ಕ್ಯಾನ್ಸರ್ ಪೀಡಿತ 10 ವರ್ಷದ ಬಾಲಕಿಗೆ ಕೊನೆಯ ಆಸೆಯಂತೆ ಬಾಯ್‌ಫ್ರೆಂಡ್ ಜೊತೆ ಅದ್ದೂರಿ ಮದುವೆ!
ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 10 ವರ್ಷದ ಬಾಲಕಿಗೆ ಆಕೆಯ ಕೊನೆಯ ಆಸೆಯಂತೆ ಬಾಯ್‌ಫ್ರೆಂಡ್ ಜೊತೆ ಪೋಷಕರು ಮದುವೆ ಮಾಡಿಸಿದ್ದಾರೆ. ಆದರೆ, ಮದುವೆಯಾದ 12 ದಿನಕ್ಕೆ ಎಮ್ಮಾ ಇಹಲೋಕ ತ್ಯಜಿಸಿದ್ದಾಳೆ.
ವಾಷಿಂಗ್ಟನ್ (ಆ.8): ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್‌ಗೆ ತುತ್ತಾದ ಮಕ್ಕಳ ಕೊನೆಯ ಆಸೆಯನ್ನು ತೀರಿಸಿಲು ಅವರನ್ನು ಒಂದು ದಿನ ಪೊಲೀಸ್ ಕಮೀಷನರ್, ಸರ್ಕಾರಿ ಕಚೇರಿಯ ಆಯುಕ್ತರನ್ನಾಗಿ ನೇಮಿಸುವುದನ್ನು ನೋಡಿದ್ದೇವೆ. ಆದರೆ, ಅಮೆರಿಕದಲ್ಲಿ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 10 ವರ್ಷದ ಬಾಲಕಿಗೆ ತನ್ನ ಬಾಯ್‌ಫ್ರೆಂಡ್‌ಅನ್ನು ಮದುವೆಯಾಗುವುದೇ ಕೊನೆಯ ಆಸೆ ಆಗಿತ್ತಂತೆ. ಅಮೆರಿಕದ ನಾರ್ತ್ ಕೆರೋಲಿನಾದ 10 ವರ್ಷದ ಬಾಲಕಿ ಎಮ್ಮಾ ಎಡ್ವಡ್ಸ್ ಇಂದು ಜಗತ್ತಿನಲ್ಲಿಲ್ಲ. ಮದುವೆಯಾದ ಬಾಯ್‌ಫ್ರೆಂಡ್‌ಅನ್ನು ಮದುವೆಯಾದ 12 ದಿನಕ್ಕೆ ಆಕೆ ಅಸುನೀಗಿದ್ದಾಳೆ. ಈಗ ಎಮ್ಮಾ ಎಡ್ವಡ್ಸ್ ಮದುವೆ ಅಮೆರಿಕದಲ್ಲಿ ಭಾರೀ ಚರ್ಚೆಯಾಗುತ್ತಿದೆ. 'ಎಮ್ಮಾಗೆ ತಾನು ಹೆಂಡತಿಯಾಗಬೇಕು ಎನ್ನುವ ಆಸೆ ಇತ್ತು. ಅದೇ ತನ್ನ ಕೊನೆಯ ಆಸೆ ಎಂದೂ ಹೇಳಿಕೊಂಡಿದ್ದರು. ಆಕೆ ಬದುಕಲು ಇನ್ನು ಕೆಲವೇ ದಿನಗಳು ಇವೆ ಎಂದು ವೈದ್ಯರು ಹೇಳಿದಾಗ, ಆಕೆಯ ಆಸೆಯನ್ನು ಈಡೇರಿಸಲು ತೀರ್ಮಾನ ಮಾಡಿದೆವು. ಇದಕ್ಕೆ ನಮ್ಮದೇ ಸ್ನೇಹಿತರು ಅಪಾರವಾಗಿ ಸಹಾಯ ಮಾಡಿದರು. ಸಾಕಷ್ಟು ಹಣ ಸಹಾಯ ಬಂದಿದ್ದವು. ನಮ್ಮೊಂದಿಗೆ ಶಾಶ್ವತವಾಗಿ ಉಳಿಯುವಂತೆ ಹಲವಾರು ನೆನಪುಗಳು ಹಾಗೂ ಚಿತ್ರಗಳನ್ನು ಆಕೆ ಕೊಟ್ಟು ಹೋಗಿದ್ದಾಳೆ' ಎಂದು ಎಮ್ಮಾ ಎಡ್ವಡ್ಸ್‌ನ ಪೋಷಕರು ತಿಳಿಸಿದ್ದಾರೆ.
2022ರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಎಮ್ಮಾಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. 2923ರ ಜೂನ್ 29 ರಂದು ಎಮ್ಮಾ ನಿಧನ ಕಂಡಿದ್ದಾಳೆ. 2022ರ ಏಪ್ರಿಲ್‌ನಲ್ಲಿ ಒಳಾಂಗಣ ಸ್ಟೇಡಿಯಂನಲ್ಲಿ ಆಟವಾಡುವಾಗ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದರು. ಪೋಷಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅನೇಕ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಬಂದ ವರದಿಯನ್ನು ನೋಡಿದಾಗ ತಂದೆ-ತಾಯಿಗೆ ಆಕಾಶವೇ ತಲೆಮೇಲೆ ಕಳಚಿಬಿದ್ದ ಅನುಭವವಾಗಿತ್ತು. ಏಕೆಂದರೆ, ಮಗಳಿಗೆ 'ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ' ಇರುವುದು ಪತ್ತೆಯಾಗಿತ್ತು. ಇದು ಒಂದು ರೀತಿಯ ರಕ್ತದ ಕ್ಯಾನ್ಸರ್. ಸಾಮಾನ್ಯವಾಗಿ ಮಕ್ಕಳಲ್ಲಿಯೇ ಕಂಡುಬರುತ್ತದೆ. ಇದು ಗುಣಪಡಿಸಲಾಗದ ಕಾಯಿಲೆ. ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಸಾಮಾನ್ಯವಾಗಿ ಮಕ್ಕಳಲ್ಲಿ ಅಸ್ಥಿಮಜ್ಜೆ ಮತ್ತು ರಕ್ತವನ್ನು ಹಾನಿಗೊಳಿಸುತ್ತದೆ. ಈ ಜೀವಕೋಶಗಳಲ್ಲಿ ಹೆಚ್ಚಿನವು ಕ್ರಮೇಣ ನಾಶವಾಗುತ್ತವೆ ಮತ್ತು ರೋಗಿಯ ದೇಹವು ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.
ವೈದ್ಯರು ಕೂಡ ಎಮ್ಮಾ ಹೆಚ್ಚಿನ ದಿನ ಬದುಕುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಾರೆ. ಆದರೆ, ಆಕೆಯ ತಂದೆ ಆರೋನ್ ಎಡ್ವರ್ಡ್ಸ್ ಮಾತ್ರ ಅದೆಷ್ಟೇ ಖರ್ಚಾದರೂ ತೊಂದರೆ ಇಲ್ಲ ಕ್ಯಾನ್ಸರ್ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದರೂ, ವೈದ್ಯರು ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ತಿಳಿಸಿದ್ದರು. ಇಷ್ಟರಲ್ಲಾಗಲೇ ಎಮ್ಮಾಗೆ ತಾನು ಬದುಕೋದಿಲ್ಲ ಅನ್ನೋದು ಗೊತ್ತಾಗಿತ್ತು. ತಾಯಿಯ ಬಳಿ, ಸಾಯೋಕು ಮುಂಚೆ ಒಮ್ಮೆ ಹೆಂಡತಿಯಾಗಬೇಕು ಎನ್ನುವ ಆಸೆ ಇದೆ ಅಂದಿದ್ದಳು.
ಕ್ಯಾನ್ಸರ್‌ಗೆ ತಾಯಿ ಕಳೆದುಕೊಂಡೆ, ಡಿಪ್ರೆಶನ್‌ಗೆ ಜಾರಿ ಮಗು ಮಾಡಿಕೊಂಡೆ: 'ಕಿನ್ನರಿ' ನಟಿ ಜ್ಯೋತಿ ರೈ ಕಣ್ಣೀರು
ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ ವಿಲಿಯಮ್ಸ್ ಶಾಲೆಯಲ್ಲಿ ಎಮ್ಮಾಳ ಪ್ರಾಣ ಸ್ನೇಹಿತ. ಪ್ರೀತಿಯಿಂದ ಆತನನ್ನು ಡಿಜೆ ಎಂದು ಕರೆಯುತ್ತಿದ್ದಳು. ದೊಡ್ಡವಳಾದ ಬಳಿಕ ನಿನ್ನನ್ನೇ ಮದುವೆ ಆಗ್ತೀನಿ. ಅಲ್ಲಿಯವರೆಗೂ ನೀನೇ ಬಾಯ್‌ಫ್ರೆಂಡ್ ಎನ್ನುತ್ತಿದ್ದಳು. ಇನ್ನು ಡಿಜೆಗೂ ಎಮ್ಮಾಳ ಜೊತೆ ಇರೋದು ಇಷ್ಟವಾಗಿತ್ತು. ಇಬ್ಬರ ಕುಟುಂಬ ಕೂಡ ಆತ್ಮೀಯಳಾಗಿದ್ದಳು. ಎಮ್ಮಾಳ ಕೊನೆಯ ಆಸೆ ತಿಳಿದ ಬಳಿಕ ಇಬ್ಬರದು ನಕಲಿ ಮದುವೆ ಮಾಡಿಬಿಡೋಣ ಎಂದು ತೀರ್ಮಾನ ಮಾಡಿದರು. ಎಮ್ಮಾಗೆ ಶಾಲೆಯಲ್ಲಿ ಮದುವೆಯಾಗಬೇಕು ಎನ್ನುವ ಆಸೆ ಇತ್ತು. ಆದರೆ, ಶಾಲೆಯ ಆಡಳಿತ ಇದಕ್ಕೆ ಅನುಮತಿ ನೀಡಿರಲಿಲ್ಲ. ಮನೆಯ ಮುಂದಿನ ಗಾರ್ಡನ್‌ನಲ್ಲಿಯ 100ಕ್ಕೂ ಅಧಿಕ ಮಂದಿ ಅತಿಥಿಗಳನ್ನು ಕರೆದು ಎಮ್ಮಾ ಹಾಗೂ ಡಿಜೆಯ ನಕಲಿ ಮದುವೆ ಮಾಡಲಾಯಿತು. ಎಮ್ಮಾಳ ತಾಯಿ ಆಲಿನಾ ನೀಡಿರುವ ಮಾಹಿತಿಯ ಪ್ರಕಾರ, ಸ್ನೇಹಿತರೊಬ್ಬರು ಬೈಬಲ್‌ನ ಪೂರ್ಣ ಪಾಠ ಓದಿ, ಡಿಜೆ ನಮ್ಮ ಅಳಿಯ ಎಂದು ಹೇಳಿದರು. ಇಬ್ಬರೂ ಉಂಗುರವನ್ನು ಬದಲಾಯಿಸಿಕೊಂಡು ಗಂಡ-ಹೆಂಡತಿಯೂ ಆಗಿದ್ದರು,
ನಂಗೂ ಜೀವನ ಸಂಗಾತಿ ಇದ್ದಿದ್ದರೆ ಜೀವನ ಪರಿಪೂರ್ಣ ಎನಿಸುತ್ತಿತ್ತು: ಮನೀಷಾ ಕೊಯಿರಾಲ
ಎಮ್ಮಾ ಆರ್ಮಿ: ಎಮ್ಮಾಳ ಮರಣದ ಮೊದಲು, ಅವಳ ಕಥೆಯು ಆಕೆಯ ಊರಾದ ವಾಲ್‌ನಟ್ ಕೋವ್‌ನ ಪ್ರತಿಯೊಬ್ಬ ನಿವಾಸಿಗಳನ್ನು ತಲುಪಿತ್ತು. ಕೆಲವು ಪ್ರಸಿದ್ಧ ಕಾರ್ ರೇಸರ್‌ಗಳು ಸಹ ಇಲ್ಲಿ ವಾಸಿಸುತ್ತಿದ್ದಾರೆ. ತಮ್ಮ ವಾಹನಗಳ ಮೇಲೆ ‘ಎಮಾಸ್ ಆರ್ಮಿ’ ಸ್ಟಿಕ್ಕರ್‌ಗಳನ್ನು ಹಾಕಿಕೊಂಡಿದ್ದಾರೆ. ಈ ಸ್ಟಿಕ್ಕರ್‌ಗಳ ಮಾರಾಟವನ್ನು ಆಯೋಜಿಸಲಾಗಿತ್ತು ಮತ್ತು ಜನರು ಅವುಗಳನ್ನು ದುಬಾರಿ ಬೆಲೆಗೆ ಖರೀದಿಸಿದರು. ಇದಲ್ಲದೇ ಅನೇಕರು ಅಪಾರ ದೇಣಿಗೆಯನ್ನೂ ನೀಡಿದರು. ಸಾಮಾನ್ಯವಾಗಿ ಮಕ್ಕಳು ತಾನು ಡಿಸ್ನಿಲ್ಯಾಂಡ್‌ಗೆ ಹೋಗಬೇಕು, ಹಾಲಿವುಡ್ ನೋಡಬೇಕು ಎಂದು ಬಯಸುತ್ತದೆ. ಆದರೆ, ನನ್ನ ಮಗಳಿಗೆ ಹೆಂಡತಿಯಾಗಬೇಕು ಎನ್ನುವ ಆಸೆ ಇತ್ತ. ಅದನ್ನು ಈಡೇರಿಸಿದ ಖುಷಿ ಇದೆ ಎಂದು ತಾಯಿ ಅಲಿನಾ ಹೇಳಿದ್ದಾರೆ.