ನಿಮ್ಮ ಪ್ರಣಯ ಜೀವನವನ್ನು ಮತ್ತೆ ರೋಮಾಂಚಕಗೊಳಿಸಲು ಫೆಂಗ್ ಶೂಯಿ ಸಲಹೆಗಳು. ಬೆಡ್‌ರೂಮಿನ ಸಮಯವನ್ನು ಮತ್ತಷ್ಟು ಮಸಾಲೆಭರಿತವಾಗಿಸಲು ಈ ಟಿಪ್ಸ್‌ಗಳು ನಿಮಗೆ ನೆರವಾಗಬಹುದು.
ನಿಮ್ಮ ಪ್ರಣಯ ಜೀವನದ ಸಾಕಷ್ಟು ಮಸಾಲೆಯುಕ್ತವಾಗಿ ಇಲ್ವಾ? ಅಲ್ಲಿ ರೋಮಾಂಚನ ಕಳೆದುಹೋಗಿದೆಯಾ? ಮೊದಲಿನಂತೆ ಈಗ ಮಧುಮಂಚ ಬೆಂಕಿ ಹೊತ್ತಿಕೊಂಡು ಉರೀತಾ ಇಲ್ವಾ? ಹಾಗಿದ್ರೆ ನೀವು ಕೆಲವು ಫೆಂಗ್ ಶುಯಿ ವಿಧಾನಗಳನ್ನು ಪ್ರಯತ್ನಿಸಿ ನೋಡಿ. ಕಳೆದುಹೋದ ಮಧು ಮತ್ತೆ ಮರಳಿ ಬಂದು ಸವಿಸವಿ ಆಗಲೂಬಹುದು. ಪ್ರೀತಿಯಲ್ಲಿ ಎಲ್ಲರೂ ಅದೃಷ್ಟವಂತರಲ್ಲ. ನಮ್ಮಲ್ಲಿ ಅನೇಕರು ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾರೆ. ಅನೇಕ ವೇಳೆ ಅಂಥವರು ಸಿಕ್ಕರೂ ಉಳಿಸಿಕೊಳ್ಳಲು ವಿಫಲರಾಗುತ್ತಾರೆ. ಮುಖ್ಯವಾಗಿ ಲೈಂಗಿಕ ಜೀವನವನ್ನು ಮತ್ತೆ ಮತ್ತೆ ರಸಮಯಗೊಳಿಸಲು ಆಗದೇ ಇರುವ ದೌರ್ಬಲ್ಯ. ಅಂಥ ಸಂದರ್ಭದಲ್ಲಿ ಫೆಂಗ್ ಶೂಯಿಗೆ ಒಮ್ಮೆ ಏಕೆ ಅವಕಾಶ ನೀಡಬಾರದು? ಹೃದಯಪೂರ್ವಕ ಅದನ್ನೊಮ್ಮೆ ಮಾಡಿ ನೋಡಿ. ಫೆಂಗ್ ಶೂಯಿ ಪ್ರಕಾರ ನಿಮ್ಮ ಮನೆಯಲ್ಲಿ, ಬೆಡ್‌ರೂಮಿನಲ್ಲಿ ಪ್ರಣಯದ ವಾತಾವರಣ ನಿರ್ಮಿಸಲು ಸಾಧ್ಯವಿದೆ.
ಗುಲಾಬಿ ಬಣ್ಣದ ತಾಜಾ ಬೆಡ್ ಶೀಟ್‌ಗಳು
ಕೆಲವು ಫೆಂಗ್ ಶೂಯಿ ತಜ್ಞರ ಪ್ರಕಾರ, ನೈರ್ಮಲ್ಯಕ್ಕಾಗಿ ಮಾತ್ರವಲ್ಲ, ಉತ್ತಮ ಪ್ರೇಮ ಜೀವನಕ್ಕಾಗಿ, ಮಂಚದಲ್ಲಿ ತಾಜಾ ಬೆಡ್ ಶೀಟ್‌ಗಳ ಬಳಕೆ ಮಾಡಬೇಕು. ಅದು ನಿಮ್ಮ ಪ್ರೇಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗುಲಾಬಿ, ತಿಳಿಗುಲಾಬಿ, ಕೆನೆ ಬಣ್ಣಗಳು ಪ್ರೀತಿಯನ್ನು ಪ್ರತಿನಿಧಿಸುತ್ತವೆ.
ಕೆಂಪು ಬಣ್ಣದ ಆವರಣ
ನಿಮ್ಮ ಕೋಣೆಗೆ ಕೆಂಪು ಬಣ್ಣವನ್ನು ಸೇರಿಸಿ. ಗೋಡೆಯ ಒಂದು ಕಡೆ ಇರಬಹುದು, ಕೆಂಪಿನ ಪೇಂಟಿಂಗ್ ಇರಬಹುದು, ಕೆಂಪು ಗೆರೆಗಳಿರಬಹುದು, ಕೆಂಪು ದೀಪವೂ ಇರಬಹುದು. ಇದು ಉತ್ಸಾಹವನ್ನು ತರುತ್ತದೆ, ಪ್ರೀತಿಯನ್ನು ಆಕರ್ಷಿಸುತ್ತದೆ. ಆದರೆ ಇದನ್ನು ಅತಿಯಾಗಿ ಮಾಡಬೇಡಿ. ಏಕೆಂದರೆ ಅದು ಆಕ್ರಮಣಶೀಲತೆ ಮತ್ತು ಕೋಪವನ್ನು ಆಕರ್ಷಿಸುತ್ತದೆ.
ವಸ್ತುಗಳನ್ನು ಜೋಡಿ ಮಾಡಿ
ಸಿಂಗಲ್ಸ್ ಗಿಂತಲೂ ಜೋಡಿಗಳು ಮುಖ್ಯ. ಬೆರೆಯಲು ಸಿದ್ಧವಾಗಿರುವ ಜೋಡಿ ಶಿಲ್ಪಗಳು, ಚಿತ್ರಗಳಲ್ಲಿ ಜೋಡಿ, ಜೋಡಿ ಲ್ಯಾಂಪ್ ಹೀಗೆ. ಕೋಣೆಯ ಅಲಂಕಾರದಲ್ಲಿ ಇವು ಕೆಲಸ ಮಾಡಬೇಕು. ಎರಡು ಕುರ್ಚಿಗಳು, ಎರಡು ಹಂಸಗಳು ಅಥವಾ ಜೋಡಿಯಾಗಿರುವ ಅಲಂಕಾರಿಕ ವಸ್ತುಗಳನ್ನು ಇಡಿ. ಮಲಗುವ ಕೋಣೆಯಲ್ಲಿ ಒಬ್ಬನ ಶಕ್ತಿಯನ್ನು ಯಾವುದೂ ಪ್ರಕ್ಷೇಪಿಸಲು ಬಿಡಬೇಡಿ. ಅದು ನಿಮ್ಮ ವೈಯಕ್ತಿಕ ಜೀವನದಲ್ಲಿ ಪ್ರತಿಫಲಿಸುತ್ತದೆ ಮತ್ತು ಪ್ರಕಟವಾಗುತ್ತದೆ.
ಹೆಚ್ಚಿನ ದಿಂಬುಗಳು, ಸ್ಟಫ್ಡ್ ಆಟಿಕೆ ತಪ್ಪಿಸಿ
ಹಲವರಿಗೆ ಹೆಚ್ಚಿನ ದಿಂಬುಗಳು ಮತ್ತು ಸ್ಟಫ್ಡ್ ಆಟಿಕೆಗಳ ಮೇಲೆ ಅಪಾರ ಪ್ರೀತಿ ಇರುತ್ತದೆ. ಫೆಂಗ್ ಶೂಯಿ ಇದಕ್ಕೆ ವಿರುದ್ಧವಾಗಿದೆ. ಇದು ಅಸ್ತವ್ಯಸ್ತತೆ ಉಂಟುಮಾಡುತ್ತದೆ ಹೊರತು ಬೇರೇನೂ ಅಲ್ಲ. ಆ ಮೂಲಕ ನಿಮ್ಮ ಜೀವನದಲ್ಲಿ ಬೇರೆ ಯಾವುದೇ ಜೀವಿಗಳಿಗೆ ಸ್ಥಳವಿಲ್ಲ ಎಂದು ನೀವು ಒಂದು ರೀತಿಯಲ್ಲಿ ಹೇಳುತ್ತಿದ್ದೀರಿ ಎಂದರ್ಥ. ಸ್ಟಫ್ಟ್ ಪ್ರಾಣಿಗಳನ್ನು ಬೆಡ್‌ರೂಮಿನಲ್ಲಿ ಇಡಲೇಬಾರದು. ಇವು ಶವವಿದ್ದಂತೆ.
ತಾಜಾ ಹೂವುಗಳು
ದಯವಿಟ್ಟು ಸತ್ತ ಹೂವುಗಳನ್ನು, ಪ್ಲಾಸ್ಟಿಕ್ ಹೂವುಗಳಲ್ಲಿ ಇಟ್ಟುಕೊಳ್ಳಬೇಡಿ. ತಾಜಾ ಹೂವುಗಳನ್ನು ಇಡಿ. ನಿಮ್ಮ ಮನೆಯನ್ನು ಅಲಂಕರಿಸಿ, ಕೆಲವು ತಾಜಾ ಹೂವುಗಳನ್ನು ಅಲ್ಲಿ ಸೇರಿಸಿ. ಏಕೆಂದರೆ ಇದು ನಿಮ್ಮ ಮನೆಗೆ ಹೊಸ ಜೀವವನ್ನು ಆಕರ್ಷಿಸುತ್ತದೆ. ನಿಮ್ಮ ವಾಸಸ್ಥಾನವು ಪರಿಮಳಯುಕ್ತವಾಗುತ್ತದೆ ಮತ್ತು ಸಕಾರಾತ್ಮಕ ವೈಬ್‌ಗಳನ್ನು ನೀಡುತ್ತದೆ.
ಶೂ ನಿಮ್ಮ ಹಣೆಬರಹ ಬದಲಾಯಿಸುತ್ತೆ, ನಿಮ್ಮ ರಾಶಿ ಪ್ರಕಾರ ಯಾವ ಶೂಗಳು ನಿಮಗೆ ಶುಭ ಗೊತ್ತಾ?
ಉರಿಯುವ ಮೇಣದಬತ್ತಿ
ತಜ್ಞರ ಪ್ರಕಾರ, ನಸು ಬೆಂಕಿ ಹೊಸ ಸಂಬಂಧಗಳನ್ನು ಹುಟ್ಟುಹಾಕುತ್ತದೆ ಮತ್ತು ಪ್ರೀತಿಯನ್ನು ಜೀವಂತವಾಗಿರಿಸುತ್ತದೆ. ಆದ್ದರಿಂದ ಪ್ರೀತಿಯನ್ನು ಆಕರ್ಷಿಸುವಂತೆ ನಿರಂತರವಾಗಿ ಮೇಣದ ಬತ್ತಿಯನ್ನು ಬೆಳಗಿಸಿ. ಕೇವಲ ಒಂದು ಸಾಕು. ಹಣತೆ ಅದರೂ ಓಕೆ. ಆದರೆ ಹಣತೆಯ ಎಣ್ಣೆ ವಾಸನೆ ಬರದಂತಿರಲಿ.
ಸುಗಂಧದ ಅರೋಮಾಥೆರಪಿ
ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ, ಸುಗಂಧಗಳು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅನೇಕರು ಅರ್ಥ ಮಾಡಿಕೊಂಡಿಲ್ಲ. ನಿಮ್ಮ ಮನೆ ಯಾವಾಗಲೂ ಉತ್ತಮ ಪರಿಮಳ ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಏನು ಸುಟ್ಟರೂ ಅಥವಾ ನೀವು ಮನೆಯಲ್ಲಿ ಏನು ಇರಿಸಿದರೂ ಅದು ಸಕಾರಾತ್ಮಕ ಮತ್ತು ಸಂತೋಷದ ಪರಿಮಳವನ್ನು ಹೊರಸೂಸಬೇಕು. ಆಹ್ವಾನಿಸುವ ವಾತಾವರಣ ಇರಬೇಕು.
ನೀವು ಮನೆಯಿಂದ ಹೊರಡುವಾಗ ಈ 3 ಪಕ್ಷಿಗಳಲ್ಲಿ ಒಂದನ್ನು ನೋಡಿದರೆ, ನಿಮ್ಮ ಭವಿಷ್ಯ ಬದಲಾಗಲಿದೆ ಎಂದರ್ಥ!
