ದಾಂಪತ್ಯ ದೀರ್ಘಕಾಲ ಬಾಳ್ಬೇಕೆಂದ್ರೆ ಸುಲಭವಲ್ಲ. ನಾನಾ ಸವಾಲುಗಳ ಮಧ್ಯೆ ಹೊಂದಾಣಿಕೆ ಮುಖ್ಯವಾಗುತ್ತದೆ. ಪ್ರತಿ ದಿನ ಕಲಿಕೆಯಿರಬೇಕು. ಈ ಬಗ್ಗೆ ಬಾಲಿವುಡ್ ಬೆಡಗಿ ದೀಪಿಕಾ ಕೂಡ ಸಲಹೆ ನೀಡಿದ್ದಾರೆ.

ಬಾಲಿವುಡ್ ಜೋಡಿಗಳ ಮೇಲೆ ಅಭಿಮಾನಿಗಳ ಕಣ್ಣಿರುತ್ತದೆ. ಅನೇಕರಿಗೆ ಅವರೇ ರೋಲ್ ಮಾಡೆಲ್ ಆಗಿರ್ತಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೋಡಿಯ ಬಗ್ಗೆಯೂ ಅಭಿಮಾನಿಗಳಿಗೆ ವಿಶೇಷ ಆಸಕ್ತಿಯಿದೆ. ಈಗಿನ ದಿನಗಳಲ್ಲಿ ಸ್ಟಾರ್ಸ್ ವಿಚ್ಛೇದನ ಹೆಚ್ಚಾಗಿರುವ ಕಾರಣ, ಯಾವುದೇ ಪಾರ್ಟಿಯಲ್ಲಿ ದೀಪಿ ಬೇರೆ, ರಣವೀರ್ ಬೇರೆ ಕಾಣಿಸಿಕೊಂಡ್ರೆ ಗಾಸಿಫ್ ಶುರುವಾಗುತ್ತೆ. ಅದೇನೆ ಇರಲಿ, ದೀಪಿಕಾ ಹಾಗೂ ರಣವೀರ್ ತಮ್ಮ ದಾಂಪತ್ಯದ ಬಗ್ಗೆ ಹೆಚ್ಚೇನು ಹೇಳಿಕೊಂಡಿಲ್ಲವಾದ್ರೂ ಕೆಲವೊಂದನ್ನು ಅಭಿಮಾನಿಗಳ ಮುಂದೆ ಶೇರ್ ಮಾಡಿದ್ದಾರೆ.

ದೀಪಿಕಾ (Deepika) ಪಡುಕೋಣೆ ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ರಣವೀರ್ (Ranveer) ಹಾಗೂ ತನ್ನ ಸಂಬಂಧ ಹೇಗಿದೆ ಎಂಬುದನ್ನು ಹೇಳಿದ್ದರು. ಸಂಬಂಧ ಬಲಪಡಿಸಲು ಬುದ್ಧಿವಂತ ಮಾರ್ಗವನ್ನು ಅನುಸರಿಸುತ್ತಿರುವ ದೀಪಿಕಾ ಜೋಡಿ, ಅದನ್ನು ಯುವ ಜೋಡಿ ಪಾಲಿಸುವಂತೆ ಸಲಹೆ ನೀಡಿದ್ದಾರೆ.

Relationship Tips: ಅತಿಯಾಗಿ ಹೊಂದಾಣಿಕೆ ಮಾಡ್ಕೊಳ್ತಾ ಇದೀರಾ? ಎಚ್ಚರಿಕೆ ಹಂತ ಯಾವ್ದು?

ನಾನು ನಿಮಗೆ ಲವ್ (Love) ಗುರುವಿನಂತೆ ಕಾನ್ಬಹುದು ಎನ್ನುವ ದೀಪಿಕಾ, ದೀರ್ಘಕಾಲ ಸಂಬಂಧ ಉಳಿಯಬೇಕೆಂದ್ರೆ ಕೆಲವೊಂದನ್ನು ಪಾಲಿಸಬೇಕು ಎಂದಿದ್ದಾರೆ. ಸಿನಿಮಾ (movie) ಹಾಗೂ ಅಕ್ಕಪಕ್ಕದವರ ಜೀವನ ನೋಡ್ತಾ ನಾವು ಬೆಳೆಯುತ್ತೇವೆ. ಆದ್ರೆ ಎಲ್ಲ ಸಂಬಂಧವೂ ಒಂದೇ ಅಲ್ಲ. ಪ್ರತಿ ಸಂಬಂಧವು ತನ್ನದೇ ಆದ ರೀತಿಯಲ್ಲಿ ಅನನ್ಯವಾಗಿದೆ. ಇದನ್ನು ನಾವು ಒಪ್ಪಿಕೊಳ್ಳಬೇಕು. ಹಾಗೆಯೇ ಮದುವೆ ಅಥವಾ ಪ್ರೀತಿಯ ಸಂಬಂಧ ಸುಧಾರಿಸಲು ಹೆತ್ತವರಿಂದ ಅಥವಾ ಅವರ ಇಡೀ ಪೀಳಿಗೆಯಿಂದ ನಾವು ಕಲಿಯಬೇಕಾಗಿದ್ದು ಸಾಕಷ್ಟಿದೆ ಎನ್ನುತ್ತಾರೆ ದೀಪಿಕಾ. ರಣವೀರ್ ಹಾಗೂ ದೀಪಿಕಾ ಕೂಡ ಹಿರಿಯರಿಂದ ಅನೇಕ ಸಂಗತಿಯನ್ನು ಕಲಿಯುತ್ತಿದ್ದಾರಂತೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರಂತೆ.

ದಾಂಪತ್ಯ ದೀರ್ಘಕಾಲ ಬಾಳಲು ಏನು ಮಾಡ್ಬೇಕು? : 

ಬೇರೆಯವರ ಸಂಬಂಧದ ಜೊತೆ ನಿಮ್ಮ ಸಂಬಂಧದ ಹೋಲಿಕೆ ಬೇಡ : ನಿಮ್ಮ ದಾಂಪತ್ಯ ಜೀವನವನ್ನು ಬೇರೆಯವರ ದಾಂಪತ್ಯ ಜೀವನಕ್ಕೆ ಹೋಲಿಕೆ ಮಾಡುವುದು ಸೂಕ್ತವಲ್ಲ. ಪ್ರತಿ ಸಂಬಂಧವೂ ಪರಸ್ಪರರ ದೌರ್ಬಲ್ಯ, ಸಾಮರ್ಥ್ಯ, ಅನುಭವ, ವರ್ತನೆಯನ್ನು ಅವಲಂಬಿಸಿರುತ್ತದೆ. ಬೇರೆಯವರು ಸಂತೋಷ ಕಾಣ್ತಿರುವ ವಿಷ್ಯದಲ್ಲೇ ನಿಮಗೂ ಆನಂದ ಸಿಗ್ಬೇಕು ಅಂದೇನಿಲ್ಲ. ನಿಮ್ಮ ಹಾಗೂ ಬೇರೆ ದಂಪತಿಯ ಸಮಸ್ಯೆ ಒಂದೇ ಆಗಿದ್ರೂ ಪರಿಹಾರದ ಮಾರ್ಗ ಬೇರೆ ಬೇರೆ ಎಂಬುದನ್ನು ನೀವು ತಿಳಿದಿರಬೇಕು. ಬೇರೆಯವರನ್ನು ಹೋಲಿಕೆ ಮಾಡ್ತಾ ಜೀವನ ನಡೆಸಲು ಮುಂದಾದ್ರೆ ದಾಂಪತ್ಯ ಸುಖ ಕನಸಿನ ಮಾತಾಗುತ್ತದೆ. 

ಲೈಂಗಿಕ ಜೀವನ ಚೆನ್ನಾಗಿರಲು ಮಹಿಳೆಯರು ಮಾಡಬೇಕಾದ್ದಿಷ್ಟು

ಇಬ್ಬರ ಮಧ್ಯೆ ತಾಳ್ಮೆ ಇರಬೇಕು : ನೀವು ಹೇಳಿದ್ದಕ್ಕೆಲ್ಲ ಸಂಗಾತಿ ತಲೆಯಾಡಿಸಬೇಕು ಎಂಬುದಿಲ್ಲ. ಇಬ್ಬರ ಆಲೋಚನೆ, ಆಸೆ ಬೇರೆಯಾಗಿರುತ್ತದೆ. ಇಬ್ಬರ ಆಲೋಚನೆಯಲ್ಲಿ ಭಿನ್ನಾಭಿಪ್ರಾಯ ಬಂದ್ರೆ ಅದ್ರಲ್ಲಿ ತಪ್ಪಿಲ್ಲ. ಈ ಸಮಯದಲ್ಲಿ ತಾಳ್ಮೆ ಇರಬೇಕು. ನೀವು ತಾಳ್ಮೆಯಿಂದ ವರ್ತಿಸಿದ್ರೆ ಸಂಬಂಧವನ್ನು ಬಲಪಡಿಸಬಹುದು. ಆತುರದ ನಿರ್ಧಾರ, ಎಲ್ಲದರಲ್ಲೂ ತನ್ನದೇ ನಡೆಯಬೇಕು ಎನ್ನುವ ಹಠ ಸಂಬಂಧವನ್ನು ಹಾಳು ಮಾಡುತ್ತದೆ. ತಾಳ್ಮೆ ನಿಮ್ಮ ತಿಳುವಳಿಕೆ ಹಾಗೂ ದೃಷ್ಟಿಕೋನವನ್ನು ವಿಸ್ತರಿಸುವ ಕೆಲಸ ಮಾಡುತ್ತದೆ.

ಹಿರಿಯರಿಂದ ಸಂಬಂಧ ಸುಧಾರಣೆ ಕಲೆ ಕಲಿಯಿರಿ : ನಮ್ಮ ತಂದೆ ತಾಯಿ ಸಮಸ್ಯೆ ಬಂದಾಗ ಏನು ಮಾಡ್ತಿದ್ದರು, ಕುಟುಂಬ ನಿರ್ವಹಣೆಗೆ ಏನೆಲ್ಲ ಪ್ರಯತ್ನ ನಡೆಸುತ್ತಿದ್ದರು, ಇಬ್ಬರ ಮಧ್ಯೆ ಹೊಂದಾಣಿಕೆ ಹೇಗಿತ್ತು ಎಂಬುದನ್ನು ನಾವು ಬಾಲ್ಯದಲ್ಲಿ ನೋಡಿರ್ತೇವೆ. ನಮ್ಮ ದಾಂಪತ್ಯದಲ್ಲಿ ನಾವಿದನ್ನು ಮಾರ್ಗದರ್ಶನವಾಗಿ ಪಡೆಯಬೇಕು. ಏನು ಮಾಡ್ಬೇಕು, ಏನು ಮಾಡ್ಬಾರದು ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ಪಾಲಿಸಬೇಕು. ಹಿಂದಿನ ಕಾಲದ ಜನರು ಅನುಸರಿಸ್ತಿದ್ದ ಕೆಲ ಗುಣಗಳನ್ನು ನೀವು ನಿಮ್ಮ ಜೀವನದಲ್ಲಿ ಸೇರಿಸಿಕೊಳ್ಳಬೇಕು. ಇದ್ರ ಮೂಲಕ ನಿಮ್ಮ ಸಂಬಂಧ ಸುಧಾರಿಸುವ ಪ್ರಯತ್ನ ನಡೆಸಬೇಕು.