ಮದುವೆಯಾಗುವ ಹುಡುಗ ಇನ್ನೊಬ್ಬಳ ಜೊತೆ ಸಿಕ್ಕಿಬಿದ್ದರೆ!
ಸಂಗಾತಿ ಜೊತೆಗಿಲ್ಲವೆಂದ್ರೆ ಕೆಲವರ ನೀಯತ್ತು ಹಾಳಾಗುತ್ತದೆ. ಇನ್ನೊಬ್ಬರ ಮೇಲೆ ಆಕರ್ಷಣೆ ಶುರುವಾಗುತ್ತದೆ. ಈ ಪ್ರೀತಿ ಆಟ ತುಂಬಾ ದಿನ ನಡೆಯುವುದಿಲ್ಲ. ಇದ್ರಿಂದ ಪ್ರೀತಿಸಿದ ವ್ಯಕ್ತಿ ಕೂಡ ದೂರವಾಗ್ತಾರೆ.
ಪ್ರೀತಿ ಮಾಡಿದ ಕೆಲ ವರ್ಷಗಳಲ್ಲೇ ಮದುವೆಯಾಗ್ಬೇಕು ಎಂದು ದೊಡ್ಡವರು ಹೇಳ್ತಾರೆ. ಯಾಕೆಂದ್ರೆ ಈ ಸಂಬಂಧ ತುಂಬಾ ದಿನ ನಿಲ್ಲುತ್ತೆ ಎನ್ನಲು ಸಾಧ್ಯವಿಲ್ಲ. ಮದುವೆ ಬಂಧನದಲ್ಲಿ ಬಿದ್ದ ಜನರು ನಂತ್ರ ಅದ್ರಿಂದ ಸುಲಭವಾಗಿ ಹೊರಗೆ ಹೋಗಲು ಬಯಸುವುದಿಲ್ಲ. ಹೊಸ ಜವಾಬ್ದಾರಿಯಿಂದಾಗಿ ಅವರು ಬದಲಾಗುವ ಸಾಧ್ಯತೆಯಿರುತ್ತದೆ. ಆದರೆ ಪ್ರೀತಿ ಮಾಡುವ ಪಿರಿಯಡ್ ದೀರ್ಘವಾದ್ರೆ ಮೋಸ ಹೋಗುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ಕೆಲವರು ಹೇಳ್ತಾರೆ. ಇಲ್ಲಿ ಪ್ರೀತಿ ಹಳಸಲು ಶುರುವಾಗಿರುತ್ತದೆ. ಇಬ್ಬರು ಒಟ್ಟಿಗಿದ್ರೂ ಒಂದಾಗಿರೋದಿಲ್ಲ. ಮನಸ್ಸು ಹೊಸತನಕ್ಕೆ ಹಾತೊರೆಯುವ ಸಾಧ್ಯತೆಯಿರುತ್ತದೆ. ಅದೇ ಪ್ರೀತಿ ಬೋರ್ ಆಗಲು ಶುರುವಾಗುತ್ತದೆ. ಈ ಹುಡುಗಿ ಬಾಳಲ್ಲಿ ಕೂಡ ಅದೇ ಪ್ರೀತಿ ಮೋಸ ನಡೆದಿದೆ.
ಆಕೆ ಕಳೆದ 8 ವರ್ಷಗಳಿಂದ ಪ್ರೀತಿ (Love) ಯಲ್ಲಿದ್ದಳು. ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡಿದ್ದರು. 8 ವರ್ಷದ ನಂತ್ರ ಸಂಬಂಧ ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದರು. ಹುಡುಗಿ ಮನೆಯವರು ಆಕೆ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಹುಡುಗನ ಮನೆಯಿಂದಲೂ ಒಪ್ಪಿಗೆ ಸಿಕ್ಕಿತ್ತು. ಎರಡೂ ಕುಟುಂಬ (Family) ಗಳು ಸೇರಿ ಮದುವೆ (Marriage)ಗೆ ಸಿದ್ಧತೆ ಶುರು ಮಾಡಿದ್ದವು. ಮದುವೆ ದಿನಾಂಕ ಫಿಕ್ಸ್ ಆಗಿತ್ತು. ಪ್ರೀತಿಸಿದ ವ್ಯಕ್ತಿಯನ್ನೇ ಕೈ ಹಿಡಿಯುವ ಖುಷಿಯಲ್ಲಿ ಮಹಿಳೆಯಿದ್ದಳು. ಕೆಲಸದ ಕಾರಣಕ್ಕೆ ಕೊಲ್ಕತ್ತಾದಿಂದ ಹೊರಗೆ ಹೋಗುವ ಸ್ಥಿತಿ ಆಕೆಗೆ ನಿರ್ಮಾಣವಾಗಿತ್ತು. ಪ್ರೀತಿಸಿದ ವ್ಯಕ್ತಿ ಹಾಗೂ ಕುಟುಂಬದವರನ್ನು ಬಿಟ್ಟು ಹೋಗುವುದು ದೊಡ್ಡ ಸವಾಲಾಗಿತ್ತು. ಆದ್ರೆ ಅನಿವಾರ್ಯ ಕಾರಣಕ್ಕೆ ಊರು ಬಿಟ್ಟಿದ್ದಳು. ಆರಂಭದಲ್ಲಿ ಕಷ್ಟವಾದ್ರೂ ಲಾಂಗ್ ರಿಲೇಶನ್ಶಿಪ್ (Long Relationship) ಅಭ್ಯಾಸವಾಗ್ತಾ ಬಂದಿತ್ತು. ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ಮಾತ್ರ ಆಗಾಗ ನಡೆಯುತ್ತಿತ್ತು.
ದೈಹಿಕ ಸಂಪರ್ಕ ಮಾಡುವಾಗಲ್ಲೆಲ್ಲಾ ಅಲರ್ಜಿ, ಅರೆ ಇದೆಂಥಾ ವಿಚಿತ್ರ ಕಾಯಿಲೆ
ತುಂಬಾ ದಿನಗಳ ನಂತ್ರ ನವರಾತ್ರಿ ಉತ್ಸವಕ್ಕೆಂದು ಆಕೆ ಕೊಲ್ಕತ್ತಾಗೆ ವಾಪಸ್ ಬಂದಿದ್ದಳಂತೆ. ಬಾಯ್ ಫ್ರೆಂಡ್ ಗೆ ಸರ್ಪ್ರೈಸ್ ನೀಡುವುದು ಆಕೆ ಉದ್ದೇಶವಾಗಿತ್ತಂತೆ. ಇದೇ ಕಾರಣಕ್ಕೆ ಸುಸ್ತಾದ್ರೂ ಪೆಂಡಾಲ್ ನಲ್ಲಿಯೇ ಇದ್ದಳಂತೆ. ಆದ್ರೆ ಅಲ್ಲಿ ನೋಡಿದ ದೃಶ್ಯ ಆಕೆಯನ್ನು ಕನ್ಫ್ಯೂಸ್ ಮಾಡಿತ್ತಂತೆ. ಇನ್ನೇನು ಕೆಲವೇ ದಿನಗಳಲ್ಲಿ ಕೈ ಹಿಡಿಯಲಿರುವ ಬಾಯ್ ಫ್ರೆಂಡ್ ಬೇರೆ ಹುಡುಗಿ ಜೊತೆಗಿದ್ದನಂತೆ. ಅದೂ ಆಕೆಯ ಮಾಜಿ ಬೆಸ್ಟ್ ಫ್ರೆಂಡ್. ಅನೇಕ ವರ್ಷಗಳಿಂದ ಅವರಿಬ್ಬರು ಮಾತು ಬಿಟ್ಟಿದ್ದರಂತೆ. ಮಾಜಿ ಬೆಸ್ಟ್ ಫ್ರೆಂಡ್ ಮನೆ, ತನ್ನ ಮನೆ ಪಕ್ಕದಲ್ಲಿದ್ದ ಕಾರಣ, ಭಾವಿ ಪತಿಗೆ ಪರಿಚಯವಿರಬಹುದು ಎಂದುಕೊಂಡು ಮನೆಗೆ ವಾಪಸ್ ಬಂದಿದ್ದಳಂತೆ.
Relationship Tips: ಕೋಪ ಮಾಡ್ಕೊಳ್ಳೋ ಪತಿನಾ ಹೀಗೆ ಸಂಭಾಳ್ಸಿ
ನವರಾತ್ರಿ ಸಂದರ್ಭದಲ್ಲಿ ಆರೋಗ್ಯ ಹದಗೆಟ್ಟಿದ್ದರಿಂದ ಮತ್ತೆ ಹೊರಗೆ ಹೋಗಿರಲಿಲ್ಲ. ಕೊನೆ ದಿನ ದೇವಿ ದರ್ಶನಕ್ಕೆಂದು ಪೆಂಡಾಲ್ ಗೆ ಹೋಗಿದ್ದೆ. ಅಂದು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಯ್ತು ಎನ್ನುತ್ತಾಳೆ ಹುಡುಗಿ. ಪೆಂಡಾಲ್ ನಲ್ಲಿ ಬಾಯ್ ಫ್ರೆಂಡ್ ಅದೇ ಹುಡುಗಿ ಜೊತೆಗಿದ್ದನಂತೆ. ಇಬ್ಬರೂ ಕೈ ಹಿಡಿದು, ಪ್ರೀತಿಯಿಂದ ಮಾತನಾಡ್ತಿದ್ದರಂತೆ. ಶಾಕ್ ಆದ ಹುಡುಗಿ ಅಲ್ಲಿಗೆ ಹೋಗಿ ಪ್ರಶ್ನೆ ಮಾಡಿದ್ದಳಂತೆ. ಇಲ್ಲೇನು ನಡೆಯುತ್ತಿದೆ ಎಂದು ಕೇಳಿದ್ದಳಂತೆ. ಭೂತ ಕಂಡಂತೆ ಬಾಯ್ ಫ್ರೆಂಡ್ ಬೆಚ್ಚಿ ಬಿದ್ದಿದ್ದನಂತೆ. ಇನ್ನು ಆಕೆಯ ಮಾಜಿ ಬೆಸ್ಟ್ ಫ್ರೆಂಡ್, ನನ್ನ ಬಾಯ್ ಫ್ರೆಂಡ್ ಜೊತೆಗಿದ್ದರೆ ನಿನಗೇನು ಎಂದು ಕೇಳಿದ್ದಳಂತೆ. ಆಕೆ ಪ್ರಶ್ನೆಗೆ ದಂಗಾದ ಹುಡುಗಿ, 8 ವರ್ಷಗಳಿಂದ ಆತನನ್ನು ಪ್ರೀತಿ ಮಾಡ್ತಿದ್ದೇನೆ. ಮದುವೆ ಫಿಕ್ಸ್ ಆಗಿದೆ ಎಂದಾಗ ಮಾಜಿ ಬೆಸ್ಟ್ ಫ್ರೆಂಡ್ ಕೂಡ ಶಾಕ್ ಗೆ ಒಳಗಾಗಿದ್ದಳಂತೆ. ಈ ಆಘಾತದಿಂದ ಹೊರ ಬರುವ ಮೊದಲೇ ಮಾಜಿ ಬೆಸ್ಟ್ ಫ್ರೆಂಡ್, ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ದಳಂತೆ. ನಾನು ಕೂಡ ಏಟು ನೀಡಿದ್ದೆ ಎನ್ನುತ್ತಾಳೆ ಹುಡುಗಿ. ವಿಷ್ಯವನ್ನು ಎಲ್ಲರಿಗೂ ತಿಳಿಸಿ ಆತನಿಂದ ದೂರವಾಗಿದ್ದೇನೆ. ಆದ್ರೆ ಮಾಜಿ ಬೆಸ್ಟ್ ಫ್ರೆಂಡ್ ಈಗ ಮತ್ತೆ ದಿ ಬೆಸ್ಟ್ ಫ್ರೆಂಡ್ ಆಗಿದ್ದಾಳೆ. ನಾವಿಬ್ಬರು ಒಂದೇ ನೋವಿನಿಂದ ಹೊರ ಬಂದಿದ್ದೇವೆ ಎಂದಿದ್ದಾಳೆ ಹುಡುಗಿ.