Asianet Suvarna News Asianet Suvarna News

ಮದುವೆಯಾಗಿದ್ರೂ ಬೇರೊಬ್ರ ಜೊತೆ ಫ್ಲರ್ಟ್ ಮಾಡ್ತಿದೀರಾ? ನಿಮಗಿದು ತಿಳಿದಿರಲಿ!

ಕೆಲವರು ತಮಗೊಪ್ಪುವ ಸಂಗಾತಿ ಜೊತೆಗೆ ಹಾಯಾಗಿದ್ದರೂ ಮದುವೆಯಾಚೆಗೆ ಹಗುರಾಗಿ ಫ್ಲರ್ಟ್ ಮಾಡುವುದನ್ನು ನೀವು ನೋಡಿರಬಹುದು. ಇದು ಎಲ್ಲಿಯವರೆಗೂ ಓಕೆ? ಬೌಂಡರಿಗಳನ್ನು ಹೇಗೆ ಕಾಪಾಡಿಕೊಳ್ಳಬೇಕು?

 

 

Do you flirt with someone out of  wedding lock know these tips
Author
Bengaluru, First Published Sep 18, 2021, 5:41 PM IST
  • Facebook
  • Twitter
  • Whatsapp

ತಜ್ಞರ ಪ್ರಕಾರ ನಿಮ್ಮ ವಿವಾಹ ಸಂಬಂಧದ ಹೊರಗಿನ ಯಾರೊಂದಿಗಾದರೂ ಲವಲವಿಕೆಯಿಂದ ಚೆಲ್ಲಾಟ(ಫ್ಲರ್ಟ್ ಮಾಡುವುದು)ವಾಡುವುದು, ಸರಿಯಾದ ಬೌಂಡರಿ ಕಾಪಾಡಿಕೊಂಡರೆ ಹಾನಿಕಾರಕವಲ್ಲ. ಸಹಜವಾಗಿ, ಆ ಸಂಬಂಧಗಳು ಪ್ರತಿಯೊಂದು ಸಂಬಂಧದಲ್ಲೂ ಭಿನ್ನವಾಗಿರುತ್ತವೆ. ಒಂದು ಸಂಸಾರದಲ್ಲಿ ಉಲ್ಲಂಘನೆ ಎಂದು ಪರಿಗಣಿಸಲ್ಪಡುವುದು ಇನ್ನೊಂದು ದಂಪತಿಗಳಿಗೆ ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿರುತ್ತದೆ. ಸೋಶಿಯಲ್ ಮೀಡಿಯಾ ಸೈಟ್‌ಗಳು ಇಂದು ಫ್ಲರ್ಟಿಂಗ್ ಅನ್ನು ಸಾಮಾನ್ಯ ಸಂಗತಿಯಾಗಿ ಮಾಡಿವೆ. ನೀವು ಇಂಟರ್ನೆಟ್‌ನಲ್ಲಿ ಯಾರೊಂದಿಗಾದರೂ ಚೆಲ್ಲಾಟವಾಡುತ್ತಿದ್ದರೆ, ಅದು ಹಾನಿಕರವಲ್ಲ ಎಂದು ಭಾವಿಸಿರಬಹುದು. ಆದರೆ ಇದು ಒಂದು ಹಂತದವರೆಗೆ ಮಾತ್ರ. ತೋರಿಕೆಯಲ್ಲಿ ನಿರುಪದ್ರವವಾಗಿದ್ದ ಆನ್‌ಲೈನ್ ಸ್ನೇಹವು ತೀವ್ರವಾದ ಭಾವನಾತ್ಮಕ ಮತ್ತು ದೈಹಿಕ ವ್ಯವಹಾರವಾಗಿ ಬೆಳೆದು ಮದುವೆಗಳನ್ನು ಹಾಳುಮಾಡಿದ ಉದಾಹರಣೆಗಳು ಇವೆ. ಆದ್ದರಿಂದ ಈ ಕೆಳಗಿನ ಎಚ್ಚರಗಳನ್ನು ವಹಿಸಿ. 

1. ಗುಪ್ತ್ ಗುಪ್ತ್ ಆಗಿದ್ದರೆ 
ನೀವು ಫ್ಲರ್ಟ್ ಮಾಡುತ್ತಿರುವ ವ್ಯಕ್ತಿಯಿಂದ ಬಂದ ಅಥವಾ ಅವರಿಗೆ ನೀವು ಕಳಿಸಿದ ಇಮೇಲ್‌, ವಾಟ್ಸ್ಯಾಪ್ ಸಂದೇಶಗಳನ್ನು ನೀವು ಅಳಿಸುತ್ತಿದ್ದರೆ ಅದು ರೆಡ್ ಮಾರ್ಕ್. ಏಕೆಂದರೆ ಅವುಗಳನ್ನು ಅಳಿಸುವ ಮೂಲಕ, ನಿಮ್ಮ ಸಂಗಾತಿಯು ಅವುಗಳನ್ನು ಓದಿದರೆ ಅಸಮಾಧಾನಗೊಳ್ಳಬಹುದು ಮತ್ತು ನೀವು ಏನನ್ನಾದರೂ ಮುಚ್ಚಿಡುತ್ತಿದ್ದೀರಿ ಎಂದು ಅವರು ಅಂದುಕೊಳ್ಳಬಹುದು ಎಂದುಕೊಂಡಿರುತ್ತೀರಿ. 'ನಾನು ಎಕ್ಸ್‌ ಜೊತೆಗೆ ಮಾತನಾಡುವ ರೀತಿ ನನ್ನ ಹೆಂಡತಿ/ಗಂಡ ಬೇರೊಬ್ಬ ಆಕರ್ಷಕ ವ್ಯಕ್ತಿ ಜೊತೆ ನಡೆದುಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಾದರೆ ನನಗೆ ಹೇಗೆ ಅನಿಸುತ್ತದೆ?'- ಈ ಪ್ರಶ್ನೆಯಿಂದ ನಿಮಗೆ ಕಸಿವಿಸಿ ಆಗುವುದಿದ್ದರೆ ಈ ಸಂಬಂಧದಲ್ಲಿ ಹೆಚ್ಚು ಮುಂದೆ ಹೋಗಬೇಡಿ.

2. ನಿಮ್ಮಲ್ಲಿ ಸೆಕ್ಸ್‌ನ ಉದ್ದೇಶ ಇದ್ದರೆ 
ಫ್ಲರ್ಟ್ ಜೊತೆಗೆ ನಿಮ್ಮ ಸಂವಹನದಲ್ಲಿ ಲೈಂಗಿಕ ಸಂಪರ್ಕದ ಸೂಚನೆ ಇದ್ದರೆ, ಸಂವಹನಗಳು ಸೂಕ್ಷ್ಮ ಲೈಂಗಿಕ ಸೂಚನೆಗಳನ್ನು ಹೊಂದಿದ್ದರೆ, ಜಾಗರೂಕರಾಗಿರಿ. ಇದು ನಿಮ್ಮಿಂದಲೂ ಆಗಿರಬಹುದು, ಅವರಿಂದಲೂ ಆಗಿರಬಹುದು. ಇದು ನಿಮ್ಮ ಮದುವೆಯನ್ನು ಹಾಳುಗೆಡಹಬಹುದು. 

3. ನೀವು ಅವರೊದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರೆ
ನೀವು ಕಳುಹಿಸಿದ ಸಂದೇಶಗಳ ವಿಷಯವನ್ನು ಮಾತ್ರವಲ್ಲದೆ ಅವುಗಳ ಪ್ರಮಾಣವನ್ನೂ ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ನೀವು ಆ ಸ್ನೇಹಿತರಿಗೆ ದಿನಕ್ಕೆ 15 ಬಾರಿ ಸಂದೇಶ ಕಳಿಸುತ್ತಿದ್ದರೆ, ಸ್ವಲ್ಪ ವಿಪರೀತವೆನಿಸುತ್ತದೆ. ಪ್ರತಿ ರಾತ್ರಿ ಎರಡು ಗಂಟೆಗಳ ಕಾಲ ಗಂಡ/ಹೆಂಡತಿಯಿಂದ ದೂರವಿದ್ದು ಆನ್‌ಲೈನ್ ಸ್ನೇಹಿತ/ತೆಯೊಂದಿಗೆ ಚಾಟ್ ಮಾಡುವುದು ಏನನ್ನು ಸೂಚಿಸುತ್ತದೆ? 
 

Do you flirt with someone out of  wedding lock know these tips

4. ನೀವು ಸಮರ್ಥನೆ ನೀಡುತ್ತಿದ್ದರೆ 
ನೀವು ಮುಗ್ಧ ರೀತಿಯ ಗೆಳೆತನ ಹೊಂದಿದ್ದರೆ ಅದಕ್ಕೆ ಯಾವುದೇ ಸಮರ್ಥನೆಯ ಅಗತ್ಯವಿಲ್ಲ. 'ಆತ/ಕೆ ಕೇವಲ ಸ್ನೇಹಿತ/ತೆ' ಎಂದು ಪದೇ ಪದೇ ಹೇಳಿಕೊಳ್ಳದಂತಿರಲಿ. ಅತ್ಯಂತ ಸುರಕ್ಷಿತ ಸ್ನೇಹವನ್ನು ಸಮರ್ಥಿಸುವ ಅಗತ್ಯವಿಲ್ಲ. ನೀವು ಅದನ್ನು ತರ್ಕಬದ್ಧಗೊಳಿಸುವ ಅನಿವಾರ್ಯತೆಗೆ ಒಳಗಾಗಿದ್ದರೆ ಆಗ ಅದು ಅಸುರಕ್ಷಿತ ಎನ್ನಬಹುದು. 

ಮೂವತ್ತರ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನೇನಾಗುತ್ತೆ? ಗೊತ್ತೇ?

5. ಇದು ನಿಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸುತ್ತಿದ್ದರೆ
ನೀವು ನಿಮ್ಮ ಪತಿ/ತ್ನಿಯೊಂದಿಗೆ ಹಂಚಿಕೊಳ್ಳದ ವಿಶೇಷ ಸಂಗತಿಗಳನ್ನು, ಆತ್ಮೀಯ ಭಾವನೆಗಳನ್ನು ಫ್ಲರ್ಟ್ ಜೊತೆಗೆ ಹಂಚಿಕೊಳ್ಳುತ್ತಿದ್ದರೆ, ಅಥವಾ ನಿಮ್ಮ ಸಂಗಾತಿಯು ಅರ್ಥಮಾಡಿಕೊಳ್ಳದ ರೀತಿಯಲ್ಲಿ ನಿಮ್ಮ ಆನ್‌ಲೈನ್ ಒಡನಾಡಿ ನಿಮ್ಮನ್ನು ಅರ್ಥಮಾಡಿಕೊಂಡಂತೆ ನೀವು ಭಾವಿಸಿದರೆ, ಆಗ ಜಾಗರೂಕರಾಗಿ. ನಿಮ್ಮ ದಾಂಪತ್ಯ ಜೀವನದಲ್ಲಿ ದೋಷಗಳಿದ್ದರೆ ಅವುಗಳನ್ನು ಸುರಕ್ಷಿತ ರೀತಿಯಲ್ಲಿ ತುಂಬುವುದು ಉತ್ತಮ.

6. ನಿಮ್ಮ ಸಂಗಾತಿಯ ಬಗ್ಗೆ ಮಾತನಾಡಿದರೆ
ನಿಮ್ಮ ಸಂಸಾರ ಅಥವಾ ನಿಮ್ಮ ಸಂಗಾತಿಯ ಬಗ್ಗೆ ಆಪ್ತವಾದ, ಗುಪ್ತವಾದ ವಿವರಗಳನ್ನು ಫ್ಲರ್ಟ್ ಜೊತೆಗೆ ಹಂಚಿಕೊಳ್ಳುವುದು ನಿಮ್ಮ ದಾಂಪತ್ಯಕ್ಕೆ ಅಗೌರವದ ವಿಷಯ. ನಿಮ್ಮ ಇಡೀ ಸಂಭಾಷಣೆಯನ್ನು ನಿಮ್ಮ ಪತ್ನಿ/ತಿ ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಊಹಿಸಿ. ಆಗ ನೀವು ಹಾಗೆ ಮಾತಾಡುತ್ತಿದ್ದಿರಾ? 

7. ನಿಮ್ಮ ಸಂಗಾತಿಗೆ ಇಷ್ಟವಿಲ್ಲದಿದ್ದರೆ
ಎಕ್ಸ್ ಜೊತೆಗಿನ ನಿಮ್ಮ ಒಡನಾಟದ ಬಗ್ಗೆ ನಿಮ್ಮ ಪತಿ ಅಥವಾ ಪತ್ನಿ ಅಸಹನೆ, ಅಸಮ್ಮತಿಯನ್ನು ವ್ಯಕ್ತಪಡಿಸಿದರೆ ಅದು ರೆಡ್ ಮಾರ್ಕ್. ಆಗ ಮುಂದುವರಿಯುವುದು ನಿಮ್ಮ ದಾಂಪಯತ್ಯ ಜೀವನಕ್ಕೆ ರಿಸ್ಕ್.

#Feelfree: ಪತ್ನಿಯ ಕನ್ಯಾಪೊರೆ ಹರಿದಿರೋದು ಪತಿಗೆ ಗೊತ್ತಾಗುತ್ತಾ?

8. ನಿಮ್ಮ ಆಪ್ತರು ಕಳವಳ ವ್ಯಕ್ತಪಡಿಸಿದರೆ
ನಿಮ್ಮ ಒಳ್ಳೆಯ ಸ್ನೇಹಿತ/ತೆ, ನಿಮ್ಮ ತಾಯಿ- ತಂದೆ, ಅಕ್ಕ- ತಂಗಿ, ಅಣ್ಣ-ತಮ್ಮ ಹೀಗೆ ಯಾರೇ ಆಪ್ತರು, ಎಕ್ಸ್ ಜೊತೆಗಿನ ನಿಮ್ಮ ಒಡನಾಟವನ್ನು ನಿಮ್ಮ ಸಂಸಾರಕ್ಕೆ ಅಪಾಯಕಾರಿ ಎಂದು ಗುರುತಿಸಿದರೆ, ಅದನ್ನು ನಿಮ್ಮಲ್ಲಿ ಸ್ಪಷ್ಟವಾಗಿ ಹೇಳಿದರೆ, ಆಗ ನೀವು ಮುಂದುವರಯಬೇಡಿ. 

9. ನಿಮ್ಮ ಉದ್ದೇಶ ತಪ್ಪಾಗಿದ್ದರೆ
ನಿಮ್ಮ ಹೆಂಡತಿ ನಿಮ್ಮ ಭಾರಿ ದೇಹತೂಕದ ಬಗ್ಗೆ ನಿರಂತರವಾಗಿ ಟೀಕಿಸುತ್ತಿದ್ದರೆ, ಅದನ್ನು ಇಳಿಸಿಕೊಳ್ಳಲು ಹೇಳುತ್ತಿದ್ದರೆ, ನೀವು ಬೇರೊಬ್ಬಾಕೆಯ ಜೊತೆ ಫ್ಲರ್ಟ್ ಮಾಡಿ ಆಕೆಯಿಂದ ನೀವು ಸ್ಮಾರ್ಟ್, ಚೆಲುವ, ಸುಂದರಾಂಗ ಎಂದೆಲ್ಲಾ ಹೇಳಿಸಿಕೊಳ್ಳುವ ವರ್ತನೆ ತೋರಿಸುವ ಸಾಧ್ಯತೆ ಇದೆ. ಆದರೆ ಇದು ತಪ್ಪು. ನಿಮ್ಮ ಸ್ವಾಭಿಮಾನವನ್ನು ಹೆಚ್ಚಿಸಲು ಮತ್ತು ನಿಮ್ಮ ಸ್ವಂತ ಮನೆಯಲ್ಲಿ ನೀವು ಕಳೆದುಕೊಂಡ ಗೌರವವನ್ನು ಮರಳಿ ಪಡೆಯಲು ಮನೆಯಲ್ಲೇ ಆರೋಗ್ಯಕರ ಮಾರ್ಗಗಳಿವೆ.

ಫಸ್ಟ್ ಡೇಟ್‌ನಲ್ಲಿಯೇ ಹುಡುಗಿ ಈ ಎಲ್ಲಾ ವಿಷಯಗಳನ್ನು ಗಮನಿಸುತ್ತಾಳೆ

Follow Us:
Download App:
  • android
  • ios