Surprise Gift: ಹೆಂಡ್ತೀನ ಖುಷಿ ಪಡಿಸಬೇಕಂತ ಈ ತಪ್ಪೆಲ್ಲಾ ಮಾಡ್ಲೇಬೇಡಿ!
ಸಂಗಾತಿಗೆ ಸರ್ಪ್ರೈಸ್ ನೀಡ್ಬೇಕು ಎನ್ನುವ ಮನಸ್ಸು ಬರೋದೇ ಕಷ್ಟ. ಅಪ್ಪಿತಪ್ಪಿ ಬಂದ್ರೂ ಅದ್ರಲ್ಲಿ ಸಾಕಷ್ಟು ಯಡವಟ್ಟು ಮಾಡಿರ್ತೇವೆ. ತಪ್ಪಾಗದಂತೆ ಸಂಗಾತಿ ಖುಷಿ ಪಡಿಸ್ಬೇಕೆಂದ್ರೆ ಕೆಲವೊಂದಿಷ್ಟನ್ನು ತಿಳಿದಿರ್ಬೇಕು.
ಸಂಗಾತಿ (Partner) ಖುಷಿಯಾಗಿದ್ರೆ ದಾಂಪತ್ಯ ಸುಖಮಯವಾಗಿರುತ್ತೆ. ಈ ವಿಷ್ಯವನ್ನು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಮದುವೆ (Marriage) ಯ ಆರಂಭದ ದಿನಗಳಲ್ಲಿ ಸಂಗಾತಿ ಮಧ್ಯೆ ಇರುವ ಪ್ರೀತಿ ನಂತ್ರದ ದಿನಗಳಲ್ಲಿ ಕಡಿಮೆಯಾಗ್ತಾ ಬರುತ್ತದೆ. ನೀರಸ ಬದುಕು ದಾಂಪತ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹಾಗಾಗಿ ಎಷ್ಟೇ ಕೆಲಸ (Work) ದ ಒತ್ತಡವಿದ್ರೂ ಸಂಗಾತಿ ಸಂತೋಷಕ್ಕೆ ಮಹತ್ವ ನೀಡ್ಬೇಕಾಗುತ್ತದೆ. ಸಾಮಾನ್ಯವಾಗಿ ಹುಟ್ಟುಹಬ್ಬ,ಮದುವೆ ವಾರ್ಷಿಕೋತ್ಸವದಲ್ಲಿ ಸಂಗಾತಿಯಿಂದ ಉಡುಗೊರೆ (Gift) ನಿರೀಕ್ಷೆ ಮಾಡಿರ್ತಾರೆ. ಈ ವಿಶೇಷ ಸಂದರ್ಭ ಹೊರತುಪಡಿಸಿ ಬೇರೆ ಸಮಯದಲ್ಲೂ ಸಂಗಾತಿಗೆ ಆಗಾಗ ಸರ್ಪ್ರೈಸ್ ನೀಡ್ತಿರಬೇಕು. ಸರ್ಪ್ರೈಸ್ ನೀಡುವಾಗ ಕೆಲ ತಪ್ಪುಗಳನ್ನು ಮಾಡ್ತಾರೆ. ಇದು ಸಂಗಾತಿ ಸಂತೋಷ ಹೆಚ್ಚಿಸುವ ಬದಲು ಮತ್ತಷ್ಟು ಉದಾಸೀನತೆ, ನೋವಿಗೆ ಕಾರಣವಾಗಬಹುದು. ಹಾಗಾಗಿ ಮೊದಲು ಸಂಗಾತಿಗೆ ಸರ್ಪ್ರೈಸ್ ನೀಡೋದನ್ನು ಕಲಿಯಿರಿ. ಆ ನಂತ್ರ ಸರ್ಪ್ರೈಸ್ ಹೇಗಿರಬೇಕು ಎಂಬುದನ್ನು ಕಲಿಯಬೇಕು. ಇಂದು ನಾವು ಸಂಗಾತಿಗೆ ಸರ್ಪ್ರೈಸ್ ನೀಡೋವಾಗ ಏನು ತಪ್ಪು ಮಾಡ್ಬಾರದು ಎಂಬುದನ್ನು ಹೇಳ್ತೇವೆ ನೋಡಿ.
ಸಂಗಾತಿಗೆ ಸರ್ಪ್ರೈಸ್ ನೀಡೋವಾಗ ಈ ತಪ್ಪು ಮಾಡ್ಬೇಡಿ :
ನಿಮ್ಮ ಆಯ್ಕೆಯ ಉಡುಗೊರೆ (Gift) : ಸಂಗಾತಿಗೆ ಉಡುಗೊರೆ ನೀಡಿ ಸರ್ಪ್ರೈಸ್ ನೀಡೋ ಪ್ಲಾನ್ ಮಾಡಿರ್ತೀರಿ ಅಂದುಕೊಳ್ಳೋಣ. ಆಗ ನಿಮ್ಮ ಆಯ್ಕೆಗೆ ಮಹತ್ವ ನೀಡ್ಬೇಡಿ. ಅನೇಕರು ತಮಗೆ ಈ ವಸ್ತು ಇಷ್ಟ, ಇಲ್ಲವೆ ಈ ಬಣ್ಣ ಇಷ್ಟ ಎಂಬ ಕಾರಣಕ್ಕೆ ಸಂಗಾತಿಗೂ ಅದನ್ನು ಆಯ್ಕೆ ಮಾಡ್ತಾರೆ. ಇದು ತಪ್ಪು. ಉಡುಗೊರೆ ಖರೀದಿ ಮಾಡುವಾಗ ಸಂಗಾತಿಯ ಮನಸ್ಥಿತಿಗೆ ಮಹತ್ವ ನೀಡ್ಬೇಕು. ಸಂಗಾತಿ ಯಾವುದನ್ನು ಇಷ್ಟಪಡ್ತಾರೆ ಹಾಗೆ ಅವರಿಗೆ ಯಾವುದರ ಅಗತ್ಯವಿದೆ ಎಂಬುದನ್ನು ಗಮನಿಸಿ ಅದನ್ನು ನೀಡ್ಬೇಕಾಗುತ್ತದೆ. ಆಗ ಸಂಗಾತಿ ಖುಷಿಯಾಗ್ತಾರೆ.
ಲೈಂಗಿಕ ಕ್ರಿಯೆ ವೇಳೆ ಇಂಥಾ ತಪ್ಪು ಮಾಡ್ಲೇಬೇಡಿ
ದುಬಾರಿ ವಸ್ತುಗಳು (Costly Products) : ಕೆಲವರು ಸಂಗಾತಿಗೆ ಬಿಗ್ ಸರ್ಪ್ರೈಸ್ ನೀಡ್ಬೇಕು ಎನ್ನುವ ಕಾರಣಕ್ಕೆ ದುಬಾರಿ ವಸ್ತುಗಳನ್ನು ಆಯ್ಕೆ ಮಾಡ್ತಾರೆ. ಕೆಲ ವಸ್ತುಗಳು ದುಬಾರಿ ಇರ್ತವೆ, ಆದ್ರೆ ಯಾವುದೇ ಪ್ರಯೋಜನಕ್ಕೆ ಬರೋದಿಲ್ಲ. ಇದ್ರಿಂದ ಹಣ ವ್ಯರ್ಥವಾಯ್ತು ಎನ್ನುವ ಭಾವನೆ ಸಂಗಾತಿಗೆ ಬರುತ್ತದೆ. ಹಾಗಾಗಿ ಹಣ ಪೋಲಾಗದಂತೆ ಸಂಗಾತಿಗೆ ಅನಿವಾರ್ಯವಿದೆ ಎಂಬ ವಸ್ತುವನ್ನೇ ಹೆಚ್ಚು ಆಯ್ಕೆ ಮಾಡಿ.
ಉಡುಗೊರೆ ಕೇವಲ ಉಡುಗೊರೆಯಾಗದಿರಲಿ : ಸಂಗಾತಿಗೆ ಗಿಫ್ಟ್ ನೀಡ್ಬೇಕು ಎನ್ನುವ ಕಾರಣಕ್ಕೆ ಅಂಗಡಿಗೆ ಹೋಗ್ತೇವೆ, ಚೆಂದದ ವಸ್ತು ಖರೀದಿ ಮಾಡಿ, ಗಿಫ್ಟ್ ಪ್ಯಾಕ್ ಮಾಡಿ ಕೊಡ್ತೇವೆ. ಇನ್ನು ಕೆಲವರಿಗೆ ಯಾವ ಉಡುಗೊರೆ ನೀಡ್ತಿದ್ದೇವೆ ಎಂಬುದೇ ತಿಳಿದಿರೋದಿಲ್ಲ. ಆಫೀಸ್ ಬಾಯ್ ಹತ್ತಿರ ಖರೀದಿ ಮಾಡೋಕೆ ಹೇಳಿರ್ತಾರೆ. ಆದ್ರೆ ಇವೆಲ್ಲ ಕೇವಲ ಉಡುಗೊರೆ ಎನ್ನಿಸಿಕೊಳ್ಳುತ್ತದೆ. ಸಂಗಾತಿಗೆ ಉಡುಗೊರೆ ನೀಡುವಾಗ ಆಲೋಚನೆ ಮಾಡಿ, ಸಾಕಷ್ಟು ಸೃಜನಶೀಲರಾಗಿ ಉಡುಗೊರೆ ನೀಡಿ. ಉಡುಗೊರೆಯೇ ನಿಮ್ಮ ಮನಸ್ಸಿನ ಭಾವನೆ ಹೇಳುವಂತಿರಲಿ.
ಪ್ರತಿ ಬಾರಿ ಒಂದೇ ಗಿಫ್ಟ್ ಬೇಡ : ಉಡುಗೊರೆ ಎಂದಿಗೂ ಪುನರಾವರ್ತನೆಯಾಗ್ಬಾರದು. ಈ ಬಾರಿ ಮೊಬೈಲ್ ನೀಡಿದ್ದರೆ ಮುಂದಿನ ಬಾರಿಯೂ ಅದನ್ನೇ ನೀಡ್ಬಾರದು. ಬೇರೆ ವಸ್ತುವನ್ನು ಉಡುಗೊರೆಯಾಗಿ ನೀಡ್ಬೇಕು. ನೀವು ಅದನ್ನೇ ರಿಪಿಟ್ ಮಾಡಿದ್ರೆ ಸಂಗಾತಿಗೆ ಉಡುಗೊರೆ ಮೇಲೆ ಆಸಕ್ತಿ ಹೋಗಿರುತ್ತದೆ. ನೀರಸವಾಗಿ ಅವರು ಪ್ರತಿಕ್ರಿಯೆ ನೀಡ್ತಾರೆ.
ಬ್ರೇಕಪ್ ನಂತರ ಪ್ಯಾಚಪ್ ಮಾಡ್ಕೊಳ್ಳಲು ಸಿಂಪಲ್ ಟಿಪ್ಸ್ ಇಲ್ಲಿದೆ
ಸ್ಪೆಷಲ್ ಫೀಲಿಂಗ್ (Special Feeling) : ಗಿಫ್ಟ್ ಪ್ಯಾಕ್ ನಲ್ಲಿ ಏನಿದೆ ಎಂಬುದು ಮಾತ್ರವಲ್ಲ ಸರ್ಪ್ರೈಸ್ ನೀಡುವ ಮೊದಲು ನೀವು ಹೇಗೆ ಸಿದ್ಧರಾಗ್ತೀರಿ ಎಂಬುದು ಕೂಡ ಮುಖ್ಯ. ಸರ್ಪ್ರೈಸ್ ಸಂಪೂರ್ಣ ಸರ್ಪ್ರೈಸ್ ಆಗಿರಬೇಕು. ಅವರಿಗೆ ಆಸಕ್ತಿ ಹೆಚ್ಚಾಗುವಂತೆ ಮಾಡ್ಬೇಕು. ಒಂದೇ ರೀತಿ ಸರ್ಪ್ರೈಸ್ ನೀಡುವ ಬದಲು ನಿಮ್ಮ ಬುದ್ಧಿಗೆ ಸ್ವಲ್ಪ ಕೆಲಸ ನೀಡ್ಬೇಕು.