ಮದ್ವೆ ಮನೆಯಲ್ಲಿ ಎಡವಟ್ಟುಗಳಾಗೋದು ಸಾಮಾನ್ಯ. ಗದ್ದಲ-ಗಡಿಬಿಡಿಯಲ್ಲಿ ಒಂದಲ್ಲಾ ಒಂದು ವಸ್ತು ಅದಲು ಬದಲಾಗುವುದು, ಮರೆತು ಹೋಗುವುದು ಆಗುತ್ತದೆ. ಆದ್ರೆ ಈ ಮದ್ವೆಯಲ್ಲಿ ಉಂಟಾದ ಗೊಂದಲದಿಂದಾಗಿ ವಧು, ಹುಡುಗನನ್ನು ಮದ್ವೆಯಾಗೋದು ಬಿಟ್ಟು ಆತನ ತಂದೆಯನ್ನು ಅಂದರೆ ತನ್ನ ಮಾವನನ್ನು ಮದ್ವೆಯಾಗಿದ್ದಾಳೆ.

ಮದುವೆ ಮನೆಯಲ್ಲಿ ಎಡವಟ್ಟುಗಳಾಗೋದು ಸಾಮಾನ್ಯ. ಗದ್ದಲ-ಗಡಿಬಿಡಿಯಲ್ಲಿ ಒಂದಲ್ಲಾ ಒಂದು ವಸ್ತು ಅದಲು ಬದಲಾಗುವುದು, ಮರೆತು ಹೋಗುವುದು ಆಗುತ್ತದೆ. ಇನ್ನು ಕೆಲವೊಮ್ಮೆ ಮದುವೆಯ ಕೊನೆ ಕ್ಷಣದಲ್ಲಿ ವರ ಅಥವಾ ವಧು ಬಾರದೆ ಬೇರೆಯವರೊಂದಿಗೆ ಮದುವೆಯಾಗುವ ಘಟನೆಗಳೂ ನಡೆಯುತ್ತವೆ. ಇನ್ನು ಕೆಲವೊಮ್ಮೆ ಗಲಾಟೆಯಿಂದ ಮದ್ವೆ ಕ್ಯಾನ್ಸಲ್‌ ಆಗುವುದೂ ಇದೆ. ಆದ್ರೆ ಈ ಮದ್ವೆಯಲ್ಲಿ ಉಂಟಾದ ಗೊಂದಲದಿಂದಾಗಿ ವಧು, ಹುಡುಗನನ್ನು ಮದ್ವೆಯಾಗೋದು ಬಿಟ್ಟು ಆತನ ತಂದೆಯನ್ನು ಅಂದರೆ ತನ್ನ ಮಾವನನ್ನು ಮದ್ವೆಯಾಗಿದ್ದಾಳೆ. 

ಹೌದು, ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಆಸ್ಟ್ರೇಲಿಯಾದಲ್ಲಿ ವಧು (Bride) ಒಂದೇ ಸಮಯದಲ್ಲಿ ತನ್ನ ಪತಿ ಮತ್ತು ಮಾವನೊಂದಿಗೆ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾಳೆ. ವರದಿಯ ಪ್ರಕಾರ, ಮಹಿಳೆ ತನ್ನ ಕಥೆಯನ್ನು ಆಸ್ಟ್ರೇಲಿಯನ್ ಬ್ರೇಕ್‌ಫಾಸ್ಟ್ ರೇಡಿಯೊ ಶೋನಲ್ಲಿ ಹಂಚಿಕೊಂಡಿದ್ದಾಳೆ. ಕಾರ್ಯಕ್ರಮದಲ್ಲಿ, ಕಿಮ್ ಎಂಬ ಮಹಿಳೆ (Woman) ತನ್ನ ವಿವಾಹದಲ್ಲಾದ ಕನ್‌ಫ್ಯೂಶನ್ ಬಗ್ಗೆ ಹೇಳಿಕೊಂಡಿದ್ದಾಳೆ. 

ಬಲವಂತವಾಗಿ ಸ್ವೀಟ್ ತಿನ್ನಿಸಿದ ವರ, ಮುಖಕ್ಕೆ ಉಗುಳಿ, ಕಾಲಿನಿಂದ ತುಳಿದು ರಂಪಾಟ ಮಾಡಿದ ವಧು!

ಮದುವೆ ಸರ್ಟಿಫಿಕೇಟ್‌ನಲ್ಲಿ ವಧುವಿನ ಎಡವಟ್ಟು
ಮದುವೆಯ ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ ನಾವು ಮದುವೆಯ (Marriage) ಅಧಿಕೃತ ದಾಖಲೆಯನ್ನು ಸಿದ್ಧಪಡಿಸಬೇಕಿತ್ತು. ನಾನು ಸಹ ಗಂಡನೊಂದಿಗೆ ಹೋಗಿ ಸಹಿ ಹಾಕಿದೆ. ಆದರೆ ಹೀಗೆ ಸಹಿ ಹಾಕುವಾಗಲೇ ಎಡವಟ್ಟಾಯಿತು. 'ನಾನು ನನ್ನ ಪತಿ ಮತ್ತು ಮಾವನನ್ನು (Father in law) ಮದುವೆಯಾಗಿದ್ದೇನೆ ಎಂಬ ಹೇಳಿಕೆಗೆ ನಾನು ಸಹಿ ಮಾಡಿದ್ದೆ' ಎಂದು ಮಹಿಳೆ ಹೇಳಿದಗ್ದಾರೆ. ಅಯ್ಯೋ ಎಂಬ ಶೀರ್ಷಿಕೆಯಡಿ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 

'ಇಂಥಾ ಘಟನೆಗಳು ನಿಜವಾಗಿಯೂ ತುಂಬಾ ಫನ್ನಿ ಮತ್ತು ಆಘಾತಕಾರಿಯಾಗಿವೆ' ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ನೀವು ಮಾವನನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದೀರಾ' ಎಂದು ಪ್ರಶ್ನಿಸಿದ್ದಾರೆ. 'ಅದು ಪ್ರಮಾಣಪತ್ರದಲ್ಲಿ ಮಾತ್ರ ಆಗಿರುವ ಪ್ರಮಾದವಾಗಿದ್ರೆ ಪರವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಮದ್ವೆ ಮನೆಯಲ್ಲಿ ಅದೆಷ್ಟು ಗೊಂದಲವಿರುತ್ತದೆ ಅಂದರೆ ಒಮ್ಮೆ ಮುಗಿದರೆ ಸಾಕೆನಿಸುತ್ತದೆ. ಹೀಗಿರುವಾಗ ಇಂಥದ್ದೆಲ್ಲಾ ಆಗುವುದು ಸಾಮಾನ್ಯ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಪರವಾಗಿಲ್ಲ ನೀವು ಮದುವೆಯಾಗಿರುವುದು ಮಾವನನ್ನು ತಾನೇ, ಅತ್ತೆಯನ್ನು ಅಲ್ಲವಲ್ಲ' ಎಂದು ಲೇವಡಿ ಮಾಡಿದ್ದಾರೆ.

View post on Instagram

ಮದ್ವೆಯಾಗಿ ಎರಡೇ ಗಂಟೆಯಲ್ಲಿ ಹೆಂಡ್ತಿಗೆ ತಲಾಖ್‌ ಕೊಟ್ಟ ಭೂಪ..ಕಾರಣ ಇಷ್ಟೆ!

ಮಾವನ 3 ಕಂಡೀಷನ್‌ ಕೇಳಿ, ನಿನ್‌ ಮಗಳೇ ಬೇಡ ಎಂದು ಎಸ್ಕೇಪ್‌ ಆದ ವರ!
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬರುಸಾಗರದ ಯುವಕ ಮನ್ವೀಂದ್ರ, ಸಮೀಪದ ಹಳ್ಳಿಯ ಜ್ಯೋತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಜೂನ್ 6 ರಂದು ಮನ್ವಿಂದ್ರ ಮತ್ತು ಜ್ಯೋತಿ ಅವರ ವಿವಾಹ ಅದ್ದೂರಿಯಾಗಿ ನೆರವೇರಿತ್ತು. ವಧು-ವರರ ಇಬ್ಬರು ಬಂಧುಗಳು ಮದುವೆ ಮೆರವಣಿಗೆಯಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡು ಕುಣಿದು ಕುಪ್ಪಳಿಸಿದ್ದಾರೆ. ವಧುವನ್ನು ವರನ ಮನೆಗೆ ಕಳಿಸಿಕೊಳ್ಳುವ ಕಾರ್ಯಕ್ರಮ ಕೂಡ ನೆರವೇರಿದ ಬಳಿಕ ವಧುವನ್ನು ವರನ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಅದರ ಮರುದಿನ ಭರ್ಜರಿಯಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಆರತಕ್ಷತೆ ಕಾರ್ಯಕ್ರಮ ಮುಗಿಯುವ ವೇಳೆ ವಧುವಿನ ಮಲತಂದೆ ಎಲ್ಲರಿಗೂ ಆಘಾತ ನೀಡುವಂಥ ಕಂಡೀಷನ್‌ಗಳನ್ನು ಹೇರಿದ್ದರು. ವರನಿಗೆ ವಿಧಿಸಿದ್ದ ಆ ಮೂರು ವಿಚಿತ್ರ ಕಂಡೀಷನ್‌ ಯಾವುದು?

ಮೂರು ಷರತ್ತುಗಳು: ಮೊದಲನೆಯದಾಗಿ ಮದುವೆಯ ನಂತರ ಗಂಡ-ಹೆಂಡತಿ ಇಬ್ಬರೂ ಯಾವುದೇ ಕಾರಣಕ್ಕೂ ಸೆಕ್ಸ್‌ ಮಾಡುವಂತಿಲ್ಲ. ಮದುವೆಯ ಬಳಿಕ ಹುಡುಗಿಯ ತಂಗಿ ಕೂಡ ಅಕ್ಕನೊಂದಿಗೆ ಅಲ್ಲಿಯೇ ಇರುತ್ತಾಳೆ. ಮೂರನೆಯದಾಗಿ ಮಗಳ ಮನೆಗೆ ನಾನು (ತಂದೆ) ಯಾವಾಗ ಬೇಕಾದರೂ ಬರಬಹುದು. ಇದನ್ನು ಮನೆಯಲ್ಲಿ ಇದ್ದವರು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿದ್ದರು. ವಧುವಿನ ಮಲತಂದೆ ವಿಧಿಸಿದ ಷರತ್ತುಗಳಿಂದ ವರನಿಗೆ ಆಘಾತವಾಗಿದೆ. 'ನಿನ್‌ ಮಗಳೇ ಬೇಡ..' ಎಂದು ಆರತಕ್ಷತೆ ಕಾರ್ಯಕ್ರಮದಿಂದಲೇ ಎಸ್ಕೇಪ್‌ ಆಗಿದ್ದಾನೆ.