Asianet Suvarna News Asianet Suvarna News

Love Life: ಹೀಗೆಲ್ಲ ಅನಿಸ್ತಿದ್ರೆ ಅವರ ಬಗ್ಗೆ ನಿಮ್ಮಲ್ಲಿ ಪ್ರೀತಿ ಇರೋದು ಗ್ಯಾರೆಂಟಿ!

ಪ್ರೀತಿ ಕೆಲವೊಮ್ಮೆ ಗೊಂದಲ ಮೂಡಿಸುತ್ತದೆ. ನಿಜಕ್ಕೂ ಪ್ರೀತಿಯಲ್ಲಿರುವುದು ಹೌದೇ, ಕೇವಲ ಆಕರ್ಷಣೆಯೇ ಎನ್ನುವ ಪ್ರಶ್ನೆಯನ್ನೂ ಮೂಡಿಸುತ್ತದೆ. ನೀವು ಪ್ರೀತಿಸುವುದು ಹೌದಾ, ಅಲ್ಲವಾ ಎಂದು ತಿಳಿದುಕೊಳ್ಳೋದು ಹೇಗೆ? “ಅವರʼ ಬಗ್ಗೆ ನಿಮ್ಮಲ್ಲಿ ಈ ಕೆಲವು ಭಾವನೆಗಳು ಮೂಡಿದರೆ ನಿಮ್ಮಲ್ಲಿರುವುದು ಪ್ರೀತಿ ಎನ್ನುವುದು ಖಾತ್ರಿ. 
 

Do you in love know some signs of your feelings
Author
First Published Dec 23, 2022, 7:25 PM IST

ಅವರು ಪದೇ ಪದೆ ನೆನಪಿಗೆ ಬಂದು ಕಾಡಿದಂತಾಗುವುದು, ಅವರ ನೆನಪಾದೊಡೆ ಯಾವುದೇ ಸನ್ನಿವೇಶದಲ್ಲೂ ಮುಖದಲ್ಲಿ ಮುಗುಳ್ನಗೆಯೊಂದು ಮೂಡುವುದು, ಜಗತ್ತಿನ ಪರಿವೆಯಿಲ್ಲದೆ ಅವರೊಂದಿಗೆ ದಿನವಿಡೀ ಸಮಯ ಕಳೆಯಬೇಕು ಎಂದೆನಿಸುವುದು, ಕುತೂಹಲದಿಂದ ಅವರ ಬಗ್ಗೆ ಎಲ್ಲವನ್ನೂ ಅರಿತುಕೊಳ್ಳುವ ಆತುರ… ಇವೆಲ್ಲವೂ ನಿಮ್ಮಲ್ಲೂ ಇದೆಯೇ? ಹಾಗಿದ್ದರೆ ಅನುಮಾನವೇ ಇಲ್ಲ, ನೀವು ಅವರ ಪ್ರೀತಿಯಲ್ಲಿ ಸಿಲುಕಿದ್ದೀರಿ ಎಂದರ್ಥ. ಪ್ರೀತಿ-ಪ್ರೇಮದ ವಿಚಾರವೇ ಹಾಗೆ. ಅದು ಈ ಜಗತ್ತಿನಿಂದ ನಮ್ಮನ್ನು ದೂರ ಒಯ್ಯುತ್ತದೆ. ಜಗತ್ತೆಲ್ಲ ಸುಂದರವಾಗಿ ಕಾರಣಲು ಶುರುವಾಗುತ್ತದೆ. ದೇಹದಲ್ಲಿ ಖುಷಿಯ ಹಾರ್ಮೋನ್‌ ಬಿಡುಗಡೆಯಾಗುತ್ತ ಎಲ್ಲರನ್ನೂ ಖುಷಿಯಾಗಿಯೇ ಇರಿಸುತ್ತದೆ.

ಹಾಗೆಯೇ, ಪ್ರೀತಿ-ಪ್ರೇಮದ ವಿಚಾರ ಗೊಂದಲಕಾರಿಯೂ ಹೌದು. ಪ್ರೀತಿ ವ್ಯಕ್ತಿ-ವ್ಯಕ್ತಿಗಳ ನಡುವೆ ಸಂಬಂಧ ಬೆಸೆಯುವುದಾದರೂ ಅದನ್ನು ಗುರುತಿಸುವುದು ಕೆಲವೊಮ್ಮೆ ಕಷ್ಟವಾಗಿಬಿಡುತ್ತದೆ. ಸ್ನೇಹವೋ, ಪ್ರೀತಿಯೋ, ಆಕರ್ಷಣೆಯೋ ಎಂದು ಗುರುತಿಸಲು ವಿಫಲವಾಗುವಂತೆ ಮಾಡುತ್ತದೆ. ನೀವೂ ಇಂಥದ್ದೇ ಗೊಂದಲದಲ್ಲಿ ಸಿಲುಕಿದ್ದೀರಾ? ನಿಮ್ಮ “ಅವರನ್ನುʼ ಪ್ರೀತಿಸುತ್ತಿರುವೆನಾ ಇಲ್ಲವಾ ಎನ್ನುವ ಪ್ರಶ್ನೆ ಮೂಡುತ್ತಿದೆಯಾ? ಹಾಗಾದರೆ, ನಿಮ್ಮ ಮನದಲ್ಲಿ ಮೂಡುವು ಕೆಲವು ಭಾವನೆಗಳು, ಸಂಗತಿಗಳ ಮೇಲೆ ಗಮನವಿಟ್ಟು ಅರ್ಥ ಮಾಡಿಕೊಳ್ಳಿ. ಅವು ಪ್ರೀತಿಯ ಬಗ್ಗೆ ತಿಳಿಸುತ್ತವೆ. ಪ್ರೀತಿಯಲ್ಲಿರುವಾಗ ಈ ಕೆಲವು ಪರಿಸ್ಥಿತಿ ಸಹಜ.

ಪದೇ ಪದೆ ಕಾಡುವ ನೆನಪು (Memory):  ನೀವು ಯಾವುದೇ ಕೆಲಸ (Work) ಮಾಡುತ್ತಿರಿ, ನಿಮ್ಮ ಕಾರ್ಯದಲ್ಲಿ ಬ್ಯುಸಿಯಾಗಿರಿ, ನಿಮ್ಮ ಮನಸ್ಸಿನ ಹಿನ್ನೆಲೆಯಲ್ಲಿ ಅವರಿದ್ದೇ ಇರುತ್ತಾರೆ. ಜನರು ಎಚ್ಚರಿರುವಾಗ ತಮ್ಮ ಪ್ರೀತಿಪಾತ್ರರ (Lover) ಬಗ್ಗೆ ಬಹಳ ಸಮಯ ಯೋಚಿಸುತ್ತಾರೆ. ನಿಮಗೂ ಹೀಗಾಗುತ್ತಿದ್ದರೆ ನೀವು ಅವರ ಪ್ರೀತಿಯಲ್ಲಿ ಸಿಲುಕಿದ್ದೀರಿ ಎಂದು ತಿಳಿಯಬಹುದು.

Relationship Tips : ಯಪ್ಪಾ..! ಎಂಥೆಂತಾ ಸುಳ್ಳು ಹೇಳ್ತಾರೆ ಈ ಹುಡುಗ್ರು

ಸಮಯದ ಅರ್ಪಣೆ (Dedicate Time): ಎಷ್ಟೇ ಬ್ಯುಸಿ ಇದ್ದರೂ ನಿಮ್ಮ ಸಮಯವನ್ನು ಅವರಿಗಾಗಿ ಅರ್ಪಣೆ ಮಾಡಲು ಸಿದ್ಧವಿದ್ದೀರಿ ಎಂದಾದರೆ ನೀವು ಅವರನ್ನು ಪ್ರೀತಿಸುತ್ತಿರುವಿರಿ ಎಂದರ್ಥ. ಆಕರ್ಷಣೆಯ (Attraction) ಉತ್ತುಂಗದಲ್ಲಿರುವಾಗ, ಪ್ರೀತಿಯ ಆರಂಭದಲ್ಲಿ ಇದು ಸಾಮಾನ್ಯ. 

ಅವರು ನಿಮಗೆ ಸ್ಪೆಷಲ್‌ (Special): ಪರಿಪೂರ್ಣತೆ (Perfection) ಯಾರಲ್ಲೂ ಇರುವುದಿಲ್ಲ. ಆದರೂ ಅವರು ನಿಮಗೆ ಪರಿಪೂರ್ಣರಾಗಿ, ವಿಶೇಷವಾಗಿ ಕಂಡುಬರುತ್ತಿದ್ದರೆ ಅದು ನಿಮ್ಮ ಭಾವನೆ. ಯಾರೊಂದಿಗಾದರೂ ಪ್ರೀತಿಯಲ್ಲಿರುವಾಗ ಅವರು ಸ್ಪೆಷಲ್‌ ಆಗೇ ಕಾಣುತ್ತಾರೆ.

ಎಲ್ಲವನ್ನೂ ತಿಳಿಯೋ ಕುತೂಹಲ (Curiocity): ನೀವು ಸದಾಕಾಲ ಅವರ ಇಷ್ಟಾನಿಷ್ಟಗಳ (Likings) ಬಗ್ಗೆ ಯೋಚಿಸುತ್ತೀರಾ? ಹೇಗಿದ್ದರೆ ಅವರಿಗೆ ಇಷ್ಟವಾಗಬಹುದು, ಯಾವುದು ಇಷ್ಟವಲ್ಲ? ಹೀಗೆ ಚಿಂತಿಸುತ್ತಿದ್ದರೆ, ನೀವೂ ಅವರನ್ನು ಸೆಳೆಯಲು ಯತ್ನಿಸುತ್ತಿದ್ದರೆ ಅದು ನಿಮ್ಮಲ್ಲಿನ ಪ್ರೀತಿಯಾಗಿರಬಹುದು.

ಈ ಮಹಿಳೆಯರಿಗೆ ಪ್ರೀತಿಗಿಂತಲೂ, ಶ್ರೀಮಂತಿಕೆಯೇ ಮುಖ್ಯವಂತೆ!

ಅವರಲ್ಲಿನ ನೆಗೆಟಿವ್‌ (Negatives) ಕಾಣೋದಿಲ್ಲ!: ನಾವು ಯಾರಲ್ಲಿ ಆಸಕ್ತರಾಗಿದ್ದೇವೆಯೋ (Interest) ಅವರ ಕುಂದುಕೊರತೆಗಳು ಸಾಮಾನ್ಯವಾಗಿ ಕಣ್ಣಿಗೆ ಬೀಳುವುದಿಲ್ಲ. ಅವರ ಉತ್ತಮ ಗುಣಗಳಿಂದ (Good Nature) ಆಕರ್ಷಿತರಾಗಿರುತ್ತೇವೆ, ಅವುಗಳನ್ನೇ ಗಮನಿಸುತ್ತೇವೆ. ಆದರೆ, ಅವರ ದೌರ್ಬಲ್ಯಗಳು (Weakness), ನೆಗೆಟಿವ್‌ ಗುಣಗಳನ್ನೂ ಅರಿತುಕೊಳ್ಳುವುದು ಮುಖ್ಯ.

ಅವರ ಉಪಸ್ಥಿತಿಯಲ್ಲಿ ನೀವು ನರ್ವಸ್ (Nervous)!: ಪ್ರೀತಿ ಮನಸ್ಸಿನಲ್ಲಿರುವಾಗ ಬೇರೆಯದೇ ರೀತಿಯಲ್ಲಿ ವರ್ತಿಸುವುದು ಸಹಜ. ಸಾಮಾನ್ಯವಾಗಿ ಮಹಿಳೆಯರು (Women) ತಮ್ಮ ಲವರ್‌ ಟು ಬಿ (Lover to be) ಅವರೊಂದಿಗೆ ಇರುವಾಗ ಸ್ವಲ್ಪ ನರ್ವಸ್‌ ಆಗುವುದು ಹೆಚ್ಚು. ಅವರ ಉಪಸ್ಥಿತಿಯಲ್ಲಿ ಉದ್ವೇಗಕ್ಕೆ ಒಳಗಾಗುತ್ತಾರೆ.

ಸುಭದ್ರ ಭಾವನೆ (Feel Safety): ನೀವು ಇಷ್ಟಪಡುವವರು ಜತೆಗಿದ್ದಾಗ ಅತ್ಯಂತ ಸುರಕ್ಷಿತವಾಗಿ ಇರುವ ಭಾವನೆ (Emotion) ಮೂಡುತ್ತದೆ. ಸಂಬಂಧದಲ್ಲಿ ಇದು ಮುಖ್ಯ. ಕೆಲವೊಮ್ಮೆ ಎಷ್ಟೇ ಆಕರ್ಷಣೆ ಇದ್ದರೂ ಸುಭದ್ರ ಭಾವನೆ ಮೂಡುವುದಿಲ್ಲ. ಸುರಕ್ಷಿತ ಭಾವನೆ ಮೂಡಿದರೆ ಅವರನ್ನು ನೀವು ಪ್ರೀತಿಸುತ್ತೀರಿ ಎಂದರ್ಥ.

ಜತೆಯಲ್ಲಿರುವಾಗ ಉತ್ಸಾಹ (Energy): ಅವರ ಜತೆಯಲ್ಲಿರುವಾಗ ನಿಮ್ಮಲ್ಲಿ ಅತ್ಯುತ್ಸಾಹ ಮೂಡಬಹುದು. ನಿಮ್ಮ ಶಕ್ತಿ, ಸಾಮರ್ಥ್ಯ (Capacity) ಹೆಚ್ಚಿದಂತೆ ಭಾಸವಾಗಬಹುದು. ಪ್ರೀತಿಯ ಭಾವನೆಯೇ ಹಾಗೆ, ಅದು ಜಗತ್ತನ್ನೇ ಗೆಲ್ಲುವ ಧೈರ್ಯ ನೀಡುತ್ತದೆ.

ಸಮಸ್ಯೆಯಲ್ಲಿರುವಾಗ ಸಹಾಯ (Seek Help): ನೀವು ಯಾವುದಾದರೂ ಸಮಸ್ಯೆಯಲ್ಲಿ ಇರುವಾಗ ಮೊದಲು ನಿಮ್ಮ ಮನಸ್ಸಿನಲ್ಲಿ ಮೂಡುವವರು ಯಾರು ಎಂದು ನೆನಪಿಸಿಕೊಳ್ಳಿ. ಅವರನ್ನು ಹೊರತುಪಡಿಸಿ ಬೇರೆ ಯಾರಲ್ಲೂ ಸಹಾಯ ಕೇಳಬೇಕೆಂದು ಅನಿಸುವುದಿಲ್ಲ. ನಿಮ್ಮ ಪ್ರೀತಿಪಾತ್ರರನ್ನೇ ಕೇಳುತ್ತೀರಿ.

Follow Us:
Download App:
  • android
  • ios