದು ಸುಳ್ಳು. ಮೊದಲು ಮಗುವಿನ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಅದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ. 

ಮಗುವಿನ ಆಸಕ್ತಿಯನ್ನು ಅರ್ಥಮಾಡಿಕೊಳ್ಳಿ : ಮಗು ಯಾವ ವಿಷ್ಯದಲ್ಲಿ ಆಸಕ್ತಿ ಹೊಂದಿದೆ ಎಂಬುದನ್ನು ಕೇಳಿ ತಿಳಿಯುವುದು ಕಷ್ಟ. ಯಾಕೆಂದ್ರೆ ಮಕ್ಕಳು ಒಂದೊಂದು ಸಮಯದಲ್ಲಿ ಒಂದೊಂದು ಇಷ್ಟಪಡ್ತಾರೆ. ಆದ್ರೆ ನಿಮ್ಮ ಮಗು ಬಿಡುವಿನ ವೇಳೆಯಲ್ಲಿ ಯಾವ ಕೆಲಸಗಳನ್ನು ಮಾಡುವುದನ್ನು ಆನಂದಿಸುತ್ತದೆ ಎಂಬುದನ್ನು ನೋಡಿ. ಕೆಲವು ಮಕ್ಕಳು ನಿರ್ದಿಷ್ಟ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ. ಅದನ್ನು ನೀವು ಗಮನಿಸಬೇಕು. ನಿಮ್ಮ ಮಗುವಿನ ಸ್ವಾಭಾವಿಕ ಆಸಕ್ತಿಯ ಬಗ್ಗೆ ತಿಳಿದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪುರುಷರ ಈ ಗುಣಗಳು ಮಹಿಳೆಯರ ಮೂಡ್ ಆನ್ ಮಾಡತ್ತೆ, ಯಾವುದು ಆ ಗುಣಗಳು?

ಮಗುವಿನ ಅಧ್ಯಯನದ ಬಗ್ಗೆ ಗಮನ ನೀಡಿ : ನಿಮ್ಮ ಮಗು ಒಂದು ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ, ಅವನು ಆ ವಿಷಯದಲ್ಲಿ ಆಸಕ್ತಿ ಹೊಂದಿದ್ದಾನೆ ಅಥವಾ ಚುರುಕಾಗಿದ್ದಾನೆ ಎಂದರ್ಥ. ಕೆಲ ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿಯಿದ್ದರೆ ಮತ್ತೆ ಕೆಲ ಮಕ್ಕಳು ಗಣಿತದಲ್ಲಿ ಹೆಚ್ಚು ಅಂಕ ಗಳಿಸ್ತಾರೆ. ಇನ್ನು ಕೆಲ ಮಕ್ಕಳು ಭಾಷೆ ವಿಷ್ಯದಲ್ಲಿ ಹೆಚ್ಚು ಅಂಕ ಗಳಿಸ್ತಾರೆ. ಅದನ್ನು ನೀವು ಪತ್ತೆ ಮಾಡ್ಬೇಕು.

ಯಾವ ಚಟುವಟಿಕೆ ಮಗುವಿಗೆ ಸೂಕ್ತ?: ಮಗುವು ಸೃಜನಶೀಲತೆಯನ್ನು ಇಷ್ಟಪಟ್ಟರೆ ಅವರು ಕಲಾವಿದರಾಗಲು ಆಸಕ್ತಿ ಹೊಂದಿರಬಹುದು. ಕೆಲವು ಮಕ್ಕಳಿಗೆ ಸಂಗೀತವೆಂದರೆ ತುಂಬಾ ಇಷ್ಟವಾದರೆ ಕೆಲವು ಮಕ್ಕಳು ಕ್ರಿಕೆಟ್ ಆಡುವುದನ್ನು ತುಂಬಾ ಇಷ್ಟಪಡುತ್ತಾರೆ. ನಿಮ್ಮ ಮಗು ಏನು ಮಾಡುವುದನ್ನು ಆನಂದಿಸುತ್ತದೆ ಎಂಬುದನ್ನು ಗಮನಿಸಿ.

ಇದನ್ನೂ ಓದಿ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಭಯವನ್ನು ಹೋಗಲಾಡಿಸುವುದು ಹೇಗೆ ?

ಮಗುವಿನ ಕುತೂಹಲ ಎಲ್ಲಿದೆ?: ನಿಮ್ಮ ಮಗು ಒಂದು ವಿಷಯದಲ್ಲಿ ಆಸಕ್ತಿ ಹೊಂದಿದ್ದರೆ  ಅವನು ಅದರ ಬಗ್ಗೆ ಪಾಲಕರಿಗೆ  ಲೆಕ್ಕವಿಲ್ಲದಷ್ಟು ಪ್ರಶ್ನೆಗಳನ್ನು ಕೇಳುತ್ತಾನೆ. ಉದಾಹರಣೆಗೆ, ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಮಕ್ಕಳು ದೂರದರ್ಶಕದಿಂದ ಗ್ರಹಗಳನ್ನು ನೋಡಲು ಬಯಸಬಹುದು. ಮಗು ಖಗೋಳಶಾಸ್ತ್ರವನ್ನು ಇಷ್ಟಪಡುತ್ತದೆ ಎಂದು ಇದು ತೋರಿಸುತ್ತದೆ.

ಕಾಮೆಂಟ್ ಮಾಡಬೇಡಿ: ಅನೇಕ ಬಾರಿ ಪೋಷಕರು ಮಗುವಿನ ಆಸಕ್ತಿಯನ್ನು ಇಷ್ಟಪಡುವುದಿಲ್ಲ ಮತ್ತು ಅವರು ಅದರ ಬಗ್ಗೆ ನಕಾರಾತ್ಮಕ ಕಾಮೆಂಟ್ ಗಳನ್ನು ಮಾಡುತ್ತಾರೆ. ಈ ಕೆಲಸವು ಮಕ್ಕಳ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮಗು ಬಲಶಾಲಿಯಾಗ್ಬೇಕು, ದುರ್ಬಲವಾಗಿರಬಾರದು ಎಂದಾದ್ರೆ ಕಮೆಂಟ್ ಮಾಡುವ ಬದಲು ಅವರಿಗೆ ಪ್ರೋತ್ಸಾಹ ನೀಡಿ.

Follow Us:
Download App:
  • android
  • ios