ರಾತ್ರಿಯಿಡೀ ಎದ್ದು, ಬಿದ್ದು ಹೋರಾಡಿ ಗೆದ್ದು ಬಾ ಗೆಳೆಯಾ, ಸ್ನೇಹಿತರ ಫಸ್ಟ್ ನೈಟ್ ವಿಶ್ ಬ್ಯಾನರ್ ವೈರಲ್
ಶಾಲಾ, ಕಾಲೇಜುಗಳಲ್ಲಿ ಉತ್ತಮ ಮಾರ್ಕ್ಸ್ ಗಳಿಸಿದಾಗ, ರ್ಯಾಂಕ್ ಪಡೆದಾಗ ಅಥವಾ ಸೇನೆಗೆ ಸೇರ್ಪಡೆಯಾದಾಗಾ ಅಂಥವರ ಫೋಟೋ ಸೇರಿಸಿ ರಸ್ತೆಯಲ್ಲಿ ಬ್ಯಾನರ್ ಹಾಕಿ ಶುಭಕೋರುವುದನ್ನು ನೀವು ನೋಡಿರ್ತೀರಿ. ಆದ್ರೆ ಇಲ್ಲೊಂದೆಡೆ ಗೆಳೆಯನಿಗೆ ಫಸ್ಟ್‌ನೈಟ್‌ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ವಿಶ್ ಮಾಡಿ ಬ್ಯಾನರ್ ಹಾಕಿದ್ದಾರೆ. ಸದ್ಯ ಈ ಬ್ಯಾನರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ವ್ಯಕ್ತಿ ಯಾವುದೇ ಸಾಧನೆ ಮಾಡಿದಾಗ ಆತನ ಬ್ಯಾನರ್ ಹಾಕಿಸಿ ಶುಭ ಹಾರೈಸುವ ಕ್ರಮ ಹಿಂದಿನಿಂದಲೂ ಇದೆ. ಶಾಲಾ, ಕಾಲೇಜುಗಳಲ್ಲಿ ಉತ್ತಮ ಮಾರ್ಕ್ಸ್ ಗಳಿಸಿದಾಗ, ರ್ಯಾಂಕ್ ಪಡೆದಾಗ ಅಥವಾ ಸೇನೆಗೆ ಸೇರ್ಪಡೆಯಾದಾಗಾ ಅಂಥವರ ಫೋಟೋ ಸೇರಿಸಿ ರಸ್ತೆಯಲ್ಲಿ ಬ್ಯಾನರ್ ಹಾಕಿ ಶುಭಕೋರುವುದನ್ನು ನೀವು ನೋಡಿರ್ತೀರಿ. ಅಷ್ಟೇ ಯಾಕೆ ಮದುವೆ, ಬರ್ತ್‌ಡೇಗೆ ಶುಭಕೋರಿ ಫ್ಯಾಮಿಲಿ, ಸ್ನೇಹಿತರು, ಫ್ರೆಂಡ್ಸ್ ಕ್ಲಬ್ ಬ್ಯಾನರ್ ಹಾಕಿಸುತ್ತಾರೆ. ಆದ್ರೆ ಇಲ್ಲೊಂದೆಡೆ ಇದೆಲ್ಲಕ್ಕಿಂತ ವಿಭಿನ್ನವಾಗಿ, ವಿಚಿತ್ರವಾಗಿ ಗೆಳೆಯನಿಗೆ ಫಸ್ಟ್‌ನೈಟ್‌ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ವಿಶ್ ಮಾಡಿ ಬ್ಯಾನರ್ ಹಾಕಿದ್ದಾರೆ. ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೆಲವರು ಇದನ್ನು ಜಸ್ಟ್ ಫಾರ್ ಫನ್ ಎಂದು ತಗೊಂಡ್ರೆ, ಮತ್ತೆ ಕೆಲವರು ಇವತ್ತಿನ ಯುವಜನರ ಮನಸ್ಥಿತಿಯನ್ನು ಟೀಕಿಸುತ್ತಿದ್ದಾರೆ.
ಹೀಗೆ ಮದುವೆಯ ಮೊದಲ ರಾತ್ರಿಗೆ ವಿಶ್ ಮಾಡಿ ಬ್ಯಾನರ್ ಅಳವಡಿಸಿರೋದು ಮಂಗಳೂರಿನಲ್ಲಿ. ಅದು ಕೂಡಾ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಪೊಲೀಸ್ ಠಾಣೆಯ ಕಾಂಪೌಂಡ್‌ಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದೆ.
ಇವನಿಗೇನ್ ತಲೆಕೆಟ್ಟಿದ್ಯಾ..? ತನ್ನದೇ ಫಸ್ಟ್‌ನೈಟ್ ವಿಡಿಯೋ ವೈರಲ್ ಮಾಡಿದ ವರ!
ಕದ್ರಿ ಪೊಲೀಸ್ ಠಾಣೆಯ ಕಾಂಪೌಂಡ್ ಸಮೀಪ ಯುವಕನ ಫಸ್ಟ್ ನೈಟ್ ಬ್ಯಾನರ್
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್ ಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ರಾಜಕೀಯ ಬ್ಯಾನರ್ ಗಳ ನಡುವೆ ಇದೀಗ ಯುವಕನೊಬ್ಬನ ಫಸ್ಟ್ ನೈಟ್ ಬ್ಯಾನರ್ ಕೂಡ ಎದ್ದು ನಿಂತಿದೆ. ಕದ್ರಿ ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದೆ. ಯುವಕನೊಬ್ಬನ ಮದುವೆಯ (Marriage) ಮೊದಲ ರಾತ್ರಿಯ (First night) ಸಂಭ್ರಮ ಎಂದು ಮತ್ತೊಂದು ಹೋರ್ಡಿಂಗ್ಸ್ ಹಾಕಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು (Friends) ಹಾರೈಸಿ ಸರಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ಬ್ಯಾನರ್ ನೋಡಿ ಜನರು ಇದು ತಮಾಷೆಯಲ್ಲ, ಸಾರ್ವಜನಿಕ ಪ್ರದೇಶದಲ್ಲಿ ಇಂಥಾ ಹೋರ್ಡಿಂಗ್ ಹಾಕಿಸಿರೋದು ಸರಿಯಲ್ಲ ಎನ್ನುತ್ತಿದ್ದಾರೆ.
ವೈರಲ್ ಆಗಿರೋ ಹೋರ್ಡಿಂಗ್‌ನಲ್ಲಿ ವ್ಯಕ್ತಿಯೊಬ್ಬನ ಫೋಟೋ ಹಾಕಿಸಿ ಶುಭಾಷಯ ಕೋರಲಾಗಿದೆ. 'ನಮ್ಮ ಮುಗ್ಧ ಗೆಳೆಯ, ರಸಿಕ ಇಂದಿನ ಮದುಮಗ ಸುದರ್ಶನ್ ಇವರ ಮದುವೆ ನಂತರದ ಪ್ರಪ್ರಥಮ ಗಿಲಿಗಿಲಿ ಆಟ, ಮೊದಲ ರಾತ್ರಿಯ ಸಂಭ್ರಮ ದಿನಾಂಕ, 12 ಜೂನ್, ಕೆಪಿಟಿ ಮನೆಯಲ್ಲಿ, ಸಮಯ ರಾತ್ರಿ 12 ಗಂಟೆಯಿಂದ' ಎಂದು ಬರೆಸಲಾಗಿದೆ. ಮಾತ್ರವಲ್ಲ. ಮುಂಜಾನೆ ತ್ರಾಣ ಇರುವ ತನಕ ಎದ್ದು ಬಿದ್ದು ಹೋರಾಡಿ ಗೆದ್ದು ಬಾ ಗೆಳೆಯ, ನಿಮ್ಮ ಪ್ರಪ್ರಥಮ ರಾತ್ರಿಗೆ ಶುಭಕೋರುವ (Wishing) ಸುದರ್ಶನ್ ಅಭಿಮಾನಿ ಬಳಗ, ಕುಡ್ಲ, ಕತಾರ್, ದುಬೈ, ಕೀನ್ಯಾ, ಶ್ರೀಲಂಕಾ ಎಂದು ಹಾಕಿಸಲಾಗಿದೆ. ಫೋಟೋದ ಕೆಳಗಡೆ ಆಲ್ ದಿ ಬೆಸ್ಟ್ ಫಾರ್ ಯುವರ್ ಫಸ್ಟ್ ಮ್ಯಾಚ್ ಎಂದು ಸಹ ಹಾಕಿಸಿದ್ದಾರೆ.
ಫಸ್ಟ್ ನೈಟ್ ವೀಡಿಯೋ ಹಂಚಿಕೊಂಡ ದಂಪತಿ, ಇನ್ನು ಏನೇನೆಲ್ಲಾ ನೋಡ್ಬೇಕಪ್ಪಾ ಅಂತಿದ್ದಾರೆ ನೆಟ್ಟಿಗರು
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಹೋರ್ಡಿಂಗ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸರಕಾರಿ ಜಾಗದಲ್ಲಿ ಯಾವುದೇ ಅನುಮತಿ (Permission) ಇಲ್ಲದೆ ತಮಗೆ ಇಷ್ಟಬಂದಂತೆ ಅಶ್ಲೀಲ ಸಂದೇಶ ಸಾರುವ, ಮುಜುಗರ ತರುವ ಜಾಹೀರಾತು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಳೆಗೆ ಚಳಿಗೆ ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳು ಮೈಚಳಿ ಬಿಟ್ಟು ಇಂತಹ ಅನಧಿಕೃತ, ಮತ್ತು ಅಶ್ಲೀಲ ಬ್ಯಾನರ್‌ಗಳ ವಿರುದ್ದ ದಂಡ ಅಥವಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ. ಜನರಿಂದ ಸಾಕಷ್ಟು ಆಕ್ಷೇಪಣೆ ಕೇಳಿ ಬಂದಿರೋ ಕಾರಣ ಈ ಬ್ಯಾನರ್ ತೆಗೆದು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ವೈರಲ್ ಆಗಿರೋ ಪೋಟೋದಲ್ಲಿ ಗುಂಪಕಲ್ಲು ವಿನುತ್‌ಗೆ ಪ್ರಥಮ ರಾತ್ರಿಯ ಒನ್ ಡೇ ಮ್ಯಾಚ್‌ಗೆ ಶುಭಾಷಯ ಎಂದು ಬ್ಯಾನರ್ ಹಾಕಲಾಗಿದೆ. ಸದ್ಯ ಇಂಥಾ ಬ್ಯಾನರ್‌ಗಳ ಹಾವಳಿ ಹೆಚ್ಚಾಗ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.