Asianet Suvarna News Asianet Suvarna News

ಅಮಿತಾಭ್‌ ಬಚ್ಚನ್‌ಗೂ ಹೆಂಡ್ತಿ ಭಯವಂತೆ, ಮಡದಿ ಮಲಗಿದ ಮೇಲೆ ಈ ಕೆಲ್ಸ ಮಾಡೋದಂತೆ!

ತಡರಾತ್ರಿಯವರೆಗೆ ಟಿವಿ ನೋಡುತ್ತಲೋ, ಸೋಷಿಯಲ್ ಮೀಡಿಯಾದಲ್ಲಿ ಟೈಮ್ ಪಾಸ್ ಮಾಡುತ್ತಲೋ ಇರುವ ಪುರುಷರನ್ನು ಅವರ ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ದೂರುತ್ತಾರೆ. ಅಂಥವರು ತಮ್ಮ ಪತ್ನಿ ಹಾಗೂ ಮಕ್ಕಳಿಂದ ಬೈಸಿಕೊಳ್ತಾರೆ. ಬಿಗ್ ಬಿ ಅಮಿತಾಭ್ ಕೂಡ ಇದಕ್ಕೆ ಹೊರತಲ್ಲ. ಆದರೆ, ಅವರಿಗೆ ಬೈಯೋಕೆ ಅವಕಾಶ ಸಿಗಬಾರದು ಎಂದೇ ಅವರು ತಡರಾತ್ರಿ ಪೋಸ್ಟ್ ಮಾಡುತ್ತೇನೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
 

Bollywood star Amitabh posts in social media at late night because of wife sum
Author
First Published Nov 24, 2023, 12:49 PM IST

ಸೆಲೆಬ್ರಿಟಿಗಳ ಜೀವನದ ಬಗ್ಗೆ ಸಾಮಾನ್ಯರಲ್ಲಿ ಭಾರೀ ಕುತೂಹಲವಿರುತ್ತದೆ. ಅದರಲ್ಲೂ ಅವರ ಖಾಸಗಿ ಜೀವನದ ಬಗ್ಗೆ ಹೆಚ್ಚು ಕುತೂಹಲ. ಅನೇಕರು ಕೇಳುವ ಪ್ರಶ್ನೆಗಳು ಹೇಗಿರುತ್ತವೆ ಎಂದರೆ, ಸೆಲೆಬ್ರಿಟಿಗಳು ಮನುಷ್ಯರೇ ಅಲ್ಲವೇನೋ ಎಂಬಂತೆ ಭಾಸವಾಗಬಹುದು. ಸೆಲೆಬ್ರಿಟಿ ದಂಪತಿಯಾದರಂತೂ ಅವರಿಬ್ಬರ ನಡುವೆ ಎಲ್ಲ ದಂಪತಿಯಂತೆ ಜಗಳ, ವಾದ-ವಿವಾದಗಳು ಇರುತ್ತವೋ ಇಲ್ಲವೋ ಎನ್ನುವ ಬಗ್ಗೆಯೂ ಕುತೂಹಲವಿರುತ್ತದೆ. ಹೀಗಾಗಿಯೇ ಅವರ ಬಗ್ಗೆ ಎಲ್ಲರ ಗಮನ! ಎಲ್ಲರ ಬಾಯಲ್ಲಿ ಬಾಲಿವುಡ್ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಹಿರಿಯ ನಟ ಅಮಿತಾಭ್ ಬಚ್ಚನ್ ಇತ್ತೀಚೆಗೆ “ಕೌನ್ ಬನೇಗಾ ಕರೋಡ್ ಪತಿ-15’ ಆವೃತ್ತಿಯಲ್ಲಿ ಹಂಚಿಕೊಂಡಿರುವ ಮಾಹಿತಿಯೊಂದು ಭಾರೀ ವೈರಲ್ ಆಗುತ್ತಿದೆ. ದೇಶವೇ ಮೆಚ್ಚುವ ಸೆಲೆಬ್ರಿಟಿಯಾದರೂ ಪತ್ನಿಯಿಂದ ಬೈಸಿಕೊಳ್ಳುವ ಸಂಗತಿಯ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್ ಅವರಿಂದ ಎಂದಾದರೂ ಬೈಸಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದ್ದರು. ಅಂಥವರ ಬದುಕಲ್ಲೂ ಹೀಗಿರುತ್ತಾ ಎನ್ನುವ ಅಚ್ಚರಿಕೆ ಕಾರಣವಾಗಿದೆ. 

ಅಮಿತಾಭ್ ಬಚ್ಚನ್ (Amitabh Bachchan), ಬಾಲಿವುಡ್ (Bollywood) ಕಂಡ ಅಪ್ರತಿಮ ಪ್ರತಿಭಾನ್ವಿತ ನಟ. ಕಳೆದ 50 ವರ್ಷಗಳಿಂದಲೂ ಸಿನಿ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಈ 80ರ ವಯೋಮಾನದಲ್ಲೂ ಅವರ ಉತ್ಸಾಹ ಯುವಕರಿಗೆ ನಾಚಿಕೆ ಮೂಡಿಸುವಷ್ಟಿದೆ. ಇಂದಿಗೂ ಹೊಸ ಹೊಸ ಪಾತ್ರಗಳಲ್ಲಿ ನಟಿಸುತ್ತ ಬೆಳೆಯುತ್ತಲೇ ಇದ್ದಾರೆ, ಭಾರತೀಯರ (Indians) ಹೃದಯಗಳನ್ನು ಗೆಲ್ಲುತ್ತಲೇ ಇದ್ದಾರೆ. ಅವರು ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ “ಕೌನ್ ಬನೇಗಾ ಕರೋಡ್ ಪತಿ’. ಇತ್ತೀಚೆಗೆ ಈ ಕಾರ್ಯಕ್ರಮದ (Program) ವೇಳೆ ಅವರು ಹಂಚಿಕೊಂಡ ವಿಚಾರ ಅವರ ಖಾಸಗಿ ಬದುಕಿನ ಬಗ್ಗೆ ಚೂರು ಬೆಳಕು ಚೆಲ್ಲುವಂತಿದ್ದುದರಿಂದಲೇ ಜನರ ಗಮನ ಸೆಳೆದಿದೆ. 

ದಶಕವಾದರೂ ರೊಮ್ಯಾಂಟಿಕ್ ಲೈಫ್ ಚೆನ್ನಾಗಿರ್ಬೇಕಂದ್ರೆ ಏನು ಮಾಡಬೇಕು?

ತಡರಾತ್ರಿಯಲ್ಲಿ ಸೋಷಿಯಲ್ ಮೀಡಿಯಾ (Social Media)
ಅಮಿತಾಭ್ ರಂತಹ ಅಮಿತಾಭ್ ಕೂಡ ಮನೆಯಲ್ಲಿ ಬೈಸಿಕೊಳ್ಳುತ್ತಾರಂತೆ. ಪತ್ನಿ ಜಯಾ ಬಚ್ಚನ್ ಹಾಗೂ ಮಗ ಅಭಿಷೇಕ್ ಬಚ್ಚನ್ ಅವರಿಂದ ಬೈಸಿಕೊಳ್ಳುವ ಸಮಯ ಎದುರಾಗುತ್ತದೆಯಂತೆ. ಅದ್ಯಾವಾಗ ಎಂದು ಕೇಳಿದ್ರೆ ಅಚ್ಚರಿ ಆಗುತ್ತೆ. ಏಕಂದ್ರೆ, ನಮ್ಮಂತಹ ಸಾಮಾನ್ಯರ ಮನೆಗಳಲ್ಲಿ ಪತಿಯಾದವನು ಯಾವ ಕಾರಣಕ್ಕೆ ಬೈಸಿಕೊಳ್ತಾನೋ ಸೇಮ್ ಅದೇ ಕಾರಣಕ್ಕೆ ಅಮಿತಾಭ್ ಕೂಡ ಬೈಸಿಕೊಳ್ತಾರಂತೆ! ಜ್ಯೂನಿಯರ್ (Junior) ಸ್ಪರ್ಧಿ ಅರ್ಜುನ್ ಎಂಬುವವರೊಂದಿಗೆ ಅಮಿತಾಭ್ ಮಾತನಾಡುತ್ತಿದ್ದಾಗ  ಈ ಆಸಕ್ತಿಕರ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಅರ್ಜುನ್ ತಾನು ಶಾಲೆಯಲ್ಲಿ ಎಂದಿಗೂ ಸೆಕೆಂಡ್ ಬರೋದಕ್ಕೆ ಇಷ್ಟಪಡಲ್ಲ. ಆದರೆ, ತನ್ನ ಕ್ಲಾಸ್ ಮೇಟ್ ಪ್ರಿನ್ಸಿಪಾಲ್ ಮಗನಾಗಿದ್ದು ಆತನೇ ಫಸ್ಟ್ ಬರುತ್ತಾನೆ. ಅವನಿಗೂ ಸಿಕ್ಕಾಪಟ್ಟೆ ಪ್ರೆಶರ್ ಇರುತ್ತೆ ಎಂದೆಲ್ಲ ಮಾತನಾಡಿದಾಗ ಎಲ್ಲರೂ ನಕ್ಕಿದ್ದರು. ಅವರ ಮಾತುಕತೆ ಹೀಗೆಯೇ ಮುಂದುವರಿದಿತ್ತು. “ನೀವು ತಡ ರಾತ್ರಿಯ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ (Post) ಮಾಡುತ್ತೀರಿ. ಜಯಾ ಮೇಡಂ ಮತ್ತು ಅಭಿಷೇಕ್ ಭೈಯ್ಯಾ ಬೈಯುವುದಿಲ್ಲವೇ?’  ಎಂದು ಅರ್ಜುನ್ ಕೇಳಿದಾಗ, “ನನ್ನ ಬೈಯೋಕೆ ಅವರಿಗೆ ಅವಕಾಶ ಸಿಗಬಾರದು ಎಂದೇ ತಡರಾತ್ರಿಯ (Late Night) ಸಮಯದಲ್ಲಿ ಪೋಸ್ಟ್ ಮಾಡುತ್ತೇನೆ’ ಎಂದು ಹೇಳಿದರು!

ಚಾಣಕ್ಯನ ಪ್ರಕಾರ ಗಂಡ-ಹೆಂಡತಿಯ ಈ ತಪ್ಪಿನಿಂದಾನೇ ಅನೈತಿಕ ಸಂಬಂಧವೊಂದು ಹುಟ್ಟೋದಂತೆ!

ಜಯಾ ಬಚ್ಚನ್ ಆರ್ಗ್ಯುಮೆಂಟ್ ಸ್ಕಿಲ್ (Argument Skill)!
ಇದೇ ಕರೋಡ್ ಪತಿ-15ರ ಸೀಸನ್ನಿನಲ್ಲಿ ಕೆಲ ದಿನಗಳ ಹಿಂದೆಯೂ ಅಮಿತಾಭ್ ಇಂಥದ್ದೇ ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದರು. ಬಂಗಾಳಿ (Bengali) ಮಹಿಳೆಯೊಬ್ಬರು ಸ್ಪರ್ಧಿಯಾಗಿದ್ದ ಆ ಎಪಿಸೋಡ್ ನಲ್ಲಿ ಅಮಿತಾಭ್, ‘ಜೀವನದಲ್ಲಿ ಅನುಭವವಾಗುತ್ತ ಆಗುತ್ತ ಒಂದು ವಿಚಾರವನ್ನು ಅರಿತಿದ್ದೇನೆ, ಅದೆಂದರೆ, ಬಂಗಾಳಿ ಮಹಿಳೆಯೊಂದಿಗೂ ಎಂದಿಗೂ ವಾದಕ್ಕೆ ಬೀಳಬಾರದು. ಪತ್ನಿ ಜಯಾ (Jaya) ಬಚ್ಚನ್ ಕೂಡ ಬಂಗಾಳಿಯಾಗಿದ್ದು, ಅವರೊಂದಿಗೆ ವಾದಕ್ಕೆ ನಿಂತರೆ ತಾವು ಎಂದಿಗೂ ಗೆದ್ದದ್ದಿಲ್ಲ. ಪ್ರತಿಯೊಂದು ಸಮಯದಲ್ಲೂ ಜಯಾ ವಿಶೇಷ (Special) ರೀತಿಯಲ್ಲಿ ವಾದ ಮಂಡಿಸುತ್ತಾರೆ’ ಎಂದು ಹೇಳಿ ವೀಕ್ಷಕರನ್ನು ನಗೆಗಡಲಿಗೆ ದೂಡಿದ್ದರು. 

Follow Us:
Download App:
  • android
  • ios