Asianet Suvarna News Asianet Suvarna News

Love Story:ಕಣ್ಣಿಲ್ಲದ ಯುವಕನ ಬಾಳಿಗೆ ಬೆಳಕಾದ ಯುವತಿ

ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಹಲವು ಪ್ರೇಮ ಪ್ರಕರಣಗಳು ಅದು ನಿಜವೆಂಬುದನ್ನು ಸಾಬೀತುಪಡಿಸಿವೆ. ಜಾತಿ-ಧರ್ಮ, ಊರು-ಅಂತಸ್ತು, ದೇಶ, ವೈಕಲ್ಯವನ್ನು ಮೀರಿ ಪ್ರೀತಿಯಾಗಿಬಿಡುತ್ತದೆ. ಇದು ಅಂಥಹದ್ದೇ ಪ್ರೇಮಕಥೆ. ಕಣ್ಣಿಲ್ಲದ ಯುವಕನ ಬಾಳಲ್ಲಿ ಯುವತಿಯೇ ಬೆಳಕಾಗಿದ್ದಾಳೆ.

Girl Loves Blind Man, Got Engaged, Heart Touching Stroy Vin
Author
Bengaluru, First Published Aug 24, 2022, 4:59 PM IST

ಪ್ರೀತಿಯೆಂಬುದು ಒಂದು ವಿಶಿಷ್ಟ ಭಾವನೆ. ಆ ಸುಂದರ ಭಾವನೆ ಯಾರ ಮೇಲಾದರೂ, ಯಾವಾಗ ಬೇಕಾದರೂ ಹುಟ್ಟಿಕೊಳ್ಳಬಹುದು. ಪ್ರೀತಿಯ ಉಗಮಕ್ಕೆ ಜಾತಿ-ಧರ್ಮ, ಊರು-ಅಂತಸ್ತು, ದೇಶ, ವೈಕಲ್ಯ ಯಾವುದು ಸಹ ಅಡ್ಡಿಯಾಗುವುದಿಲ್ಲ. ಇದೆಲ್ಲವನ್ನೂ ಮೀರಿದ ನಿಷ್ಕಲ್ಮಶ ಪ್ರೀತಿ ನಾವು ಹಲವರಲ್ಲಿ ನೋಡಬಹುದು. ಈ ಜೋಡಿಯೋ ಹಾಗೆಯೇ ವೈಕಲ್ಯವೆಂಬ ಅಡ್ಡಿಯನ್ನು ಮೆಟ್ಟಿ ಜೋಡಿಹಕ್ಕಿಯಂತೆ ಖುಷಿಯಲ್ಲಿದೆ. ಕಣ್ಣು ಕಾಣದ ಯುವಕನಿಗೆ ಕಣ್ಣಿರುವ, ಮನಸ್ಸಿನ ತುಂಬಾ ಪ್ರೀತಿಯಿರುವ ಹುಡುಗಿ ಜೋಡಿಯಾಗಿದ್ದಾಳೆ. ಸುಂದರವಾದ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ. ಕಣ್ಣಿಲ್ಲದ ಯುವಕನ ಮೇಲೆ ಪ್ರೀತಿ ಮೂಡಿದ ರೀತಿಯನ್ನು ಯುವತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.

ಕಣ್ಣು ಕಾಣುತ್ತಿರಲ್ಲಿಲ್ಲ ಮನಸ್ಸು ಸುಂದರವಿತ್ತು
'ನಾನು ಚೈತನ್ಯರನ್ನು ಭೇಟಿಯಾದಾಗ ನನಗೆ 22 ವರ್ಷ. ನಾನು ನನ್ನ ಸ್ನೇಹಿತನೊಬ್ಬನ ಜೊತೆಯಲ್ಲಿ ಚಹಾ ಹೀರುತ್ತಾ ಇದ್ದೆ ಮತ್ತು ಅವನು ಅದೇ ಸ್ಟಾಲ್‌ಗೆ ಬಂದನು. ನನ್ನ ಸ್ನೇಹಿತನಿಂದ ನಾವಿಬ್ಬರೂ ಪರಸ್ಪರ ಪರಿಚಯಪಟ್ಟೆವು. ಆ ಬಳಿಕ ಸ್ನೇಹಿತರ ಪಾರ್ಟಿಗಳಲ್ಲಿ, ಸಮಾರಂಭಗಳಲ್ಲಿ ನಾವು ಪರಸ್ಪರ ಭೇಟಿಯಾಗುತ್ತಿದ್ದವೆ. ಅಂತಹ ಒಂದು ಗೆಟ್‌-ಟುಗೆದರ್‌ನಲ್ಲಿ, ನಾವು ಮುಕ್ತವಾಗಿ ಮಾತನಾಡಿದೆವು. ರಂಗಭೂಮಿಯಿಂದ ಚಲನಚಿತ್ರಗಳ ವರೆಗೆ ಹಲವು ಆಸಕ್ತಿದಾಯಕ ವಿಚಾರಗಳನ್ನು ಚರ್ಚಿಸಿದೆವು. ಆತ ಚಿಕ್ಕವನಿದ್ದಾಗ ಗಡ್ಡೆಯ ಕಾರಣದಿಂದ ಹೇಗೆ ತನ್ನ ಕಣ್ಣನ್ನು (Eyes) ಕಳೆದುಕೊಂಡನು. ದೃಷ್ಟಿಯಿಲ್ಲದೆ ಆತನನ್ನು ನೋಡಿಕೊಳ್ಳುವುದು ಅವನ ಹೆತ್ತವರಿಗೆ ಎಷ್ಟು ಸವಾಲಾಗಿತ್ತು ಎಂಬುದರ ಕುರಿತು ನನಗೆ ತಿಳಿಸಿದ. ಮಾತ್ರವಲ್ಲ ಕಣ್ಣಿಲ್ಲದ ವ್ಯಕ್ತಿಯೆಂದು ಕೊರಗುವುದು ಇಷ್ಟವಿಲ್ಲ. ಜೀವನ (Life)ದಲ್ಲಿ ಖುಷಿಯಿಂದ ಇರಲು ಬಯಸುತ್ತೇನೆ ಎಂದು ತಿಳಿಸಿದ' ಎಂದು ಯುವತಿ ಹೇಳಿದ್ದಾಳೆ.

ಮದ್ವೆ ಆದವರಿಗಿಂತ ಸಿಂಗಲ್ ಮಹಿಳೆಯರು ತುಂಬಾನೆ ಹ್ಯಾಪಿಯಾಗಿರ್ತಾರಂತೆ!

ವೈಕಲ್ಯವಿರುವವನ್ನು ಮದುವೆಯಾಗಲು ಒಪ್ಪಿಗೆ ನೀಡದ ಪೋಷಕರು 
'ಅಂದಿನಿಂದ ನಾವು ಆಗಾಗ ಹ್ಯಾಂಗ್ ಔಟ್ ಮಾಡಲು ಪ್ರಾರಂಭಿಸಿದೆವು. ಹೊಂದಿನ ಬ್ರೇಕ್‌ಫಾಸ್ಟ್‌ಗೆ ಕರೆದ ಅವರು ನನ್ನನ್ನು ಇಷ್ಟಪಡುವುದಾಗ ತಿಳಿಸಿದರು. ನನಗೆ ಯೆಸ್ ಅಲ್ಲದೆ ಬೇರೇನೂ ಉತ್ತರ ಹೇಳಬೇಕೆಂದು ಅನಿಸಲ್ಲಿಲ್ಲ. ಆ ಬಳಿಕ ನಾವು ಸಾಕಷ್ಟು ಬಾರಿ ಡೇಟಿಂಗ್‌ಗೆ ಹೋದೆವು. ಅದಾಗಿ ಒಂದು ವರ್ಷದ ನಂತರ, ಚೈತನ್ಯ ನಮ್ಮ ಪ್ರೀತಿಯನ್ನು ಪೋಷಕರಿಗೆ ತಿಳಿಸುವ ಬಗ್ಗೆ ಹೇಳಿದರು. ಅವರ ಮನೆಯಲ್ಲಿ ನಮ್ಮ ಪ್ರೀತಿ (Love)ಯನ್ನು ಹೇಳಿದ ತಕ್ಷಣ ಒಪ್ಪಿಕೊಂಡರು. ನಾನು ನನ್ನ ಪೋಷಕರೊಂದಿಗೆ ಹೇಳಿದಾಗ ಅವರು ನೀವು ಅಂಧನೊಂದಿಗೆ ಹೇಗೆ ಜೀವನ ನಡೆಸುತ್ತೀ ಎಂದು ಪ್ರಶ್ನಿಸಿದರು. ನಾನು ಪ್ರೀತಿಯ ಪೋಷಕರ ನಡುವೆ ಬೆಳೆದಿದ್ದೆ. ಜೀವನದಲ್ಲಿ ಮೊದಲ ಬಾರಿಗೆ ನಾನು ಬಯಸಿದ್ದಕ್ಕಿಂತ ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುವುದನ್ನು ನೋಡಿದೆ. ಬಳಿಕ ಅಪ್ಪ ಚೈತನ್ಯರನ್ನು ಭೇಟಿಯಾಗುವುದಾಗಿ ಹೇಳಿದರು. ಅದೃಷ್ಟವಶಾತ್ ಚೈತನ್ಯ ಅಪ್ಪನಿಗೂ ಇಷ್ಟವಾದರು' ಎಂದು ಯುವತಿ ತಿಳಿಸಿದ್ದಾಳೆ.

ಏನು ಮಾಡಿದ್ರೂ ತಪ್ಪು ನಿಂದೇ ಅಂತಾರಾ ಸಂಗಾತಿ, ಎಲ್ಲೆಡೆ ಇದು ಕಾಮನ್ ಬಿಡಿ

ಸರಿಸುಮಾರು ಒಂದು ವರ್ಷದ ನಂತರ, ನಮ್ಮ ಪಕ್ಕದಲ್ಲಿರುವ ಸ್ನೇಹಿತರು ಮತ್ತು ಕುಟುಂಬದೊಂದಿಗೆ, ನಾವು ನಿಶ್ಚಿತಾರ್ಥ ಮಾಡಿಕೊಂಡೆವು. ಆತನಿಗೆ ಕಣ್ಣಿಲ್ಲದಿರುವ ಬಗ್ಗೆ ಬಂಧುಬಳಗದವರು, ಸ್ನೇಹಿತರು, ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿ. ಚೈತನ್ಯನೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದಾಗಿ ಹೇಳಿದ. ಆದರೆ ನಾನು, 'ನಿಮಗಾಗಿ ನಾನು ನಿನ್ನನ್ನು ಪ್ರೀತಿಸಿದ್ದೇನೆ'. ನಿಮ್ಮ ಮನಸ್ಸನ್ನು ಪ್ರೀತಿಸಿದ್ದೇನೆ ಹೀಗಾಗಿ ಸರ್ಜರಿ ಬೇಡವೆಂದು ತಿಳಿಸಿದೆ ಎಂದು ಯುವತಿ ಹೇಳಿದ್ದಾಳೆ.

ಕಣ್ಣಿಲ್ಲದ ಯುವಕನಿಗೆ ದಾರಿದೀಪವಾದ ಯುವತಿ
ಇವತ್ತಿನ ದಿನಗಳಲ್ಲಿ ಹೆಚ್ಚಿನ ಯುವಕರು-ಯುವತಿಯರು ಎಜುಕೇಷನ್, ಜಾಬ್‌, ಹಣ, ಸ್ಟೇಟಸ್ ನೋಡಿ ಮದುವೆಯಾಗುತ್ತಾರೆ. ಹೀಗಿರುವಾಗ ವೈಕಲ್ಯವನ್ನೂ ಮೀರಿ ಮನಸ್ಸನ್ನು ಮೆಚ್ಚಿ ಮದುವೆಯಾಗಿರುವ ಯುವತಿಗೆ ಹ್ಯಾಟ್ಸಾಫ್ ಹೇಳಲೇಬೇಕು. 

Follow Us:
Download App:
  • android
  • ios