ಸ್ನೇಹಿತರ ಕಿತಾಪತಿ, ಮಂಟಪದಲ್ಲಿ ವಧುವನ್ನು ಎತ್ತಲು ಹೋಗಿ ಧೊಪ್ಪಂತ ಬಿದ್ದ ವರ!
ಮದುವೆ ಮನೆ ಅಂದ್ರೆ ಅಲ್ಲಿ ಸಂಭ್ರಮ, ಸಡಗರ ಇದ್ದಿದ್ದೇ. ಅದರಲ್ಲೂ ವರ, ವಧುವಿನ ಕಡೆಯ ಸ್ನೇಹಿತರು ಮದುವೆ ಮನೆಯಲ್ಲಿ ಕೀಟಲೆ ಮಾಡೋದನ್ನಂತೂ ತಪ್ಪಿಸೋದಿಲ್ಲ. ಹಾಗೆ ಇಲ್ಲೊಂದು ಮದ್ವೆ ಮನೆಯಲ್ಲಿ ವರನ ಸ್ನೇಹಿತರು ಮಾಡಿದ ಕೆಲಸಕ್ಕೆ ವರ, ವಧು ಇಬ್ಬರು ನಗೆಪಾಟಲಿಗೀಡಾಗದ್ದಾರೆ. ಅಷ್ಟಕ್ಕೂ ಅವ್ರು ಮಾಡಿದ್ದೇನು.
ಭಾರತೀಯ ಸಂಪ್ರದಾಯದಲ್ಲಿ ಮದುವೆ ಮನೆ ಅಂದ್ರೆ ಸಂಭ್ರಮ, ಸಡಗರ ಇರೋ ಹಾಗೆಯೇ ತಮಾಷೆ, ಕೀಟಲೆಗಳು ಸಹಜವಾಗಿರುತ್ತವೆ. ವಧು-ವರರ ಕಡೆಯವರು ಮದುವೆ ಮನೆಯಲ್ಲಿ ಹಾಜರಿದ್ದು ಎಲ್ಲಾ ವಿಷಯದಲ್ಲಿ ಮೂಗು ತೂರಿಸುವುದು, ಶಾಸ್ತ್ರ ಸಂಪ್ರದಾಯಕ್ಕೆ ಅಡ್ಡಿ ಮಾಡಿ ವಧು-ವರರನ್ನು ಗೋಳು ಹೊಯ್ದುಕೊಳ್ಳುವುದು ಮಾಡುತ್ತಾರೆ. ಮದುವೆ ಮನೆಯಲ್ಲಿ ವಧು-ವರರ ಸ್ನೇಹಿತರಿಂದಲೇ ಕೆಲವೊಂದು ಬಾರಿ ಎಡವಟ್ಟು ಆಗೋದಿದೆ. ಹಾಗೆಯೇ ಇಲ್ಲೊಂದು ಮದ್ವೆ ಮನೆಯಲ್ಲಿ ವರನ ಸ್ನೇಹಿತರು ಮಾಡಿದ ಕೆಲಸಕ್ಕೆ ವರ, ವಧು ಇಬ್ಬರು ನಗೆಪಾಟಲಿಗೀಡಾಗದ್ದಾರೆ. ಅಷ್ಟಕ್ಕೂ ಅವ್ರು ಮಾಡಿದ್ದೇನು.
ಮದುವೆ ಮನೆಗೆ ಬಂದು ವರನ (Groom) ಫ್ರೆಂಡ್ಸ್ ಆತನನ್ನು ಗೋಳು ಹೊಯ್ದುಕೊಳ್ಳುವುದು ಸಾಮಾನ್ಯ. ವೆಡ್ಡಿಂಗ್ ವಾಲ್‌ನಲ್ಲಿ ಭರ್ಜರಿ ಡ್ಯಾನ್ಸ್ ಮಾಡಿ, ವರನಿಗೂ ಡ್ಯಾನ್ಸ್ ಮಾಡಿ ಒತ್ತಾಯಿಸಿ ಕಾರ್ಯಕ್ರಮವನ್ನೇ ಗೊಂದಲಮಯವಾಗಿಸಿ ಬಿಡ್ತಾರೆ. ಹಾಗೆಯೇ ಇಲ್ಲೊಂದು ಮದ್ವೆ ಮನೆಯಲ್ಲಿ ವರನ ಫ್ರೆಂಡ್ಸ್, ವೇದಿಕೆಯಲ್ಲೇ ವಧು (Bride)ವನ್ನು ಎತ್ತುವಂತೆ ವರನಿಗೆ ಒತ್ತಾಯಿಸಿದ್ದಾರೆ. ವರ ಮೊದಲು ನಿರಾಕರಿಸಿದರೂ ನಂತರ ಸ್ನೇಹಿತರ (Friends) ಒತ್ತಾಯದ ಮೇರೆಗೆ ವಧುವನ್ನು ಎತ್ತುತ್ತಾನೆ. ಆದ್ರೆ ದುರದೃಷ್ಟವಶಾತ್ ಸ್ಪಲ್ಪ ಹೊತ್ತಿನಲ್ಲೇ ಇಬ್ಬರೂ ಧಪ್ಪೆಂದು ವೇದಿಕೆಯಲ್ಲೇ ಬೀಳುತ್ತಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಸ್ಸಂಶಯವಾಗಿ ಇದು ದಂಪತಿಗಳಿಗೆ (Couple) ಮುಜುಗರವನ್ನುಂಟು ಮಾಡುತ್ತದೆ.
ವರನಿಗೆ ತಾಳಿ ಕಟ್ಟಲು ಬಿಡದ ವಧುವಿನ ಗ್ಯಾಂಗ್, ಮುಂದಿಟ್ಟ ಷರತ್ತು ನೋಡಿ ಜನರು ಸುಸ್ತು!
ಮದುವೆ ವೇದಿಕೆಯಲ್ಲೇ ಬಿದ್ದ ವಧು-ವರರು, ವಿಡಿಯೋ ವೈರಲ್
ವೈರಲ್ ಆಗಿರುವ ವೀಡಿಯೊವನ್ನು ಮನೋಜ್ ಶರ್ಮಾ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಯಾರಿಂದಲೂ ದಾರಿ ತಪ್ಪಬೇಡಿ. ನಿಮ್ಮ ಕೈಲಾದಷ್ಟು ಮಾಡಿ, ಇಲ್ಲದಿದ್ದರೆ ನಿಮ್ಮನ್ನು ಅಪಹಾಸ್ಯ ಮಾಡುವವರಿಗೇನು ಕಮ್ಮಿಯಿಲ್ಲ' ಎಂಬ ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊ 183 ಸಾವಿರ ವೀವ್ಸ್ ಮತ್ತು ಸಾವಿರಾರು ಲೈಕ್ಸ್ ಗಳಿಸಿದೆ.
ವೈರಲ್ ಆದ ಕ್ಲಿಪ್‌ನಲ್ಲಿ, ಬ್ಯಾಕ್‌ಗ್ರೌಂಡ್‌ನಲ್ಲಿ ಶಾಹಿದ್ ಕಪೂರ್ ಅವರ ಚಲನಚಿತ್ರ ವಿವಾಹದ ಹಾಡು ಕೇಳಿ ಬರುತ್ತಿರುತ್ತದೆ. ಇದ್ದಕ್ಕಿದ್ದಂತೆ, ವರನ ಸ್ನೇಹಿತರು ವಧುವನ್ನು ತನ್ನ ತೋಳುಗಳಲ್ಲಿ ಎತ್ತುವಂತೆ ಒತ್ತಾಯಿಸಲು ಪ್ರಾರಂಭಿಸುತ್ತಾರೆ. ಅವರ ಹರ್ಷೋದ್ಗಾರದ ನಡುವೆ, ವರನು ಹಾಗೆಯೇ ಮಾಡಲು ಮುಂದಾಗಿ ಇಬ್ಬರೂ ನೆಲದ ಮೇಲೆ ಬೀಳುತ್ತಾರೆ. ಕೂಡಲೇ ಸ್ನೇಹಿತರು ಕಿರುಚಿ, 'ಎಲ್ಲರ ಮರ್ಯಾದೆ ತೆಗೆದೆಯಲ್ಲಾ' ಎಂದು ಹೇಳುವುದನ್ನು ಕೇಳಬಹುದು.
ಸ್ಮಶಾನದಲ್ಲಿ ಮದುವೆಯ ಮಂಗಳ ವಾದ್ಯ..ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು (User), 'ಮದುವೆ ಮನೆಯಲ್ಲಿ ಇಂಥಾ ನಾಚಿಕೆಗೇಡಿನ ಘಟನೆ ನಡೆಯಬಾರದಿತ್ತು' ಎಂದಿದ್ದಾರೆ. ಮತ್ತೊಬ್ಬರು, 'ಬ್ಯಾಕ್‌ಗ್ರೌಂಡ್‌ನಲ್ಲಿ ಮ್ಯೂಸಿಕ್ ಇದಕ್ಕೆ ಸರಿಯಾಗಿ ಸೂಟ್ ಆಗುತ್ತಿದೆ' ಎಂದು ಹೇಳಿದ್ದಾರೆ. ಮತ್ತೆ ಕೆಲವರು, 'ಹೀಗೆಲ್ಲಾ ಆಗುವುದು ಸಹಜ. ನಾಚಿಕೆ (Shy) ಪಟ್ಟುಕೊಳ್ಳುವ ವಿಷಯವೇನಿಲ್ಲ' ಎಂದು ಸಮಾಧಾನ ಹೇಳಿದ್ದಾರೆ. ಅದೇನೆ ಇರ್ಲಿ, ಒಟ್ನಲ್ಲಿ ಸ್ನೇಹಿತರ ಕಿತಾಪತಿಯಿಂದ ಖುಷಿಯಿಂದ ಇರಬೇಕಾದ ಮದ್ವೆ ದಿನ, ವಧು-ವರರ ಪಾಲಿಗೆ ಬೇಸರವನ್ನುಂಟು ಮಾಡಿದ್ದಂತೂ ನಿಜ.