ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ನಾಯಿಯ ತನ್ನ ಮಾಲೀಕನಿಗೆ ನೀಡುತ್ತಿರುವ ಆಸರೆ, ನೆರವಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿಶೇಷ ಚೇತನ ವ್ಯಕ್ತಿಯನ್ನು ತಳ್ಳುತ್ತಾ ನಗರ ಸುತ್ತಾಡಿಸುವ ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ.
ನವದೆಹೆಲಿ(ಅ.21): ವಿಶೇಷ ಚೇತನ ವ್ಯಕ್ತಿ ವ್ಹೀಲ್‌ಚೇರ್‌ನಲ್ಲೇ ಸುತ್ತಾಟ. ಆದರೆ ಹೀಗೆ ಸುತ್ತಾಡಲು ಯಾರಾದರೊಬ್ಬರ ಸಹಾಯ ಅಗತ್ಯ. ಆದರೆ ಇಲ್ಲಿ ವಿಶೇಷ ಚೇತನ ವ್ಯಕ್ತಿಗೆ ಇತರ ಯಾವುದೇ ವ್ಯಕ್ತಿಗಳು ನೆರವು ನೀಡಿಲ್ಲ. ಹಾಗಂತ ಈ ವ್ಹೀಲ್‌ಚೇರ್ ಆಟೋಮೇಟೆಡ್, ಎಲೆಕ್ಟ್ರಿಕ್, ಮೋಟಾರ್ ಯಾವುದು ಅಲ್ಲ. ಆದರೆ ಈ ವಿಶೇಷ ಚೇತನಗೆ ನೆರವು ನೀಡುತ್ತಿರುವುದು ಸಾಕು ನಾಯಿ. ತನ್ನ ಮಾಲೀಕನ ಆಜ್ಞೆಯನ್ನು ಚಾಚು ತಪ್ಪದೆ ಪಾಲಿಸುವ ಈ ನಾಯಿ, ಇಡೀ ನಗರವನ್ನು, ಯಾವುದೇ ವಸ್ತು ಖರೀದಿಗೆ ಸಂಪೂರ್ಣವಾಗಿ ಸಹಾಯ ಮಾಡುತ್ತಿದೆ. ಮಾಲೀಕನ ವ್ಹೀಲ್‌ಚೇರನ್ನು ತಳ್ಳುತ್ತಾ ಸಾಗುತ್ತಿರುವ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಈ ನಾಯಿಗೆ ವಿಶೇಷ ತರಬೇತಿ ನೀಡಲಾಗಿದೆ. ವಿಶೇಷ ಚೇತನ ಮಾಲೀಕನ ಈ ಚೇರ್‌ಮೇಲೆ ಕುಳಿತುಕೊಂಡ ಬಳಿಕ ವ್ಹೀಲ್‌ಚೇರ್ ತಳ್ಳುತ್ತಾ ಸಾಗುತ್ತದೆ. ಸಿಗ್ನಲ್ ಅಥವಾ ವಾಹನ ಎದುರಿಗೆ ಬಂದರೆ ಮಾಲೀಕನ ಆಜ್ಞೆಯಂತೆ ತಳ್ಳುವುದನ್ನು ನಿಲ್ಲಿಸುತ್ತದೆ. ಬಳಿಕ ಮಾಲೀಕನ ಆಜ್ಞೆ ಸಿಕ್ಕ ಬಳಿಕ ಮತ್ತೆ ತಳ್ಳುತ್ತದೆ.
BBK9 ನಾಯಿ ಪ್ರೀತಿ ಮುಂದೆ ಯಾವ ಹುಡ್ಗ-ಹುಡ್ಗಿ ಪ್ರೀತಿನೂ ನಿಲ್ಲಲ್ಲ: ಅನುಪಮಾ ಗೌಡ
ಈ ವಿಡಿಯೋದಲ್ಲೂ ವಿಶೇಷ ಚೇತನ ವ್ಯಕ್ತಿಯನ್ನು ತಳ್ಳುತ್ತಾ ಬರುವ ಈ ನಾಯಿ, ಟ್ರಾಫಿಕ್ ಸಿಗ್ನಲ್ ಬಳಿ ನಿಲ್ಲುತ್ತದೆ. ಬಳಿಕ ಮಾಲೀಕನ ಮುಂಭಾಗಕ್ಕೆ ಬಂದು ಮುಂದಿನ ಆಜ್ಞೆಗೆ ಕಾಯುತ್ತಿದೆ. ಸಿಗ್ನಲ್ ಸಿಕ್ಕ ಬಳಿಕ ಮಾಲೀಕ ಆಜ್ಞೆಯಂತೆ ಮತ್ತೆ ತಳ್ಳುತ್ತಾ ಸಾಗುವ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಪ್ರೀತಿಯ ಶ್ವಾನ ಸಾವು; ಅನ್ನ, ನೀರು ಬಿಟ್ಟು ಅಳುತ್ತಾ ಕುಳಿತ ಕುಟುಂಬಸ್ಥರು
ನಾಯಿಗಾಗಿ ರಾಷ್ಟ್ರೀಯ ರಜೆ!
ಸಾಮಾನ್ಯವಾಗಿ ರಾಷ್ಟ್ರ ನಾಯಕರ ದಿನವನ್ನು ರಜಾದಿನವನ್ನಾಗಿ ಆಚರಿಸುವುದು ಸಂಪ್ರದಾಯ. ಆದರೆ, ತುರ್ಕಮೇನಿಸ್ತಾನದಲ್ಲಿ ಶ್ವಾನಕ್ಕೆ ಈ ಗೌರವ ಲಭ್ಯವಾಗಿದೆ. ಶ್ವಾನಪ್ರೀತಿಗೆ ಹೆಸರಾಗಿರುವ ತುರ್ಕಮೇನಿಸ್ತಾನದ ಅಧ್ಯಕ್ಷ ಗುರ್ಬಂಗುಲಿ ಬರ್ಡಿಮುಹಮೆಡೋಮ್ ತನ್ನ ಸಾಕು ನಾಯಿಯ ಗೌರವಾರ್ಥ ರಾಷ್ಟ್ರೀಯ ರಜಾದಿನವೊಂದನ್ನು ಸೃಷ್ಟಿಸಿದ್ದಾನೆ. ಅಲಬೈ ಎಂದು ಕರೆಯಲ್ಪಡುವ ಏಷ್ಯನ್ ಶಪರ್ಡ್ ತಳಿಯ ಗೌರವಾರ್ಥವಾಗಿ ಪ್ರತಿ ವರ್ಷ ಏಪ್ರಿಲ್ ಕೊನೆಯ ಭಾನುವಾರವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುವುದು ಎಂದು ಆತ ಆದೇಶ ಹೊರಡಿಸಿದ್ದಾರೆ. ಅಲಬೈ ಶ್ವಾನಗಳು ರಷ್ಯಾ ಮತ್ತು ಕೇಂದ್ರ ಏಷ್ಯಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ತುರ್ಕಮೇನಿಸ್ತಾನದಲ್ಲೂ ಈ ಶ್ವಾನ ತಳಿ ಭಾರೀ ಪೇಮಸ್. ಅಷ್ಟೇ ಅಲ್ಲ ತುರ್ಕಮೇನಿಸ್ತಾನದ ರಾಜಧಾನಿ ಅಶ್ಗಾಬತ್‌ನಲ್ಲಿ ಅಲಬೈ ಶ್ವಾನದ ಬೃಹತ್ ಪ್ರತಿಮೆಯನ್ನೂ ಸ್ಥಾಪನೆ ಮಾಡಲಾಗಿದೆ.
ವರ್ಕ್ಫ್ರಂ ಹೋಂ ಲೈವ್ ವೇಳೆ ನಾಯಿ ಪ್ರವೇಶ!
ಕೊರೋನಾ ವ್ಯಾಪಕವಾದ ಬಳಿಕ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಅಮೆರಿಕದ ಫಾಕ್ಸ್ ಡಬ್ಲ್ಯುಟಿವಿಟಿ ಚಾನೆಲ್‌ನ ಹವಾಮಾನ ವರದಿಗಾರರೂ ಹೀಗೆಯೇ ಇತ್ತೀಚೆಗೆ ಮನೆಯಿಂದಲೇ ಹವಾಮಾನ ಕುರಿತ ಸುದ್ದಿ ಓದುತ್ತಿದ್ದರು. ಆದರೆ ಈ ವಿಷಯ ಅವರ ಸಾಕು ನಾಯಿಗೆ ಹೇಗೆ ಗೊತ್ತಾಗಬೇಕು. ಅದು ನೇರಪ್ರಸಾರದ ವೇಳೆಯೇ ಸೀದಾ ಮಾಲೀಕನ ತೊಡೆ ಏರಿದೆ. ದಾರಿ ಕಾಣದ ನಿರೂಪದ ಪೌಲ್ ಡೆಲ್ಲಿಗೆಟ್ಟೋ ನಾಯಿ ಮೈ ಸವರುತ್ತಲೇ ವಾರ್ತೆ ಓದಿದ್ದಾರೆ.
