ಅಂಗಡಿಗೆ ಬಂದಾತ ಯಾರು? ಸೇಲ್ಸ್ ಗರ್ಲ್ ಮಾತಾಡಿದ್ದು ಯಾರ ಬಳಿ? ಸಿಸಿಟಿಯಲ್ಲಿ ಸೆರೆಯಾಗಿದೆ ಎನ್ನಲಾದ ಶಾಕಿಂಗ್ ವಿಡಿಯೋ ಒಂದು ವೈರಲ್ ಆಗ್ತಿದೆ. ಏನಿದೆ ಇದರಲ್ಲಿ?
ಅದೊಂದು ಎಲೆಕ್ಟ್ರಿಕ್ ಮಳಿಗೆ. ಅಲ್ಲೊಬ್ಬಳು ಸೇಲ್ಸ್ ಗರ್ಲ್. ಬಾಗಿಲು ತಂತಾನೇ ತೆರೆಯುತ್ತದೆ. ಇದರ ಅರ್ಥ ಯಾವುದೋ ಕಸ್ಟಮರ್ ಬಂದಿದ್ದಾರೆ ಎನ್ನುವುದು. ಆದರೆ ಅಲ್ಲಿ ಬಂದಿರುವುದು ಯಾರು ಎನ್ನುವುದು ಯಾರಿಗೂ ಕಾಣಿಸುವುದಿಲ್ಲ, ಆದರೆ ಆ ಸೇಲ್ಸ್ ಗರ್ಲ್ ಗೆ ಮಾತ್ರ ಕಾಣಿಸುತ್ತಿದೆ. ಆ ವ್ಯಕ್ತಿಯನ್ನು ಬರಮಾಡಿಕೊಳ್ಳುವ ಆಕೆ, ಕಪಾಟಿನಿಂದ ಆತನಿಗೆ ಬೇಕಾದ ವಸ್ತುವನ್ನು ತೆಗೆದು ವಿವರಣೆ ನೀಡುತ್ತಿದ್ದಾಳೆ, ಬಳಿಕ ಇನ್ನೊಂದು ವಸ್ತು ತೆಗೆದು ಅದನ್ನೂ ತೋರಿಸುತ್ತಿದ್ದಾಳೆ. ಆದರೆ ಅಲ್ಲಿರುವ ವ್ಯಕ್ತಿ ಮಾತ್ರ ಅವಳಿಗೆ ಬಿಟ್ಟರೆ ಯಾರಿಗೂ ಕಾಣಿಸುತ್ತಿಲ್ಲ. ಸ್ವಲ್ಪ ಸಮಯದ ಬಳಿಕ ಅಲ್ಲಿ ಇನ್ನಿಬ್ಬರು ಸೇಲ್ಸ್ ಗರ್ಲ್ ಗಳು ಬರುತ್ತಾರೆ. ಯಾರ ಬಳಿ ಮಾತನಾಡುತ್ತಿರುವಿ, ಇಲ್ಲಿ ಯಾರೂ ಇಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಆಕ್ಷನ್ ಮೂಲಕ ತಿಳಿಯುತ್ತದೆ. ಅದನ್ನು ಕೇಳಿ ಆ ಯುವತಿ ಮೂರ್ಛೆ ಹೋಗುತ್ತಾಳೆ...
ಇದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿರುವ ವಿಡಿಯೋ. ಏನ್‌ಷಿಯಂಟ್ ಸೈಂಟಿಸ್ಟ್ ಎನ್ನುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈವಿಡಿಯೋ ಶೇರ್ ಮಾಡಲಾಗಿದೆ. ಅದರಲ್ಲಿ ಜ್ಯುವೆಲ್ಲರಿ ಷಾಪ್ ಎಂದು ಬರೆಯಲಾಗಿದ್ದರೂ, ಆ ಅಂಗಡಿ ನೋಡಿದರೆ, ಅದು ಎಲೆಕ್ಟ್ರಿಕಲ್ ಅಂಗಡಿ ಎನ್ನುವುದು ತಿಳಿಯುತ್ತದೆ. ಅಷ್ಟಕ್ಕೂ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ, ವೈರಲ್ ಆಗುವ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಇದರಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂದು ಗೊತ್ತುಮಾಡುವುದೂ ಅಷ್ಟೇ ಕಷ್ಟ. ಎಷ್ಟೋ ಸಂದರ್ಭಗಳಲ್ಲಿ ಅಸಲಿ ಎಂದುಕೊಂಡಿದ್ದರೆ ಅದು ನಕಲಿಯಾಗಿದ್ದರೆ, ಕೆಲವೊಮ್ಮೆ ನಕಲಿ ಎಂದುಕೊಂಡಿದ್ದರೆ ಅದು ಅಸಲಿ ಆಗುವುದು ಇದೆ. ಅದರಲ್ಲಿಯೂ ಭೂತ, ಪ್ರೇತಗಳ ವಿಡಿಯೋ ಅಂತೂ ಲೆಕ್ಕವಿಲ್ಲದಷ್ಟು ವೈರಲ್ ಆಗುತ್ತಲೇ ಇರುತ್ತವೆ. ಇವುಗಳ ಪೈಕಿ ಹೆಚ್ಚಿನವು ಎಡಿಟೆಡ್ ಎಂದೇ ಹೇಳಲಾಗುತ್ತದೆ. ಒಟ್ಟಿನಲ್ಲಿ ಅಸಲಿಯೋ, ನಕಲಿಯೂ ಅದನ್ನು ನೋಡಿದಾಗ ಶಾಕ್ ಆಗುವುದು, ರೋಮಾಂಚರ ಆಗುವುದಂತೂ ಗ್ಯಾರೆಂಟಿ.
ತಪ್ಪಿಸಿಕೊಂಡು ಹೋಗ್ತಿದ್ದವನ ಪೊಲೀಸರಿಗೆ ಒಪ್ಪಿಸಿತ್ತು ಸತ್ತವಳ ಆತ್ಮ: ರೋಚಕ ಘಟನೆ ವಿವರಿಸಿದ ಡಿವೈಎಸ್‌ಪಿ ರಾಜೇಶ್!
ಅದೇ ರೀತಿ ಈ ವಿಡಿಯೋ ಕೂಡ ಅಸಲಿ ಅಲ್ಲ, ಅದು ಎಡಿಟ್ ಮಾಡಿರುವುದು ಎಂದೇ ಹಲವರು ಕಮೆಂಟ್ ಮೂಲಕ ಹೇಳುತ್ತಿದ್ದಾರೆ. ಯಾರೊಬ್ಬರೂ ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೇ ಇರುವುದು ಮಾತ್ರ ನಗು ತರಿಸುವಂಥದ್ದಾಗಿದೆ. ಅಷ್ಟೇ ಅಲ್ಲದೇ, ಈ ವಿಡಿಯೊದ ಮಧ್ಯೆ ಒಬ್ಬ ಬೈಕ್ ಸವಾರ ಹೋಗುವುದನ್ನು ಅಸ್ಪಷ್ಟವಾಗಿ ಕಾಣಬಹುದಾಗಿದೆ. ಅಂಗಡಿಯ ಹೊರಭಾಗದಲ್ಲಿ ವಾಹನ ಸವಾರರು ಹೋಗುತ್ತಿದ್ದಾರೆ. ಆದರೆ ಒಂದೇ ಸೆಕೆಂಡ್‌ನಲ್ಲಿ ಒಬ್ಬ ಬೈಕ್ ಸವಾರ ಅಸ್ಪಷ್ಟವಾಗಿ ಕಾಣಿಸುತ್ತಿದ್ದಾನೆ. ಇದು ಎಡಿಟ್ ಮಾಡುವಾಗ ಆಗಿರುವ ಎಡವಟ್ಟು ಎಂದೇ ಹಲವರು ಹೇಳುತ್ತಿದ್ದಾರೆ. ಸೇಲ್ಸ್ ಗರ್ಲ್ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುತ್ತಿದ್ದಾಳೆ. ಅವಳಿಗೆ ಪ್ರಶಸ್ತಿ ಕೊಡಬೇಕು ಎಂದು ಹಲವರು ಕಾಲೆಳೆಯುತ್ತಿದ್ದಾರೆ. ಮತ್ತೆ ಹಲವರು ಸೇಲ್ಸ್ ಗರ್ಲ್ ಗಳಿಗೆ ಪಾಪ ಮಾಡಲು ಕೆಲಸ ಇರಲಿಲ್ಲ. ಅದಕ್ಕಾಗಿ ಟೈಮ್‌ಪಾಸ್ಗೆ ಹೀಗೆ ಮಾಡುತ್ತಿದ್ದಾರೆ. ರೀಲ್ಸ್ ಮೂಲಕ ಹಣ ಗಳಿಸುವ ಯೋಚನೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಅಷ್ಟಕ್ಕೂ, ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ ಎನ್ನುವ ಪ್ರಶ್ನೆಗೆ ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಆದರೆ ಇಂಥ ವಿಡಿಯೋಗಳು ಮಾತ್ರ ನಗು ತರಿಸುವಂಥದ್ದಾಗಿದ್ದರೂ, ವಿಡಿಯೋ ಮಾಡಿ ಹರಿಬಿಟ್ಟವರಿಗೆ ಮಾತ್ರ ಸಕತ್ ಲಾಭ ಆಗ್ತಿರೋದಂತೂ ದಿಟ!
13 ಇಸ್ಲಾಂ ರಾಷ್ಟ್ರಗಳಿಂದ ಆಗುವುದೇನು? 'ಭವಿಷ್ಯ ಮಾಲಿಕಾ'ದಲ್ಲಿ 2030 ವರೆಗಿನ ಘನಘೋರ ಸತ್ಯಗಳು!
