Fathers' day: ಕೇವಲ ವೃತ್ತಿಯಲ್ಲ, ಮದುವೆ, ಮಕ್ಕಳ ವಿಷಯದಲ್ಲಿ ನನ್ನ ನಿರ್ಧಾರ ಬೆಂಬಲಿಸೋ ಅಪ್ಪಯ್ಯ!

ಅಪ್ಪಂದಿರ ದಿನದ ಪ್ರಯುಕ್ತ ಎಲ್ಲರೂ ಅವರವರ ಅಪ್ಪನ ವ್ಯಕ್ತಿತ್ವದ ಬಗ್ಗೆ ಮಾತಾಡುತ್ತಲೇ ಇದ್ದಾರೆ. ಇಲ್ಲೊಬ್ಬಾಕೆ ನವ ನಿರ್ದೇಶಕಿ ತಮ್ಮ ತಂದೆಯ ಅಪರೂಪದ ಆಲೋಚನೆಗಳ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. 

Fathers day special actress director Medini Kelamane shared her special bonding with father skr

'ತಂದೆಯನ್ನು ನಾನು ಮತ್ತು ತಮ್ಮ 'ಅಪ್ಪಯ್ಯ' ಎಂದು ಕರೆಯುವುದು. ನನಗೆ ಹಾಗೆ ಕರೆಯುವುದು ಚೂರೂ ಇಷ್ಟವಿರಲಿಲ್ಲ. ಆದರೆ ಅವರಿಗೆ ಹಾಗೇ ಕರೆಸಿಕೊಳ್ಳಲು ಇಷ್ಟ. ಅಪ್ಪನಿಗೆ ನನ್ನ ಬಗ್ಗೆ healthy possessiveness. ಸಣ್ಣವಳಿರುವಾಗ ಅಪ್ಪ ಅಮ್ಮನ ಜೊತೆ ನಾಟಕದ ಶೋ ಅಂತ ಊರೂರು ಸುತ್ತಿದ್ದೇ ಜಾಸ್ತಿ. ಮೊದಲ ಬಾರಿ ಮನೆ ಬಿಟ್ಟು ಹೊರಗಡೆ ಓದಲು ಹೋದಾಗ ಒಬ್ಬರೇ ಮನೆ ಹಿಂದೆ ನಿಂತು ಅಳುತ್ತಿದ್ದರಂತೆ. ಕಳಿಸಿ ವಾರದೊಳಗೆ ನನ್ನನ್ನು ನೋಡಲು ಹಾಸ್ಟೆಲಿಗೆ ಬಂದಿದ್ದರು. ಎಷ್ಟೇ ಜಗಳವಾಡಿದರೂ ಎಲ್ಲಾದರೂ ಹೋಗಬೇಕು ಅಂದಾಗ ಒಟ್ಟಾಗಿ ಬಿಡುತ್ತೇವೆ. ಈ ಸಲ ಊರಿನ ಮಾರಿ ಜಾತ್ರೆಗೆ ಪ್ರತಿ ದಿನ ಹೋಗಿದ್ದೇವೆ. ನಾನು ಡಾನ್ಸ್ ಮಾಡುತ್ತಾ ಸುತ್ತುತ್ತಿರುವಾಗ ಅವರು ನನ್ನ ಹಿಂದೆ ಕೈ ಕಟ್ಟಿ ನಡೆಯುತ್ತಾ ಬರುತ್ತಿದ್ದರು.

ಎಲ್ಲಕ್ಕಿಂತ impressive ಅನ್ನಿಸಿದ ಘಟನೆ ಅಂದರೆ, ನನಗೆ ಮದುವೆಯಾಗಲು ಇಷ್ಟವಿಲ್ಲ. ಅದನ್ನು ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳಿದ್ದೇನೆ. ಸಂಪೂರ್ಣವಾಗಿ ಕನ್ವಿನ್ಸ್‌ ಆಗದಿದ್ದರೂ, ಅವರದನ್ನು ಒಪ್ಪಿಕೊಂಡಿದ್ದಾರೆ. ಅಪ್ಪನ ಬಗ್ಗೆ ನನಗೆ ಬಹಳ ಸಂತೋಷ ಕೊಟ್ಟ ವಿಷಯವೆಂದರೆ, ಒಂದು ದಿನ ಯಾವುದೋ ಮಗುವಿನ ಬಗ್ಗೆ ಹೀಗೆ passionate ಆಗಿ ಏನೋ ಮಾತಾಡುತ್ತಾ ಕೂತಿದ್ದೆ. ಅಪ್ಪ ಇದ್ದಕ್ಕಿದ್ದಂತೆ 'ನೀನು ನಿನ್ನ ಮಗುವನ್ನು ಹಡೆದುಕೋ' ಅಂದರು. ಹೀಗೆ ಅವಿವಾಹಿತೆಯಾಗಿಯೇ ಉಳಿದು, ನನ್ನದೇ ಮಗು ಪಡೆವ ಈ ಬಯಕೆ ನನ್ನಲ್ಲಿ ಎರಡು ವರ್ಷಗಳಿಂದ ಇತ್ತು. ಮನೆಯಲ್ಲಿ ಹೇಳಿರಲಿಲ್ಲ. ಅವರೇ ಇದನ್ನು ಹೇಳಿದಾಗ ನಿಜವಾಗಲೂ ಹೆಮ್ಮೆ ಎನಿಸಿತು.'

- ಮೇದಿನಿ ಕೆಳಮನೆ, ನಟಿ, ನಿರ್ದೇಶಕಿ

Happy Fathers Day 2023: ಪ್ರೀತಿಯ ಅಪ್ಪನಿಗೆ ಈ ರೀತಿ ಶುಭಾಶಯ ತಿಳಿಸಿ

ಮೇದಿನಿ ಕೆಳಮನೆ ಪರಿಚಯ: ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ(ಎನ್ಎಸ್‌ಡಿ)ದಿಂದ ಪದವಿ ಪಡೆದಿರುವ ಮೇದಿನಿ ಕೆಳಮನೆ ಸಾಗರದ ಹೆಗ್ಗೋಡಿನವರು. ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಲೆ ಮತ್ತು ಸಂಸ್ಕೃತಿಯ ಪರಿಸರದಲ್ಲಿ ಬೆಳೆದ ಅವರು ಬಾಲ್ಯದಿಂದಲೂ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡದಲ್ಲಿ ನಟೇಶ್ ಹೆಗ್ಡೆಯವರ 'ಪೆಡ್ರೊ',  ಶೈಲಜಾ ಪಡಿಂದಾಲ ನಿರ್ದೇಶನದ ‘ನಾನು ಲೇಡೀಸ್’ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರು ವಿನಯ್ ರಾಜ್‌ಕುಮಾರ್ ಅಭಿನಯದ 'ಪೆಪೆ' ಚಿತ್ರದಲ್ಲಿ ಹಾಗೂ ಜನಾರ್ದನ ಜಾನಿ ಅವರ ‘ದೇವರ ಆಟ ಬಲ್ಲವರ್ಯಾರು’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜನಪ್ರಿಯ ನಟ ಮತ್ತು ನಿರ್ದೇಶಕ ಉಪೇಂದ್ರ ನಿರ್ದೇಶನದ ತೆರೆಗೆ ಬರಲು ಸಿದ್ಧವಾಗಿರುವ 'ಯುಐ' ಚಿತ್ರದಲ್ಲಿ ಕೂಡಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಿಂದಿಯಲ್ಲಿ ಪ್ರಸಿದ್ಧ ನಿರ್ದೇಶಕ ಅನುರಾಗ್ ಕಶ್ಯಪ್ ಅವರ 'ದೋಬಾರಾ' ಚಿತ್ರದಲ್ಲಿ ನಟಿಸಿದ್ದಾರೆ. 
ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿ ಕೂಡಾ ಪ್ರಯೋಗಗಳಲ್ಲಿ ತೊಡಗಿರುವ ಮೇದಿನಿ, ತಮ್ಮ ನಿರ್ದೇಶನದ 'ದಾಳಿ' ಕಿರುಚಿತ್ರಕ್ಕೆ ಟೋಟೋ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಕೆ ನಿರ್ದೇಶಿಸಿದ ಮತ್ತೊಂದು ಕಿರುಚಿತ್ರ 'ಮುಕ್ತಾ' ಕೂಡಾ ಅಪಾರ ಮೆಚ್ಚುಗೆ ಗಳಿಸಿದೆ. ಇವೆಲ್ಲವುಗಳೊಂದಿಗೆ ರಂಗಭೂಮಿಯಲ್ಲಿ ಕೂಡಾ ತಮ್ಮನ್ನು ತಾವು ಸತತವಾಗಿ ತೊಡಗಿಸಿಕೊಂಡಿರುವ ಮೇದಿನಿ ಕೆಳಮನೆ ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ. 

Latest Videos
Follow Us:
Download App:
  • android
  • ios