ಡೇಟ್ ನಿರಾಕರಿಸಿದ ಹುಡುಗಿ, ಹುಡುಗನ ಬಂಧನಕ್ಕೆ ಬಂದವರು ಹುಡುಗಿ ಅರೆಸ್ಟ್ ಮಾಡಿದ್ರು! ಲವ್ ಸ್ಟೋರಿಗೆ ಟ್ವಿಸ್ಟ್
ಈಗಿನ ದಿನಗಳಲ್ಲಿ ಡೇಟಿಂಗ್ ಅಪ್ಲಿಕೇಷನ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಆನ್ಲೈನ್ ಮೋಸಕ್ಕೆ ಇದು ಕಾರಣ ಕೂಡ ಆಗ್ತಿದೆ. ಆದ್ರೆ ಈ ಸುದ್ದಿಯಲ್ಲಿ ಹುಡುಗಿ ಯಡವಟ್ಟು ಮಾಡ್ಕೊಂಡಿದ್ದಾಳೆ. ಹುಡುಗನನ್ನು ಕಂಬಿ ಹಿಂದೆ ಹಾಕಲು ಹೋಗಿ ತಾನೇ ಸಿಕ್ಕಿಬಿದ್ದಿದ್ದಾಳೆ.
ಮುಖಾಮುಖಿ ಭೇಟಿಗಿಂತ ಈಗ ಡೇಟಿಂಗ್ ಆಪ್ ಎಲ್ಲರ ಅಚ್ಚುಮೆಚ್ಚು. ಗುರುತ, ಪರಿಚಯವಿಲ್ಲದೆ, ಅವರ ಮುಖ ನೋಡದೆ, ಖಾತೆಯಲ್ಲಿ ಹಾಕಿರುವ ಫೋಟೋ, ಮಾಹಿತಿಯನ್ನೇ ನಂಬಿ ಪ್ರೀತಿಸಲು ಶುರು ಮಾಡ್ತಾರೆ. ಇದ್ರಿಂದಾಗಿ ನಷ್ಟ ಅನುಭವಿಸಿದವರ ಸಂಖ್ಯೆ ಸಾಕಷ್ಟಿದೆ. ಯಂಗ್ ಫೋಟೋ ಹಾಕಿ ಹುಡುಗಿಯನ್ನು ಯಾಮಾರಿಸಿದ ಪುರುಷರ ಸಂಖ್ಯೆ ಸಾಕಷ್ಟಿದೆ. ಹುಡುಗಿ ಫೋಟೋ ಹಾಕಿ ಹುಡುಗರ ಖಾತೆ ಖಾಲಿ ಮಾಡಿದ ಯುವಕರ ಸಂಖ್ಯೆ ಕೂಡ ಹೆಚ್ಚಿದೆ. ಡೇಟಿಂಗ್ ಅಪ್ಲಿಕೇಷನ್ ಗಳಲ್ಲಿ 0ವಂಚನೆಗಳು ನಡೆಯೋದು ಮಾಮೂಲಿ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಹಲವು ಬಾರಿ ಡೇಟಿಂಗ್ ಅಪ್ಲಿಕೇಷನ್ ಪ್ರಕರಣ ಪೊಲೀಸರ ಠಾಣೆ ಮೆಟ್ಟಿಲೇರಿದ್ದಿದೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆದ್ರೆ ಈ ಲವ್ ಸ್ಟೋರಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಮೊದಲ ಬಾರಿ ಹುಡುಗನ ಜೊತೆ ಡೇಟ್ ಹೋಗಲು ನಿರಾಕರಿಸಿದ ಹುಡುಗಿ ಸುಳ್ಳು ಕಥೆ ಹೇಳಿದ್ದಾಳೆ. ಆಕೆ ಮಾತು ನಂಬ್ಕೊಂಡು ಸ್ಥಳಕ್ಕೆ ಬಂದ ಪೊಲೀಸರು, ಹುಡುಗನನ್ನು ಒದ್ದು ಒಳಗೆ ಹಾಕಿದ್ದಾರೆ. ಅದರ ನಂತ್ರ ನಡೆದದ್ದೇ ಬೇರೆ. ಕಂಬಿ ಹಿಂದೆ ಹುಡುಗ ಇರಬೇಕಾಗಿತ್ತು. ಆದ್ರೆ ಆತನ ಬದಲು ಹುಡುಗಿ ಹೋಗಿದ್ದೇಕು ಗೊತ್ತಾ?
ಡೇಟಿಂಗ್ ಅಪ್ಲಿಕೇಷನ್ ಗಲಾಟೆ ನಡೆದಿದ್ದು ಅಮೆರಿಕ (America) ದಲ್ಲಿ. ಇಲ್ಲಿನ ನಾರ್ತ್ ಲಿಬರ್ಟಿ ನಗರದಲ್ಲಿ ಡೇಟಿಂಗ್ ಆಪ್ (Dating App) ಮೂಲಕ ಹುಡುಗ – ಹುಡುಗಿಯ ಭೇಟಿಯಾಗಿದೆ. ಇಬ್ಬರು ಅನೇಕ ದಿನಗಳ ಕಾಲ ಫೋನ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಕೊನೆಗೆ ಮೊದಲ ಬಾರಿ ಡೇಟಿಂಗ್ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಡ್ರೀಮ್ ಗರ್ಲ್ ಜೊತೆ ಡೇಟಿಂಗ್ ಹೋಗುವ ಖುಷಿಯಲ್ಲಿ ಹುಡುಗ ಸಿದ್ಧವಾಗಿದ್ದ. ಎಲ್ಲವೂ ಅಂದ್ಕೊಂಡಂತೆ ಆಗಿದ್ರೆ ಇಬ್ಬರು ಮೊದಲ ಡೇಟ್ ಎಂಜಾಯ್ (Enjoy) ಮಾಡಿ ಬರ್ತಿದ್ದರು. ಆದ್ರೆ ಹುಡುಗಿ ಥಾಮಸ್ ಮಾಡಿದ ಕೆಲಸ ಎಲ್ಲವನ್ನೂ ತಲೆಕೆಳಗೆ ಮಾಡಿದೆ.
ಥಾಮಸ್, ಡೇಟಿಂಗ್ ಅಪ್ಲಿಕೇಷನ್ ಮೂಲಕ ಪರಿಚಯವಾದ ಹುಡುಗನ ಜೊತೆ ಡೇಟಿಂಗ್ ಹೋಗಲು ಸಿದ್ಧವೇನೋ ಆಗಿದ್ಲು. ಆದ್ರೆ ಹುಡುಗ ಮನೆಗೆ ಬರ್ತಾ ಇದ್ದಂತೆ ಆಕೆ ವರಸೆ ಬದಲಾಯ್ತು. ಹುಡುಗನನ್ನು ನೋಡಿದವಳೇ ಡೇಟಿಂಗ್ ಕ್ಯಾನ್ಸಲ್ ಮಾಡುವ ನಿರ್ಧಾರಕ್ಕೆ ಬಂದಳು. ಆದ್ರೆ ಹುಡುಗ ಮಾತ್ರ ಡೇಟಿಂಗ್ ಹೋಗುವ ಒತ್ತಡ ಹೇರುತ್ತಿದ್ದ.
ಸುಳ್ಳು ಕತೆ ಕಟ್ಟಿದ ಹುಡುಗಿ : ಆತನ ಜೊತೆ ಡೇಟ್ ತಪ್ಪಿಸಿಕೊಳ್ಳಲು ನಿರ್ಧರಿಸಿದ ಹುಡುಗಿ ಸುಳ್ಳು ಕಥೆ ಕಟ್ಟಿದ್ದಾಳೆ. ಪೊಲೀಸರಿಗೆ ಕರೆ ಮಾಡಿ, ತನ್ನ ಮಾಜಿ ಪ್ರೇಮಿ ತೊಂದರೆ ನೀಡ್ತಿದ್ದಾನೆ ಎಂದು ದೂರಿದ್ದಾಳೆ. ನಾನು ಗರ್ಭಿಣಿ. ನನ್ನ ಹಳೆ ಪ್ರೇಮಿಗೆ ಇದು ಇಷ್ಟವಿಲ್ಲ. ನನಗೆ ಹಿಂಸೆ ನೀಡ್ತಿದ್ದು, ನನ್ನ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದಿದ್ದಾಳೆ. ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಹುಡುಗನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಸಂಜೆ 4ರ ಬಳಿಕ ಅಮೆರಿಕ ಅಧ್ಯಕ್ಷ ಬೈಡೆನ್‌ಗೆ ಕೆಲಸ ಮಾಡಲಾಗದ ಸ್ಥಿತಿ: ಮಿಚೆಲ್ ಒಬಾಮಗೆ ಸಿಗುತ್ತಾ ಚಾನ್ಸ್?
ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ಸತ್ಯ : ಹುಡುಗನನ್ನು ಬಂಧಿಸಿದ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಡೇಟಿಂಗ್ ಅಪ್ಲಿಕೇಷನ್ ಮೂಲಕ ಥಾಮಸ್ ಗೆ ಪರಿಚಯವಾಗಿದ್ದ ಹುಡುಗ ಎಲ್ಲ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಇಬ್ಬರ ಪರಿಚಯ, ಮಾತುಕತೆ, ಡೇಟ್ ನಿರ್ಧಾರ ಹಾಗೂ ಹುಡುಗಿ ಹೇಳಿದ ಸುಳ್ಳು ಕಥೆಯನ್ನು ಕೇಳಿ ಪೊಲೀಸರು ದಂಗಾಗಿದ್ದಾರೆ. ಪೊಲೀಸರಿಗೆ ಸುಳ್ಳು ಹೇಳಿ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡಿಸಿದ ಹುಡುಗಿ ವಿರುದ್ಧವೇ ಕ್ರಮಕ್ಕೆ ಮುಂದಾಗಿದ್ದಾರೆ. 18 ವರ್ಷದ ಥಾಮಸ್ ಳನ್ನು ಪೊಲೀಸರು ಬಂಧಿಸಿದ್ದಾರೆ.