ಒಬ್ಬರನ್ನೇ ಸಂಭಾಳಿಸುವುದು ಕಷ್ಟ, ಇವನು ಹೇಗೆ ಐದೂ ಜನ ಹೆಂಡತಿಯರನ್ನ ಖುಷಿಯಾಗಿಟ್ಟಿದ್ದಾನೆ ಅಂತೀರಾ?, ಮುಂದೆ ಓದಿ...

ನಮ್ಮ ಹಿಂದೂ ಸಮಾಜದಲ್ಲಿ ಮದುವೆಯನ್ನು ಏಳೇಳು ಜನ್ಮಗಳ ಬಂಧವೆಂದು ಹೇಳಲಾಗುತ್ತದೆ. ಪ್ರತಿಯೊಬ್ಬ ಪುರುಷನಾಗಲೀ ಮತ್ತು ಮಹಿಳೆಯಾಗಲೀ ಜೀವನಪರ್ಯಂತ ಏಕೈಕ ಸಂಗಾತಿಯನ್ನೇ ಇಷ್ಟಪಡುವುದು. ಆದರೆ ಜಗತ್ತಿನಲ್ಲಿ ಕೆಲವರಿದ್ದಾರೆ. ಅವರಿಗೆ ಒಬ್ಬ ಹೆಂಡತಿ ಅಥವಾ ಒಬ್ಬ ಗಂಡನಿಂದ ತೃಪ್ತಿಯೇ ಸಿಗಲ್ಲ.

ಕೆಲವೆಡೆ ಒರ್ವ ಮಹಿಳೆ ಮೂರು ಜನ ಸಂಗಾತಿಯೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಾಳೆ. ಮತ್ತೆ ಕೆಲವೆಡೆ ಒಬ್ಬ ಪುರುಷ ಎರಡು ಅಥವಾ ಮೂರು ಹೆಂಡತಿಯರೊಂದಿಗೆ ವಾಸಿಸುತ್ತಾನೆ. ಆದರೆ ಇಂದು ನಾವು ಐವರು ಹೆಂಡರ ಮುದ್ದಿನ ಗಂಡನ ಬಗ್ಗೆ ಹೇಳಲಿದ್ದೇವೆ. ಅಂದಹಾಗೆ ಈತನಿಗೆ ಒಟ್ಟು 11 ಮಕ್ಕಳಿದ್ದು, ಇತ್ತೀಚೆಗಷ್ಟೇ ಈ ವಿಷಯವನ್ನ ರಿವೀಲ್ ಮಾಡಿದ್ದಾನೆ. ಒಬ್ಬರನ್ನೇ ಸಂಭಾಳಿಸುವುದು ಕಷ್ಟ, ಇವನು ಹೇಗೆ ಐದೂ ಜನ ಹೆಂಡತಿಯರನ್ನ ಖುಷಿಯಾಗಿಟ್ಟಿದ್ದಾನೆ ಅಂತೀರಾ?, ಮುಂದೆ ಓದಿ...

ಐವರೂ ಹೆಂಡಂದಿರ ಜೊತೆ ಈತ ತುಂಬಾ ಸಂತೋಷವಾಗಿದ್ದಾನೆ. ಮತ್ತೆ ಅವನ ಎಲ್ಲಾ ಹೆಂಡತಿಯರು ಗಂಡನ ಗಮನ ಸೆಳೆಯಲು ಕಾಂಪಿಟೇಶನ್ ಕೊಡ್ತಾರೆ ಎಂದು ಅವನು ಹೇಳುತ್ತಾನೆ. ಇದನ್ನು ಆತ 'ಆರೋಗ್ಯಕರ ಸ್ಪರ್ಧೆ' ಎಂದು ಪರಿಗಣಿಸುತ್ತಾನೆ. ಈಗ ನಿಮಗನಿಸುತ್ತಿರಬಹುದು. ಇದು ಯಾವ ತರಹ ಫ್ಯಾಮಿಲಿನಪ್ಪಾ ಎಂದು?. ಈ ಫ್ಯಾಮಿಲಿಯನ್ನು ಬ್ಯಾರೆಟ್ ಫ್ಯಾಮಿಲಿ ಎಂದು ಕರೆಯಲಾಗುತ್ತದೆ ಇತ್ತೀಚೆಗಷ್ಟೇ ಬ್ಯಾರೆಟ್ ಫ್ಯಾಮಿಲಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ. ವಿಡಿಯೋದಲ್ಲಿ ಏಕೈಕ ವ್ಯಕ್ತಿ ತನ್ನ ಐವರು ಹೆಂಡತಿಯರೊಂದಿಗೆ ಬಹುಪತ್ನಿತ್ವ ಸಂಬಂಧದಲ್ಲಿರುವುದನ್ನು ಬಹಿರಂಗಪಡಿಸಲಾಗಿದೆ.

ಐವರು ಹೆಂಡತಿಯರೂ ತಮ್ಮ ಗಂಡನನ್ನು ಪ್ರೀತಿಸುತ್ತಾರೆ. ಇನ್ನು ವಿಶೇಷವೆಂದರೆ ಅವನ ಇಡೀ ಕುಟುಂಬವು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸುತ್ತದೆ ಮತ್ತು ಎಲ್ಲಾ ಹೆಂಡತಿಯರು ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತಾರೆ.

ವೀಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಹೆಂಡತಿಯರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಈ ವಿಚಿತ್ರ ಸಂಬಂಧದ ಬಗ್ಗೆ ಹೆಮ್ಮೆ ಪಡುತ್ತಾರೆ. ಅವರು ತಮ್ಮ ಜೀವನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡ್ತಾರೆ. ಕೆಲವು ತಿಂಗಳ ಹಿಂದೆ ಅವರ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು, ಅದನ್ನು 27.7 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಪತಿ ಮನೆಗೆ ಬಂದ ತಕ್ಷಣ, ಜೆಸ್, ಗ್ಯಾಬಿ, ಡಯಾನಾ, ಕ್ಯಾಮ್ ಮತ್ತು ಸ್ಟಾರ್ (ಐವರು ಹೆಂಡತಿಯರು) ತಮ್ಮ ಕೆಲಸವನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಇದು ತೋರಿಸುತ್ತದೆ. ಕೆಲವರು ನೆಲವನ್ನು ಸ್ವಚ್ಛಗೊಳಿಸುತ್ತಿದ್ದರೆ, ಕೆಲವರು ಪಾತ್ರೆಗಳನ್ನು, ಮತ್ತೆ ಕೆಲವರು ಸೋಫಾವನ್ನು, ಮಗುವನ್ನು ತಮ್ಮ ಮಡಿಲಲ್ಲಿ ಹಿಡಿದಿರುವುದನ್ನು ನೋಡಬಹುದು. ಅಷ್ಟೇ ಅಲ್ಲ, ಗಂಡ ಮನೆಗೆ ಬರುತ್ತಿದ್ದ ಹಾಗೆ ಎಲ್ಲವನ್ನೂ ಬಿಟ್ಟು ಚುಂಬಿಸಲು ಸ್ಪರ್ಧಿಸಲು ಪ್ರಾರಂಭಿಸುತ್ತಾರೆ. ಇದು ಮನರಂಜನಾ ವಿಡಿಯೋವಾಗಿದ್ದರೂ, ಅವರ ಸಂಬಂಧ ಹೇಗಿದೆ ಎಂದು ತಿಳಿದುಕೊಳ್ಳಲು ಇಷ್ಟು ಸಾಕು.

"ಗಂಡ ಮನೆಗೆ ಬಂದಾಗ ನಾವೆಲ್ಲರೂ ಮೊದಲು ಅವನನ್ನು ಚುಂಬಿಸಲು ಪ್ರಯತ್ನಿಸುತ್ತಿದ್ದೇವೆ" ಎಂಬ ಶೀರ್ಷಿಕೆಯನ್ನು ವಿಡಿಯೋಗೆ ಕೊಟ್ಟಿದ್ದು, ಅದಕ್ಕೆ ಪ್ರತಿಯಾಗಿ ಗಂಡ ತಮಾಷೆಯಾಗಿ "ಸ್ವಲ್ಪ ಆರೋಗ್ಯಕರ ಸ್ಪರ್ಧೆಯಲ್ಲಿ ಯಾವುದೇ ತಪ್ಪಿಲ್ಲ" ಎಂದು ಟ್ಯಾಗ್ ಮಾಡಿರುವುದನ್ನು ನೀವಿಲ್ಲಿ ಕಾಣಬಹುದು.

ನೆಟ್ಟಿಗರು ಪ್ರತಿಕ್ರಿಯಿಸಿದ ರೀತಿಯೂ ವೈರಲ್
ಇವರ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಜನರು ಸಾವಿರಾರು ತರಹ ಪ್ರತಿಕ್ರಿಯೆ ನೀಡುತ್ತಿದ್ದಾರೆ. "ನನಗೆ ಅಂತಹ ಸಂಬಂಧ ಎಂದಿಗೂ ಸಿಗದಿರಲಿ", "ಇದನ್ನು ನೋಡಿದ ನಂತರ ನನ್ನ ಆತ್ಮವೇ ನಡುಗಿತು." "ನಿರಾಶಾದಾಯಕ" ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು " 5 ಮಹಿಳೆಯರೊಂದಿಗೆ ಸಂಬಂಧದಲ್ಲಿರುವ ಏಕೈಕ ಪುರುಷನಾಗಿರುವುದು ಖಂಡಿತವಾಗಿಯೂ ಅನುಮಾನಾಸ್ಪದವಾಗಿದೆ." "ಆಗಾಗ್ಗೆ ಮೋಸ ಮಾಡುವ ಅಥವಾ ಸಂಬಂಧಗಳನ್ನು ಬದಲಾಯಿಸುವ ಪುರುಷರಿಗೆ ಈ ರಿಲೇಶನ್‌ಶಿಪ್ ಉತ್ತಮ" ಎಂದು ತಿಳಿಸಿದ್ದಾರೆ. ಹಾಗೆಯೇ "ಅವರು ತಮ್ಮ ಜೀವನದಲ್ಲಿ ಬೇರೆ ಯಾವುದೇ ಪುರುಷನನ್ನು ಬಯಸುವುದಿಲ್ಲ ಮತ್ತು ಒಬ್ಬ ಗಂಡನನ್ನು ಮಾತ್ರ ಹಂಚಿಕೊಳ್ಳಲು ಸಂತೋಷಪಡುತ್ತಾರೆ" ಎಂದು ಕಾಮೆಂಟ್‌ನಲ್ಲಿ ಹಾಕಿರುವುದನ್ನು ನೀವಿಲ್ಲಿ ಗಮನಿಸಬಹುದು.