Relationship Tips: ಜೊತೆಗಿರುವ ಸ್ನೇಹಿತರು ನಿಜವಾಗ್ಲೂ ಒಳ್ಳೇಯವ್ರಾ?

ನೀವು ಕೆಟ್ಟ ಸ್ನೇಹಿತರ ಸ್ನೇಹದಲ್ಲಿದ್ದೀರಾ? ಅವರು ನಿಮ್ಮನ್ನು, ಸ್ನೇಹವನ್ನು ದುರುಪಯೋಗಪಡಿಸಿಕೊಳ್ಳುತ್ತಿರಬಹುದು. ಅದರ ಬಗ್ಗೆ ಎಚ್ಚರಿಕೆ ಇರಲಿ. ಸ್ನೇಹಿತರು ಕೆಟ್ಟವರೆಂದು ಗುರುತಿಸುವುದು ಸುಲಭವಲ್ಲ. ಆದರೂ ಅವರ ಕೆಟ್ಟ ಸ್ವಭಾವದಿಂದ ಗುರುತಿಸಿ ದೂರ ಇಡಬೇಕಾಗುತ್ತದೆ. ಇಲ್ಲವಾದಲ್ಲಿ ನಿಮಗೂ ಹಾನಿಯೇ ಆಗುತ್ತದೆ.
 

How to find toxic friends in life and relationship tips to avoid bad friends

ಕೆಟ್ಟ ಜನರು ಎಲ್ಲೆಲ್ಲೂ ಇರುತ್ತಾರೆ. ಅವರು ನಮ್ಮ ಸ್ನೇಹಿತರೂ ಆಗಿರಬಹುದು. ಅರಿಯದೇ ಸಹವಾಸ ಮಾಡಿದ ಬಳಿಕ, ಅವರ ಗುಣಾವಗುಣಗಳನ್ನು ಅರಿತುಕೊಂಡ ಬಳಿಕ ಸ್ನೇಹದಿಂದ ದೂರವಾಗುತ್ತೇವೆ ಅಲ್ಲವೇ? ಅವರು ನಮಗೆ ಸರಿಹೊಂದುವುದಿಲ್ಲ ಎನ್ನುವುದೊಂದು ಕಾರಣ. ಯಾಕಾಗಿ ಸರಿಹೊಂದಿರುವುದಿಲ್ಲ? ಅವರ ಯಾವುದೋ ಗುಣ, ಗಾಸಿಪ್‌ ಮಾಡುವ ಸ್ವಭಾವ, ಚಾಡಿ ಹೇಳುವ ಬುದ್ಧಿ, ಅತಿಯಾಗಿ ಲೇವಡಿ, ಟೀಕೆ ಮಾಡುವ ಬುದ್ಧಿಗಳಿಗೆ ರೋಸಿಹೋಗಿರುತ್ತೇವೆ. ಅಂಥವರೇ ಕೆಟ್ಟ ಸ್ನೇಹಿತರು. ಕೆಲವೊಮ್ಮೆ ಅವರ ಸ್ವಭಾವ ತಿಳಿದರೂ ದೂರವಾಗಲು ಸಾಧ್ಯವಾಗುವುದಿಲ್ಲ. ಆಗ ಅವರೊಂದಿಗೆ ಎಚ್ಚರಿಕೆಯಿಂದ ಇರುವುದೇ ಉತ್ತಮ. ಆದರೆ, ಕೆಲವೊಮ್ಮೆ ಸ್ನೇಹಿತರು ಕೆಟ್ಟವರು ಎನ್ನುವುದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅವರ ಮೇಲೆ ನಮಗೆ ಅಷ್ಟು ವಿಶ್ವಾಸ ಇರುತ್ತದೆ, ಅವರನ್ನು ನಾವು ಅಷ್ಟು ಇಷ್ಟಪಟ್ಟಿರುತ್ತೇವೆ. ಕೆಟ್ಟ ಸ್ನೇಹಿತರ ಸಹವಾಸದಲ್ಲಿ ನಮಗೂ ಕೆಟ್ಟದ್ದೇ ಆಗುತ್ತದೆಯೇ ವಿನಾ ಹಿತವಾಗುವುದು ಕಡಿಮೆ. ಅವರೊಂದಿಗೆ ಪದೇ ಪದೆ ಅಹಿತಕರ ಘಟನೆಗಳು ನಡೆಯುತ್ತಿದ್ದರೂ, ಅವರು ನಿಮ್ಮನ್ನೇ ಎಲ್ಲದಕ್ಕೂ ದೂಷಿಸುತ್ತಿದ್ದರೂ ಅವರಿಂದ ದೂರವಾಗದೆ ಸುಮ್ಮನಿರುವುದು ಮೂರ್ಖತನವಾಗುತ್ತದೆ. ಹೀಗಾಗಿ, ಸ್ನೇಹಿತರು ನಿಜಕ್ಕೂ ಕೆಟ್ಟವರಾಗಿದ್ದರೆ ಅದನ್ನು ಗುರುತಿಸುವುದು ಮುಖ್ಯ. 

•    ಪದೇ ಪದೆ ಕ್ರೂರವಾಗಿ (Cruel) ಟೀಕೆ (Criticise)
ಟೀಕೆಗೂ ಕ್ರೌರ್ಯಕ್ಕೂ ಭಾರೀ ವ್ಯತ್ಯಾಸವಿದೆ. ನಿಮ್ಮ ಸ್ನೇಹಿತೆ ಅಥವಾ ಸ್ನೇಹಿತ ಪದೇ ಪದೆ ನಿಮಗೆ ನೋವಾಗುವಂತೆ (Hurt) ಟೀಕಿಸುತ್ತಾರಾ? ನೀವು ಮಾಡುವ ಎಲ್ಲದರಲ್ಲೂ ತಪ್ಪನ್ನು ಕಂಡುಹಿಡಿದು ಕ್ರೂರವಾಗಿ ಟೀಕಿಸುವುದಷ್ಟೇ ಅವರ ಕೆಲಸವಾ? ಹಾಗಿದ್ದರೆ ಎಚ್ಚೆತ್ತುಕೊಳ್ಳಿ. ನಿಮ್ಮ ಬಗ್ಗೆ ಕಾಳಜಿ (Care) ಹೊಂದಿರುವ ಸ್ನೇಹಿತರಾದರೆ ನಿಮ್ಮನ್ನು ನೋವಿಗೆ ತುತ್ತು ಮಾಡುವುದಿಲ್ಲ. ಬದಲಿಗೆ ನಿಮ್ಮ ತಪ್ಪುಗಳ (Mistakes) ಬಗೆಗೆ ಎಚ್ಚರಿಸುತ್ತಾರೆ.

Relationship Tips: ಲವ್ ಗುರುವಾದ ದೀಪಿಕಾ, ಯುವ ಜೋಡಿಗೆ ಹೇಳೋದೇನು?

•    ಮಾತುಕತೆ, ನಿರ್ಧಾರದಲ್ಲಿ (Decision) ಡಾಮಿನೇಟ್‌ (Dominate)
ಸ್ನೇಹಿತರೆಂದರೆ (Friends) ಸಮಾನ ಜೀವಿಗಳು. ಆರೋಗ್ಯಕರ ಸ್ನೇಹಕ್ಕೆ ಹೊಂದಾಣಿಕೆ (Adjustment) ಮುಖ್ಯ. ಆದರೆ, ನಿಮ್ಮ ಸ್ನೇಹಿತ ಎಲ್ಲದಕ್ಕೂ ತಾನೇ ಮೇಲು ಎಂದರೆ, ಎಲ್ಲವನ್ನೂ ತಾನೇ ನಿರ್ಧಾರ ಮಾಡಿದರೆ, ನಿಮ್ಮ ಅಭಿಪ್ರಾಯಗಳನ್ನು (Opinion) ಪರಿಗಣಿಸದೇ ಇದ್ದರೆ ಅದು ಖಂಡಿತವಾಗಿ ಕೆಟ್ಟ (Toxic) ಸ್ನೇಹ. ನಿಮ್ಮ ಭಾವನೆಗಳನ್ನು ಅವರು ಪರಿಗಣಿಸುವುದೇ ಇಲ್ಲ. ತಾವೇ ಅತಿಯಾಗಿ ಮಾತನಾಡುತ್ತಾರೆ. ನಿಮ್ಮ ಮಾತುಗಳನ್ನು ಕೇಳುವುದೂ ಇಲ್ಲ.

•    ತಪ್ಪುಗಳ ಜವಾಬ್ದಾರಿ (Responsibility) ತೆಗೆದುಕೊಳ್ಳಲ್ಲ
ಕಳೆದ ಬಾರಿ ಅವರು ನಿಮ್ಮನ್ನು ಕೆಟ್ಟದಾಗಿ ಕಮೆಂಟ್‌ ಮಾಡಿದಾಗ, ಟೀಕಿಸಿದಾಗ ನಿಮಗೆಷ್ಟು ನೋವಾಗಿತ್ತು ಎನ್ನುವುದನ್ನು ಹೇಳಿದರೂ ನಿಮ್ಮ ಸ್ನೇಹಿತರು ಸಾರಿ (Sorry) ಕೇಳುವುದಿಲ್ಲ ಎಂದಾದರೆ ಅವರಲ್ಲಿ ಆ ಬಗ್ಗೆ ಪಶ್ಚಾತ್ತಾಪವೇ ಇಲ್ಲ ಎಂದರ್ಥ. ಬದಲಿಗೆ, ಅದು ತಪ್ಪು ಎಂದೂ ಒಪ್ಪಿಕೊಳ್ಳದೆ ಸಮರ್ಥನೆಯನ್ನೇ ಮಾಡುತ್ತಿದ್ದರೆ ಅವರು ಒಳ್ಳೆಯ ಸ್ನೇಹಿತರಲ್ಲ.

•    ಒರಟಾದ (Rude) ನಡವಳಿಕೆ
ಸ್ನೇಹಿತರು ಪರಸ್ಪರ ವಿನೋದಕ್ಕಾಗಿ (Fun) ಲೇವಡಿ ಮಾಡಿಕೊಳ್ಳುವುದು ಅತಿ ಸಾಮಾನ್ಯ. ಆದರೆ, ಅದಕ್ಕೂ ಒಂದು ಮಿತಿ ಇರುತ್ತದೆ. ಲೇವಡಿ ಹೆಸರಿನಲ್ಲಿ ಅವಮಾನ (Insult) ಮಾಡುವುದು ಸಲ್ಲದು. ಇತರರ ಎದುರು ತೀವ್ರ ಮುಜುಗರ ಉಂಟುಮಾಡುವುದು ಸಲ್ಲದು. ನಿಮ್ಮನ್ನು ಕುಗ್ಗಿಸುವುದು (Inferior) ಒಳ್ಳೆಯದಲ್ಲ. ವ್ಯಕ್ತಿತ್ವದ (Character) ಮೇಲೆ ದಾಳಿ ಮಾಡುವುದು, ನಿಮ್ಮನ್ನು ಉದ್ದೇಶಿಸಿ ಕೆಟ್ಟ ಜೋಕ್‌ (Joke) ಮಾಡುವುದು ಸರಿಯಲ್ಲ. ಇವೆಲ್ಲವೂ ನಿಮ್ಮ ಸ್ನೇಹಿತರಲ್ಲಿದ್ದರೆ ಅವರನ್ನು ದೂರವೇ ಇಟ್ಟುಬಿಡಿ.

ನೀವೇನಾಗ್ತೀರ ಅನ್ನೋದು ನಿಮ್ಮ ಫ್ರೆಂಡ್ ನೋಡಿ ಹೇಳಬಹುದು..!

•    ಅಗತ್ಯವಿದ್ದಾಗ ಮಾತ್ರ ನೆನಪು
ಕೆಲವರು ಅವರಿಗೆ ಏನಾದರೂ ಅಗತ್ಯವಿರುವಾಗಷ್ಟೇ (Need) ಸ್ನೇಹಿತರನ್ನು ನೆನಪು ಮಾಡಿಕೊಳ್ಳುತ್ತಾರೆ. ಸ್ನೇಹದಲ್ಲಿ ಕೊಡು-ಕೊಳ್ಳುವಿಕೆ ಇದ್ದೇ ಇರುತ್ತದೆ. ಆದರೆ, ನಿಮ್ಮ ಸ್ನೇಹಿತರು ಕೇವಲ ನಿಮ್ಮಿಂದ ಪಡೆಯುವುದಕ್ಕೆ ಮಾತ್ರ ಯತ್ನಿಸಿದರೆ ಅವರು ತೀರ ಸ್ವಾರ್ಥಿಯಾಗಿರಬಹುದು. ಅವರು ಸಮಸ್ಯೆ (Problem) ಇದ್ದಾಗ ಮಾತ್ರ ನಿಮ್ಮ ಬಳಿ ಬರುತ್ತಾರೆ. ಅಥವಾ ನಿಮ್ಮದು ಒನ್‌ ಸೈಡೆಡ್‌ ಸ್ನೇಹವಾಗಿರಬಹುದು. 

Latest Videos
Follow Us:
Download App:
  • android
  • ios