ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು, ಭಾವಿ ಪತಿಯಾಗಬೇಕೆಂದರೆ ೧೮ ಷರತ್ತುಗಳನ್ನು ಪಟ್ಟಿ ಮಾಡಿದ್ದಾಳೆ. ವಾರ್ಷಿಕ ೩೬ ಲಕ್ಷ ಡಾಲರ್ ಸಂಬಳ, ಐಷಾರಾಮಿ ಜೀವನ, ಅತಿಯಾದ ಪ್ರೀತಿ, ನಿರಂತರ ಸೇವೆ ಮುಂತಾದ ಬೇಡಿಕೆಗಳಿವೆ. ಈ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಯುವತಿಯ ಆಸೆಯನ್ನು ಟೀಕಿಸಿದ್ದಾರೆ.

ಎಲ್ಲರಿಗೂ ತಮ್ಮ ಜೀವನದಲ್ಲಿ ಸಂಗಾತಿಯಾಗಿ ಬರುವವರು ಹೇಗಿರಬೇಕು ಎಂಬ ಕನಸ್ಸನ್ನು ಕಟ್ಟಿಕೊಂಡಿರುತ್ತಾರೆ. ಕನಸು ಕಟ್ಟಿಕೊಂಡಿರಲು ಹಣವನ್ನೇನೂ ಕೊಡಬೇಕಿಲ್ಲ ಎಂದು ಸ್ವರ್ಗಕ್ಕಿಂತಲೂ ಮಿಗಿಲಾಗಿರುವುದೇ ತನಗೆ ಸಿಗಬೇಕೆಂದುಕೊಳ್ಳುವವರೂ ಸಾಕಷ್ಟಿದ್ದಾರೆ. ಇನ್ನು ಕೆಲವರು ಅತಿಯಾಸೆ ಪಡದೇ ಸಾಮಾನ್ಯ ಮತ್ತು ಉತ್ತಮ ಜೀವನಕ್ಕೆ ಬಯಸುತ್ತಾರೆ. ಒಳ್ಳೆಯ ಕೆಲಸ, ಪರಸ್ಪರ ಗೌರವ ಮತ್ತು ಅರ್ಥ ಮಾಡಿಕೊಳ್ಳುವ ಸಂಗಾತಿ ಬೇಕು ಎಂದು ಬಯಸುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ತನ್ನ ಭಾವಿ ಗಂಡನ ಅರ್ಹತೆಗಳೇನು, ಆತ ಹೇಗಿರಬೇಕು ಎಂದು 18 ಷರತ್ತುಗಳನ್ನು ತನ್ನ ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದಾರೆ. ಇದನ್ನು ಆ ಯುವಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಷರತ್ತುಗಳನ್ನು ಭರಿಸಲಾಗೊಲ್ಲ. ಸಿಂಗಲ್ ಆಗಿ ಸಾಯೋದೇ ಲೇಸು ಎಂದು ನೆಟ್ಟಿಗರು ಆ ಯುವಕನಿಗೆ ಸಲಹೆ ನೀಡಿದ್ದಾರೆ.

ರೆಡ್ಡಿಟ್‌ನಲ್ಲಿ ಒಬ್ಬ ಹುಡುಗ ಈ ಪೋಸ್ಟ್ ಹಾಕಿದ್ದಾನೆ. ಹಿಂಜ್ ಡೇಟಿಂಗ್ ಆ್ಯಪ್‌ನಲ್ಲಿ ಈ ಹುಡುಗಿಗೆ ಮ್ಯಾಚ್ ಆಗಿದ್ದ ಹುಡುಗ, ಆಕೆ ಕೊಟ್ಟ 18 ಷರತ್ತುಗಳ ಲಿಸ್ಟ್ ಅನ್ನು ಸ್ಕ್ರೀನ್‌ಶಾಟ್ ಮಾಡಿ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಇದನ್ನ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಜೊತೆಗೆ, ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಾ ತಮ್ಮ ಅಭಿಪ್ರಾಯ ಮತ್ತು ಟೀಕೆಗಳನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಪ್ಪ-ಅಮ್ಮನ ಮದ್ವೆಗೆ ಕರೆದಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮಗಳು: ತಪ್ಪು ಮಾಡಿಬಿಟ್ರಿ ಅಂತಿರೋ ನೆಟ್ಟಿಗರು

ಇನ್ನು ಯುವಕ ಡೇಟಿಂಗ್ ಆ್ಯಪ್‌ನಲ್ಲಿ 'ನಿಮ್ಮ ಪ್ರೊಫೈಲ್ ನೋಡಿದೆ, ಚೆಕ್‌ಲಿಸ್ಟ್ ಕಳಿಸಿ' ಅಂತ ಹುಡುಗ ಮೆಸೇಜ್ ಮಾಡಿದ್ದಾನೆ. ಆಗ ಆ ಕಡೆಯಿಂದ ಯುವತಿ ನೀವು 'ಲಿಸ್ಟ್ ನೋಡ್ಬೇಕಾ?' ಅಂತ ಕೇಳಿದ್ದಾಳೆ. ಆಗ ಯುವಕ ಹೌದು, ಕಳಿಸಿ ನಾನು ಈಡೇರಿಸುತ್ತೇನೆ ಎಂದು ಕೇಳಿದಾಗ ಯುವತಿ ಆ ಕಡೆಯಿಂದ 18 ಷರತ್ತುಗಳ ಲಿಸ್ಟ್ ಕಳಿಸಿದ್ದಾಳಂತೆ. ಇದರಲ್ಲಿ ತನ್ನ ಸಂಗಾತಿ ಆಗಬೇಕಾದ ವ್ಯಕ್ತಿಗೆ ಇರಬೇಕಾದ ಕನಿಷ್ಠ ಅರ್ಹತೆಗಳನ್ನ ಲಿಸ್ಟ್‌ನಲ್ಲಿ ಹಾಕಿದ್ದಾಳಂತೆ. ಅವನು ತನ್ನನ್ನು ತುಂಬಾ ಪ್ರೀತಿಸಬೇಕು, ತನಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು, ಭಾವನಾತ್ಮಕವಾಗಿ ಬುದ್ಧಿವಂತನಾಗಿರಬೇಕು, ದುಡ್ಡು ಮಾಡೋನಾಗಿರಬೇಕು, ಐಷಾರಾಮಿ ಜೀವನ ಇಷ್ಟಪಡೋನಾಗಿರಬೇಕು, ಒಳ್ಳೆ ವ್ಯಕ್ತಿತ್ವ ಇರಬೇಕು ಅಂತೆಲ್ಲಾ ಆಕೆಯ ಬೇಡಿಕೆಗಳಿವೆ.

ಜೊತೆಗೆ, ತಿಂಗಳಿಗೆ 3 ಮಿಲಿಯನ್ ಡಾಲರ್ ಸಂಬಳ ಕೊಡಬೇಕು. ಅತ್ಯಾಧುನಿಕ ಮತ್ತು ಐಷಾರಾಮಿ ಜೀವನ ಹೊಂದಿದ್ದು, ಬುದ್ಧಿವಂತ ಮತ್ತು ಆತ್ಮವಿಶ್ವಾಸವುಳ್ಳವನು ಆಗಿರಬೇಕು. ಫಿಟ್ ಮತ್ತು ಆಕರ್ಷಕ ನಿಲುವು ಹೊಂದಿದ್ದು, ನನ್ನ ಯಾವುದೇ ಕಾರ್ಯಗಳಿಗೂ ಕೋಪ ಮಾಡಿಕೊಳ್ಳಬಾರದು. ಕೇಳಿದ್ದನ್ನೆಲ್ಲಾ ಕೊಡಿಸುವ, ಮೋಜು ಮಸ್ತಿಗಾಗಿ ಹೊರಗೆ ಕರೆದುಕೊಂಡು ಹೋಗುವಂತವನಾಗಿರಬೇಕು. ಲೈಂಗಿಕವಾಗಿ ಶಿಸ್ತುಬದ್ಧ ಮತ್ತು ನಿಷ್ಠಾವಂತನಾಗಿರಬೇಕು. ಗರ್ಭಧಾರಣೆ ತಡೆಗಟ್ಟುವಿಕೆಯನ್ನು ನಿಭಾಯಿಸಬೇಕು. ಯಾವಾಗಲೂ ನನ್ನ ಸೇವೆ ಮಾಡುವವನಾಗಿರಬೇಕು ಎಂದು ಯುವತಿ ಹೇಳಿದ್ದಾಳೆ.

ಇದನ್ನೂ ಓದಿ: ತಮಿಳುನಾಡು ಉದ್ಯಮಿಗೆ ದುಬಾರಿ BMW iX1 ಕಾರು ಗಿಫ್ಟ್ ನೀಡಿದ ಚೀನಾದ ಗೆಳತಿ

ಅವಳು ತನ್ನ ಅವಶ್ಯಕತೆಗಳ ಪಟ್ಟಿಯನ್ನು ನನಗೆ ಕಳುಹಿಸಿದಳು. ಅವುಗಳಲ್ಲಿ ಒಂದು $300k+ ಸಂಬಳವನ್ನು ಒಳಗೊಂಡಿದೆ. ಇಷ್ಟೆಲ್ಲಾ ಷರತ್ತುಗಳನ್ನ ಹಾಕಿರೋ ಹುಡುಗಿಯ ಪೋಸ್ಟ್ ವೈರಲ್ ಆಗಿದೆ. ಜನರೆಲ್ಲಾ ಆಕೆಯನ್ನ ಟೀಕಿಸಿದ್ದಾರೆ. ನೀವೂ ಇದೇ ಲಿಸ್ಟ್ ಅನ್ನು ಆಕೆಗೆ ಕಳಿಹಿಸಿ ನೋಡಿ, ಆಗ ನಿಮಗೆ ಗೊತ್ತಾಗುತ್ತೆ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈಕೆ ಲೈಫ್‌ಲಾಂಗ್ ಸಿಂಗಲ್ ಆಗೇ ಇರ್ತಾಳೆ ಅಂತ ಹೇಳಿದ್ದಾರೆ. ಇನ್ನೊಬ್ಬರು ನೀವು ಆಕೆಯ 18 ಷರತ್ತುಗಳನ್ನು ಈಡೇರಿಸಿ ಸಂಗಾತಿ ಆಗುವ ಬದಲು ಸಿಂಗಲ್ ಆಗಿ ಸಾಯುವುದೇ ಲೇಸು ಎಂದು ಕಾಮೆಂಟ್ ಮಾಡಿದ್ದಾರೆ.