Asianet Suvarna News Asianet Suvarna News

ತವರಿನಿಂದ ಬಾರದ ಹೆಂಡ್ತಿ, ಸಿಟ್ಟಿಗೆದ್ದು ಖಾಸಗಿ ಅಂಗವನ್ನೇ ಕತ್ತರಿಸಿಕೊಂಡ ಗಂಡ!

ಗಂಡ-ಹೆಂಡ್ತಿ ಜಗಳವಾಡೋದು ಸಾಮಾನ್ಯ. ಕೆಲವೊಬ್ಬರು ಸಿಟ್ಟಿನಿಂದ ಮನೆಬಿಟ್ಟು ಹೋಗೋದು ಇದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತವರಿನಿಂದ ಹೆಂಡತಿ ಬಾರದಿದ್ದಕ್ಕೆ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡಿದ್ದಾನೆ. ಅರೆ, ಇದೆಂಥಾ ವಿಚಿತ್ರ ಅನ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ.

Bihar Man cuts his Private part over tiff with wife in Madhepura Vin
Author
First Published Jan 22, 2023, 10:14 AM IST

ಪಾಟ್ನಾ: ಗಂಡ-ಹೆಂಡತಿ ಮಧ್ಯೆ ಆಗಾಗ ಮನಸ್ತಾಪ ಬರುತ್ತೆ. ಇಬ್ಬರೂ ಜಗಳವಾಡಿಕೊಂಡು ಮಾತು ಬಿಡುವುದು, ಕೆಲವೊಮ್ಮೆ ಹೆಂಡತಿ ಸಿಟ್ಟಿಗೆದ್ದು ತವರಿಗೆ ಹೋಗಿ ಬಿಡುವುದು ಸಾಮಾನ್ಯ. ಹೆಂಡತಿ ಕೋಪಿಸಿಕೊಂಡು ತವರಿಗೆ ಹೋದರೆ ಗಂಡ ಓಲೈಸಿಕೊಂಡು ವಾಪಸ್ ಕರೆದುಕೊಂಡು ಬಂದ ಹಲವು ಘಟನೆಗಳ ಬಗ್ಗೆ ಓದಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಹೀಗೆ ಮಾಡುವ ಬದಲು ಇನ್ನೇನೊ ಮಾಡಿಕೊಂಡು ಸುದ್ದಿಯಾಗಿದ್ದಾನೆ. ಬಿಹಾರದ ಮಾಧೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಜನಿ ನಯಾನಗರ ಪ್ರದೇಶದಲ್ಲಿ ಕೃಷ್ಣ ಬಾಸುಕಿ ಎಂಬ ವ್ಯಕ್ತಿ ಹೆಂಡತಿ ತವರಿಗೆ ಹೋಗಿ ವಾಪಸ್‌ ಬರಲು ತಡ ಮಾಡಿದ್ದಕ್ಕೆ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಕೃಷ್ಣ ಬಾಸುಕಿ ಎಂಬಾತ ಅನಿತಾ ಎನ್ನುವವರನ್ನು ಮದುವೆಯಾಗಿದ್ದಾನೆ. ದಂಪತಿಗೆ ನಾಲ್ಕು ಮಕ್ಕಳು ಕೂಡಾ ಇವೆ. ಕುಟುಂಬದಿಂದ ದೂರವಿದ್ದ ಕೃಷ್ಣ ಪಂಜಾಬ್‌ ನ ಮಂಡಿಯಲ್ಲಿ ವಾಸವಾಗಿ ಕೆಲಸ ಮಾಡಿಕೊಂಡು ಇರುತ್ತಿದ್ದನು. ಎರಡು ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದನು. ಈ ವೇಳೆ ಹೆಂಡತಿ (Wife) ಮಕ್ಕಳು ಮನೆಯಲ್ಲಿರಲಿಲ್ಲ. ತವರಿಗೆ ಹೋದ ಹೆಂಡತಿಗಾಗಿ ಕಾದು ಸಿಟ್ಟಾದ ಕೃಷ್ಣರಾತ್ರಿ ಚೂಪಾದ ಚೂರಿಯಿಂದ ತನ್ನ ಖಾಸಗಿ ಅಂಗವನ್ನೇ (Private part) ಕತ್ತರಸಿಕೊಂಡಿದ್ದಾನೆ. ಮಧೇಪುರ ಜಿಲ್ಲೆಯ ಮುರಳಿಗಂಜ್ ಬ್ಲಾಕ್‌ನಲ್ಲಿರುವ ನಯಾ ನಗರ್ ಗಾಂವ್ ಗ್ರಾಮದಲ್ಲಿ ಆಘಾತಕಾರಿ ಘಟನೆ ವರದಿಯಾಗಿದೆ.

Madhya Pradesh: ಡ್ರಗ್ಸ್‌ಗೆ ಹಣ ನೀಡಲಿಲ್ಲವೆಂದು ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್‌ ಹಾಕಿದ ಪತಿ..!

ತನ್ನ ಪೋಷಕರ ಸ್ಥಳಕ್ಕೆ ಹೋಗುವುದರ ಬಗ್ಗೆ ಅಸಮಾಧಾನಗೊಂಡ ವ್ಯಕ್ತಿ ಹೀಗೆ ಮಾಡಿದ್ದಾಗಿ ತಿಳಿದುಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗಾಯಾಳುವಿನ ಪರಿಚಯಸ್ಥರೊಬ್ಬರು, 2023 ರ ಜನವರಿ 20 ರಂದು ಅವರ ಹೆಂಡತಿ ತನ್ನ ಪೋಷಕರ ಸ್ಥಳಕ್ಕೆ ಹೋಗುತ್ತಿದ್ದಂತೆ, ಅವನು ತನ್ನ ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ ಎಂದು ಹೇಳಿದರು. ಅಕ್ಕಪಕ್ಕದವರು ಕೃಷ್ಣ ಬಾಸುಕಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ (Treatment) ನೀಡಿದ್ದಾರೆ. ಸದ್ಯ ಅಪಾಯದಿಂದ ಪಾರಾಗಾಗಿದ್ದಾರೆ. ಕೃಷ್ಣ ಬಾಸುಕಿ ಮಾನಸಿಕ ಅಸ್ವಸ್ಥನಾಗಿ ಬಳಲುತ್ತಿದ್ದಾನೆ ಎಂದು ಸ್ಥಳೀಯರು ತಿಳಿಸಿರುವುದಾಗಿ ವರದಿಯಾಗಿದೆ.

ಆಸ್ಪತ್ರೆಗೆ ದಾಖಲಾದ ವ್ಯಕ್ತಿ ತನ್ನ ಬಾಹ್ಯ ಜನನಾಂಗವನ್ನು ಕತ್ತರಿಸಿರುವುದನ್ನು ಮಾಧೇಪುರ ವೈದ್ಯಕೀಯ ಕಾಲೇಜಿನ ವೈದ್ಯರೊಬ್ಬರು ಖಚಿತಪಡಿಸಿದ್ದಾರೆ. ವ್ಯಕ್ತಿಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಹಿಳೆಯ ಗುಪ್ತಾಂಗದಲ್ಲಿ ಸಿಕ್ತು 88 ಪ್ಯಾಕೇಟ್ ಡ್ರಗ್ಸ್, ಹೊರತೆಗೆಯಲು 11 ದಿನ ಬೇಕಾಯ್ತು!

ಪೋನ್‌ನಲ್ಲಿ ಮಾತಾಡ್ಬೇಡ ಅಂದಿದ್ದಕ್ಕೆ ಗಂಡನ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ
ಕ್ಷುಲ್ಲಕ ಜಗಳಕ್ಕಾಗಿ ಮಹಿಳೆಯೊಬ್ಬಳು ಗಂಡ ಮಲಗಿದ್ದಾಗ ಆತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ ಘಟನೆ ರಾಜಸ್ಥಾನದ ಬರ್ಮೆರ್‌ನಲ್ಲಿ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಫೋನ್‌ನಲ್ಲಿ ಮಾತನಾಡಬೇಡ ಎಂದು ಗಂಡ ಹೇಳಿದ ಕಾರಣಕ್ಕಾಗಿ ಸಿಟ್ಟಾಗಿದ್ದ ಹೆಂಡತಿ, ರಾತ್ರಿ ಗಂಡ ಮಲಗಿದ್ದ ವೇಳೆ ಆತನ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಧೋರಿಮನ್ನ ಪೊಲೀಸ್‌ ಠಾಣೆ ವ್ಯಾಪ್ತಿಯ ಬಲಿಸರ್‌ ಗ್ರಾಮದಲ್ಲಿ ನಡೆದಿದೆ. ಗಂಡ ಕೊಟ್ಟಿರುವ ದೂರಿನ ಅನ್ವಯ, ತಾನು ಮಲಗಿದ್ದ ವೇಳೆ ಪತ್ನಿ ಫೋನ್‌ನಲ್ಲಿ ಯಾರದೋ ಜೊತೆ ಮಾತನಾಡುತ್ತಿದ್ದಳು. ಇದರಿಂದ ತನಗೆ ನಿದ್ರೆ ಮಾಡಲು ಆಗುತ್ತಿರಲಿಲ್ಲ. ಪೋನ್‌ ಕಟ್‌ ಮಾಡುವಂತೆ ನಾನು ಹೇಳುತ್ತಿದ್ದೆ. ಈ ವಿಚಾರವಾಗಿಯೇ ನಮ್ಮ ನಡುವೆ ಗಲಾಟೆ ನಡೆದಿತ್ತು ಎಂದು ಹೇಳಿದ್ದಾನೆ. ಗಂಡನ ಮಾತಿನಿಂದ ಸಿಟ್ಟಾಗಿದ್ದ ಹೆಂಡತಿ, ಆತ ಮಲಗಿದ್ದ ವೇಳೆ ಬ್ಲೇಡ್‌ನಿಂದ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ.

ಈ ವೇಳೆ ಆತ ನೋವಿನಿಂದ ಚೀರಾಟ ಮಾಡುತ್ತಿದ್ದಾಗ ಕುಟುಂಬದವರು ಸ್ಥಳಕ್ಕೆ ಆಗಮಿಸಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಕೇವಲ ಆರು ತಿಂಗಳ ಹಿಂದೆ ಇವರಿಬ್ಬರ ವಿವಾಹವಾಗಿತ್ತು. ವಿವಾಹವಾದ ದಿನದಿಂದಲೂ ಇವರಿಬ್ಬರ ಸಂಸಾರದಲ್ಲಿ ಸಮಸ್ಯೆಗಳೇ ಕಾಣಿಸಿಕೊಂಡಿದ್ದವು ಎಂದು ತಿಳಿದುಬಂದಿದೆ.

Follow Us:
Download App:
  • android
  • ios