Asianet Suvarna News Asianet Suvarna News

ಎಷ್ಟು ಜಾಣೆ ನೋಡಿ ಈ ಕಂದ: ಅತ್ತೇನಾ ಅಪ್ಪಿಕೊಳ್ಳೋಕೆ ಸೆಕ್ಯುರಿಟಿಯಲ್ಲಿ ಪರ್ಮಿಷನ್ ಕೇಳಿ ಹೋದ ಬಾಲೆ

  • ಎಷ್ಟು ಮುದ್ದು ನೋಡಿ ಈ ಜಾಣೆ
  • ಏರ್ಪೋರ್ಟ್ ಸೆಕ್ಯುರಿಟಿ ಅನುಮತಿ ಕೇಳಿ ಒಳಗೆ ಹೋದ ಹುಡುಗಿ
  • ಅತ್ತೆಯನ್ನು ಹಗ್ ಮಾಡೋಕೆ ಓಡಿದ್ದು ನೋಡಿ
Girl asks permission from airport security before running to aunt to hug her dpl
Author
Bangalore, First Published Oct 18, 2021, 4:59 PM IST
  • Facebook
  • Twitter
  • Whatsapp

ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಎಷ್ಟೊಂದು ಚಂದದ ವಿಡಿಯೋ ಸಿಗುತ್ತವಲ್ಲಾ ? ಕೆಲವೊಂದು ವಿಡಿಯೋ ಮತ್ತೆ ಮತ್ತೆ ಪ್ಲೇ ಮಾಡಿ ನೋಡುವಂತೆ ಮಾಡುತ್ತವೆ. ನೆಟ್ಟಿಗರೆಲ್ಲ ಅಂತಹ ಚಂದದ ವಿಡಿಯೋಗಳನ್ನು ಪ್ರೀತಿಯಿಂದ ನೋಡಿ ಒಂದು ಕ್ಷಣ ಎಲ್ಲವನ್ನೂ ಮರೆಯುತ್ತಾರೆ. ಒಂದು ರೀತಿ ಒತ್ತಡ ಮರೆಸೋ ಟಾನಿಕ್‌ಗಳಿವು. ಇಂತಹ ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ.

ಇತ್ತೀಚೆಗಷ್ಟೇ ಪುಟ್ಟ ಹುಡುಗಿ ತಾನು ಪ್ರಯಾಣಿಸೋ ವಿಮಾನದಲ್ಲಿ ಅಪ್ಪನೇ ಪೈಲೆಟ್ ಆಗಿದ್ದನ್ನು ನೋಡಿ ಸಖತ್ ಎಕ್ಸೈಟ್ ಆಗಿತ್ತು. ವಿಡಿಯೋ ನೆಟ್ಟಿಗರ ಮನಸು ಗೆದ್ದಿತ್ತು. ಈಗ ಅಂತದ್ದೇ ಮತ್ತೊಂದು ವಿಡಿಯೋ ಸರದಿ.

ಮಗುವಿನ ಮುದ್ದಾದ ವಿಡಿಯೋ ಈಗ ಅಂತರ್ಜಾಲದಲ್ಲಿ ನೆಟ್ಟಿಗರ ಮೋಡಿ ಮಾಡುತ್ತಾ ಮನಸು ಗೆಲ್ಲುತ್ತಿದೆ. ಚಿಕ್ಕವರ ಜಾಣತನದ ವೀಡಿಯೋ ನಿಮ್ಮಲ್ಲೂ ನಗು ಮೂಡಿಸಬಹುದು.

 

ಈ ವಿಡಿಯೋ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊದ ಶೀರ್ಷಿಕೆಯು ವೀಡಿಯೊದಲ್ಲಿ ತೋರಿಸಿರುವ ಘಟನೆಯನ್ನು ವಿವರಿಸುತ್ತದೆ. ಅವಳು ತನ್ನ ಚಿಕ್ಕಮ್ಮನಿಗೆ ವಿಮಾನ ನಿಲ್ದಾಣದಲ್ಲಿ ವಿದಾಯ ಹೇಳಲು ಅಧಿಕಾರಿಯಲ್ಲಿ ಅನುಮತಿ ಕೇಳಿದಳು ಎಂದು ಕ್ಯಾಪ್ಶನ್ ಬರೆಯಲಾಗಿದೆ.

ಕೆಂಪು ಹೂವಿನ ಉಡುಗೆ ತೊಟ್ಟ ಹುಡುಗಿ ವಿಮಾನ ನಿಲ್ದಾಣದ ಅಧಿಕಾರಿಗಳ ಮುಂದೆ ನಿಂತಿರವುದನ್ನು ವೀಡಿಯೊ ತೋರಿಸುತ್ತದೆ. ನಂತರ ಅವಳು ತನ್ನ ಚಿಕ್ಕಮ್ಮನನ್ನು ತಬ್ಬಿಕೊಳ್ಳಲು ಅವರ ಅನುಮತಿಯನ್ನು ಕೇಳುತ್ತಾಳೆ. ಅವರು ಅನುಮತಿಸಿದ ನಂತರ, ಅವಳು ಬೇಗನೆ ತನ್ನ ಚಿಕ್ಕಮ್ಮನ ಬಳಿಗೆ ಓಡಿಹೋಗಿ ಅವರ ವಿಮಾನ ಹೊರಡುವ ಮುನ್ನ ಅವಳಿಗೆ ದೊಡ್ಡ ಅಪ್ಪುಗೆಯನ್ನು ನೀಡಿ ಬರುತ್ತಾಳೆ.

ವೀಡಿಯೊವನ್ನು ಯಾವಾಗ, ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ವಿಡಿಯೋ ಕ್ಲಿಪ್ ಈಗ ಜನರನ್ನು ಗೆಲ್ಲುತ್ತಿದೆ. ವೀಡಿಯೊವನ್ನು ಹಂಚಿಕೊಂಡಾಗಿನಿಂದ ಈ ಕ್ಲಿಪ್ 5.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ವ್ಯಾಪಕವಾಗಿ ಶೇರ್ ಕೂಡ ಮಾಡಲಾಗುತ್ತಿದ್ದು 60,000 ಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿದೆ. ಕ್ಲಿಪ್‌ಗೆ ಪ್ರತಿಕ್ರಿಯಿಸುವಾಗ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಿದ್ದಾರೆ. ಘಟನೆ ನಡೆದ ಸ್ಥಳವು ಕತಾರ್‌ನ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿರಬಹುದು ಎಂದು ಕೆಲವರು ಸೂಚಿಸಿದರು.

ತುಂಬಾ ಮುದ್ದಾಗಿದೆ ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಈ ದಿನವನ್ನು ಆರಂಭಿಸಲು ಎಂತಹಾ ಚಂದದ ವಿಡಿಯೋ ಇದು ಎಂದಿದ್ದಾರೆ ಮತ್ತೊಬ್ಬರು. ನಿಮಗೇನನಿಸುತ್ತೆ ?

Follow Us:
Download App:
  • android
  • ios