Asianet Suvarna News Asianet Suvarna News

ಎರಡು ಮಕ್ಕಳ ನಂತ್ರ Full Stop..ಭಾರತದಲ್ಲಿ ಕಡಿಮೆಯಾಯ್ತು ಫಲವತ್ತತೆ ದರ

Women fertility rate: ಮಕ್ಕಳಿರಲವ್ವ ಮನೆ ತುಂಬ ಎಂಬ ಕಾಲ ಈಗಿಲ್ಲ. ಹಾಗಾಗಿ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬರ್ತಿದೆ. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬ ನಿಯಮ ಮಾಡಿಕೊಂಡಿದ್ದಾರೆ. ಆದ್ರೆ ಗಂಡು ಮಗು ಆಸೆ ಮಾತ್ರ ಇನ್ನೂ ಹೋಗಿಲ್ಲ.
 

Fertility Rate Reduced in India From 2.2 To 2.0
Author
Bangalore, First Published May 11, 2022, 4:01 PM IST

ದೇಶ (Country) ದ ಜನರಿಗೆ ಖುಷಿ ಸುದ್ದಿ ಸಿಕ್ಕಿದೆ. ಜನಸಂಖ್ಯೆ (Population) ಯಲ್ಲಿ ಮುಂದಿರುವ ಭಾರತ (India) ದಲ್ಲಿ ಜನಸಂಖ್ಯೆ ನಿಯಂತ್ರಣವಾಗ್ತಿದೆ. ದೇಶದ ಜನಸಂಖ್ಯೆಯ ವೇಗದಲ್ಲಿ ಭಾರಿ ಇಳಿಕೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಇತ್ತೀಚಿನ ವರದಿಯಲ್ಲಿ ಇದು ಬಹಿರಂಗವಾಗಿದೆ. ವರದಿಯ ಪ್ರಕಾರ, ದೇಶದಲ್ಲಿ ಮಕ್ಕಳ ಜನನದ ಪ್ರಮಾಣವು ಶೇಕಡಾ 2.2 ರಿಂದ ಶೇಕಡಾ 2 ಕ್ಕೆ ಇಳಿದಿದೆ. 

ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಾಸರಿ ಹೆರುವ ಮಕ್ಕಳ ಸಂಖ್ಯೆಯನ್ನು ಒಟ್ಟು ಫಲವತ್ತತೆ ದರವೆನ್ನಲಾಗುತ್ತದೆ. ಹೊಸ ಸಮೀಕ್ಷೆ ವರದಿ ಪ್ರಕಾರ, ಭಾರತದ ಕೇವಲ ಐದು ರಾಜ್ಯಗಳಲ್ಲಿ ಫಲವತ್ತತೆ ದರ ಶೇಕಡಾ 2.1ಕ್ಕಿಂತ ಹೆಚ್ಚಿದೆ. ಬಿಹಾರದಲ್ಲಿ ಫಲವತ್ತತೆ ದರ 2.98, ಮೇಘಾಲಯ 2.91, ಉತ್ತರ ಪ್ರದೇಶ 2.35 , ಜಾರ್ಖಂಡ್  2.26  ಮತ್ತು ಮಣಿಪುರದಲ್ಲಿ ಶೇಕಡಾ 2.17ರಷ್ಟು ಫಲವತ್ತತೆ ದರವಿದೆ. ಎನ್ ಎಫ್ ಎಚ್ ಎಸ್ – 5ರ ಸಮೀಕ್ಷೆಯು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ 707 ಜಿಲ್ಲೆಗಳಲ್ಲಿ 6.37 ಲಕ್ಷ ಕುಟುಂಬಗಳನ್ನು ಒಳಗೊಂಡಿದೆ. ಇವರಲ್ಲಿ 7,24,115 ಮಹಿಳೆಯರು ಮತ್ತು 1,01,839 ಪುರುಷರು ಸೇರಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 35 ಪುರುಷರು ಗರ್ಭನಿರೋಧಕವನ್ನು ಬಳಸುವುದು ಮಹಿಳೆಯರ ಕೆಲಸ ಎಂದು ನಂಬುತ್ತಾರೆ. ಚಂಡೀಗಢದಲ್ಲಿ ಅತಿ ಹೆಚ್ಚು ಶೇಕಡಾ 69 ಪುರುಷರು ಗರ್ಭನಿರೋಧಕವನ್ನು ಬಳಸುವುದು ಮಹಿಳೆಯರ ಕೆಲಸ ಎಂದಿದ್ದಾರೆ. ಪುರುಷರು ಇದರ ಬಗ್ಗೆ ಚಿಂತಿಸಬೇಕಾಗಿಲ್ಲ  ಎಂದಿದ್ದಾರೆ. ಕೇರಳದಲ್ಲಿ ಶೇಕಡಾ 55.2 ರಷ್ಟು ಪುರುಷರು ಕಾಂಡೋಮ್ ಅನ್ನು ಸರಿಯಾಗಿ ಬಳಸಿದರೆ ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಧಾರಣೆಯನ್ನು ತಡೆಯಬಹುದು ಎಂದಿದ್ದಾರೆ.    

ದೇಶದಲ್ಲಿ ಗರ್ಭನಿರೋಧಕಗಳ ಬಗ್ಗೆ ಜಾಗೃತಿಯ ಮಟ್ಟವು ಬಹುತೇಕ ಏಕರೂಪವಾಗಿದೆ ಎಂದು ಕಂಡುಬಂದಿದೆ. ದೇಶದಲ್ಲಿ ಗರ್ಭನಿರೋಧಕ ಪ್ರೆವೆಲೆನ್ಸ್ ರೇಟ್ ಶೇಕಡಾ 54ರಿಂದ ಶೇಕಡಾ 67 ಕ್ಕೆ ಏರಿದೆ. ಶೇಕಡಾ 99ರಷ್ಟು ವಿವಾಹಿತ ಮಹಿಳೆಯರು ಮತ್ತು ಪುರುಷರು ಕನಿಷ್ಠ ಒಂದು ಆಧುನಿಕ ಗರ್ಭನಿರೋಧಕ ವಿಧಾನವನ್ನು ತಿಳಿದಿದ್ದಾರೆ. ಇವರಲ್ಲಿ ಶೇಕಡಾ 54.6ರಷ್ಟು ಮಂದಿ ಮಾತ್ರ ಅವುಗಳನ್ನು ಬಳಸುತ್ತಿದ್ದಾರೆ. ಸಮೀಕ್ಷೆಗೆ ಒಳಪಟ್ಟ ಶೇಕಡಾ 66.3ರಷ್ಟು ಮಹಿಳೆಯರು ಆಧುನಿಕ ಗರ್ಭನಿರೋಧಕಗಳನ್ನು ಬಳಸಿದ್ದಾರೆ.  ನಿರುದ್ಯೋಗಿ ಮಹಿಳೆಯರಲ್ಲಿ ಈ ಅಂಕಿ ಅಂಶವು ಶೇಕಡಾ 53.4 ರಷ್ಟಿದೆ.

LOVE TRAGEDY : ಹೆಂಡತಿಯ ಬಾಯ್‌ಫ್ರೆಂಡ್‌ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್

ಆದಾಯದೊಂದಿಗೆ ಗರ್ಭನಿರೋಧಕಗಳ ಬಳಕೆ ಹೆಚ್ಚಳ : ಕುಟುಂಬ ಯೋಜನೆಯ ಅಗತ್ಯವು ಆರ್ಥಿಕವಾಗಿ ಹಿಂದುಳಿದವರಲ್ಲಿ ಅತ್ಯಧಿಕವಾಗಿದೆ. ಹಿಂದುಳಿದವರಲ್ಲಿ ಶೇಕಡಾ 11.4 ರಷ್ಟು ಮತ್ತು ಶ್ರೀಮಂತರಲ್ಲಿ ಶೇಕಡಾ 8.6ರಷ್ಟಿದೆ. ಅಧ್ಯಯನದ ಪ್ರಕಾರ, ಆದಾಯ ಹೆಚ್ಚಾದಂತೆ, ಗರ್ಭನಿರೋಧಕಗಳ ಬಳಕೆ ಹೆಚ್ಚಾಗುತ್ತದೆ. ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಂ ಮುತ್ರೇಜಾ, "ಅಭಿವೃದ್ಧಿಯು ಅತ್ಯುತ್ತಮ ಗರ್ಭನಿರೋಧಕವಾಗಿದೆ ಎಂಬುದನ್ನು ಈ ಡೇಟಾ ಸಾಬೀತುಪಡಿಸುತ್ತದೆ ಎಂದಿದ್ದಾರೆ.  

ಸಮೀಕ್ಷೆಯಲ್ಲಿ  ಸ್ಥೂಲಕಾಯತೆಯದ ಬಗ್ಗೆಯೂ ಹೇಳಲಾಗಿದೆ. ಸ್ಥೂಲಕಾಯ ಹೆಚ್ಚಾಗ್ತಿರುವುದು ಒಂದು ಸವಾಲಾಗಿ ಪರಿಣಮಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ರಾಷ್ಟ್ರಮಟ್ಟದಲ್ಲಿ ಬೊಜ್ಜು ಶೇಕಡಾ 24ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಹೆಚ್ಚುತ್ತಿರುವ ಸ್ಥೂಲಕಾಯತೆಯ ಹಿಂದಿನ ಪ್ರಮುಖ ಕಾರಣ ಐಷಾರಾಮಿ ಜೀವನ ಎಂದು ಉಲ್ಲೇಖಿಸಲಾಗಿದೆ.  

ಆಡುವ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ, ಐದು ವರ್ಷಕ್ಕೇ ಮಗುವೊಂದು ಮಡಿಲಿನಲ್ಲಿತ್ತು !

ವಿಶ್ಲೇಷಕರ ಪ್ರಕಾರ, ಒಟ್ಟು ಫಲವತ್ತತೆ ದರದಲ್ಲಿ ಇಳಿಕೆ ಎಂದರೆ ದಂಪತಿ  ಸರಾಸರಿ ಎರಡು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಎಂದರ್ಥ. ಕುಟುಂಬಗಳು ಗಾತ್ರದಲ್ಲಿ ಚಿಕ್ಕದಾಗುತ್ತಿವೆ. ಆದರೆ  ಕುಟುಂಬವನ್ನು ಚಿಕ್ಕದಾಗಿಡಲು ತಮ್ಮದೇ ಆದ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿವೆ. ಸಾಮಾನ್ಯವಾಗಿ ಅವಿಭಕ್ತ ಕುಟುಂಬ ರಚನೆಯು ಅಂತ್ಯಗೊಳ್ಳುತ್ತಿದೆ ಮತ್ತು ಆರ್ಥಿಕ ಒತ್ತಡ ಮತ್ತು ದುಡಿಯುವ ದಂಪತಿಗೆ ಮಕ್ಕಳ ಆರೈಕೆ ಕಷ್ಟವಾಗ್ತಿದೆ. ಹಾಗಾಗಿ ಸಣ್ಣ ಕುಟುಂಬವನ್ನು ಹೊಂದಲು ಪ್ರಾಮುಖ್ಯತೆ ನೀಡ್ತಿದ್ದಾರೆ. ಆದರೆ, ಗಂಡು ಮಗುವಿನ ಆಸೆಯಲ್ಲಿ ಎರಡು ಮಕ್ಕಳಿಗೆ ಮಾತ್ರ ಸೀಮಿತವಾಗದ ಒಂದು ವರ್ಗ ಸಮಾಜದಲ್ಲಿದೆ ಎನ್ನುತ್ತಾರೆ ವಿಶ್ಲೇಷಕರು. 

Follow Us:
Download App:
  • android
  • ios