ಕಳೆದ ವರ್ಷ ಆಗಷ್ಟೇ ಹುಟ್ಟಿದ ಪಾಪು ಫೋಟೋ ಸಿಕ್ಕಾಪಟ್ಟೆ ವೈರಲ್ ಆಯ್ತು. ಸಾಮಾನ್ಯವಾಗಿ ನವಜಾತ ಶಿಶುಗಳು ಅಳೋದು, ಹಾಲು ಕುಡಿಯೋದನ್ನಷ್ಟೇ ಮಾಡುತ್ತವೆ. ಆದರೆ ಈ ಪಾಪು ಮಾತ್ರ ಹುಟ್ಟಿದ ಕೂಡಲೇ ಅಪ್ಪನ ದನಿ ಕೇಳಿ ಬೊಚ್ಚು ಬಾಯಿ ಅಗಲಿಸಿ ನಕ್ಕಿತು. ಆ ಅಪ್ಪನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಆ ಅಪ್ಪನ ಆಗಿನ ಸ್ಥಿತಿ ವರ್ಣನೆಗೆ ನಿಲುಕದ್ದು. ಆ ಅಪ್ಪ ಮನದುಂಬಿ ನಕ್ಕ.

ಆ ಕ್ಷಣ ಕ್ಯಾಮರದಲ್ಲಿ ಕ್ಯಾಪ್ಚರ್ ಆಯಿತು. ಮಾತ್ರವಲ್ಲ ಜಗತ್ತಿನಾದ್ಯಂತ ಸುದ್ದಿಯಾಯ್ತು. ಏಕೆಂದರೆ ಹುಟ್ಟಿದ ಮಗು ನಕ್ಕಿದ್ದನ್ನು ಆವರೆಗೆ ಕಂಡವರಿರಲಿಲ್ಲ.  ಆಮೇಲೆ ಕೆಲವರು ಆ ಅಪ್ಪನನ್ನು ಮಾತನಾಡಿಸಿದಾಗ ಒಂದು ವಿಷಯ ಗೊತ್ತಾಯ್ತು. ಆ ಮಗು ಅಮ್ಮನ ಹೊಟ್ಟೆ ಸೇರಿದಾಗಿನಿಂದ ಆ ಅಪ್ಪ ನಿತ್ಯವೂ ಅದರ ಸಮೀಪ ಹೋಗಿ ಮಾತನಾಡುತ್ತಿದ್ದ. ಏನೇನೋ ಕತೆ ಹೇಳುತ್ತಿದ್ದ. ನಿನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ ಅನ್ನುತ್ತಿದ್ದ. ಇದು ಆ ಅಪ್ಪನ ದಿನಚರಿಯ ಭಾಗವೇ ಆಗಿತ್ತು.

ಹಾಗೆ ಅಪ್ಪನ ದನಿ ಕೇಳಿಸಿಕೊಂಡಿದ್ದ ಪಾಪು, ಅಮ್ಮ ಹೊಟ್ಟೆಯಿಂದ ಹೊರಬಂದ ಮೇಲೆ ಅವನ ದನಿ ಕೇಳಿದ್ದೇ, ಎಷ್ಟೋ ದಿನಗಳ ಸ್ನೇಹಿತೆಯಂತೆ ಮುದ್ದಾಗಿ ನಕ್ಕಿತು. ಆ ಅಪ್ಪನಿಗೆ ಬದುಕಿನ ಅತ್ಯಂತ ಖುಷಿಯ ಕ್ಷಣಗಳನ್ನು ಕೊಟ್ಟಿತು.  ಈಗಲೂ ಆ ಅಪ್ಪ ಮಗಳು ಇನ್‌ಸ್ಟಾಗ್ರಾಂನಲ್ಲಿ ಕಾಣಲು ಸಿಗುತ್ತಾರೆ. ಆ ಬೊಚ್ಚು ಬಾಯಿಯ ಮಗುವಿನ ಬಾಯಲ್ಲೀಗ ಎಳೆಯ ಹಲ್ಲುಗಳು ಮೂಡಲಾರಂಭಿಸಿದೆ. ಆ ಪುಟಾಣಿ ದೇವತೆ ಈಗ ಅಪ್ಪನ ಹೆಗಲೇರಿ ನಗುತ್ತಿದ್ದಾಳೆ.

 

ಪತಿಯಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಇಲ್ಲಿವೆ ಉಪಾಯ

 

ಅಂದ ಹಾಗೆ ಈ ಪಾಪುವಿನ ಹೆಸರು ಅಂಟೋನೆಲ್ಲಾ ಅಂತ. ಬ್ರೆಜಿಲ್ ನ ಹಡಗಿನಲ್ಲಿ ಸೈನಿಕನಾಗಿ ಕೆಲಸ ಮಾಡುವ ಅವಳಪ್ಪನ ಹೆಸರು ಫ್ಲ್ಯಾವಿಯೋ. ಕುಕ್ ಆಗಿ ಕೆಲಸ ಮಾಡೋ ಅಮ್ಮ ತರ್ಸಿಲ್ಲಾ.

 

 

ನಮ್ಮ ಪುರಾಣಗಳಲ್ಲೂ ಹೊಟ್ಟೆಯಲ್ಲಿರುವ ಭ್ರೂಣ ನಮ್ಮ ಮಾತು ಕೇಳಿಸಿಕೊಳ್ಳುತ್ತೆ ಅನ್ನೋದಕ್ಕೆ ಕತೆ ಇದೆ. ಅಭಿಮನ್ಯು ಅಮ್ಮ ಸುಭದ್ರೆಯ ಹೊಟ್ಟೆಯಲ್ಲಿದ್ದಾಗ ಶ್ರೀಕೃಷ್ಣ ಅವಳಿಗೆ ಚಕ್ರವ್ಯೂಹವನ್ನು ಭೇದಿಸಿ ಒಳಹೋಗುವ ವಿದ್ಯೆಯನ್ನು ವಿವರಿಸುತ್ತಾನೆ. ಒಂದು ಹೊತ್ತಿನ ಬಳಿಕ ಸುಭದ್ರೆ ನಿದ್ರೆ ಜಾರುತ್ತಾಳೆ. ಆದರೆ ಯಾರೋ ಹೂಂಗುಡುವುದು ಕೇಳುತ್ತದೆ. ಯಾರು ಅಂತ ನೋಡಿದರೆ ಅದು ಆಕೆಯ ಹೊಟ್ಟೆಯಲ್ಲಿರುವ ಅಭಿಮನ್ಯು ಅಂತ ಗೊತ್ತಾಗುತ್ತದೆ. ಆಮೇಲೆ ಕೃಷ್ಣ ಕಥೆ ನಿಲ್ಲಿಸುತ್ತಾನೆ.

ಹುಡುಗೀಯರಿಗಿಂತ ಆ ಆಂಟೀಯರ ಕಂಡ್ರೆ ಇವನಿಗೆ ಇಷ್ಟವಂತೆ
 

ವೈದ್ಯಕೀಯವೂ ಅಮ್ಮನ ಹೊಟ್ಟೆಯಲ್ಲಿರುವ ಮಗು ಆಪ್ತರ ದನಿ, ಮ್ಯೂಸಿಕ್ ಇತ್ಯಾದಿಗಳನ್ನು ಕೇಳಿಸಿಕೊಳ್ಳುತ್ತದೆ ಎಂಬುವುದನ್ನು ಒಪ್ಪುತ್ತದೆ. ಅದಕ್ಕೆ ವಿದೇಶದಲ್ಲೆಲ್ಲ ಸಮುದ್ರದ ಪಕ್ಕ ಗರ್ಭಿಣಿಯರು ಹೋಗಿ ಗಂಟೆಗಟ್ಟಲೆ ಕೂರುತ್ತಾರೆ. ಮಗುವಿಗೆ ಸಮುದ್ರದ ದನಿ ಕೇಳಿಸುವುದಕ್ಕಾಗಿ. ನಮ್ಮಲ್ಲಿ ಜೋರಾಗಿ ವಿಷ್ಣು ಸಹಸ್ರನಾಮ ಓದುತ್ತಾರೆ. ಅದನ್ನು ಕೇಳಿಸಿಕೊಳ್ಳುವ ಮಗುವಿನ ಮನಸ್ಥಿತಿ ಹೊಟ್ಟೆಲಿರೋ ಪಾಪು ಜೊತೆಗೆ ಮಾತಾಡೋದು ಹೇಗೆ?

ಶಾಂತವಾಗಿರುತ್ತೆ ಎಂಬ ನಂಬಿಕೆ.
 

ಅದೇ ರೀತಿ ಎಷ್ಟೋ ಜನ ಮಗು ಹೊಟ್ಟೆಯಲ್ಲಿರುವಾಗಲೇ ಮ್ಯೂಸಿಕ್ ಕೇಳಿಸೋ ಅಭ್ಯಾಸ ಮಾಡುತ್ತಾರೆ. ಪಾಪು ಹೊಟ್ಟೆಯಿಂದ ಹೊರಬಂದ ಮೇಲೆ ಎಷ್ಟೇ ಗಲಾಟೆ ಮಾಡಿ ಅಳುತ್ತಿದ್ದರೂ ಆ ಮ್ಯೂಸಿಕ್ ಕೇಳಿದ ತಕ್ಷಣ ಸುಮ್ಮನಾಗಿ ಬಿಡುತ್ತೆ. ಹೀಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ಅದರ ಜೊತೆಗೆ ಮಾತನಾಡೋದು, ಮ್ಯೂಸಿಕ್ ಕೇಳಿಸೋದು ಇತ್ಯಾದಿ ಮಾಡಿ. ನಾಲ್ಕು ತಿಂಗಳಿಂದ ಮಗುವಿನ ಜನನದವರೆಗೆ ಹೀಗೆ ಮಾಡಿದರೆ ಉತ್ತಮ. ಉತ್ತಮ ಅಭಿರುಚಿಯ, ಪ್ರಶಾಂತವಾದ ಮ್ಯೂಸಿಕ್‌ ಕೇಳಿದರೆ ಮಗು ಕೂಡ ಪ್ರಶಾಂತವಾಗಿ ಇರುತ್ತೆ ಅನ್ನುವುದು ಅಧ್ಯಯನಗಳಿಂದ ರುಜುವಾತಾಗಿದೆ. ಆಮೇಲೂ ಮಗು ಹಾಗೂ ಗರ್ಭಿಣಿಯ ಆರೋಗ್ಯ ಕಾಪಾಡಿಕೊಳ್ಳೋಕೆ ಮ್ಯೂಸಿಕ್‌ ಹೆಲ್ಪ್‌ ಮಾಡುತ್ತೆ.